ಭಾರತದಲ್ಲಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಕ್ಷೇತ್ರ; ಸೆಮಿಕಾನ್ 2.0 ವೆಬ್ ಅಪ್ಲಿಕೇಶನ್ ಪೋರ್ಟಲ್ ಲೋಕಾರ್ಪಣೆ

ಭಾರತದ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು 'ಸೆಮಿಕಾನ್ 2.0' ಪೋರ್ಟಲ್ ಅನ್ನು ಬಿಡುಗಡೆ ಮಾಡಿದ್ದಾರೆ. ಎಲೆಕ್ಟ್ರಾನಿಕ್ಸ್ ಘಟಕಗಳ ತಯಾರಿಕಾ ಯೋಜನೆ (ECMS) ಅಡಿಯಲ್ಲಿ 12 ಹೊಸ ಅನುಮೋದನೆಗಳನ್ನು ಘೋಷಿಸಿದ್ದಾರೆ. ಮೊದಲ ಆವೃತ್ತಿಯ ಸೆಮಿಕಂಡಕ್ಟರ್ ಮಿಷನ್ ಯಶಸ್ವಿಯಾಗಿ ಜಾರಿಯಾಗಿರುವುದನ್ನು ಸಚಿವರು ಉಲ್ಲೇಖಿಸಿದ್ದಾರೆ.

ಭಾರತದಲ್ಲಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಕ್ಷೇತ್ರ; ಸೆಮಿಕಾನ್ 2.0 ವೆಬ್ ಅಪ್ಲಿಕೇಶನ್ ಪೋರ್ಟಲ್ ಲೋಕಾರ್ಪಣೆ
ಅಶ್ವಿನಿ ವೈಷ್ಣವ್
Image Credit source: Press Release

Updated on: Nov 06, 2026 | 7:54 PM

ನವದೆಹಲಿ, ನವೆಂಬರ್ 6: ಕೇಂದ್ರ ಸಚಿವ ಸಂಪುಟವು ಭಾರತ ಸೆಮಿಕಂಡಕ್ಟರ್ ಮಿಷನ್ (ISM) ಅಡಿಯಲ್ಲಿ ಒಟ್ಟು ₹1,27,500 ಕೋಟಿ ಹಣಕಾಸಿನ ವೆಚ್ಚದೊಂದಿಗೆ ಸೆಮಿಕಾನ್ 2.0 ಗೆ ಅನುಮೋದನೆ ನೀಡಿದೆ. ಇದು ಚಿಪ್ ವಿನ್ಯಾಸ, ಯಂತ್ರಗಳು ಮತ್ತು ವಸ್ತುಗಳು, ಫ್ಯಾಬ್‌ಗಳ ಸ್ಥಾಪನೆ, ATMP/OSAT ಉದ್ಯಮ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಪ್ರತಿಭೆಗಳ ಅಭಿವೃದ್ಧಿ ಎಂಬ 6 ಕಾರ್ಯತಂತ್ರದ ಸ್ತಂಭಗಳ ಮೇಲೆ ಗಮನಹರಿಸುತ್ತದೆ. ಇದೇ ವೇಳೆ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ಅವರು ಸೆಮಿಕಾನ್ 2.0 ವೆಬ್ ಪೋರ್ಟಲ್​ಗೆ ಚಾಲನೆ ನೀಡಿದ್ದಾರೆ. ಪ್ರಸ್ತುತ ಈ ಪೋರ್ಟಲ್ ಮೂಲಕ 2, 3 ಮತ್ತು 4 ನೇ ಸ್ತಂಭಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಮೊದಲ ಹಂತದ (Semicon 1.0) ಯಶಸ್ವಿ ಅನುಷ್ಠಾನದಡಿ 6 ರಾಜ್ಯಗಳಲ್ಲಿ ಒಟ್ಟು 12 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ₹1.64 ಲಕ್ಷ ಕೋಟಿಗೂ ಅಧಿಕ ಹೂಡಿಕೆ ಮಾಡಲಾಗಿದೆ. 2026ರ ಅಕ್ಟೋಬರ್ ವೇಳೆಗೆ ಇವುಗಳಲ್ಲಿ 5 ಯೋಜನೆಗಳು ಈಗಾಗಲೇ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿವೆ.

Loading...

‘ಚಿಪ್ಸ್ ಟು ಸ್ಟಾರ್ಟ್‌ಅಪ್’ (C2S) ಕಾರ್ಯಕ್ರಮದಡಿ 332 ಸಂಸ್ಥೆಗಳಿಗೆ EDA ಉಪಕರಣಗಳನ್ನು ಒದಗಿಸಲಾಗಿದ್ದು, ಸುಮಾರು 70,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ.

ಇದನ್ನೂ ಓದಿ: ಷೇರುಪೇಟೆಯ ದೈತ್ಯ ಪ್ರದರ್ಶನ; ಜಾಗತಿಕ ಷೇರುಮಾರುಕಟ್ಟೆಗಳು ನೆಲಕಚ್ಚಿದರೂ ಭಾರತೀಯ ಷೇರುಬಜಾರು ದಾಖಲೆ; ಕಾರಣಗಳಿವು…

ಇಸಿಎಂಎಸ್ ಅಡಿಯಲ್ಲಿ 12 ಹೊಸ ಅನುಮೋದನೆಗಳು

ಎಲೆಕ್ಟ್ರಾನಿಕ್ಸ್ ಘಟಕಗಳ ತಯಾರಿಕಾ ಯೋಜನೆಯಡಿ (ECMS) MeitY (ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ) ಹೆಚ್ಚುವರಿಯಾಗಿ 12 ಅರ್ಜಿಗಳಿಗೆ ಅನುಮೋದನೆ ನೀಡಿದೆ. ಇದರ ಅಡಿಯಲ್ಲಿ ಅಂದಾಜು ₹7,503 ಕೋಟಿ ಬಂಡವಾಳ ಹೂಡಿಕೆ ಹಾಗೂ 7,127 ನೇರ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ಈ ಹೊಸ ಅನುಮೋದನೆಗಳು ತಾಮ್ರದ ಹಾಳೆ (Copper Foil), ಕ್ಯಾಥೋಡ್ ಆಕ್ಟಿವ್ ಮೆಟೀರಿಯಲ್ ಮತ್ತು ಸ್ಪೆಷಾಲಿಟಿ ಸೆರಾಮಿಕ್ಸ್‌ನಂತಹ ಉತ್ಪನ್ನಗಳನ್ನು ಒಳಗೊಂಡಿದ್ದು, ಭಾರತದಲ್ಲೇ ಇವುಗಳ ತಯಾರಿಕೆಗೆ ಪ್ರಥಮ ಬಾರಿಗೆ ಅನುಮೋದನೆ ನೀಡಲಾಗಿದೆ.

ಈ ಅನುಮೋದನೆ ಪಡೆದ ಯೋಜನೆಗಳು ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು ಮತ್ತು ಉತ್ತರ ಪ್ರದೇಶ ಸೇರಿದಂತೆ ಒಟ್ಟು 7 ರಾಜ್ಯಗಳಲ್ಲಿ ಹರಡಿಕೊಂಡಿವೆ.

ಇದನ್ನೂ ಓದಿ: ಭಾರತದ ಉಕ್ಕಿನ ಕಥೆ… ಕಚ್ಚಾ ಉಕ್ಕು ಉತ್ಪಾದನೆಯಲ್ಲಿ ಅಮೆರಿಕ, ಜಪಾನ್ ಎರಡನ್ನೂ ಮೀರಿಸಿದ ಭಾರತ

ದೇಶೀಯ ಉತ್ಪಾದನೆಗೆ ಒತ್ತು: ಸ್ವಾವಲಂಬಿ ಭಾರತದ (Atmanirbhar Bharat) ದೃಷ್ಟಿಕೋನದಂತೆ, ಭಾರತವು ಈಗ ಕೇವಲ ಜೋಡಣೆ (assembly) ಮಾಡುವುದಷ್ಟೇ ಅಲ್ಲದೆ, ಪ್ರಮುಖ ತಂತ್ರಜ್ಞಾನಗಳು, ಘಟಕಗಳು ಮತ್ತು ಸಾಮಾಗ್ರಿಗಳ ಸಮಗ್ರ ದೇಶೀಯ ಮೌಲ್ಯ ಸರಪಳಿಯನ್ನು (value chain) ಅಭಿವೃದ್ಧಿಪಡಿಸುವತ್ತ ಸಾಗುತ್ತಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us