SBI, LIC Heads: ಎಸ್​ಬಿಐ, ಎಲ್​ಐಸಿ, ನಾಲ್ಕು ಬ್ಯಾಂಕ್​ಗಳಿಗೆ ಹೊಸ ವರ್ಷ ಹೊಸಬರ ಸಾರಥ್ಯ

ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಇಂಡಿಯನ್ ಓವರ್​ಸೀಸ್ ಬ್ಯಾಂಕ್ ಮತ್ತು ಬ್ಯಾಂಕ್​ ಆಫ್ ಇಂಡಿಯಾದ ಪ್ರಮುಖ ಹೊಣೆಗಾರಿಕೆಯನ್ನು ಹೊಸಬರು ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

SBI, LIC Heads: ಎಸ್​ಬಿಐ, ಎಲ್​ಐಸಿ, ನಾಲ್ಕು ಬ್ಯಾಂಕ್​ಗಳಿಗೆ ಹೊಸ ವರ್ಷ ಹೊಸಬರ ಸಾರಥ್ಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Dec 31, 2022 | 10:14 AM

ನವದೆಹಲಿ: ಹೊಸ ವರ್ಷ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಜೀವ ವಿಮಾ ನಿಗಮಗಳ (LIC) ಉನ್ನತ ಹುದ್ದೆಗಳಿಗೆ ಹೊಸಬರ ನೇಮಕವಾಗುವ ಸಾಧ್ಯತೆ ದಟ್ಟವಾಗಿದೆ. 2023ರ ಕ್ಯಾಲೆಂಡರ್ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಒಟ್ಟಾರೆ ನಾಲ್ಕು ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳ ಉನ್ನತ ಹುದ್ದೆಗೆ ಹೊಸಬರ ನೇಮಕವಾಗುವ ನಿರೀಕ್ಷೆ ಇದೆ. ಕೆನರಾ ಬ್ಯಾಂಕ್ (Canara Bank), ಬ್ಯಾಂಕ್ ಆಫ್ ಬರೋಡ, ಇಂಡಿಯನ್ ಓವರ್​ಸೀಸ್ ಬ್ಯಾಂಕ್ ಮತ್ತು ಬ್ಯಾಂಕ್​ ಆಫ್ ಇಂಡಿಯಾದ ಪ್ರಮುಖ ಹೊಣೆಗಾರಿಕೆಯನ್ನು ಹೊಸಬರು ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಸ್​ಬಿಐ ಅಧ್ಯಕ್ಷ ದಿನೇಶ್ ಖರಾ ಅವರ ಅವಧಿ ಅಕ್ಟೋಬರ್ ಆರಂಭದಲ್ಲಿ ಕೊನೆಗೊಳ್ಳಲಿದೆ. ಹೀಗಾಗಿ ಅಕ್ಟೋಬರ್ ಮೊದಲ ವಾರ ಅವರು ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಇದಕ್ಕೂ ಮೊದಲು ಅವರು ಎಸ್​ಬಿಐ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಸದ್ಯ ನಾಲ್ಕು ವ್ಯವಸ್ಥಾಪಕ ನಿರ್ದೇಶಕರಿದ್ದು, ಅದರಲ್ಲಿ ಸಿಎಸ್ ಶೆಟ್ಟಿ ಹಿರಿಯರಾಗಿದ್ದಾರೆ. ಅವರೇ ಖರಾ ಅವರ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಬ್ಯುಸಿನೆಸ್ ಸ್ಟ್ಯಾಂಡರ್ಡ್’ ವರದಿ ಮಾಡಿದೆ. ಆದರೆ, 60 ವರ್ಷ ಕಳೆದ ಬಳಿಕವೂ ಎಸ್​ಬಿಐ ಅಧ್ಯಕ್ಷ ಅವಧಿ ವಿಸ್ತರಣೆ ಮಾಡಿದ ಕೆಲವು ನಿದರ್ಶನಗಳೂ ಇವೆ ಎಂದು ವರದಿ ಹೇಳಿದೆ.

ಕೆನರಾ ಬ್ಯಾಂಕ್ ಎಂಡಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿರುವ ಎಲ್​ವಿ ಪ್ರಭಾಕರ್ ಅವರ ಅಧಿಕಾರಾವಧಿ ಇಂದು (ಡಿಸೆಂಬರ್ 31, 2022) ಕೊನೆಗೊಳ್ಳುತ್ತಿದೆ. ಇವರ ಸ್ಥಾನಕ್ಕೆ ಹಣಕಾಸು ಸೇವೆಗಳ ಸಾಂಸ್ಥಿಕ ಮಂಡಳಿಯು ಕೆ. ಸತ್ಯನಾರಾಯಣ ರಾಜು ಅವರನ್ನು ಶಿಫಾರಸು ಮಾಡಿದೆ. ಇವರು ಸದ್ಯ ಬ್ಯಾಂಕ್​ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.

ಇದನ್ನೂ ಓದಿ: LIC WhatsApp Service: ವಾಟ್ಸ್​ಆ್ಯಪ್​ ಮೂಲಕವೂ ಎಲ್​ಐಸಿ ಸೇವೆ; ಪಾಲಿಸಿ ಸ್ಥಿತಿ, ಪ್ರೀಮಿಯಂ ವಿವರ ತಿಳಿಯಲು ಹೀಗೆ ಮಾಡಿ

ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಪಾರ್ಥ ಪ್ರತಿಮ್ ಸೇನ್​ಗುಪ್ತಾ ಕೂಡ ಇಂದು (ಡಿಸೆಂಬರ್ 31, 2022) ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಬ್ಯಾಂಕ್ ಆಫ್ ಬರೋಡದ ಎಂಡಿ ಮತ್ತು ಸಿಇಒ ಸಂಜೀವ್ ಚಡ್ಡಾ ಜನವರಿಯಲ್ಲಿ ನಿವೃತ್ತರಾಗುತ್ತಿದ್ದಾರೆ. ಬ್ಯಾಂಕ್​ ಆಫ್ ಇಂಡಿಯಾದ ಎಂಡಿ, ಸಿಇಒ ಎಕೆ ದಾಸ್ 2023ರ ಜನವರಿ 20ರಂದು ಸೇವೆಯಿಂದ ನಿವೃತ್ತರಾಗುತ್ತಾರೆ.

ಎಲ್​ಐಸಿ ಅಧ್ಯಕ್ಷ ಎಂಆರ್ ಕುಮಾರ್ ಅವರ ಅವಧಿ 2023ರ ಮಾರ್ಚ್​ಗೆ ಕೊನೆಗೊಳ್ಳಲಿದೆ. ಇವರು 2019ರಲ್ಲಿ ನೇಮಕವಾಗಿದ್ದರು. ಈ ವರ್ಷ ಎಲ್​ಐಸಿ ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆ ಅಥವಾ ಐಪಿಒ (initial public offering) ಇದ್ದುದರಿಂದ ಅವರ ಅವಧಿಯನ್ನು ವಿಸ್ತರಿಸಲಾಗಿತ್ತು. ಎಲ್​ಐಸಿಯ ಮತ್ತೊಬ್ಬ ಎಂಡಿ ರಾಜ್​ಕುಮಾರ್ ಅವರ ಅವಧಿಯೂ 2023ರಲ್ಲಿ ಕೊನೆಗೊಳ್ಳಲಿದೆ. ಮತ್ತೊಬ್ಬ ಎಂಡಿ ಬಿ.ಸಿ. ಪಟ್ನಾಯಕ್ ಮಾರ್ಚ್ 31ಕ್ಕೆ ನಿವೃತ್ತರಾಗಲಿದ್ದಾರೆ. ಸಿಇಒ ಸೋಮ ಶಂಕರ್ ಪ್ರಸಾದ್​ಗೆ ಮೇ ತಿಂಗಳಲ್ಲಿ 60 ವರ್ಷವಾಗಲಿದೆ. ಹೀಗಾಗಿ ಹೊಸ ಸಿಇಒ ನೇಮಕದ ಅನಿವಾರ್ಯತೆಯೂ ಎದುರಾಗಲಿದೆ.

ಎಲ್​ಐಸಿಗೆ ಖಾಸಗಿ ಕ್ಷೇತ್ರದ ಸಿಇಒ?

ಎಲ್​ಐಸಿಗೆ ಇದೇ ಮೊದಲ ಬಾರಿಗೆ ಖಾಸಗಿ ಕ್ಷೇತ್ರದ ವೃತ್ತಿಪರರನ್ನು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಸರ್ಕಾರಿ ಅಧಿಕಾರಿಗಳಿಬ್ಬರು ಇತ್ತೀಚೆಗೆ ತಿಳಿಸಿದ್ದರು. ಷೇರು ಮಾರುಕಟ್ಟೆಯಲ್ಲಿ ಎಲ್​ಐಸಿ ಷೇರುಗಳು ಉತ್ತಮ ಗಳಿಕೆ ದಾಖಲಿಸದಿರುವುದು ನಿರಾಶೆಗೆ ಕಾರಣವಾಗಿದೆ. ಹೀಗಾಗಿ ಎಲ್​ಐಸಿಯನ್ನು ಆಧುನೀಕರಣಗೊಳಿಸುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ ಎಂದು ಅವರು ಹೇಳಿದ್ದರು. ಒಂದು ವೇಳೆ ಖಾಸಗಿ ಕ್ಷೇತ್ರದ ಸಿಇಒ ನೇಮಕವಾದಲ್ಲಿ, 41 ಟ್ರಿಲಿಯನ್ ರೂ. ಸ್ವತ್ತು ಹೊಂದಿರುವ ದೇಶದ ಅತಿದೊಡ್ಡ ವಿಮಾ ಸಂಸ್ಥೆಯನ್ನು 66 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಖಾಸಗಿ ಕ್ಷೇತ್ರದ ವ್ಯಕ್ತಿ ಮುನ್ನಡೆಸುವಂತಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ