Closing Bell: ಷೇರುಪೇಟೆಯ ಏರಿಳಿತದ ಮಧ್ಯೆ ಸೆನ್ಸೆಕ್ಸ್ 537 ಪಾಯಿಂಟ್ಸ್ ಇಳಿಕೆ; ಬಜಾಜ್ ಫೈನಾನ್ಸ್ ಷೇರಿಗೆ 526 ರೂ. ಕುಸಿತ
ಭಾರತದ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಏಪ್ರಿಲ್ 27ನೇ ತಾರೀಕಿನ ಬುಧವಾರದಲ್ಲಿ ಇಳಿಕೆ ಕಂಡಿದೆ. ಇಂದಿನ ವಹಿವಾಟಿನಲ್ಲಿ ಪ್ರಮುಖವಾಗಿ ಏರಿಕೆ, ಇಳಿಕೆ ಕಂಡ ಷೇರುಗಳ ವಿವರ ಇಲ್ಲಿದೆ.
ಭಾರತೀಯ ಷೇರುಪೇಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಏಪ್ರಿಲ್ 27ನೇ ತಾರೀಕಿನ ಬುಧವಾರದಂದು ಏರಿಳಿತದಿಂದ ಕೂಡಿತ್ತು. ದಿನದ ಕೊನೆಗೆ ನಿಫ್ಟಿ 17,100 ಪಾಯಿಂಟ್ಸ್ಗಿಂತ ಕೆಳಗಿಳಿಯಿತು. ಇಂದಿನ ವಹಿವಾಟಿನಲ್ಲಿ ಎಲ್ಲ ವಲಯದ ಸೂಚ್ಯಂಕಗಳಲ್ಲೂ ಮಾರಾಟವು ಕಂಡುಬಂತು. ದಿನಾಂತ್ಯಕ್ಕೆ ಸೆನ್ಸೆಕ್ಕ್ 537.22 ಪಾಯಿಂಟ್ಸ್ ಅಥವಾ ಶೇ 0.94ರಷ್ಟು ಕುಸಿತವಾಗಿ, 56,819.39 ಪಾಯಿಂಟ್ಸ್ನಲ್ಲಿ ನೆಲೆಯಾಯಿತು. ಇನ್ನು ನಿಫ್ಟಿ 162.40 ಪಾಯಿಂಟ್ಸ್ ಅಥವಾ ಶೇ 0.94 ಕೆಳಗೆ ಇಳಿದು, 17,038.40 ಪಾಯಿಂಟ್ಸ್ನಲ್ಲಿ ನೆಲೆಗೊಂಡಿತು. ಇಂದಿನ ವಹಿವಾಟಿನಲ್ಲಿ 1146 ಕಂಪೆನಿ ಷೇರುಗಳು ಏರಿಕೆ ದಾಖಲಿಸಿದರೆ, 2140 ಕಂಪೆನಿ ಷೇರುಗಳು ಕುಸಿತ ಕಂಡವು. 107 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
ವಲಯವಾರು ಗಮನಿಸುವುದಾದರೆ, ಬ್ಯಾಂಕ್, ತೈಲ ಮತ್ತು ಅನಿಲ, ವಿದ್ಯುತ್ ವಲಯಗಳು ತಲಾ ಶೇ 1ರಷ್ಟು ನೆಲ ಕಚ್ಚಿದವು. ಬಿಎಸ್ಇ ಮಿಡ್ಕ್ಯಾಪ್, ಸ್ಮಾಲ್ಕ್ಯಾಪ್ ತಲಾ ಶೇ 0.5ರಷ್ಟು ಕುಸಿತ ಕಂಡಿದೆ. ಅಂದಹಾಗೆ ನಿಫ್ಟಿಯಲ್ಲಿ ಏರಿಕೆ, ಇಳಿಕೆ ಕಂಡ ಪ್ರಮುಖ ಷೇರುಗಳ ವಿವರ ಇಲ್ಲಿದೆ.
ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಹೀರೋ ಮೋಟೋಕಾರ್ಪ್ ಶೇ 3.85 ಟಾಟಾ ಸ್ಟೀಲ್ ಶೇ 1.06 ಏಷ್ಯನ್ ಪೇಂಟ್ಸ್ ಶೇ 0.73 ಟಿಸಿಎಸ್ ಶೇ 0.42 ಬಜಾಜ್ ಆಟೊ ಶೇ 0.35
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಬಜಾಜ್ ಫೈನಾನ್ಸ್ ಶೇ -7.27 ಬಜಾಜ್ ಫಿನ್ಸರ್ವ್ ಶೇ -3.94 ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಶೇ -2.85 ಅದಾನಿ ಪೋರ್ಟ್ಸ್ ಶೇ -2.44 ಶ್ರೀ ಸಿಮೆಂಟ್ಸ್ ಶೇ -2.28
ಇದನ್ನೂ ಓದಿ: ಷೇರು ಮಾರುಕಟ್ಟೆ ಬೆಲೆಗಳ ಏರಿಳಿತ ಊಹಿಸುವುದು ಹೇಗೆ ಗೊತ್ತಾ..! ಇಲ್ಲಿದೆ ಮಾಹಿತಿ