
ಭಾರತದ ಪ್ರಮುಖ ಮೊಬೈಲ್ ನೆಟ್ವರ್ಕ್ ಕಂಪನಿ ರಿಲಾಯನ್ಸ್ ಜಿಯೋ (Reliance Jio) ಸಾಕಷ್ಟು ಒಳ್ಳೆಯ ಡೇಟಾ ಪ್ಲಾನ್ಗಳನ್ನು ಹೊಂದಿದೆ. ಜಿಯೋದ ಪ್ರೀಪೇಡ್ ಮತ್ತು ಪೋಸ್ಟ್ ಪೇಡ್ ಎರಡೂ ಥರದ ಪ್ಲಾನ್ಗಳು ಕಾಸಿಗೆ ತಕ್ಕಂಥ ಸೌಲಭ್ಯ ಕೊಡುತ್ತವೆ. ಹೊಸ ಹೊಸ ಪ್ಲಾನ್ಗಳನ್ನು ಆಗಾಗ್ಗೆ ಬಿಡುಗಡೆ ಮಾಡುತ್ತದೆ. ಈಗ ಅದು ಎರಡು ಪೋಸ್ಟ್ ಪೇಯ್ಡ್ (Jio Post Paid) ಪ್ಲಾನ್ಗಳನ್ನು ನೀಡಿದೆ. 399 ರೂ ಮತ್ತು 699 ರೂ ಪ್ಲಾನ್ಗಳನ್ನು 30 ದಿನಗಳ ಟ್ರಯಲ್ ಆಗಿ ಜಿಯೊ ಆಫರ್ ಮಾಡಿದೆ. ಇವು ಫ್ಯಾಮಿಲಿ ಪ್ಲಾನ್ಗಳಾಗಿದ್ದು, ಜಿಯೋದಿಂದ ಆ್ಯಡ್ ಆನ್ ಕನೆಕ್ಷನ್ಗಳೂ ಸಿಗುತ್ತವೆ.
ಈ ಎರಡು ಪ್ಲಾನ್ಗಳನ್ನು ಪ್ರಾಯೋಗಿಕವಾಗಿ ನೀಡಲಾಗುತ್ತಿದೆ. ಪ್ರೀಪೇಡ್ ಪ್ಲಾನ್ ಹೊಂದಿದವರನ್ನು ಪೋಸ್ಟ್ ಪೇಡ್ಗೆ ಸೆಳೆಯುವ ಪ್ರಯತ್ನ ಇದು. ಇದೇ ಮೊದಲ ಬಾರಿಗೆ ಪೋಸ್ಟ್ ಪೇಡ್ ಅನ್ನು ಬಳಸಲು ಹೊರಟಿರುವವರಿಗೆ ಈ ಟ್ರಯಲ್ ಪ್ಲಾನ್ಗಳು ಸೂಕ್ತ ಎನಿಸುತ್ತವೆ. ಇದರ ಸೇವೆ ಇಷ್ಟವಾದರೆ ಪೋಸ್ಟ್ ಪೇಡ್ ಪ್ಲಾನ್ನಲ್ಲಿ ಮುಂದುವರಿಯಬಹುದು. ಇಲ್ಲದಿದ್ದರೆ ಪ್ರೀಪೇಡ್ ಸರ್ವಿಸ್ಗೆ ಮರಳಬಹುದು.
ಇದನ್ನೂ ಓದಿ: NPS: ನ್ಯಾಷನಲ್ ಪೆನ್ಷನ್ ಸ್ಕೀಮ್: 10 ಲಕ್ಷ ರೂ ಇದ್ದರೆ ಎಷ್ಟು ಪಿಂಚಣಿ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ
ಜಿಯೋದ 399 ರೂ ಪೋಸ್ಟ್ ಪೇಡ್ ಪ್ಲಾನ್ನಲ್ಲಿ 75ಜಿಬಿ ಡೇಟಾ ಸಿಗುತ್ತದೆ. ಆ 75ಜಿಬಿ ಖಾಲಿ ಆದ ಬಳಿಕ ಬಳಸುವ ಪ್ರತೀ ಜಿಬಿ ಡೇಟಾಗೂ 10 ರೂ ಹಣ ಬಿಲ್ ಬೀಳುತ್ತದೆ. ಈ ಪ್ಲಾನ್ನಲ್ಲಿ 3 ಆ್ಯಡ್ ಆನ್ ಕನೆಕ್ಷನ್ಗಳನ್ನು ಪಡೆಯಬಹುದು. ಇವುಗಳಿಗೆ ತಿಂಗಳಿಗೆ 99 ರೂ ಹಣವನ್ನು ಬಾಡಿಗೆ ರೀತಿಯಲ್ಲಿ ಕಟ್ಟಬೇಕು. ಈ ಪ್ರತಿಯೊಂದು ಸಿಮ್ಗೂ ತಿಂಗಳಿಗೆ 5ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ.
ಧ್ವನಿ ಕರೆ ಅನ್ಲಿಮಿಟೆಡ್, ಎಸ್ಸೆಮ್ಮೆಸ್ ದಿನಕ್ಕೆ 100. ಇವುಗಳ ಜೊತೆಗೆ ಜಿಯೋಸಿನಿಮಾ, ಜಿಯೋ ಕ್ಲೌಡ್, ಜಿಯೋ ಟಿವಿ ಮೊದಲಾದ ಒಟಿಟಿಗಳ ಸಬ್ಸ್ಕ್ರಿಪ್ಷನ್ಗಳು ಉಚಿತವಾಗಿ ಸಿಗುತ್ತವೆ.
ಇದನ್ನೂ ಓದಿ: Money Skills: ಹಣ ನಿರ್ವಹಣೆ ಬಗ್ಗೆ ಇವತ್ತಿನ ಯುವ ಸಮುದಾಯಕ್ಕೆ ಏನು ಜ್ಞಾನ ಇರಬೇಕು? ತಜ್ಞರ ಟಿಪ್ಸ್ ಇಲ್ಲಿದೆ
ರಿಲಾಯನ್ಸ್ ಜಿಯೋ ಪ್ರಾಯೋಗಿಕವಾಗಿ ಬಿಡುಗಡೆ ಮಾಡಿರುವ 699 ರೂನ ಪೋಸ್ಟ್ ಪೇಡ್ ಪ್ಲಾನ್ನಲ್ಲಿ ತಿಂಗಳಿಗೆ 100ಜಿಬಿ ಡೇಟಾ ಸಿಗುತ್ತದೆ. ಹೆಚ್ಚುವರಿ ಬಳಸುವ ಪ್ರತೀ ಡೇಟಾಗೂ 10 ರೂ ಚಾರ್ಜ್ ಆಗುತ್ತದೆ. ಆ್ಯಡ್ ಆನ್ ಕಾರ್ಡ್ ಅಥವಾ ಫ್ಯಾಮಿಲಿ ಸಿಮ್ ಕಾರ್ಡ್ 3 ಸಿಗುತ್ತವೆ. ಈ ಹೆಚ್ಚುವರಿ ಸಿಮ್ಗಳಿಗೆ ತಿಂಗಳಿಗೆ 100 ರೂ ಕಟ್ಟಬೇಕು. ತಿಂಗಳಿಗೆ 5ಜಿಬಿ ಡಾಟಾ ಸಿಗುತ್ತದೆ. ಅನ್ಲಿಮಿಟೆಡ್ ವಾಯ್ಸ್ ಕಾಲ್, ದಿನಕ್ಕೆ 100 ಎಸ್ಸೆಮ್ಮೆಸ್, ಜಿಯೋ ಸಿನಿಮಾ, ಜಿಯೋ ಕ್ಲೌಡ್, ಜಿಯೋ ಟಿವಿ ಇತ್ಯಾದಿ ಒಟಿಟಿಗಳ ಚಂದಾದಾರಿಕೆ ಕೂಡ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Fri, 4 August 23