JIO: ಪ್ರತಿದಿನ 2GB ಡೇಟಾ: ಜಿಯೋ ನೀಡುತ್ತಿದೆ ಆಕರ್ಷಕ ಬೆಲೆಗೆ ಭರ್ಜರಿ ಪ್ಲಾನ್

ಇದರ ನಡುವೆ ಏರ್ಟೆಲ್ (Airtel), ವೊಡಾಫೋನ್ ಐಡಿಯಾ ಮೇಲಕ್ಕೇರಲು ಹರಸಾಹಸ ಪಡುತ್ತಿದ್ದರೂ ಜಿಯೋ ಆಕರ್ಷಕ ಆಫರ್​ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಲೇ ಇದೆ. ಈಗಾಗಲೇ ಜಿಯೋದ ಅನೇಕ ಪ್ಲಾನ್​ಗಳು ಬಳಕೆದಾರರ ಮನ ಗೆದ್ದಿದೆ. ಇದರಲ್ಲಿ 500 ರೂ. ಒಳಗಿನ ಯೋಜನೆ ಕೂಡ ಒಂದು. ಹಾಗಾದರೆ ಜಿಯೋ 500 ರೂ. ಒಳಗೆ 2GB ಡೇಟಾ ನೀಡುತ್ತಿರುವ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್​ಗಳು (Prepaid Plan) ಯಾವುವು?, ಇದರಲ್ಲಿ ಏನೆಲ್ಲ ಆಫರ್​ಗಳಿವೆ ಎಂಬುದನ್ನು ನೋಡೋಣ.

JIO: ಪ್ರತಿದಿನ 2GB ಡೇಟಾ: ಜಿಯೋ ನೀಡುತ್ತಿದೆ ಆಕರ್ಷಕ ಬೆಲೆಗೆ ಭರ್ಜರಿ ಪ್ಲಾನ್
Reliance JIO
Edited By:

Updated on: Oct 08, 2026 | 2:42 PM

ರಿಲಯನ್ಸ್ ಒಡೆತನದ ಜಿಯೋ (Reliance JIO) ಸಂಸ್ಥೆ ಇತ್ತೀಚೆಗಷ್ಟೆ ತನ್ನ ವಾರ್ಷಿಕ ಸಮಾವೇಶದಲ್ಲಿ ದೀಪಾವಳಿಗೆ 5G ಸೇವೆ ನೀಡುವುದಾಗಿ ಘೋಷಣೆ ಮಾಡಿದೆ. ಹೀಗಾಗಿ ಜಿಯೋ ಮೇಲೆ ಈಗ ಎಲ್ಲರ ಕಣ್ಣಿದೆ. ಸದ್ಯ ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ಭದ್ರವಾಗಿರುವ ಜಿಯೋ 5ಜಿ ಪ್ಲಾನ್ ಹೇಗಿರಲಿದೆ ಎಂಬ ಕುತೂಹಲ ಕೂಡ ಇದೆ. ಇದರ ನಡುವೆ ಏರ್ಟೆಲ್ (Airtel), ವೊಡಾಫೋನ್ ಐಡಿಯಾ ಮೇಲಕ್ಕೇರಲು ಹರಸಾಹಸ ಪಡುತ್ತಿದ್ದರೂ ಜಿಯೋ ಆಕರ್ಷಕ ಆಫರ್​ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಲೇ ಇದೆ. ಈಗಾಗಲೇ ಜಿಯೋದ ಅನೇಕ ಪ್ಲಾನ್​ಗಳು ಬಳಕೆದಾರರ ಮನ ಗೆದ್ದಿದೆ. ಇದರಲ್ಲಿ 500 ರೂ. ಒಳಗಿನ ಯೋಜನೆ ಕೂಡ ಒಂದು. ಹಾಗಾದರೆ ಜಿಯೋ 500 ರೂ. ಒಳಗೆ 2GB ಡೇಟಾ ನೀಡುತ್ತಿರುವ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್​ಗಳು (Prepaid Plan) ಯಾವುವು?, ಇದರಲ್ಲಿ ಏನೆಲ್ಲ ಆಫರ್​ಗಳಿವೆ ಎಂಬುದನ್ನು ನೋಡೋಣ.

ಜಿಯೋ 249 ರೂ. ಪ್ಲಾನ್: ಜಿಯೋದ ಈ ಯೋಜನೆ 23 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದಿನಕ್ಕೆ 2GB ಡೇಟಾ ಪ್ರಯೋಜನ ಸಿಗಲಿದ್ದು ಒಟ್ಟಾರೆಯಾಗಿ 46GB ಡೇಟಾ ಪಡೆಯಬಹುದು. ಜೊತೆಗೆ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಆ್ಯಕ್ಸಸ್ ನೀಡಲಾಗುತ್ತದೆ.

ಜಿಯೋ 299 ರೂ. ಪ್ಲಾನ್: ಜಿಯೋದ ಈ ಯೋಜನೆ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದಿನಕ್ಕೆ 2GB ಡೇಟಾ ಪ್ರಯೋಜನ ಸಿಗಲಿದ್ದು ಒಟ್ಟಾರೆಯಾಗಿ 56GB ಡೇಟಾ ಪಡೆಯಬಹುದು. ಜೊತೆಗೆ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಆ್ಯಕ್ಸಸ್ ನೀಡಲಾಗುತ್ತದೆ.

ಜಿಯೋ 533 ರೂ. ಪ್ಲಾನ್: ಜಿಯೋದ ಈ ಯೋಜನೆ 500 ರೂ. ಗಿಂತ ಕೊಂಚ ಹೆಚ್ಚಿದೆ. ಆದರೂ ಇದು 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದಿನಕ್ಕೆ 2GB ಡೇಟಾ ಪ್ರಯೋಜನ ಸಿಗಲಿದ್ದು ಒಟ್ಟಾರೆಯಾಗಿ 112GB ಡೇಟಾ ಪಡೆಯಬಹುದು. ಜೊತೆಗೆ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಆ್ಯಕ್ಸಸ್ ನೀಡಲಾಗುತ್ತದೆ.

ಕೇವಲ ಜಿಯೋ ಮಾತ್ರವಲ್ಲದೆ ಏರ್ಟೆಲ್, ವೊಡಾಫೋನ್ ಐಡಿಯಾ ಕೂಡ 500 ರೂ. ಒಳಗೆ ದಿನಕ್ಕೆ 2GB ಡೇಟಾ ನೀಡುವ ಆಕರ್ಷಕ ಪ್ರಿಪೇಯ್ಡ್ ಯೋಜನೆಯನ್ನು ಹೊಂದಿದೆ. ಏರ್ಟೆಲ್​ನಲ್ಲಿ 179 ರೂ., 319 ರೂ., 359ರೂ., 399ರೂ. ಮತ್ತು 499 ರೂ. ಪ್ಲಾನ್ ಅತ್ಯುತ್ತಮವಾಗಿದೆ. ಇದರಲ್ಲಿ ಓಟಿಟಿ ಚಂದಾದಾರಿಕೆ ಅವಕಾಶ ಕೂಡ ಇದೆ. ಅಂತೆಯೆ ವೊಡಾಫೋನ್ ಐಡಿಯಾದಲ್ಲಿ 359ರೂ., 399ರೂ. ಹಾಗೂ 499 ರೂ. ಯೋಜನೆ ದಿನಕ್ಕೆ 2GB ಡೇಟಾ ಪ್ರಯೋಜನ ನೀಡುತ್ತದೆ.

Published On - 6:22 am, Fri, 30 September 22

TV9 Web

TV9 Kannada

Read More
Loading...
Unable to load recommendations.
Follow Us