ಸೆಂಟ್ರಲ್ ಬ್ಯಾಂಕ್ ಒಲಿಂಪಿಕ್ಸ್​ನಲ್ಲಿ ಆರ್​ಬಿಐ ಗವರ್ನರ್​ಗೆ ಚಿನ್ನದ ಪದಕ; ಪ್ರಧಾನಿ ಶ್ಲಾಘನೆ; ಶಕ್ತಿಕಾಂತ್ ಹೆಸರಲ್ಲೇ ಇದೆ ಶಕ್ತಿ ಎಂದ ಮಹೀಂದ್ರ

RBI Governor Shaktikanta Das gets A+ rating: ಗ್ಲೋಬಲ್ ಫೈನಾನ್ಸ್ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ಸ್ 2024 ವರದಿಯು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಚಿನ್ನದ ಪದಕ ನೀಡಿದೆ. ಹಣದುಬ್ಬರ ಇತ್ಯಾದಿಯನ್ನು ಸೆಂಟ್ರಲ್ ಬ್ಯಾಂಕುಗಳು ಹೇಗೆ ನಿರ್ವಹಣೆ ಮಾಡುತ್ತವೆ ಎನ್ನುವುದರ ಆಧಾರದ ಮೇಲೆ ರೇಟಿಂಗ್ ಕೊಡಲಾಗುತ್ತದೆ. ಆರ್​ಬಿಐ ಸೇರಿದಂತೆ ಮೂರು ದೇಶಗಳ ಸೆಂಟ್ರಲ್ ಬ್ಯಾಂಕುಗಳ ಗವರ್ನರುಗಳಿಗೆ ಗರಿಷ್ಠ ಎ+ ರೇಟಿಂಗ್ ನೀಡಲಾಗಿದೆ.

ಸೆಂಟ್ರಲ್ ಬ್ಯಾಂಕ್ ಒಲಿಂಪಿಕ್ಸ್​ನಲ್ಲಿ ಆರ್​ಬಿಐ ಗವರ್ನರ್​ಗೆ ಚಿನ್ನದ ಪದಕ; ಪ್ರಧಾನಿ ಶ್ಲಾಘನೆ; ಶಕ್ತಿಕಾಂತ್ ಹೆಸರಲ್ಲೇ ಇದೆ ಶಕ್ತಿ ಎಂದ ಮಹೀಂದ್ರ
ಶಕ್ತಿಕಾಂತ ದಾಸ್
Follow us
|

Updated on: Aug 21, 2024 | 10:48 AM

ನವದೆಹಲಿ, ಆಗಸ್ಟ್ 21: ಸೆಂಟ್ರಲ್ ಬ್ಯಾಂಕ್ ಒಲಿಂಪಿಕ್ಸ್​ನಲ್ಲಿ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸತತ ಎರಡನೇ ಬಾರಿ ಚಿನ್ನದ ಪದಕ ಜಯಿಸಿದ್ದಾರೆ. ಸೆಂಟ್ರಲ್ ಬ್ಯಾಂಕುಗಳನ್ನು ಹೇಗೆ ನಿರ್ವಹಣೆ ಮಾಡಲಾಗುತ್ತಿದೆ ಎನ್ನುವುದರ ಆಧಾರದ ಮೇಲೆ ಅವುಗಳ ಮುಖ್ಯಸ್ಥರಿಗೆ ಎ+ ನಿಂದ ಹಿಡಿದು ಎಫ್​ವರೆಗೆ ರೇಟಿಂಗ್ ಕೊಡಲಾಗುತ್ತದೆ. ಗ್ಲೋಬಲ್ ಫೈನಾನ್ಸ್ ಮ್ಯಾಗಝಿನ್ 1994ರಿಂದ ವಾರ್ಷಿಕವಾಗಿ ಪ್ರಕಟಿಸುವ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ಸ್​ನ ಈ ವರ್ಷದ ವರದಿಯಲ್ಲಿ ಶಕ್ತಿಕಾಂತ ದಾಸ್ ಅವರಿಗೆ ಎ+ ರೇಟಿಂಗ್ ಮತ್ತು ಚಿನ್ನದ ಪದಕ ಸಿಕ್ಕಿದೆ.

ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಆರ್​ಬಿಐ ಈ ಸುದ್ದಿಯನ್ನು ಹಂಚಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಆರ್​​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಆರ್ಥಿಕ ಪ್ರಗತಿ ಮತ್ತು ಸ್ಥಿರತೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಅವರು ಮಾಡಿರುವ ಕೆಲಸಕ್ಕೆ ಮತ್ತು ಆರ್​ಬಿಐನಲ್ಲಿನ ಅವರ ನಾಯಕತ್ವಕ್ಕೆ ಇದು ಸಿಕ್ಕ ಮನ್ನಣೆಯಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸಿಕ್ಕಾಪಟ್ಟೆ ಇರುವ ಮ್ಯೂಚುವಲ್ ಫಂಡ್​ಗಳಲ್ಲಿ ಯಾವುದನ್ನು ಆರಿಸುವುದು? ರಾಧಿಕಾ ಗುಪ್ತಾ ಸಲಹೆ ಇದು

ಉದ್ಯಮಿ ಆನಂದ್ ಮಹೀಂದ್ರ ಅವರೂ ಪ್ರತಿಕ್ರಿಯಿಸಿದ್ದು ಶಕ್ತಿಕಾಂತ ದಾಸ್ ಅವರನ್ನು ಅಭಿನಂದಿಸಿದ್ದಾರೆ. ಶಕ್ತಿಕಾಂತ ದಾಸ್ ಅವರಿಗೆ ತಂದೆ ತಾಯಿ ಒಳ್ಳೆಯ ಹೆಸರು ಇಟ್ಟಿದ್ದಾರೆ. ಈ ಪ್ರಪಂಚಕ್ಕೆ ಅವರ ಶಕ್ತಿಯನ್ನು ತೋರಿಸಿದ್ದಾರೆ ಎಂದು ಮಹೀಂದ್ರ ಗ್ರೂಪ್ ಮುಖ್ಯಸ್ಥರಾದ ಅವರು ಹೇಳಿದ್ದಾರೆ.

ಸೆಂಟ್ರಲ್ ಬ್ಯಾಂಕ್ ಒಲಿಂಪಿಕ್ಸ್​ನಲ್ಲಿ ಈ ವರ್ಷ ಆರ್​ಬಿಐ ಗವರ್ನರ್ ಸೇರಿದಂತೆ ಮೂರು ಸೆಂಟ್ರಲ್ ಬ್ಯಾಂಕ್ ಗವರ್ನರ್​ಗಳಿಗೆ ಎ+ ರೇಟಿಂಗ್ ಸಿಕ್ಕಿದೆ. ಶಕ್ತಿಕಾಂತ ದಾಸ್ ಅಲ್ಲದೇ, ಡೆನ್ಮಾರ್ಕ್​ನ ಕ್ರಿಸ್ಟಿಯನ್ ಕೆಟ್ಟೆಲ್ ಥಾಮ್ಸನ್, ಸ್ವಿಟ್ಜರ್​​ಲ್ಯಾಂಡ್​ನ ಥಾಮಸ್ ಜಾರ್ಡನ್ ಅವರಿಗೆ ಈ ಮನ್ನಣೆ ದೊರೆತಿದೆ.

ಬ್ರೆಜಿಲ್​ನ ರಾಬರ್ಟೋ ಕ್ಯಾಂಪೋಸ್ ನೇಟೋ, ಚಿಲಿಯ ರೋಸಾನ ಕೋಸ್ಟಾ, ಮಾರಿಷಸ್​ನ ಹರ್ವೇಶ್ ಕುಮಾರ್ ಸೀಗೋಲಂ, ಮೊರಾಕ್ಕೋದ ಅಬ್ದಲ್​ಲತೀಫ್ ಜೋವಾರಿ, ಸೌತ್ ಆಫ್ರಿಕಅದ ಲೆಸೆಟ್ಜಾ ಕಗಾನ್ಯಾಗೋ, ಶ್ರೀಲಂಕಾದ ನಂದಲಾಲ್ ವೀರಸಿಂಘೆ ಮತ್ತು ವಿಯೆಟ್ನಾಂನ ಎನ್​ಗುಯೆನ್ ಥಿ ಹೋಂಗ್ ಅವರಿಗೆ ಎ ರೇಟಿಂಗ್ ಸಿಕ್ಕಿದೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಸರಿಯಾಗಿ ಬಳಸಿದ್ರೆ ಹಣದ ಚೀಲ; ತಪ್ಪು ಮಾಡಿದರೆ ಸಾಲದ ಶೂಲ; ಕಾರ್ಡ್ ಬಳಸಿ ಲಾಭ ಮಾಡುವುದು ಹೇಗೆ ನೋಡಿ

ಹತ್ತಿರಹತ್ತಿರ 100 ದೇಶಗಳ ಸೆಂಟ್ರಲ್ ಬ್ಯಾಂಕ್ ಗವರ್ನರ್​ಗಳಿಗೆ ಈ ರೀತಿ ರೇಟಿಂಗ್ ಕೊಡಲಾಗುತ್ತಿದೆ. ‘ಕಳೆದ ಕೆಲ ವರ್ಷಗಳಿಂದ ಸೆಂಟ್ರಲ್ ಬ್ಯಾಂಕರ್​ಗಳು ಹಣದುಬ್ಬರದ ಮೇಲೆ ಸಮರ ಸಾರಿವೆ. ಅವರ ಪ್ರಮುಖ ಅಸ್ತ್ರವಾದ ಬಡ್ಡಿದರವನ್ನು ಬಳಸುತ್ತಿವೆ. ಈ ಪ್ರಯತ್ನಕ್ಕೆ ಫಲ ಸಿಗುತ್ತಿರುವುದನ್ನು ಆ ದೇಶಗಳು ಕಾಣುತ್ತಿರಬಹುದು. ಹಣದುಬ್ಬರ ಸಾಕಷ್ಟು ಕಡಿಮೆ ಆಗಿದೆ,’ ಎಂದು ಗ್ಲೋಬಲ್ ಫೈನಾನ್ಸ್ ಸಂಸ್ಥೆಯ ಸಂಸ್ಥಾಪಕ ಜೋಸೆಫ್ ಜಿಯಾರಪುಟೋ ಈ ವರದಿಯಲ್ಲಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ