ಮುಂಬೈ: ಅಮೆರಿಕನ್ ಡಾಲರ್ (US dollar) ವಿರುದ್ಧ ಗುರುವಾರ ಸಾರ್ವಕಾಲಿಕ ಕುಸಿತ ಕಂಡಿದ್ದ ರೂಪಾಯಿ ಮೌಲ್ಯ (Rupee Value) ಶುಕ್ರವಾರ ತುಸು ಚೇತರಿಕೆ ಕಂಡಿದೆ. ದೇಶೀಯ ಷೇರುಗಳು ಸಕಾರಾತ್ಮಕ ವಹಿವಾಟು ನಡೆಸಿದ ಕಾರಣ ರೂಪಾಯಿ ಶುಕ್ರವಾರ ಸಂಜೆ 5 ಗಂಟೆ ವೇಳೆಗೆ 4 ಪೈಸೆ ಚೇತರಿಕೆ ದಾಖಲಿಸಿ 82.75 ಆಯಿತು.
ವಿದೇಶಿ ವಿಮಿಯ ಮಾರುಕಟ್ಟೆಯಲ್ಲಿ ದಿನದ ವಹಿವಾಟಿನ ಆರಂಭದಲ್ಲಿ ರೂಪಾಯಿ ಮೌಲ್ಯ 82.89 ಆಗಿತ್ತು. ಗರಿಷ್ಠ 82.59ರ ವರೆಗೆ ವಹಿವಾಟು ನಡೆಸಿ ಕನಿಷ್ಠ 82.91ರಲ್ಲಿ ವಹಿವಾಟು ನಡೆಸಿತ್ತು. ಕೊನೆಯಲ್ಲಿ 82.75 ರಲ್ಲಿ ವಹಿವಾಟು ಕೊನೆಗೊಳಿಸಿತು. ಗುರುವಾರದ ವಹಿವಾಟಿನ ಕೊನೆಯಲ್ಲಿ ರೊಪಾಯಿ 21 ಪೈಸೆ ಇಳಿಕೆಯಾಗಿ ಮೌಲ್ಯ ಈವರೆಗಿನ ಗರಿಷ್ಠ ಕುಸಿತ ಕಂಡಿತ್ತು. ಈ ಮೂಲಕ 82.79 ಆಗಿತ್ತು.
ಈ ಮಧ್ಯೆ, ಜಗತ್ತಿನ ಇತರ ಪ್ರಮುಖ ಆರು ಕರೆನ್ಸಿಗಳ ವಿರುದ್ಧದ ಮೌಲ್ಯಮಾಪನದಲ್ಲಿ ಡಾಲರ್ ಮೌಲ್ಯ ಶೇಕಡಾ 0.47 ವೃದ್ಧಿಗೊಂಡು 113.41 ಆಯಿತು.
ಇದನ್ನೂ ಓದಿ: Rupee Value: ಮತ್ತೆ ಪಾತಾಳಕ್ಕೆ ಕುಸಿದ ರೂಪಾಯಿ, ಡಾಲರ್ ವಿರುದ್ಧ 83.06ಕ್ಕೆ ಇಳಿಕೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇಕಡಾ 0.37ರಷ್ಟು ಇಳಿಕೆಯಾಗಿ ಬ್ಯಾರೆಲ್ಗೆ 92.02 ಡಾಲರ್ ಆಗಿದೆ.
ಭಾರತದ ಷೇರುಮಾರುಕಟ್ಟೆಯಲ್ಲಿ ಹಲವು ದಿನಗಳ ನಂತರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅತಿ ಹೆಚ್ಚು, ಅಂದರೆ 1,864.79 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿರು. ಈ ಮೂಲಕ ಗುರುವಾರದ ವರೆಗಿನ ಟ್ರೆಂಡ್ ಶುಕ್ರವಾರದ ವಹಿವಾಟಿನಲ್ಲಿ ಬದಲಾಯಿತು. ಬಿಎಸ್ಇ ಸೆನ್ಸೆಕ್ಸ್ ಶೇಕಡಾ 0.18ರಷ್ಟು ಅಥವಾ 104.25 ಅಂಕ ಏರಿಕೆ ಕಂಡು 59,307.15ರಲ್ಲಿ ವಹಿವಾಟು ಕೊನೆಗೊಳಿಸಿದೆ. ಎನ್ಎಸ್ಇ ನಿಫ್ಟಿ ಶೇಕಡಾ 0.07ರಷ್ಟು ಅಥವಾ 12.35 ಅಂಶ ಚೇತರಿಕೆ ಕಂಡು 17,576.30ರಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ