ಮುಂಬೈ, ಜೂನ್ 28: ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಭಾರೀ ಹಿನ್ನಡೆ ಕಂಡಿದ್ದ ಎನ್ಡಿಎ ಮೈತ್ರಿಕೂಟ ಸರ್ಕಾರ ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಜನಪ್ರಿಯ ಸ್ಕೀಮ್ಗಳಿಗೆ ಶರಣಾಗಿದೆ. ಕರ್ನಾಟಕದ ಗೃಹಲಕ್ಷ್ಮೀ ಯೋಜನೆ ಮಾದರಿಯಲ್ಲಿ ಮಹಾರಾಷ್ಟ್ರದಲ್ಲೂ ಮಹಿಳೆಯರಿಗೆ ಸರ್ಕಾರ ಮಾಸಿಕ ಸಹಾಯಧನ ಒದಗಿಸಲು ಘೋಷಿಸಿದೆ. 21 ವರ್ಷದಿಂದ 60 ವರ್ಷದವರೆಗಿನ ವಯಸ್ಸಿನ ಮಹಿಳೆಯರಿಗೆ ಮಾಸಿಕವಾಗಿ 1,500 ರೂ ನೀಡುವುದಾಗಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ತಮ್ಮ ಬಜೆಟ್ನಲ್ಲಿ ತಿಳಿಸಿದ್ದಾರೆ. ಕರ್ನಾಟಕದ ಗೃಹಲಕ್ಷ್ಮೀ ಸ್ಕೀಮ್ನಲ್ಲಿ ಅರ್ಹ ಫಲಾನುಭವಿ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ರೂ ಸಿಗುತ್ತದೆ.
ಎನ್ಸಿಪಿ ಬಂಡಾಯ ಗುಂಪಿನ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಹಣಕಾಸು ಖಾತೆಯನ್ನೂ ಹೊಂದಿದ್ದು, ಇಂದು ಶುಕ್ರವಾರ ಬಜೆಟ್ ಮಂಡನೆ ಮಾಡಿದ್ದಾರೆ. ಇದೇ ಅಕ್ಟೋಬರ್ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಇದ್ದು ಜನಪ್ರಿಯತೆ ಗಿಟ್ಟಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಬೇಕಾಗಿದೆ. ಈ ಬಾರಿಯ ಬಜೆಟ್ನಲ್ಲಿ ಸಹಜವಾಗಿಯೇ ಬಹಳಷ್ಟು ಜನಪ್ರಿಯವೆನಿಸುವ ಸ್ಕೀಮ್ಗಳನ್ನು ಘೋಷಿಸಲಾಗಿದೆ. ಇವುಗಳ ವಿವರ ಇಲ್ಲಿದೆ…
ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತ: ಮೃತರಿಗೆ ₹20 ಲಕ್ಷ ಪರಿಹಾರ, ತನಿಖೆಗೆ ಕೇಂದ್ರ ಆದೇಶ
ಪೆಟ್ರೋಲ್ ಮತ್ತು ಡೀಸಲ್ ಮೇಲಿನ ತೆರಿಗೆಯನ್ನು ಮಹಾರಾಷ್ಟ್ರ ಸರ್ಕಾರ ಇದೇ ವೇಳೆ ಇಳಿಕೆ ಮಾಡಿದೆ. ಪೆಟ್ರೋಲ್ ಮೇಲೆ ಶೇ. 26 ಇದ್ದ ಟ್ಯಾಕ್ಸ್ ಅನ್ನು ಶೇ. 25ಕ್ಕೆ ಇಳಿಸಲಾಗಿದೆ. ಡೀಸಲ್ ಮೇಲೆ ಶೇ. 24ರಷ್ಟಿದ್ದ ತೆರಿಗೆಯನ್ನು ಶೇ. 21ಕ್ಕೆ ಇಳಿಸಲಾಗಿದೆ. ಇದರೊಂದಿಗೆ ಮುಂಬೈನಲ್ಲಿ ಪೆಟ್ರೋಲ್ ಬೆಲೆ 65 ಪೈಸೆ ಇಳಿಕೆ ಆದರೆ, ಡೀಸಲ್ ಬೆಲೆ ಎರಡು ರೂನಷ್ಟು ತಗ್ಗಲಿದೆ.
ಸದ್ಯ ಮುಂಬೈನಲ್ಲಿ ಪೆಟ್ರೋಲ್ ಬೆಲೆ 104.21 ರೂ ಇದ್ದರೆ, ಡೀಸಲ್ ಬೆಲೆ ಲೀಟರ್ಗೆ 92.15 ರೂ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ