ಚೀನಾದಿಂದ ಆಟಿಕೆ ಅಮದಿಗೆ ಕಡಿವಾಣ; ಗರಿಗೆದರುತ್ತಿರುವ ಭಾರತದ ಆಟಿಕೆ ಉದ್ಯಮದ ಮುಂದಿದೆ ಒಂದಷ್ಟು ಸವಾಲು

Chinese toys vs Indian toy market: 2019-20ರಲ್ಲಿ 235 ಮಿಲಿಯನ್ ಡಾಲರ್ ಮೌಲ್ಯದ ಚೀನೀ ಆಟಿಕೆಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. 2023-24ರಲ್ಲಿ ಇದು 41 ಮಿಲಿಯನ್ ಡಾಲರ್​ಗೆ ಇಳಿದಿದೆ. ನಾಲ್ಕು ವರ್ಷದ ಅಂತರದಲ್ಲಿ ಚೀನೀ ಆಟಿಕೆಗಳ ಆಮದು ಬಹುತೇಕ ಶೇ. 85ರಷ್ಟು ಕಡಿಮೆ ಆಗಿದೆ.

ಚೀನಾದಿಂದ ಆಟಿಕೆ ಅಮದಿಗೆ ಕಡಿವಾಣ; ಗರಿಗೆದರುತ್ತಿರುವ ಭಾರತದ ಆಟಿಕೆ ಉದ್ಯಮದ ಮುಂದಿದೆ ಒಂದಷ್ಟು ಸವಾಲು
ಆಟಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 16, 2024 | 12:44 PM

ನವದೆಹಲಿ, ಡಿಸೆಂಬರ್ 16: ಚೀನಾದ ಉತ್ಪನ್ನಗಳ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿದ್ದ ಭಾರತದ ಆಟಿಕೆ ಉದ್ಯಮ ಈಗ ಗರಿಗೆದರಿ ಹೊಸ ಉತ್ಸಾಹ ಪಡೆದಂತಿದೆ. ಕೇವಲ ನಾಲ್ಕು ವರ್ಷದ ಅಂತರದಲ್ಲಿ ಚೀನಾದಿಂದ ಆಟಿಕೆ ಆಮದುಗಳನ್ನು ಗಣನೀಯವಾಗಿ ಇಳಿಕೆ ಮಾಡಲಾಗಿದೆ. ಚೀನಾ ಮಾತ್ರವಲ್ಲ, ಜಾಗತಿಕ ಆಟಿಕೆ ಉದ್ಯಮದ ಉತ್ಪನ್ನ ಗುಣಮಟ್ಟವನ್ನು ಭಾರತದ ಉದ್ದಿಮೆಗಳು ಕಾಯ್ದುಕೊಳ್ಳಲು ತಕ್ಕಮಟ್ಟಿಗೆ ಯಶಸ್ವಿಯಾಗಿವೆ. ತಜ್ಞರ ಪ್ರಕಾರ ಕೇವಲ ನಾಲ್ಕು ವರ್ಷದ ಅಂತರದಲ್ಲಿ ಇಷ್ಟೆಲ್ಲಾ ಬದಲಾವಣೆಗಳು ಆಗಿರುವುದು ಗಮನಾರ್ಹದ ಸಂಗತಿ ಎನ್ನಲಾಗಿದೆ.

2019-20ರ ಹಣಕಾಸು ವರ್ಷದಲ್ಲಿ ಭಾರತವು ಚೀನಾದಿಂದ 235 ಮಿಲಿಯನ್ ಡಾಲರ್ ಮೌಲ್ಯದ ಆಟಿಕೆಗಳನ್ನು ಆಮದು ಮಾಡಿಕೊಂಡಿತ್ತು. 2023-24ರಲ್ಲಿ ಇದು ಕೇವಲ 41 ಮಿಲಿಯನ್ ಡಾಲರ್​ಗೆ ಇಳಿದಿದೆ. ನಾಲ್ಕು ವರ್ಷದ ಅಂತರದಲ್ಲಿ ಆಮದು ಪ್ರಮಾಣ ಶೇ. 85ರ ಆಸುಪಾಸಿನಷ್ಟು ತಗ್ಗಿದೆ. ಸರ್ಕಾರ ತೆಗೆದುಕೊಂಡ ಕೆಲ ಕ್ರಮಗಳಿಂದಾಗಿ ಇದು ಸಾಧ್ಯವಾಗಿರಬಹುದು ಎನ್ನಲಾಗಿದೆ.

ಇದನ್ನೂ ಓದಿ: 75 ವರ್ಷಕ್ಕಿಂತ ಮೇಲ್ಪಟ್ಟವರು ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆಯೇ?

ಸರ್ಕಾರವು ಚೀನಾದ ಆಟಿಕೆ ಆಮದಿಗೆ ಶೇ. 20ರಷ್ಟು ತೆರಿಗೆ ವಿಧಿಸುತ್ತಿತ್ತು. ಅದನ್ನು ಶೇ. 70ಕ್ಕೆ ಹೆಚ್ಚಿಸಿದೆ. ಇದು ಚೀನಾ ಆಟಿಕೆ ಆಮದು ನಿಯಂತ್ರಿಸಲು ಒಂದು ಮಾರ್ಗವಾಯಿತು. ಮತ್ತೊಂದು ಮಾರ್ಗವೆಂದರೆ ಕಠಿಣ ಕ್ವಾಲಿಟಿ ಕಂಟ್ರೋಲ್ ಆರ್ಡರ್ (ಕ್ಯುಸಿಒ) ಅನ್ನು ಜಾರಿಗೆ ತಂದಿದ್ದು. ಇವೆರಡು ಕ್ರಮಗಳು ಭಾರತದ ಆಟಿಕೆ ಉದ್ಯಮವನ್ನು ಮೈಕೊಡವಿ ಮೇಲೇಳುವಂತೆ ಮಾಡಿವೆ.

ಇದರ ಪರಿಣಾಮವಾಗಿ ಭಾರತವು ಆಟಿಕೆ ಉದ್ಯಮದಲ್ಲಿ ನೆಟ್ ಎಕ್ಸ್​ಪೋರ್ಟರ್ ಎನಿಸಿದೆ. ಅಂದರೆ, ಆಮದಿಗಿಂತ ರಫ್ತು ಹೆಚ್ಚಾಗಿದೆ. ಗಮನಿಸಬೇಕಾದ ಸಂಗತಿ ಎಂದರೆ ಭಾರತದಲ್ಲಿ ಆಟಿಕೆ ಖರೀದಿಸುವುದು ಹೆಚ್ಚಾಗಿ 14 ವರ್ಷದೊಳಗಿನ ವಯಸ್ಸಿನ ಮಕ್ಕಳು. ಈ ವಯೋಮಾನದ ಜಾಗತಿಕ ಜನಸಂಖ್ಯೆಯಲ್ಲಿ ಭಾರತದ ಪಾಲು ಶೇ. 25ರಷ್ಟಿದೆ. ಇದು ಭಾರತದ ಆಟಿಕೆ ಉದ್ಯಮಕ್ಕೆ ಇಂದು ವಿಫುಲ ಅವಕಾಶಗಳನ್ನು ತೆರೆದಿಟ್ಟಿದೆ.

ಇದನ್ನೂ ಓದಿ: 2 ಲಕ್ಷ ರೂ ವಿಮಾ ಕವರೇಜ್ ನೀಡುವ ಜೀವನ್​ಜ್ಯೋತಿ ಬಿಮಾ ಯೋಜನೆ; 21 ಕೋಟಿ ದಾಟಿದ ಫಲಾನುಭವಿಗಳ ಸಂಖ್ಯೆ

ಭಾರತದ ಆಟಿಕೆ ಉದ್ಯಮದ ಮುಂದಿದೆ ಸವಾಲುಗಳು…

ಉದ್ಯಮ ಪರಿಣಿತರ ಪ್ರಕಾರ ಭಾರತದ ಆಟಿಕೆ ತಯಾರಕರು ಇನ್ನೂ ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಈಗ ಆಟಿಕೆ ಉದ್ಯಮದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಅಭಿವೃದ್ಧಿಯಾಗಿವೆ. ಉತ್ಕೃಷ್ಟ ಗುಣಮಟ್ಟದ ಆಟಿಕೆಗಳನ್ನು ತಯಾರಿಸಲು ಶಕ್ತವಾದರೂ ಅದನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲು ಭಾರತೀಯ ಉದ್ದಿಮೆಗಳಿಗೆ ತಂತ್ರಜ್ಞಾನದ ಕೊರತೆ ಇದೆ ಎನ್ನಲಾಗಿದೆ. ಈ ಒಂದು ಕೊರತೆ ನೀಗಿದರೆ ಭಾರತೀಯ ಆಟಿಕೆ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಸಮಾನ ಪೈಪೋಟಿ ನಡೆಸಲು ಸಾಧ್ಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಧಿಕಾರದಲ್ಲಿರೋದು ಮುಸ್ಲಿಂ ಓಲೈಕೆಯ ಹಿಂದೂ ವಿರೋಧಿ ಸರ್ಕಾರ: ಯತ್ನಾಳ್
ಅಧಿಕಾರದಲ್ಲಿರೋದು ಮುಸ್ಲಿಂ ಓಲೈಕೆಯ ಹಿಂದೂ ವಿರೋಧಿ ಸರ್ಕಾರ: ಯತ್ನಾಳ್
150 ಕೋಟಿ ಆಮಿಷ ಆರೋಪವನ್ನು ಸಿಬಿಐಗೆ ವಹಿಸಲಿ: ವಿಜಯೇಂದ್ರ ಆಗ್ರಹ
150 ಕೋಟಿ ಆಮಿಷ ಆರೋಪವನ್ನು ಸಿಬಿಐಗೆ ವಹಿಸಲಿ: ವಿಜಯೇಂದ್ರ ಆಗ್ರಹ
ಚೌಲಗೆರೆ ಬಳಿ ಹೊಸ ಟೋಲ್​ಗೆ ತೀವ್ರ ವಿರೋಧ, ಹೆದ್ದಾರಿ ತಡೆದು ಪ್ರತಿಭಟನೆ
ಚೌಲಗೆರೆ ಬಳಿ ಹೊಸ ಟೋಲ್​ಗೆ ತೀವ್ರ ವಿರೋಧ, ಹೆದ್ದಾರಿ ತಡೆದು ಪ್ರತಿಭಟನೆ
ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ: ಆರ್ ಅಶೋಕ
ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ: ಆರ್ ಅಶೋಕ
Assembly Session: ಚರ್ಚೆಯಾಗುತ್ತಿವೆ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳು
Assembly Session: ಚರ್ಚೆಯಾಗುತ್ತಿವೆ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳು
ಭಿನ್ನಾಭಿಪ್ರಾಯಗಳನ್ನು ಸಾರ್ವಜನಿಕವಾಗಿ ತೋರ್ಪಡಿಸದ ಸಿಎಂ ಮತ್ತು ಡಿಸಿಎಂ
ಭಿನ್ನಾಭಿಪ್ರಾಯಗಳನ್ನು ಸಾರ್ವಜನಿಕವಾಗಿ ತೋರ್ಪಡಿಸದ ಸಿಎಂ ಮತ್ತು ಡಿಸಿಎಂ
ಮಾಯೋಟ್​ನಲ್ಲಿ ಚಿಡೋ ಚಂಡಮಾರುತದ ಅಬ್ಬರ, ಸಾವಿರಕ್ಕೂ ಅಧಿಕ ಮಂದಿ ಸಾವು
ಮಾಯೋಟ್​ನಲ್ಲಿ ಚಿಡೋ ಚಂಡಮಾರುತದ ಅಬ್ಬರ, ಸಾವಿರಕ್ಕೂ ಅಧಿಕ ಮಂದಿ ಸಾವು
Video: ಪೊಲೀಸ್​ ವಾಹನ ಡಿಕ್ಕಿ ರಭಸಕ್ಕೆ ಗಾಳಿಯಲ್ಲಿ ಹಾರಿ ಬಿದ್ದ ವ್ಯಕ್ತಿ
Video: ಪೊಲೀಸ್​ ವಾಹನ ಡಿಕ್ಕಿ ರಭಸಕ್ಕೆ ಗಾಳಿಯಲ್ಲಿ ಹಾರಿ ಬಿದ್ದ ವ್ಯಕ್ತಿ
ಬೆಂಗಳೂರು: ಇಡೀ ಮೊಬೈಲ್​ ಅಂಗಡಿಯನ್ನೇ ದೋಚಿದ ಖದೀಮರು! ವಿಡಿಯೋ ನೋಡಿ
ಬೆಂಗಳೂರು: ಇಡೀ ಮೊಬೈಲ್​ ಅಂಗಡಿಯನ್ನೇ ದೋಚಿದ ಖದೀಮರು! ವಿಡಿಯೋ ನೋಡಿ
ಪಾಸಿಟಿವಿಟಿ ಬಿಟ್ಟು ವೈಲೆಂಟ್ ಆದ ಗೌತಮಿ ಜಾಧವ್; ರಜತ್​ಗೆ ಕೊಟ್ಟರು ಠಕ್ಕರ್
ಪಾಸಿಟಿವಿಟಿ ಬಿಟ್ಟು ವೈಲೆಂಟ್ ಆದ ಗೌತಮಿ ಜಾಧವ್; ರಜತ್​ಗೆ ಕೊಟ್ಟರು ಠಕ್ಕರ್