ಬೆಂಗಳೂರನ್ನು ಸಿಲಿಕಾನ್ ಸಿಟಿಯಾಗಿ ಮಾರ್ಪಡಿಸಲು ಎಸ್.ಎಂ. ಕೃಷ್ಣ ಪಾತ್ರವೇನು? ಇಲ್ಲಿದೆ ಎಸ್ಸೆಮ್ಕೆ ಸಾಧನೆಗಳ ಪಟ್ಟಿ

Role of SM Krishna in transforming Bengaluru: ಎಸ್.ಎಂ. ಕೃಷ್ಣ 1999ರಿಂದ 2004ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಅದಕ್ಕೂ ಮುನ್ನ ಅವರು ರಾಜಕೀಯದಲ್ಲಿ ಸಾಕಷ್ಟು ಅನುಭವಿ ಎನಿಸಿದ್ದರು. ಇವರ ಅಧಿಕಾರಾವಧಿಯಲ್ಲಿ ಕರ್ನಾಟಕದಲ್ಲಿ ಹೊಸ ಬದಲಾವಣೆಗಳಾದವು. ಹೊಸ ಪ್ರಯೋಗಗಳಾದವು. ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಮಾರ್ಪಡಲು ಕೃಷ್ಣ ಅವರ ಪಾತ್ರ ದೊಡ್ಡದಿದೆ.

ಬೆಂಗಳೂರನ್ನು ಸಿಲಿಕಾನ್ ಸಿಟಿಯಾಗಿ ಮಾರ್ಪಡಿಸಲು ಎಸ್.ಎಂ. ಕೃಷ್ಣ ಪಾತ್ರವೇನು? ಇಲ್ಲಿದೆ ಎಸ್ಸೆಮ್ಕೆ ಸಾಧನೆಗಳ ಪಟ್ಟಿ
ಎಸ್.ಎಂ. ಕೃಷ್ಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 10, 2024 | 11:10 AM

ಎಸ್.ಎಂ. ಕೃಷ್ಣ ಎಂದರೆ ಥಟ್ಟನೆ ನೆನಪಾಗುವುದು ಸಿಲಿಕಾನ್ ಸಿಟಿ ಎಂದು ಕರೆಯುವ ಬೆಂಗಳೂರು ನಗರ. ವಿದೇಶಾಂಗ ಸಚಿವರಾದರೂ ಕೃಷ್ಣರನ್ನು ಬದಲಾವಣೆಗಳ ಹರಿಕಾರ ಎಂದೇ ಬೆಂಗಳೂರಿಗರು ನೆನಪಿಸಿಕೊಳ್ಳುತ್ತಾರೆ. ಹಲವು ದಶಕಗಳ ಕಾಲ ರಾಜಕಾರಣದಲ್ಲಿದ್ದರೂ ಎಸ್.ಎಂ. ಕೃಷ್ಣ ಮಾಸ್ ಲೀಡರ್ ಎಂದನಿಸಿದ್ದು ಮುಖ್ಯಮಂತ್ರಿ ಅದ ಬಳಿಕವೇ. ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸಿನೊಂದಿಗೆ ಸಿಎಂ ಹುದ್ದೆ ನಿರ್ವಹಿಸತೊಡಗಿದ ಅವರು, ಸಿಂಗಾಪುರದ ರೀತಿಯಲ್ಲಿ ಬೆಂಗಳೂರನ್ನು ಮಾರ್ಪಡಿಸಲು ಆಗದೇ ಇದ್ದರೂ ಆ ನಿಟ್ಟಿನಲ್ಲಿ ಕಾಯಕಲ್ಪಗಳನ್ನು ನಿರ್ಮಿಸುವ ಕೆಲಸ ಮಾಡಿದ್ದು ಹೌದು.

ವೀರಪ್ಪ ಮೊಯಿಲಿ ಸಿಎಂ ಆಗಿದ್ದಾಗ ಎಸ್.ಎಂ. ಕೃಷ್ಣ ಉಪಮುಖ್ಯಮಂತ್ರಿಯಾಗಿದ್ದರು. ಆದರೆ, ಅವರು ಹೆಚ್ಚಾಗಿ ನೆನಪಾಗುವುದು ಸಿಎಂ ಆಗಿ ಮಾಡಿದ ಕಾರ್ಯಗಳಿಂದ. 1999ರಿಂದ 2004ರವರೆಗೆ ಅವರು ಸಿಎಂ ಆಗಿದ್ದಾಗ ರಾಜ್ಯದ ಅಭಿವೃದ್ಧಿ ಕಾರ್ಯ ಚುರುಕುಗೊಂಡಿತು. ಅದರಲ್ಲೂ ಬೆಂಗಳೂರಿಗೆ ಕೃಷ್ಣ ಹೆಚ್ಚು ಮುತುವರ್ಜಿ ತೋರಿದರು. ಅದರ ಪರಿಣಾಮವಾಗಿ ಇಂದು ಬೆಂಗಳೂರು ನಗರವು ಸಿಲಿಕಾನ್ ಸಿಟಿ, ಐಟಿ-ಬಿಟಿ ಸಿಟಿ ಎನಿಸಿದೆ.

ಟ್ಯಾಕ್ಸ್ ಇನ್ಸೆಂಟಿವ್ಸ್ ತಂದಿದ್ದ ಎಸ್.ಎಂ. ಕೃಷ್ಣ

ಮದ್ದೂರಿನಲ್ಲಿ ಹುಟ್ಟಿದ ಎಸ್.ಎಂ. ಕೃಷ್ಣ ಅವರು ಅಮೆರಿಕದ ಡಲ್ಲಾಸ್ ಮತ್ತು ವಾಷಿಂಗ್ಟನ್​ನಲ್ಲಿ ಉನ್ನತ ವ್ಯಾಸಂಗ ಮಾಡಿದವರಾಗಿದ್ದರು. ಹೀಗಾಗಿ, ಅವರ ಆಡಳಿತದ ಬಗ್ಗೆ ಜನರಲ್ಲಿ ಸಾಕಷ್ಟು ನಿರೀಕ್ಷೆ ಇತ್ತು. ಈ ನಿರೀಕ್ಷೆ ಉಳಿಸಿಕೊಳ್ಳಲು ಅವರು ತಮ್ಮ ಕೈಲಾದ ಕಾರ್ಯಗಳನ್ನು ಮಾಡಿದ್ದರು. ಅವರ ಕಾರ್ಯಗಳಲ್ಲಿ ಹೆಚ್ಚಾಗಿ ನೆನಪುಳಿಯುವುದು ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸುವ ಕೆಲಸ.

ಇದನ್ನೂ ಓದಿ: ಎಸ್​ಎಂ ಕೃಷ್ಣ ಸುದೀರ್ಘ ರಾಜಕೀಯ ಜೀವನದ ಹಿನ್ನೋಟ

ಉದ್ಯಮಗಳಿಗೆ ಇದ್ದ ನಿಯಮಗಳನ್ನು ಸಡಿಲಿಸಿದರು. ಟ್ಯಾಕ್ಸ್ ಇನ್ಸೆಂಟಿವ್​ಗಳನ್ನು ನೀಡಿದರು. ಈ ನೀತಿಗಳಿಗೆ ಉದ್ಯಮ ವಲಯದಲ್ಲಿ ಮನ್ನಣೆ ಸಿಕ್ಕಿತು. ಹಲವು ಐಟಿ ಬಿಟಿ ಸಂಸ್ಥೆಗಳು ಬೆಂಗಳೂರಿನಲ್ಲಿ ನೆಲೆ ಕಾಣಲು ಈ ನೀತಿಗಳೇ ಕಾರಣವಾದವು. ಈ ಮೂಲಕ ಬೆಂಗಳೂರು ಸಿಲಿಕಾನ್ ಸಿಟಿ ಎನಿಸಿದೆ.

ಎಸ್.ಎಂ. ಕೃಷ್ಣ ಅವರಿಂದ ಮಾಡಲಾದ ಸಾಧನೆಗಳಿವು…

  • ಬೆಂಗಳೂರಿನಲ್ಲಿ ಐಟಿ, ಬಿಟಿ ಸೆಕ್ಟರ್ ಬೆಳವಣಿಗೆ ಚುರುಕುಗೊಳಿಸಿದರು.
  • ಬೆಂಗಳೂರಿಗೆ ಮೆಟ್ರೋ ರೈಲು ತರಲು ಅವರ ಪಾತ್ರ ಇತ್ತು
  • ಬೆಂಗಳೂರಿಗೆ ಏರ್ಪೋರ್ಟ್ ಬರಲು ಅವರ ಪಾತ್ರ ಇತ್ತು
  • ಅವರು ಸಿಎಂ ಆಗಿದ್ದ ಅವಧಿಯಲ್ಲಿ ವಿಕಾಸಸೌಧ ನಿರ್ಮಾಣ ಆಗಿತ್ತು
  • ಎಸ್.ಎಂ. ಕೃಷ್ಣ ಸಿಎಂ ಆಗಿದ್ದಾಗ ಸರ್ಕಾರದ ಆದಾಯ ಹೆಚ್ಚಿಸಿದರು. ಮೊದಲ ವರ್ಷ (1999) ಸರ್ಕಾರದ ಬಜೆಟ್ 13,000 ಕೋಟಿ ರೂ ಇತ್ತು. ಕೊನೆಯ ವರ್ಷ (2004) ಬಜೆಟ್ ಗಾತ್ರ 34,000 ಕೋಟಿ ರೂಗೆ ಏರಿತ್ತು.
  • ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿ
  • ರೈತರಿಗೆ ಯಶಸ್ವಿನಿ ಯೋಜನೆ ಜಾರಿ
  • ಇವರ ಅವಧಿಯಲ್ಲಿ ರಾಜ್ಯದಲ್ಲಿ ಹೆಚ್ಚಿದ ವಿದ್ಯುತ್ ಉತ್ಪಾದನೆ
  • ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳ ವ್ಯವಸ್ಥೆಯನ್ನು ಗಟ್ಟಿಗೊಳಿಸಿದರು.
  • ನೀರಾವರಿ ಆಧುನೀಕರಣ
  • ರಾಜ್ಯ ರಸ್ತೆ ಮೂಲಸೌಕರ್ಯಗಳ ಅಭಿವೃದ್ಧಿ
  • ಬಿಎಂಟಿಸಿ, ಕೆಎಸ್ಸಾರ್ಟಿಸಿಗಳಿಗೆ ವೋಲ್ವೋದಂಥ ಲಕ್ಸುರಿ ಬಸ್ಸುಗಳನ್ನು ತರುವ ಪ್ರಯೋಗ ಇವರ ಕಾಲದಲ್ಲಾಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:09 am, Tue, 10 December 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ