AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Videocon Industries: ಕೈಗಾರಿಕೋದ್ಯಮಿ ವೇಣುಗೋಪಾಲ್ ಧೂತ್, ಎರಡು ಸಂಸ್ಥೆ ಮೇಲೆ 75 ಲಕ್ಷ ರೂ. ದಂಡ ಹಾಕಿದ ಸೆಬಿ

ಸೆಬಿಯಿಂದ ವೇಣುಗೋಪಾಲ್ ಧೂತ್ ಮತ್ತು ಇತರ ಎರಡು ಸಂಸ್ಥೆಗಳ ಮೇಲೆ ತಲಾ 25 ಲಕ್ಷ ರೂಪಾಯಿ ದಂಡ ಹಾಕಲಾಗಿದೆ. ವೀಡಿಯೋಕಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಂಡ ಹಾಕಲಾಗಿದೆ.

Videocon Industries: ಕೈಗಾರಿಕೋದ್ಯಮಿ ವೇಣುಗೋಪಾಲ್ ಧೂತ್, ಎರಡು ಸಂಸ್ಥೆ ಮೇಲೆ 75 ಲಕ್ಷ ರೂ. ದಂಡ ಹಾಕಿದ ಸೆಬಿ
ಸೆಬಿ (ಪ್ರಾತಿನಿಧಿಕ ಚಿತ್ರ)
TV9 Web
| Updated By: Srinivas Mata

Updated on:Sep 28, 2021 | 9:31 PM

Share

ವೀಡಿಯೋಕಾನ್ ಇಂಡಸ್ಟ್ರೀಸ್ ಷೇರುಗಳಲ್ಲಿ ಆಂತರಿಕ ವಹಿವಾಟು ಚಟುವಟಿಕೆ ನಡೆಸಿದ್ದಕ್ಕಾಗಿ ಕೈಗಾರಿಕೋದ್ಯಮಿ ವೇಣುಗೋಪಾಲ್ ಧೂತ್ ಮತ್ತು ಇತರ ಎರಡು ಸಂಸ್ಥೆಗಳ ಮೇಲೆ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಮಂಗಳವಾರದಂದು ಒಟ್ಟು 75 ಲಕ್ಷ ರೂಪಾಯಿ ದಂಡ ವಿಧಿಸಿದೆ (ತಲಾ 25 ಲಕ್ಷ ರೂಪಾಯಿಯಂತೆ). ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವೇಣುಗೋಪಾಲ್ ಹೊರತಾಗಿ ಕಂಪೆನಿಯ ಎರಡು ಪ್ರವರ್ತಕ ಆದ ವೀಡಿಯೋಕಾನ್ ರಿಯಾಲ್ಟಿ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಹಾಗೂ ಎಲೆಕ್ಟ್ರೋಪಾರ್ಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಮೇಲೆ ಕೂಡ ದಂಡ ಹಾಕಲಾಗಿದೆ. ಎಲೆಕ್ಟ್ರೋಪಾರ್ಟ್ಸ್​ಗಳನ್ನು ಈ ಹಿಂದೆ ಶ್ರೀ ಧೂತ್ ಟ್ರೇಡಿಂಗ್ ಮತ್ತು ಏಜೆನ್ಸೀಸ್ ಎಂದು ಕರೆಯಲಾಗುತ್ತಿತ್ತು.

ಆಂತರಿಕ ವಹಿವಾಟು ನಿಯಮಗಳ ಉಲ್ಲಂಘನೆಯು 2017ರಲ್ಲಿ ಸಂಭವಿಸಿದೆ. “ಇನ್ನೂ ಪ್ರಕಟಿಸದ ಬೆಲೆ ಸೂಕ್ಷ್ಮ ಮಾಹಿತಿ (UPSI- Unpublished Price Sensitive Information)ಯನ್ನು ಹೊಂದಿದ್ದಾಗ, ಒಳಗಿನವರಾಗಿದ್ದುಕೊಂಡು ಮಾರುಕಟ್ಟೆ ವಹಿವಾಟುಗಳನ್ನು ಕಾರ್ಯಗತಗೊಳಿಸಿದ್ದಾರೆ,” ಎಂದು ಸೆಬಿ ಹೇಳಿದೆ. ವೀಡಿಯೋಕಾನ್‌ನ ಷೇರಿನ ಬಗ್ಗೆ 2017ರ ಏಪ್ರಿಲ್​ನಿಂದ ಸೆಪ್ಟೆಂಬರ್​ ಮಧ್ಯೆ ತನಿಖೆಯನ್ನು ನಡೆಸಲಾಯಿತು. ವೀಡಿಯೋಕಾನ್‌ನ ಸಾಲದ ಖಾತೆಯನ್ನು ದೇನಾ ಬ್ಯಾಂಕ್‌ನಿಂದ NPA ಎಂದು ವರ್ಗೀಕರಿಸುವ ಮಾಹಿತಿಯು ಕಂಪೆನಿಯ ಷೇರಿನ ಬೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿತ್ತು ಮತ್ತು ಇದನ್ನು UPSI ಎಂದು ಪರಿಗಣಿಸಲಾಗಿದೆ.

ಯುಪಿಎಸ್‌ಐ ಅವಧಿಯು ಮಾರ್ಚ್ 1, 2017ರಿಂದ ಮೇ 9, 2017 ಆಗಿತ್ತು. ಯುಪಿಎಸ್‌ಐ ಅವಧಿಯಲ್ಲಿ ಎರಡು ಪ್ರವರ್ತಕ ಸಂಸ್ಥೆಗಳು ತಮ್ಮ ಷೇರುಗಳನ್ನು ಅಡಮಾನ ಮಾಡಿವೆ ಅಥವಾ ವೀಡಿಯೋಕಾನ್ ಇಂಡಸ್ಟ್ರೀಸ್‌ನ ತಮ್ಮ ಷೇರುಗಳನ್ನು ಇತರ ಘಟಕಗಳಿಗೆ ವರ್ಗಾಯಿಸಿದ್ದವು. ಅಧಿಕೃತ ಪ್ರತಿನಿಧಿ, ವೇಣುಗೋಪಾಲ್ ಧೂತ್ ಒಳಗಿನವರು ಮತ್ತು ಯುಪಿಎಸ್ಐ ಅವಧಿಯಲ್ಲಿ ಒಳಗಿನವರಾಗಿದ್ದು, ಎರಡು ಪ್ರವರ್ತಕ ಕಂಪೆನಿಗಳ ಪರವಾಗಿ ವಹಿವಾಟು ಮಾಡಿದ್ದರು. ಆದ್ದರಿಂದ ಮಾರುಕಟ್ಟೆ ನಿಯಮಗಳ ಉಲ್ಲಂಘನೆಗಾಗಿ ತಲಾ 25 ಲಕ್ಷ ರೂಪಾಯಿ ದಂಡವನ್ನು ಎದುರಿಸುತ್ತಿದ್ದಾರೆ.

ಇದನ್ನೂ ಓದಿ: SEBI: ವಂಚನೆ ವಹಿವಾಟು ನಡೆಸಿದ 85 ಸಂಸ್ಥೆಗಳನ್ನು ಕ್ಯಾಪಿಟಲ್​ ಮಾರ್ಕೆಟ್​ನಿಂದ ನಿಷೇಧಿಸಿದ ಸೆಬಿ

(SEBI Slaps Rs 25 Lakh Each Penalty On Venugopal Dhooth And Other Two Entities In Videocon Case)

Published On - 9:30 pm, Tue, 28 September 21