AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂಬಾಗಿಲ ಮೂಲಕ ಪರಿಷತ್​​ ಪ್ರವೇಶಕ್ಕೆ ಹೊರಟ್ಟಿ ಅಸಮಾಧಾನ: ಸಿಎಂ, ಡಿಸಿಎಂಗೆ ಮಹತ್ವದ ಪತ್ರ

ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷಗಳ ತುಂಬಿರುವ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇದೇ ಜೂನ್‌ 6ರಂದು ದೆಹಲಿಗೆ ತೆರಳಲಿದ್ದಾರೆ.ವಿಧಾನಪರಿಷತ್ ಸದಸ್ಯ ಸ್ಥಾನವನ್ನು ತುಂಬುವ ಸಂಬಂಧ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ವಿಚಾರವಾಗಿ ದೆಹಲಿಯಲ್ಲಿ ಹೈಕಮಾಂಡ್​ ಜತೆ ಮಾತುಕತೆ ನಡೆಯಲಿದೆ.ಇದರ ಮಧ್ಯ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಸಿಎಂ, ಡಿಸಿಎಂಗೆ ಪತ್ರ ಬರೆದಿದ್ದಾರೆ.

ಹಿಂಬಾಗಿಲ ಮೂಲಕ ಪರಿಷತ್​​ ಪ್ರವೇಶಕ್ಕೆ ಹೊರಟ್ಟಿ ಅಸಮಾಧಾನ: ಸಿಎಂ, ಡಿಸಿಎಂಗೆ ಮಹತ್ವದ ಪತ್ರ
Basavaraj Horatti
ಸಂಜಯ್ಯಾ ಚಿಕ್ಕಮಠ
| Updated By: ರಮೇಶ್ ಬಿ. ಜವಳಗೇರಾ|

Updated on:May 31, 2025 | 6:03 PM

Share

ಹುಬ್ಬಳ್ಳಿ, (ಮೇ 31); ಚಿಂತಕರ ಚಾವಡಿ ಅನಿಸಿಕೊಂಡಿರುವ ವಿಧಾನಪರಿಷತ್ ಗೆ ತನ್ನದೆ ಆದ ಘಣತೆ, ಗೌರವವಿದೆ. ಇಂತಹ ಸಧನಕ್ಕೆ ಈ ಹಿಂದೆ ಅನೇಕ ಮಹನೀಯರನ್ನು ಸರ್ಕಾರ ನಾಮಕರಣ ಮಾಡಿದ್ದವು. ಆದ್ರೆ ಇತ್ತೀಚೆಗೆ ರಾಜಕೀಯ ಹಿಂಬಾಲಕರು, ಕುಟುಂಬಸ್ಥರನ್ನು ಹಿಂಬಾಗಿಲ ಮೂಲಕ ಪರಿಷತ್ ಗೆ ನಾಮಕರಣ  (MLC nominations) ಮಾಡೋ ಕೆಲಸವಾಗುತ್ತಿದೆ. ಇದು ಸ್ವತ ಸಭಾಪತಿ ಹೊರಟ್ಟಿ ಅವರ ನೋವಿಗೆ ಕಾರಣವಾಗಿದೆ. ಹೀಗಾಗಿ ಈ ಬಾರಿಯಾದ್ರು ಅರ್ಹರನ್ನು ನಾಮಕರಣ ಮಾಡಿ ಅಂತ ಸ್ವತ ಸಭಾಪತಿ ಬಸವರಾಜ್ ಹೊರಟ್ಟಿ (basavaraj horatti) ಸಿಎಂ, ಡಿಸಿಎಂಗೆ ಪತ್ರ ಬರೆದಿದ್ದಾರೆ.

ರಾಜ್ಯ ವಿಧಾನ ಪರಿಷತ್ ಗೆ ಭವ್ಯ ಇತಿಹಾಸವಿದೆ. 75 ಸ್ಥಾನಗಳನ್ನು ಹೊಂದಿರೋ ಪರಿಷತ್ ಗೆ ವಿಧಾನಸಭೆ ಶಾಸಕರ ಮತದಾನ, ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ಸಧಸ್ಯರ ನೇಮಕವಾಗುತ್ತದೆ. ಇನ್ನು ರಾಜ್ಯದಲ್ಲಿ ಕಲೆ, ಸಾಹಿತ್ಯ, ಸಂಗೀತ, ಮಾಧ್ಯಮ, ಸಮಾಜಸೇವೆ ಮಾಡಿದವರನ್ನು ಸರ್ಕಾರದ ಸೂಚನೆ ಮೇರೆಗೆ ರಾಜ್ಯಪಾಲರು ನೇಮಕ ಮಾಡ್ತಾರೆ. ಅನುಚ್ಚೇದ 171(3) ಇ ಅನ್ವಯ, 5 ನೇ ಖಂಡದ ಉಪಬಂದಗಳಿಗೆ ಅನುಸಾರವಾಗಿ, ರಾಜ್ಯಪಾಲರು ನಾಮನಿರ್ದೇಶನ ಮಾಡ್ತಾರೆ. ಹೀಗೆ 11 ಸಧಸ್ಯರನ್ನು ನಾಮಕರಣ ಮಾಡಲು ಅವಕಾಶವಿದೆ. ಇನ್ನು ಅನೇಕ ಗಂಭೀರ ಮತ್ತು ಪ್ರಮುಖ ಚರ್ಚೆಗಳಿಗೆ ಸಾಕ್ಷಿಯಾಗಿರೋ ಪರಿಷತ್ ಗೆ ಈ ಹಿಂದೆ ಖ್ಯಾತ ಹಿಂದೂಸ್ಥಾನಿ ಗಾಯಕಿ ಗಂಗೂಬಾಯಿ ಹಾನಗಲ್,ಮಲ್ಲಿಕಾರ್ಜುನ ಮನ್ಸೂರ್, ಡಿ.ವಿ ಗುಂಡಪ್ಪ,ಎಚ್ ನರಸಿಂಹಯ್ಯ, ಖಾದ್ರಿ ಶಾಮಣ್ಣ,ದೊರೆಸ್ವಾಮಿ, ಅನಂತನಾಗ್ ,ಚಂದ್ರಶೇಖರ ಕಂಬಾರ್ ಸೇರಿದಂತೆ ಅನೇಕ ಮಹನೀಯರನ್ನು ನಾಮಕರಣ ಮಾಡಲಾಗಿತ್ತು. ಅವರೆಲ್ಲರು ತಮ್ಮ ಕ್ಷೇತ್ರದಲ್ಲಿ ಸಂಪಾಧಿಸಿದ ಜ್ಞಾನವನ್ನು ರಾಜ್ಯದ ಅಭಿವೃದ್ದಿ ಪರ ಕೆಲಸಕ್ಕೆ ಬಳಸಿದ್ದಾರೆ. ಇದೇ ಕಾರಣಕ್ಕೆ ಪರಿಷತ್ ನ್ನು ಚಿಂತಕರ ಚಾವಡಿ ಅಂತ ಕರೆಯಲಾಗುತ್ತದೆ.

ಇದನ್ನೂ ಓದಿ: ಸಿಎಂ-ಡಿಸಿಎಂ ಮಧ್ಯೆ ವರ್ಗಾವಣೆ ಸಂಘರ್ಷ: ಅಷ್ಟಕ್ಕೂ ಆಗಿದ್ದೇನು? ಡಿಕೆಶಿ ಆಕ್ರೋಶಗೊಂಡಿದ್ಯಾಕೆ?

ಆದ್ರೆ ಇದೇ ಚಿಂತಕರ ಚಾವಡಿಗೆ ಇತ್ತೀಚೆಗೆ ನಾಮನಿರ್ದೇಶಗೊಳ್ತಿರ ಹಿನ್ನಲೆ ನೋಡಿದಾಗ, ಬಹುತೇಕರು ಚುನಾವಣೆಯಲ್ಲಿ ಸೋತವರು, ರಾಜಕೀಯ ನಾಯಕರ ಕುಟುಂಬದವರು, ಉದ್ಯಮಿಗಳು ಹೆಚ್ಚಾಗಿ ನಾಮನಿರ್ದೇಶಗೊಳ್ತಿದ್ದಾರೆ. ಇದು ಸ್ವತ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಸ್ಪೀಕರ್ ಹೊರಟ್ಟಿ ಅವರು ಸಿಎಂ ಮತ್ತು ಡಿಸಿಎಂಗೆ ಈ ಬಗ್ಗೆ ಪತ್ರ ಬರೆದಿದ್ದಾರೆ.

ಮೇ 27 ರಂದೇ ಸಿಎಂ,ಡಿಸಿಎಂ ಗೆ ಪತ್ರ ಬರೆದಿರೋ ಬಸವರಾಜ್ ಹೊರಟ್ಟಿ, ಸದ್ಯ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಮಾಡಲು ಅವಕಾಶವಿದೆ. ನಾಮ ನಿರ್ದೇಶಿಕ ಸಧಸ್ಯರು, ಕಲೆ,ಸಾಹಿತ್ಯ,ಸಂಗೀತ,ಸಮಾಜವೇಸೆ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರೋರನ್ನು ನಾಮ ನಿರ್ದೇಶನ ಮಾಡಲು ಅವಕಾಶವಿದೆ. ಹೀಗಾಗಿ ಸೂಕ್ತ ವ್ಯಕ್ತಿಗಳನ್ನು ನಾಮ ನಿರ್ದೇಶನ ಮಾಡೋ ಗುರುತರ ಜವಾಬ್ದಾರಿ ತಮ್ಮ ಮೇಲಿದೆ. ನಾಮನಿರ್ದೇಶನಕ್ಕಿರೋ ಮಾನದಂಡಗಳನ್ನು ಅನುಸರಿಸಿ, ಸದಸ್ಯರ ನಾಮನಿರ್ದೇಶನ ಮಾಡಬೇಕು ಅಂತ ಕೋರಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೇ ನೀಡಿರೋ ಸಭಾಪತಿ ಬಸವರಾಜ್ ಹೊರಟ್ಟಿ, ಚಿಂತಕರ ಚಾವಡಿಗೆ ಸೂಕ್ತ ಮತ್ತು ಅರ್ಹರು ನಾಮನಿರ್ದೇಶವಾಗಬೇಕು. ರಾಜಕೀಯ ನಾಯಕರ ಹಿಂಬಾಲಕರು, ಕುಟುಂಬಸ್ಥರು ಹಿಂಬಾಗಿಲ ಮೂಲಕ ಬರ್ತಿದ್ದಾರೆ. ಇದು ನಿಲ್ಲಬೇಕು. ಪರಿಷತ್, ಉತ್ತಮ ಚರ್ಚೆಗೆ ಸಾಕ್ಷಿಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು ಅಂತ ಹೇಳಿದ್ದಾರೆ.

ಸದ್ಯ ಸರ್ಕಾರಕ್ಕೆ ಅರ್ಹರನ್ನು ನಾಮಕರಣ ಮಾಡಲು ಸ್ವತ ಸಭಾಪತಿ ಇದೀಗ ಸಿಎಂ, ಡಿಸಿಎಂಗೆ ಪತ್ರ ಬರೆದಿದ್ದಾರೆ. ಆದ್ರೆ ಇತ್ತೀಚೆಗೆ ಅಧಿಕಾರಕ್ಕೆ ಬಂದ ಸರ್ಕಾರಗಳೆಲ್ಲಾ, ಹಿಂಬಾಲಕರನ್ನು ನಾಮಕರಣ ಮಾಡೋದೆ ಹೆಚ್ಚಾಗಿದ್ದು, ಈ ಸರ್ಕಾರವಾದ್ರು ಅರ್ಹರನ್ನು ನಾಮಕರಣ ಮಾಡುತ್ತಾ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

Published On - 6:02 pm, Sat, 31 May 25

100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ