AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Lending Rate: ಸಾಲದ ಮೇಲಿನ ಕನಿಷ್ಠ ಬಡ್ಡಿ ದರ ಹೆಚ್ಚಿಸಿದ ಎಸ್​​ಬಿಐ; ಹೆಚ್ಚಾಗಲಿದೆ ಇಎಂಐ

ಆರ್​ಬಿಐ ರೆಪೊ ದರ ಹೆಚ್ಚಳ ಮಾಡಿದ ಕೆಲವೇ ದಿನಗಳಲ್ಲಿ ಎಸ್​​ಬಿಐ ಈ ಕ್ರಮ ಕೈಗೊಂಡಿದೆ. ವಾಹನ, ಗೃಹ ಸಾಲ ತೆಗೆದುಕೊಂಡವರಿಗೆ ಹೊರೆ ಇನ್ನಷ್ಟು ಹೆಚ್ಚಾಗಲಿದೆ. ಪರಿಷ್ಕೃತ ಬಡ್ಡಿ ದರ ಇಂದಿನಿಂದಲೇ ಅನ್ವಯವಾಗಲಿದೆ.

SBI Lending Rate: ಸಾಲದ ಮೇಲಿನ ಕನಿಷ್ಠ ಬಡ್ಡಿ ದರ ಹೆಚ್ಚಿಸಿದ ಎಸ್​​ಬಿಐ; ಹೆಚ್ಚಾಗಲಿದೆ ಇಎಂಐ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Feb 15, 2023 | 9:57 AM

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು (ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ ಅಥವಾ MCLR) 10 ಮೂಲಾಂಶದಷ್ಟು ಹೆಚ್ಚಳ ಮಾಡಿದೆ. ಎಲ್ಲ ಅವಧಿಯ ಸಾಲಗಳಿಗೆ ಇದು ಅನ್ವಯವಾಗಲಿದೆ. ಪರಿಣಾಮವಾಗಿ ಸಾಲಗಳ ಮೇಲಿನ ಇಎಂಐ ಮೊತ್ತ ಹೆಚ್ಚಾಗಲಿದೆ. ಆರ್​ಬಿಐ ರೆಪೊ ದರ ಹೆಚ್ಚಳ ಮಾಡಿದ ಕೆಲವೇ ದಿನಗಳಲ್ಲಿ ಎಸ್​​ಬಿಐ ಈ ಕ್ರಮ ಕೈಗೊಂಡಿದೆ. ವಾಹನ, ಗೃಹ ಸಾಲ ತೆಗೆದುಕೊಂಡವರಿಗೆ ಹೊರೆ ಇನ್ನಷ್ಟು ಹೆಚ್ಚಾಗಲಿದೆ. ಪರಿಷ್ಕೃತ ಬಡ್ಡಿ ದರ ಇಂದಿನಿಂದಲೇ (15 February) ಅನ್ವಯವಾಗಲಿದೆ.

ಒಂದು ದಿನದ ಎಂಸಿಎಲ್​ಆರ್​​ ದರವನ್ನು 10 ಮೂಲಾಂಶ ಹೆಚ್ಚಿಸಿ ಶೇ 7.85ರಿಂದ ಶೇ 7.95ಕ್ಕೆ ನಿಗದಿಪಡಿಸಲಾಗಿದೆ. ಒಂದು ತಿಂಗಳ ಎಂಸಿಎಲ್​ಆರ್​​ ದರವನ್ನು 10 ಮೂಲಾಂಶ ಹೆಚ್ಚಿಸಿ ಶೇ 8ರಿಂದ ಶೇ 8.10ಕ್ಕೆ ನಿಗದಿಪಡಿಸಲಾಗಿದೆ. ಮೂರು ತಿಂಗಳ ಎಂಸಿಎಲ್​ಆರ್​​ ದರವನ್ನು ಶೇ 8ರಿಂದ ಶೇ 8.10ಕ್ಕೆ ಹೆಚ್ಚಿಸಲಾಗಿದೆ. ಆರು ತಿಂಗಳ ಎಂಸಿಎಲ್​​ಆರ್ ದರವನ್ನು ಶೇ 8.30ರಿಂದ ಶೇ 8.40ಕ್ಕೆ ಹೆಚ್ಚಿಸಲಾಗಿದೆ. ಒಂದು ವರ್ಷದ ಅವಧಿಯ ಬಡ್ಡಿ ದರವನ್ನು ಶೇ 8.40ಯಿಂದ ಶೇ 8.50ಕ್ಕೆ ಹೆಚ್ಚಿಸಲಾಗಿದೆ. ಎರಡು ವರ್ಷಗಳ ಅವಧಿಯ ಎಂಸಿಎಲ್​ಆರ್​​ ಅನ್ನು ಶೇ 8.50ರಿಂದ ಶೇ 8.60ಕ್ಕೆ, ಮೂರು ವರ್ಷದ ಎಂಸಿಎಲ್​ಆರ್​ ಅನ್ನು ಶೇ 8.60ರಿಂದ ಶೇ 8.70ಕ್ಕೆ ಹೆಚ್ಚಿಸಲಾಗಿದೆ.

ಎಂಸಿಎಲ್​ಆರ್ ಎಂದರೇನು?

ಬ್ಯಾಂಕೊಂದು ಗ್ರಾಹಕರಿಗೆ ನೀಡುವ ಸಾಲಕ್ಕೆ ನಿಗದಿಪಡಿಸುವ ಕನಿಷ್ಠ ಬಡ್ಡಿ ದರವನ್ನು ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ ಅಥವಾ ಎಂಸಿಎಲ್​ಆರ್ ಎಂದು ಕರೆಯಲಾಗುತ್ತದೆ. ಬ್ಯಾಂಕ್​ಗಳಲ್ಲಿ ವಿವಿಧ ಸಾಲಗಳಿಗೆ ವಿವಿಧ ಪ್ರಮಾಣದ ಬಡ್ಡಿ ದರ ನಿಗದಿಯಾಗಿರುತ್ತದೆ. ಅದೇ ರೀತಿ ಕನಿಷ್ಠ ಬಡ್ಡಿ ದರವೊಂದೂ ನಿಗದಿಯಾಗಿರುತ್ತದೆ. ಕ್ರೆಡಿಟ್ ಸ್ಕೋರ್ ಹಾಗೂ ಇತರ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಬ್ಯಾಂಕ್​​ಗಳು ಕಡಿಮೆ ಬಡ್ಡಿ ದರದ ಆಫರ್​ಗಳನ್ನು ಗ್ರಾಹಕರಿಗೆ ನೀಡುತ್ತವೆ. ಆದರೆ, ಈ ಕನಿಷ್ಠ ಬಡ್ಡಿ ದರಕ್ಕಿಂತ ಕಡಿಮೆ ಬಡ್ಡಿಯ ಆಫರ್​ ನೀಡಲಾಗುವುದಿಲ್ಲ. ಹೀಗಾಗಿ ಎಂಸಿಎಲ್ಆರ್​ ಅನ್ನು ಸರಳವಾಗಿ ಕನಿಷ್ಠ ಬಡ್ಡಿ ದರ ಎನ್ನಬಹುದು.

ಎಂಸಿಎಲ್​ಆರ್ ಹೆಚ್ಚಳದಿಂದ ಯಾರಿಗೆಲ್ಲ ಪರಿಣಾಮ?

ಸಾಲ ಪಡೆದವರು, ಇಎಂಐ ಪಾವತಿಸುವವರಿಗೆ ಎಂಸಿಎಲ್​ಆರ್ ಹೆಚ್ಚಳದಿಂದ ಪರಿಣಾಮವಾಗಲಿದೆ. ಮುಂದಿನ ಅವಧಿಯಿಂದ ಹೆಚ್ಚು ಮೊತ್ತದ ಇಎಂಐ ಪಾವತಿಸಬೇಕಾಗಲಿದೆ. ಆರ್​​ಬಿಐ ರೆಪೊ ದರ ಹೆಚ್ಚಿಸಿರುವುದರಿಂದ ಬ್ಯಾಂಕ್ ಆಫ್ ಬರೋಡ, ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿವೆ. ಇದರಿಂದ ಈ ಎಲ್ಲ ಬ್ಯಾಂಕ್​ಗಳ ಗ್ರಾಹಕರಿಗೆ ಇಎಂಐ ದುಬಾರಿಯಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಟಿಲೈಟ್ಸ್: ದುನಿಯಾ ವಿಜಯ್ ಪುತ್ರಿ ಮೋನಿಷಾ ನಟನೆಯ ಸಣ್ಣ ಝಲಕ್ ಇಲ್ಲಿದೆ
ಸಿಟಿಲೈಟ್ಸ್: ದುನಿಯಾ ವಿಜಯ್ ಪುತ್ರಿ ಮೋನಿಷಾ ನಟನೆಯ ಸಣ್ಣ ಝಲಕ್ ಇಲ್ಲಿದೆ
Live: ವಿದೇಶಾಂಗ ಇಲಾಖೆಯಿಂದ ತುರ್ತು ಸುದ್ದಿಗೋಷ್ಠಿ
Live: ವಿದೇಶಾಂಗ ಇಲಾಖೆಯಿಂದ ತುರ್ತು ಸುದ್ದಿಗೋಷ್ಠಿ
ಸೀಸನ್​ ಮಧ್ಯ ನಾಯಕನನ್ನು ಬದಲಿಸಿದ್ದ ಆರ್​ಸಿಬಿ
ಸೀಸನ್​ ಮಧ್ಯ ನಾಯಕನನ್ನು ಬದಲಿಸಿದ್ದ ಆರ್​ಸಿಬಿ
ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ; ಪೇಶಾವರದಲ್ಲಿ ಭಾರತ ಪ್ರತಿದಾಳಿ
ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ; ಪೇಶಾವರದಲ್ಲಿ ಭಾರತ ಪ್ರತಿದಾಳಿ
ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ