Eid Holiday: ಆರ್ಬಿಐ ರಜಾದಿನ ಸೆ. 5ರ ಬದಲು ಸೆ. 8; ಸೋಮವಾರ ಷೇರುಪೇಟೆಗೂ ರಜೆಯಾ?
Eid Milad holiday in Mumbai changed from Sep 5th to 8th: ಸೆಪ್ಟೆಂಬರ್ 5ರಂದು ಈದ್ ಮಿಲಾದ್ ಪ್ರಯುಕ್ತ ಎಲ್ಲೆಡೆ ಸಾರ್ವತ್ರಿಕ ರಜೆ ಇದೆ. ಆರ್ಬಿಐ ರಜಾದಿನಗಳ ಕ್ಯಾಲಂಡರ್ನಲ್ಲೂ ಶುಕ್ರವಾರ ರಜೆ ಇದೆ. ಆದರೆ, ಮಹಾರಾಷ್ಟ್ರದಲ್ಲಿ ಮುಂಬೈ ಮೊದಲಾದ ಕೆಲವೆಡೆ ಈದ್ ಮಿಲಾದ್ ರಜೆಯನ್ನು ಸೆ. 8ಕ್ಕೆ ಬದಲಿಸಲಾಗಿದೆ. ಆ ದಿನದಂದು ಗವರ್ನ್ಮೆಂಟ್ ಸೆಕ್ಯೂರಿಟೀಸ್, ಮನಿ ಮಾರ್ಕೆಟ್, ಫಾರೆಕ್ಸ್ ಮಾರುಕಟ್ಟೆಗಳಲ್ಲಿ ಟ್ರಾನ್ಸಾಕ್ಷನ್ ಇರೋದಿಲ್ಲ.

ಮುಂಬೈ, ಸೆಪ್ಟೆಂಬರ್ 4: ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೆಪ್ಟೆಂಬರ್ 5 ಬದಲು ಸೆಪ್ಟೆಂಬರ್ 8 ಅನ್ನು ಸಾರ್ವತ್ರಿಕ ರಜಾದಿನವಾಗಿ ಬದಲಾಯಿಸಿ ಘೋಷಣೆ ಮಾಡಿದೆ. ಸೆಪ್ಟೆಂಬರ್ 8 ಸೋಮವಾರದಂದು ಗವರ್ನ್ಮೆಂಟ್ ಸೆಕ್ಯೂರಿಟಿಗಳು, ಫಾರೆಕ್ಸ್, ಹಣ ಮಾರುಕಟ್ಟೆ, ರುಪೀ ಬಡ್ಡಿದರ ಡಿರೈವೇಟಿವ್ಗಳಲ್ಲಿ ಯಾವುದೇ ಟ್ರಾನ್ಸಾಕ್ಷನ್ ಆಗಲಿ, ಸೆಟಲ್ಮೆಂಟ್ ಆಗಲೀ ಆಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಸೆಪ್ಟೆಂಬರ್ 8ಕ್ಕೆ ಮಾಡಬೇಕಾಗಿದ್ದ ಎಲ್ಲಾ ಬಾಕಿ ವಹಿವಾಟುಗಳನ್ನು ಮರುದಿನವಾದ ಸೆಪ್ಟೆಂಬರ್ 9, ಮಂಗಳವಾರದಂದು ಮಾಡಲು ಮುಂದೂಡಲಾಗಿದೆ. ಸೆಪ್ಟೆಂಬರ್ 4ರಂದು (ಇಂದು ಗುರುವಾರ) ಹರಾಜು ಮಾಡಲಾದ ಸರ್ಕಾರೀ ಸೆಕ್ಯೂರಿಟಿಗಳ ಸೆಟಲ್ಮೆಂಟ್ ಅನ್ನು ಸೆಪ್ಟೆಂಬರ್ 9ರಂದು ಮಾಡಲಾಗುತ್ತದೆ ಎಂದು ಆರ್ಬಿಐ ತಿಳಿಸಿದೆ.
ಇದನ್ನೂ ಓದಿ: ದೊಡ್ಡ ವಾಹನಗಳಿಗೆ ಟ್ಯಾಕ್ಸ್ ಶೇ. 40ಕ್ಕೆ ಹೆಚ್ಚಾದರೂ ಬೆಲೆಯಲ್ಲಿ ಇಳಿಕೆ; ಹೇಗಿದೆ ವಾಹನಗಳ ಮೇಲೆ ಹೊಸ ಜಿಎಸ್ಟಿ ದರ?
ಸೆ. 5 ಬದಲು ಸೆ. 8ಕ್ಕೆ ರಜೆ ಮಾಡಿದ್ದು ಯಾಕೆ?
ಸೆಪ್ಟೆಂಬರ್ 5, ಶುಕ್ರವಾರದಂದು ಈದ್ ಮಿಲಾದ್ ಇದೆ. ಈ ಪ್ರಯುಕ್ತ ಹೆಚ್ಚಿನ ರಾಜ್ಯಗಳಲ್ಲಿ ರಜೆ ನೀಡಲಾಗಿದೆ. ಮಹಾರಾಷ್ಟ್ರ ರಾಜ್ಯ ಕೂಡ ರಜೆ ನೀಡಿದೆ. ಆದರೆ, ಮುಂಬೈ ಹಾಗೂ ಇತರ ಮಹಾರಾಷ್ಟ್ರ ನಗರ ಪ್ರದೇಶಗಳಲ್ಲಿ ಈದ್ ಮಿಲಾದ್ಗೆ ರಜೆಯನ್ನು ಸೆಪ್ಟೆಂಬರ್ 5ರ ಬದಲು ಸೆಪ್ಟೆಂಬರ್ 8ಕ್ಕೆ ನಿಗದಿ ಮಾಡಿದೆ ಅಲ್ಲಿನ ಸರ್ಕಾರ. ಅಲ್ಲಿ ಸೆಪ್ಟೆಂಬರ್ 5ರಂದು ಸರ್ಕಾರಿ ಕಚೇರಿಗಳು ತೆರೆದಿರುತ್ತವೆ. ಸೆ. ರಂದು ಬಂದ್ ಆಗುತ್ತವೆ.
ಷೇರುಗಳ ಟ್ರೇಡಿಂಗ್ ಸೆ. 8ರಂದು ನಡೆಯುತ್ತಾ?
ಗವರ್ನ್ಮೆಂಟ್ ಸೆಕ್ಯೂರಿಟಿ, ಮನಿ ಮಾರ್ಕೆಟ್, ಫಾರೆಕ್ಸ್ ಇತ್ಯಾದಿಯಲ್ಲಿ ಸೆಪ್ಟೆಂಬರ್ 8ರಂದು ಯಾವುದೇ ಸೆಟಲ್ಮೆಂಟ್ ಆಗಲೀ ಟ್ರಾನ್ಸಾಕ್ಷನ್ ಆಗಲಿ ನಡೆಯುವುದಿಲ್ಲ. ಆದರೆ, ಇದು ಷೇರು ವಹಿವಾಟಿನ ಮೇಲೆ ಪರಿಣಾಮ ಬೀರುವುದಿಲ್ಲ. ಷೇರು ವಿನಿಮಯ ಕೇಂದ್ರಗಳಾದ ಬಿಎಸ್ಇ ಮತ್ತು ಎನ್ಎಸ್ಇ ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಬೆಳಗ್ಗೆ 9:15ರಿಂದ ಮಧ್ಯಾಹ್ನ 3:30ರವರೆಗೂ ಟ್ರೇಡಿಂಗ್ ನಡೆಯುತ್ತದೆ.
ಇದನ್ನೂ ಓದಿ: ಸೆ. 22ರಿಂದ ಇನ್ಷೂರೆನ್ಸ್ಗೆ ಜಿಎಸ್ಟಿಯೇ ಇಲ್ಲ; ಅಲ್ಲೀವರೆಗೂ ಪ್ರೀಮಿಯಮ್ ಕಟ್ಟೋದು ನಿಲ್ಲಿಸಬೇಕಾ?
ಷೇರುಪೇಟೆಗೆ ಮತ್ತಿನ್ಯಾವ ದಿನಗಳು ರಜೆ?
ಷೇರು ಮಾರುಕಟ್ಟೆ ಪ್ರತೀ ಶನಿವಾರ ಮತ್ತು ಭಾನುವಾರ ರಜೆ ಹೊಂದಿರುತ್ತದೆ. ಜೊತೆಗೆ ವರ್ಷಕ್ಕೆ 10ಕ್ಕೂ ಹೆಚ್ಚು ಇತರ ದಿನಗಳಲ್ಲೂ ರಜೆ ಹೊಂದಿರುತ್ತದೆ. ಅಕ್ಟೋಬರ್ ತಿಂಗಳಲ್ಲಿ ಷೇರುಪೇಟೆ ಮೂರು ದಿನ ಬಂದ್ ಆಗಿರುತ್ತದೆ. 2ನೇ ತಾರೀಖು ಗಾಂಧಿ ಜಯಂತಿ, 21ನೇ ತಾರೀಖು ಲಕ್ಷ್ಮೀ ಪೂಜೆ, 22ನೇ ತಾರೀಖು ಬಲಿಪಾಡ್ಯಮಿ ಪ್ರಯುಕ್ತ ಬಿಎಸ್ಇ, ಎನ್ಎಸ್ಇ ಚಟುವಟಿಕೆ ಬಂದ್ ಆಗಿರುತ್ತದೆ. ನವೆಂಬರ್ 5 ಮತ್ತು ಡಿಸೆಂಬರ್ 25ರಂದೂ ಷೇರು ಟ್ರೇಡಿಂಗ್ ಇರುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




