ಎಸ್​ಬಿಐ ಇನ್​ಫ್ರಾಸ್ಟ್ರಕ್ಚರ್ ಬಾಂಡ್​ಗೆ ಭರ್ಜರಿ ಬೇಡಿಕೆ; ಶೇ. 7.36 ಕೂಪನ್ ರೇಟ್​ಗೆ 10,000 ಕೋಟಿ ರೂ ಸ್ವೀಕರಿಸಿದ ಬ್ಯಾಂಕ್

SBI infra bonds for Rs 10,000 crore: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಫರ್ ಮಾಡಿದ ಇನ್​ಫ್ರಾಸ್ಟ್ರಕ್ಚರ್ ಬಾಂಡ್​ಗಳಿಗೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. 5,000 ಕೋಟಿ ರೂ ಮೂಲ ಮೊತ್ತದ ಬಾಂಡ್​ಗಳಿಗೆ ನಾಲ್ಕು ಪಟ್ಟು ಹೆಚ್ಚು ಸಬ್​ಸ್ಕ್ರಿಪ್ಚನ್ ಆಗಿತ್ತು. 19,884 ಕೋಟಿ ರೂನಷ್ಟು ಮೊತ್ತಕ್ಕೆ ಒಟ್ಟು 143 ಬಿಡ್​ಗಳು ಸಲ್ಲಿಕೆ ಆಗಿದ್ದವು. ಇದರಲ್ಲಿ 10,000 ಕೋಟಿ ರೂ ಮೊತ್ತವನ್ನು ಎಸ್​ಬಿಐ ಸ್ವೀಕರಿಸಲು ನಿರ್ಧರಿಸಿದೆ. ಕೂಪನ್ ರೇಟ್ ಶೇ. 7.36 ಎಂದು ನಿಗದಿಯಾಗಿದೆ.

ಎಸ್​ಬಿಐ ಇನ್​ಫ್ರಾಸ್ಟ್ರಕ್ಚರ್ ಬಾಂಡ್​ಗೆ ಭರ್ಜರಿ ಬೇಡಿಕೆ; ಶೇ. 7.36 ಕೂಪನ್ ರೇಟ್​ಗೆ 10,000 ಕೋಟಿ ರೂ ಸ್ವೀಕರಿಸಿದ ಬ್ಯಾಂಕ್
ಎಸ್​ಬಿಐ
Follow us
|

Updated on: Jun 27, 2024 | 10:53 AM

ನವದೆಹಲಿ, ಜೂನ್ 27: ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನಿಸಿದ ಎಸ್​ಬಿಐ ನಿನ್ನೆ ಬುಧವಾರ ಇನ್​ಫ್ರಾಸ್ಟ್ರಕ್ಚರ್ ಬಾಂಡ್ ಮೂಲಕ 10,000 ಕೋಟಿ ರೂ ಸಾಲ ಸಂಗ್ರಹಿಸಿದೆ. ಎಸ್​ಬಿಐನ ಈ ಇನ್​ಫ್ರಾ ಬಾಂಡ್​ಗೆ ಉತ್ತಮ ಬೇಡಿಕೆ ಸೃಷ್ಟಿಯಾಗಿತ್ತು. 5,000 ಕೋಟಿ ರೂ ಮೌಲ್ಯದ ಬಾಂಡ್​ಗಳಿಗೆ ನಾಲ್ಕು ಪಟ್ಟು ಹೆಚ್ಚು ಬಿಡ್ ಸಲ್ಲಿಕೆಯಾಗಿತ್ತು. ಎಸ್​ಬಿಐ ನಿನ್ನೆ ಸಲ್ಲಿಸಿದ ರೆಗ್ಯುಲೇಟರಿ ಫೈಲಿಂಗ್ ಪ್ರಕಾರ, ಒಟ್ಟು 143 ಬಿಡ್​ಗಳು ಬಂದಿದ್ದವು. ಒಟ್ಟು ಬಿಡ್​ಗಳ ಮೊತ್ತ 19,884 ಕೋಟಿ ರೂ ದಾಟಿ ಹೋಗಿತ್ತು. ಪೆನ್ಷನ್ ಫಂಡ್​ಗಳು, ಪ್ರಾವಿಡೆಂಟ್ ಫಂಡ್​ಗಳು, ಮ್ಯೂಚುವಲ್ ಫಂಡ್​ಗಳು, ಇನ್ಷೂರೆನ್ಸ್ ಕಂಪನಿಗಳು ಹಾಗೂ ಕಾರ್ಪೊರೇಟ್ ಕಂಪನಿಗಳು ಮೊದಲಾದ ಸಂಸ್ಥೆಗಳು ಎಸ್​ಬಿಐನ ಇನ್​ಫ್ರಾ ಬಾಂಡ್​ಗಳ ಖರೀದಿಗೆ ಬಿಡ್ ಸಲ್ಲಿಸಿದ್ದು ಗೊತ್ತಾಗಿದೆ.

ಶೇ. 7.36ರ ಬಡ್ಡಿದರ ಕೊಡಲು ಎಸ್​ಬಿಐ ನಿರ್ಧಾರ

ಹೆಚ್ಚೂಕಡಿಮೆ 20,000 ಕೋಟಿ ರೂ ಮೊತ್ತದ ಇನ್​ಫ್ರಾ ಬಾಂಡ್​ಗಳಿಗೆ ಬಿಡ್ ಸಲ್ಲಿಕೆಯಾಗಿದ್ದರೂ ಎಸ್​ಬಿಐ 10,000 ಕೋಟಿ ರೂ ಮೊತ್ತ ಸ್ವೀಕರಿಸಲು ನಿರ್ಧರಿಸಿತು. ಶೇ. 7.36ರ ಕೂಪನ್ ರೇಟ್ ಅಥವಾ ವಾರ್ಷಿಕ ಬಡ್ಡಿದರ ಕೊಡಲಿದೆ. 15 ವರ್ಷದವರೆಗೆ ಈ ಬಾಂಡ್ ಮೆಚ್ಯೂರಿಟಿ ಅವಧಿ ಇದೆ. ಬ್ಯಾಂಕ್ ಪ್ರತೀ ವರ್ಷ ಹೂಡಿಕೆದಾರರಿಗೆ ಬಡ್ಡಿಹಣವನ್ನು ಸಂದಾಯ ಮಾಡಲಿದೆ.

ಎಸ್​ಬಿಐನಿಂದ ದೀರ್ಘಾವಧಿ ಬಾಂಡ್​ಗಳ ವಿತರಣೆಯಾಗಿರುವುದು ಇದು ಐದನೇ ಸುತ್ತು. ಇಲ್ಲಿಯವರೆಗೆ ಅದು ವಿತರಿಸಿರುವ ದೀರ್ಘಾವಧಿ ಬಾಂಡ್​ಗಳ ಒಟ್ಟು ಮೊತ್ತ 49,718 ಕೋಟಿ ರೂ ಆಗಿದೆ.

ಇದನ್ನೂ ಓದಿ: ಬೈಜೂಸ್ ಕಥೆ.! ತನಿಖೆಯಲ್ಲಿ ಪತ್ತೆಯಾಗದ ವಂಚನೆ; 4,000 ಕೋಟಿ ರೂಗೂ ಹೆಚ್ಚು ಸಾಲ ರೈಟ್ ಆಫ್ ಮಾಡಿದ ಪ್ರೋಸಸ್; ಇದೇನು ಸಾಲ ಮನ್ನವಾ?

ಇನ್​ಫ್ರಾ ಬಾಂಡ್​ಗಳಿಂದ ಬಂದ ಹಣವನ್ನು ಎಸ್​ಬಿಐ ಏನು ಮಾಡುತ್ತದೆ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ದೀರ್ಘಾವಧಿಯ ಇನ್​ಫ್ರಾಸ್ಟ್ರಕ್ಚರ್ ಬಾಂಡ್​ಗಳ ಮೂಲಕ ಪಡೆದ ಸಾಲದ ಹಣವನ್ನು ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ದಿಯಲ್ಲಿ ಮತ್ತು ಅಗ್ಗದ ವಸತಿ ವ್ಯವಸ್ಥೆಯಲ್ಲಿ ಇರುವ ಸಂಸ್ಥೆಗಳಿಗೆ ಸಾಲವಾಗಿ ಕೊಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಪವಿತ್ರಾ ಗೌಡರ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?
ಪವಿತ್ರಾ ಗೌಡರ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು