RBI: ಆರ್ಬಿಐನಿಂದ ಕೇಂದ್ರಕ್ಕೆ 87,416 ಕೋಟಿ ಡಿವಿಡೆಂಡ್; ರಿಸರ್ವ್ ಬ್ಯಾಂಕ್ಗೆ ಆದಾಯ ಎಲ್ಲಿಂದ? ಇಲ್ಲಿದೆ ಡೀಟೇಲ್ಸ್
Income Source Of Reserve Bank of India: 2022-23ರ ಸಾಲಿಗೆ ಕೇಂದ್ರ ಸರ್ಕಾರಕ್ಕೆ ಆರ್ಬಿಐ 87,416 ಕೋಟಿ ರೂ ಡಿವಿಡೆಂಡ್ ಕೊಡಲು ನಿರ್ಧರಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಿಂದ ಆದಾಯ ಗಳಿಸಉತ್ತದೆ, ಈ ವಿವರ ಇಲ್ಲಿದೆ....
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2022-23ರ ಹಣಕಾಸು ವರ್ಷದ ಹೆಚ್ಚುವರಿ ಹಣವಾಗಿ ಕೇಂದ್ರ ಸರ್ಕಾರಕ್ಕೆ 87,416 ಕೋಟಿ ರೂ ಹಣ ರವಾನಿಸಲಿದೆ. ಆರ್ಬಿಐನ ಕೇಂದ್ರೀಯ ನಿರ್ದೇಶಕರ ಮಂಡಳಿ (RBI Central Board of Directors) ಇದಕ್ಕೆ ಅನುಮೋದನೆ ನೀಡಿದೆ. ಈ ಹೆಚ್ಚುವರಿ ಹಣವು ಆರ್ಬಿಐನ ಲಾಭಾಂಶವಾಗಿದ್ದು ಕೇಂದ್ರ ಸರ್ಕಾರ ನಿರೀಕ್ಷಿಸಿದ್ದಕ್ಕಿಂತ ಬಹಳ ಹೆಚ್ಚಿದೆ. ಇತ್ತೀಚಿನ ಕೆಲ ವರ್ಷಗಳಿಂದ ಆರ್ಬಿಐನ ಡಿವಿಡೆಂಡ್ಗಳು ಸರ್ಕಾರಕ್ಕೆ ಒಳ್ಳೆಯ ಅದಾಯ ಮೂಲಗಲಾಗೇ ಪರಿಣಮಿಸಿವೆ.
ಕೇಂದ್ರ ಸರ್ಕಾರ ಕಳೆದ ಬಾರಿಯ ಬಜೆಟ್ನಲ್ಲಿ ಆರ್ಬಿಐನಿಂದ 48,000 ಕೋಟಿ ರೂ ಆಸುಪಾಸಿನ ಮೊತ್ತದಷ್ಟು ಲಾಭಾಂಶ ಬರಬಹುದು ಎಂದು ನಿರೀಕ್ಷಿಸಿತ್ತು. ಆದರೆ, ಈ ಎಣಿಕೆಗಿಂತಲೂ ಬಹಳ ಹೆಚ್ಚು, ಅಂದರೆ 87,416 ಕೋಟಿ ರೂ ಮೊತ್ತದಷ್ಟು ಡಿವಿಡೆಂಡ್ ಅನ್ನು ಆರ್ಬಿಐ ಕೇಂದ್ರಕ್ಕೆ ದಯಪಾಲಿಸುತ್ತಿದೆ. ಈ ವರ್ಷ ನಿರೀಕ್ಷೆಮೀರಿ ಆರ್ಬಿಐ ಲಾಭ ಗಳಿಸಲು ಸಾಧ್ಯವಾಗಿದ್ದು ವಿದೇಶೀ ಕರೆನ್ಸಿಗಳ ಮಾರಾಟದಿಂದ ಎಂದು ಹೇಳಲಾಗುತ್ತಿದೆ.
ಹಿಂದಿನ ವರ್ಷಗಳಲ್ಲಿ ಕೇಂದ್ರಕ್ಕೆ ಆರ್ಬಿಐ ನೀಡಿದ ಡಿವಿಡೆಂಡ್ ಹಣ ಎಷ್ಟು?
- 2022-23: 87,416 ಕೋಟಿ ರೂ (ಈಗ ಘೋಷಣೆ ಆಗಿದ್ದು)
- 2021-22: 30,307 ಕೋಟಿ ರೂ
- 2020-21: 99,122 ಕೋಟಿ ರೂ
- 2019-20: 57,128 ಕೋಟಿ ರೂ
- 2018-19: 1,23,414 ಕೋಟಿ ರೂ
- 2017-18: 50,000 ಕೋಟಿ ರೂ
- 2016-17: 30,569 ಕೋಟಿ ರೂ
ಭಾರತೀಯ ರಿಸರ್ವ್ ಬ್ಯಾಂಕ್ಗೆ ಎಲ್ಲಿಂದ ಆದಾಯ ಬರುತ್ತದೆ?
- ಕಮರ್ಷಿಯಲ್ ಬ್ಯಾಂಕು, ಹಣಕಾಸು ಸಂಸ್ಥೆಗಳಿಗೆ ಆರ್ಬಿಐ ರೆಪೋ ದರದಲ್ಲಿ ಸಾಲ ಒದಗಿಸುತ್ತದೆ. ಅದರಿಂದ ಬರುವ ಬಡ್ಡಿ ಒಂದು ಆದಾಯ ಮೂಲ.
- ಫಾರೀನ್ ಕರೆನ್ಸಿ ಅಸೆಟ್ಸ್ ಅಥವಾ ವಿದೇಶೀ ಕರೆನ್ಸಿಗಳಿಂದ ಆರ್ಬಿಐ ಬಡ್ಡಿ ಗಳಿಸುತ್ತದೆ.
- ಫಾರೀನ್ ಕರೆನ್ಸಿಗಳ ಮಾರಾಟದಿಂದ ಈ ಬಾರಿ 68,000 ಕೋಟಿಗೂ ಹೆಚ್ಚು ಲಾಭ ಮಾಡಿಕೊಂಡಿತು ಆರ್ಬಿಐ
- ರುಪೀ ಸೆಕ್ಯೂರಿಟೀಸ್ಗಳ ಮೂಲಕ ಬಡ್ಡಿಯಿಂದ ಆದಾಯ
- ಎಲ್ಎಎಫ್ ಮತ್ತು ಎಂಎಸ್ಎಫ್ ಮೂಲಕ ಬಡ್ಡಿ