Old 5 Rs Coin: ದಪ್ಪದ 5 ರೂ ನಾಣ್ಯದ ಚಲಾವಣೆ ನಿಲ್ಲಿಸುತ್ತಿರುವ ಆರ್​ಬಿಐ; ಕಾರಣಗಳಿವು…

Rs 5 coin circulation: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ದಪ್ಪದ ಹಳೆಯ 5 ರೂ ನಾಣ್ಯಗಳ ಚಲಾವಣೆಯನ್ನು ನಿಲ್ಲಿಸಿದೆ ಎನ್ನುವ ಸುದ್ದಿ ಇದೆ. ಬಾಂಗ್ಲಾದೇಶಕ್ಕೆ ಈ ಹಳೆಯ ನಾಣ್ಯಗಳನ್ನು ಕಳ್ಳ ಸಾಗಾಣಿಕೆ ಮಾಡಲಾಗುತ್ತಿರುವ ಬಗ್ಗೆ ವರದಿಗಳಿವೆ. ಈ ಐದು ರೂ ನಾಣ್ಯವನ್ನು ಕರಗಿಸಿದರೆ, ಆ ಲೋಹ ಬಳಸಿ ಐದಾರು ರೇಜರ್ ಬ್ಲೇಡ್ ತಯಾರಿಸಬಹುದು. ಈ ಕಾರಣಕ್ಕೆ ಆ ನಾಣ್ಯದ ತಯಾರಿಕೆ ನಿಲ್ಲಿಸಲಾಗಿದೆ.

Old 5 Rs Coin: ದಪ್ಪದ 5 ರೂ ನಾಣ್ಯದ ಚಲಾವಣೆ ನಿಲ್ಲಿಸುತ್ತಿರುವ ಆರ್​ಬಿಐ; ಕಾರಣಗಳಿವು...
5 ರೂ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 16, 2024 | 3:56 PM

ನವದೆಹಲಿ, ಡಿಸೆಂಬರ್ 16: ದಪ್ಪದಾಗಿರುವ ಹಳೆಯ 5 ರೂ ನಾಣ್ಯಗಳನ್ನು ಆರ್​ಬಿಐ ನಿಷೇಧಿಸಿದೆ ಎನ್ನುವಂತಹ ಸುದ್ದಿ ಹರಿದಾಡುತ್ತಿದೆ. ವರದಿಗಳ ಪ್ರಕಾರ ಈ ನಾಣ್ಯಗಳನ್ನು ಚಲಾವಣೆಯಿಂದ ಹಿಂಪಡೆಯಲಾಗಿದೆ. ಇನ್ನೂ ಕೆಲ ವರದಿಗಳ ಪ್ರಕಾರ ಈ ನಾಣ್ಯಗಳ ತಯಾರಿಕೆಯನ್ನು ಸರ್ಕಾರ ನಿಲ್ಲಿಸಿದೆ. ಅದರ ಚಲಾವಣೆ ಮುಂದುವರಿಯಲು ಅಡ್ಡಿ ಇಲ್ಲ ಎನ್ನಲಾಗಿದೆ. ಸದ್ಯ ಎರಡು ಮೂರು ರೀತಿಯ 5 ರೂ ನಾಣ್ಯಗಳು ಚಲಾವಣೆಯಲ್ಲಿವೆ. ಗೋಲ್ಡ್ ಕಾಯಿನ್ ಎಂದು ಜನಪ್ರಿಯವಾಗಿರುವ, ನಿಕಲ್ ಮತ್ತು ಬ್ರಾಸ್​ನಿಂದ (ಹಿತ್ತಾಳೆ) ಮಾಡಿರುವ 5 ರೂ ನಾಣ್ಯ ಇದೆ. ಹೆಚ್ಚು ವ್ಯಾಸವಿರುವ ಅದೇ ಲೋಹಗಳಿಂದ ಮಾಡಿದ ನಾಣ್ಯವೂ ಇದೆ. ಹಿಂದೆ ತಯಾರಿಸಿ ಮಾರುಕಟ್ಟೆಗೆ ಬಿಡಲಾಗಿದ್ದ ದಪ್ಪದಾಗಿರುವ 5 ರೂ ನಾಣ್ಯವೂ ಚಲಾವಣೆಯಲ್ಲಿದೆ.

ಈ ಪೈಕಿ ದಪ್ಪದಾಗಿರುವ 5 ರೂ ನಾಣ್ಯದ ತಯಾರಿಕೆಯನ್ನು ಆರ್​ಬಿಐ ನಿಲ್ಲಿಸಿದೆ. ಅದರ ಚಲಾವಣೆಯನ್ನೂ ನಿಲ್ಲಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಆರ್​ಬಿಐನಿಂದ ಅಧಿಕೃತ ಹೇಳಿಕೆ ಬಂದಿಲ್ಲ. ಸಾಮಾನ್ಯವಾಗಿ ಒಂದು ನಾಣ್ಯವನ್ನು ಚಲಾವಣೆಯಿಂದ ಹಿಂಪಡೆಯಲು ಹಲವು ಕಾರಣಗಳಿರುತ್ತವೆ. ನಾಣ್ಯದ ಮುಖಬೆಲೆಗಿಂತ ಅದರ ಲೋಹಗಳ ಬೆಲೆ ಹೆಚ್ಚಾಗುವಂತಿಲ್ಲ. ಈ ಕಾರಣಕ್ಕೆ ಆರ್​ಬಿಐ ಈ ಐದು ರೂ ಮುಖಬೆಲೆಯ ನಾಣ್ಯಗಳನ್ನು ಚಲಾವಣೆಯಿಂದ ಹಿಂಪಡೆಯುತ್ತಿರಬಹುದು.

ಇದನ್ನೂ ಓದಿ: ಚೀನಾದಿಂದ ಆಟಿಕೆ ಅಮದಿಗೆ ಕಡಿವಾಣ; ಗರಿಗೆದರುತ್ತಿರುವ ಭಾರತದ ಆಟಿಕೆ ಉದ್ಯಮದ ಮುಂದಿದೆ ಒಂದಷ್ಟು ಸವಾಲು

ದಪ್ಪಗಿರುವ ಐದು ರೂ ನಾಣ್ಯವನ್ನು ಕರಗಿಸಿ, ಅದರಿಂದ 5 ಶೇವಿಂಗ್ ಬ್ಲೇಡ್​ಗಳನ್ನು ತಯಾರಿಸಲು ಸಾಧ್ಯ. ಒಂದೊಂದು ಬ್ಲೇಡ್ ಅನ್ನೂ 2 ರೂಗೆ ಮಾರಿದರೆ ಅದು 10 ರೂ ಆಗುತ್ತದೆ. ಹೀಗಾಗಿ, ನಾಣ್ಯದ ನಿಜಮೌಲ್ಯವು ಅದರ ಮುಖಬೆಲೆಗಿಂತ ಹೆಚ್ಚೇ ಇರುತ್ತದೆ. ಇದು ನಿಯಮಕ್ಕೆ ವಿರುದ್ಧವಾದುದು ಎನ್ನಲಾಗುತ್ತಿದೆ.

ವರದಿಗಳ ಪ್ರಕಾರ ಹಳೆಯ ಐದು ರೂ ನಾಣ್ಯಗಳನ್ನು ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ. ಅಲ್ಲಿ ಇವುಗಳಿಂದ ರೇಜರ್ ಬ್ಲೇಡ್​ಗಳನ್ನು ತಯಾರಿಸಿ ಅಲ್ಲಿಯ ಮಾರುಕಟ್ಟೆಯಲ್ಲಿ ಮಾರಲಾಗುತ್ತಿದೆ. ಒಂದು ನಾಣ್ಯದಿಂದ ಅಲ್ಲಿ ಆರು ಬ್ಲೇಡ್​ಗಳನ್ನು ತಯಾರಿಸುತ್ತಿರುವುದು ಗೊತ್ತಾಗಿದೆ.

ಈ ಕಾರಣಕ್ಕೆ ಆರ್​ಬಿಐ ಈ 5 ರೂ ನಾಣ್ಯದ ಸ್ವರೂಪದಲ್ಲಿ ಬದಲಾವಣೆ ಮಾಡಿದೆ. ತೆಳುವಿರುವ ನಾಣ್ಯವನ್ನು ಬಿಡುಗಡೆ ಮಾಡಿದೆ. ಕಡಿಮೆ ಮೌಲ್ಯದ ವಸ್ತುಗಳನ್ನು ಇದಕ್ಕೆ ಬೆರೆಸಲಾಗುತ್ತಿದೆ. ಇದರಿಂದ ಬ್ಲೇಡ್ ತಯಾರಿಸುವುದು ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: 2 ಲಕ್ಷ ರೂ ವಿಮಾ ಕವರೇಜ್ ನೀಡುವ ಜೀವನ್​ಜ್ಯೋತಿ ಬಿಮಾ ಯೋಜನೆ; 21 ಕೋಟಿ ದಾಟಿದ ಫಲಾನುಭವಿಗಳ ಸಂಖ್ಯೆ

ಭಾರತದಲ್ಲಿ ಸದ್ಯ 1 ರೂ, 2 ರೂ, 5 ರೂ, 10 ರೂ, 20 ರೂ ನಾಣ್ಯಗಳು ಚಲಾವಣೆಯಲ್ಲಿವೆ. ಸದ್ಯದಲ್ಲೇ 30 ರೂ ಮತ್ತು 50 ರೂ ನಾಣ್ಯಗಳೂ ಚಲಾವಣೆಗೆ ಬರುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರೇಣುಕಾಸ್ವಾಮಿ ಹತ್ಯೆ ಕೇಸ್​; ದರ್ಶನ್ ವಿಚಾರಣೆಯ ನೇರ ಪ್ರಸಾರ ಇಲ್ಲಿದೆ..
ರೇಣುಕಾಸ್ವಾಮಿ ಹತ್ಯೆ ಕೇಸ್​; ದರ್ಶನ್ ವಿಚಾರಣೆಯ ನೇರ ಪ್ರಸಾರ ಇಲ್ಲಿದೆ..
ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂದ ಪ್ರತಿಭಟನೆಕಾರರು
ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂದ ಪ್ರತಿಭಟನೆಕಾರರು
Video: ಸಂಸತ್ತಿಗೆ ಪ್ಯಾಲೆಸ್ತೀನ್ ಬ್ಯಾಗ್ ಹಿಡಿದು ಬಂದ ಪ್ರಿಯಾಂಕಾ ಗಾಂಧಿ
Video: ಸಂಸತ್ತಿಗೆ ಪ್ಯಾಲೆಸ್ತೀನ್ ಬ್ಯಾಗ್ ಹಿಡಿದು ಬಂದ ಪ್ರಿಯಾಂಕಾ ಗಾಂಧಿ
ಸಿದ್ದರಾಮಯ್ಯನವರ ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ, ಬಗ್ಗಲ್ಲ: ವಿಜಯೇಂದ್ರ
ಸಿದ್ದರಾಮಯ್ಯನವರ ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ, ಬಗ್ಗಲ್ಲ: ವಿಜಯೇಂದ್ರ
ವಿಜಯೇಂದ್ರ-ಭೈರೇಗೌಡ ನಡುವೆ ವಾಗ್ವಾದ, ಸ್ಪೀಕರ್ ಯುಟಿ ಖಾದರ್ ಅಸಹಾಯಕ
ವಿಜಯೇಂದ್ರ-ಭೈರೇಗೌಡ ನಡುವೆ ವಾಗ್ವಾದ, ಸ್ಪೀಕರ್ ಯುಟಿ ಖಾದರ್ ಅಸಹಾಯಕ
ಅಧಿಕಾರದಲ್ಲಿರೋದು ಮುಸ್ಲಿಂ ಓಲೈಕೆಯ ಹಿಂದೂ ವಿರೋಧಿ ಸರ್ಕಾರ: ಯತ್ನಾಳ್
ಅಧಿಕಾರದಲ್ಲಿರೋದು ಮುಸ್ಲಿಂ ಓಲೈಕೆಯ ಹಿಂದೂ ವಿರೋಧಿ ಸರ್ಕಾರ: ಯತ್ನಾಳ್
150 ಕೋಟಿ ಆಮಿಷ ಆರೋಪವನ್ನು ಸಿಬಿಐಗೆ ವಹಿಸಲಿ: ವಿಜಯೇಂದ್ರ ಆಗ್ರಹ
150 ಕೋಟಿ ಆಮಿಷ ಆರೋಪವನ್ನು ಸಿಬಿಐಗೆ ವಹಿಸಲಿ: ವಿಜಯೇಂದ್ರ ಆಗ್ರಹ
ಚೌಲಗೆರೆ ಬಳಿ ಹೊಸ ಟೋಲ್​ಗೆ ತೀವ್ರ ವಿರೋಧ, ಹೆದ್ದಾರಿ ತಡೆದು ಪ್ರತಿಭಟನೆ
ಚೌಲಗೆರೆ ಬಳಿ ಹೊಸ ಟೋಲ್​ಗೆ ತೀವ್ರ ವಿರೋಧ, ಹೆದ್ದಾರಿ ತಡೆದು ಪ್ರತಿಭಟನೆ
ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ: ಆರ್ ಅಶೋಕ
ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ: ಆರ್ ಅಶೋಕ
Assembly Session: ಬೆಳಗಾವಿ ಚಳಿಗಾಲದ ಅಧಿವೇಶನದ ನೇರಪ್ರಸಾರ
Assembly Session: ಬೆಳಗಾವಿ ಚಳಿಗಾಲದ ಅಧಿವೇಶನದ ನೇರಪ್ರಸಾರ