AirAsia India: ಏರ್‌ಏಷ್ಯಾ ಇಂಡಿಯಾದ ಸ್ವಾಧೀನಕ್ಕೆ ಟಾಟಾ ಒಡೆತನದ ಏರ್ ಇಂಡಿಯಾ ಯೋಜನೆ
ಏರ್‌ಏಷ್ಯಾ ಇಂಡಿಯಾವನ್ನು ಸ್ವಾಧೀನ ಮಾಡಿಕೊಳ್ಳಲು ಏರ್ ಇಂಡಿಯಾ ಯೋಜನೆ ರೂಪಿಸುತ್ತಿದೆ. ಆ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.
ಟಾಟಾ ಒಡೆತನದ ಏರ್ ಇಂಡಿಯಾದಿಂದ (Air India) ಏರ್‌ಏಷ್ಯಾ ಇಂಡಿಯಾವನ್ನು ಸ್ವಾಧೀನ ಮಾಡಿಕೊಳ್ಳಲು ಯೋಜಿಸಲಾಗಿದೆ ಮತ್ತು ಪ್ರಸ್ತಾವಿತ ಒಪ್ಪಂದಕ್ಕೆ ಸ್ಪರ್ಧಾತ್ಮಕ ಆಯೋಗದಿಂದ ಅನುಮೋದನೆಯನ್ನು ಕೋರಿದೆ. ಏರ್‌ಏಷ್ಯಾ ಇಂಡಿಯಾದ ಬಹುಪಾಲು ಮಾಲೀಕತ್ವವನ್ನು ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಹೊಂದಿದೆ. ಅಂದರೆ ಶೇ 83.67ರಷ್ಟು ಷೇರುಗಳನ್ನು ಹೊಂದಿದೆ ಮತ್ತು ಉಳಿದ ಪಾಲನ್ನು ಮಲೇಷ್ಯಾದ ಏರ್‌ಏಷ್ಯಾ ಸಮೂಹದ ಭಾಗ ಆಗಿರುವ ಏರ್‌ಏಷ್ಯಾ ಇನ್ವೆಸ್ಟ್ಮೆಂಟ್ ಲಿಮಿಟೆಡ್ (ಎಎಐಎಲ್) (AirAsia Investment Ltd (AAIL))ನಲ್ಲಿದೆ. ಸಂಪೂರ್ಣ ಸೇವಾ ಪ್ರಯಾಣ ಸಂಸ್ಥೆಯಾದ ಏರ್ ಇಂಡಿಯಾ ಮತ್ತು ಅದರ ಕಡಿಮೆ-ವೆಚ್ಚದ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅನ್ನು ಕಳೆದ ವರ್ಷ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ತಾಲೇಸ್ ಪ್ರೈವೇಟ್ ಲಿಮಿಟೆಡ್ ಸ್ವಾಧೀನ ಮಾಡಿಕೊಂಡಿತು. ಇದಲ್ಲದೆ, ಟಾಟಾದಿಂದ ಸಿಂಗಾಪೂರ್ ಏರ್‌ಲೈನ್ಸ್‌ನೊಂದಿಗೆ ಜಂಟಿ ಉದ್ಯಮದಲ್ಲಿ ಸಂಪೂರ್ಣ ಸೇವಾ ವಿಮಾನ ಯಾನ ವಿಸ್ತಾರಾವನ್ನು ನಿರ್ವಹಿಸುತ್ತವೆ.
ಇತ್ತೀಚಿನ ಕ್ರಮವು ತನ್ನ ಏರ್‌ಲೈನ್ ಕಾರ್ಯಾಚರಣೆಗಳನ್ನು ಕ್ರೋಡೀಕರಿಸುವ ವಿಸ್ತಾರವಾದ ಗುಂಪಿನ ಪ್ರಯತ್ನಗಳ ಒಂದು ಭಾಗವಾಗಿದೆ. “ಉದ್ದೇಶಿತ ಸಂಯೋಜನೆಯು ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್‌ನ ಪರೋಕ್ಷ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಏರ್ ಇಂಡಿಯಾ ಲಿಮಿಟೆಡ್ (AIL) ನಿಂದ ಏರ್‌ಏಷ್ಯಾ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ (ಏರ್ ಏಷ್ಯಾ ಇಂಡಿಯಾ/ಟಾರ್ಗೆಟ್)ನ ಸಂಪೂರ್ಣ ಈಕ್ವಿಟಿ ಷೇರು ಬಂಡವಾಳವನ್ನು ಸ್ವಾಧೀನಪಡಿಸಿಕೊಳ್ಳಲು ಸಂಬಂಧಿಸಿದೆ,” ಎಂದು ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಜತೆಗೆ ನೋಟಿಸ್ ಫೈಲ್ ಮಾಡಲಾಗಿದೆ. ನಿರ್ದಿಷ್ಟ ಮಿತಿಯನ್ನು ಮೀರಿದ ವ್ಯವಹಾರಗಳಿಗೆ ಸ್ಪರ್ಧಾ ಆಯೋಗದ ಅನುಮೋದನೆಯ ಅಗತ್ಯವಿರುತ್ತದೆ. ಇದು ಸ್ಪರ್ಧೆಯನ್ನು ಉತ್ತೇಜಿಸಲು ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ-ವಿರೋಧಿ ಅಭ್ಯಾಸಗಳನ್ನು ನಿಗ್ರಹಿಸಲು ಕೆಲಸ ಮಾಡುತ್ತದೆ.
ಜೂನ್ 2014ರಲ್ಲಿ ಹಾರಾಟ ಆರಂಭಿಸಿದ ಏರ್‌ಏಷ್ಯಾ ಇಂಡಿಯಾ, ದೇಶದಲ್ಲಿ ನಿಗದಿತ ವಿಮಾನ ಪ್ರಯಾಣಿಕ ಸಾರಿಗೆ, ಏರ್ ಕಾರ್ಗೋ ಸಾರಿಗೆ ಮತ್ತು ಚಾರ್ಟರ್ ಫ್ಲೈಟ್ ಸೇವೆಗಳನ್ನು ಒದಗಿಸುತ್ತದೆ. ಇದು ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ಹೊಂದಿಲ್ಲ. ಸೂಚನೆಯ ಪ್ರಕಾರ, ಪ್ರಸ್ತಾವಿತ ಸಂಯೋಜನೆಯು ಸ್ಪರ್ಧಾತ್ಮಕ ಲ್ಯಾಂಡ್ಸ್ಕೇಪ್ನಲ್ಲಿ ಯಾವುದೇ ಬದಲಾವಣೆಗೆ ಕಾರಣವಾಗುವುದಿಲ್ಲ ಅಥವಾ ಸಂಬಂಧಿತ ಮಾರುಕಟ್ಟೆಗಳನ್ನು ಯಾವ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ ಎಂಬುದನ್ನು ಲೆಕ್ಕಿಸದೆ ಭಾರತದಲ್ಲಿನ ಸ್ಪರ್ಧೆಯ ಮೇಲೆ ಯಾವುದೇ ಗಮನಾರ್ಹ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುವುದಿಲ್ಲ.
ಈ ವರ್ಷದ ಜನವರಿಯಲ್ಲಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅನ್ನು ಟಾಟಾ ವಹಿಸಿಕೊಂಡರು. ನಷ್ಟದಲ್ಲಿದ್ದ ಏರ್ ಇಂಡಿಯಾಗಾಗಿ ಟಾಟಾ ಬಿಡ್ ಮಾಡಿತ್ತು. ಅಕ್ಟೋಬರ್ 2021ರಲ್ಲಿ ಅದರಲ್ಲಿ ವಿಜೇತವಾಗಿತ್ತು. ಅಂದಹಾಗೆ ಇದಕ್ಕಾಗಿ ರೂ. 2,700 ಕೋಟಿ ನಗದು ಪಾವತಿ ಮತ್ತು ರೂ. 15,300 ಕೋಟಿ ಮೌಲ್ಯದ ವಿಮಾನ ಯಾನ ಸಂಸ್ಥೆಯ ಸಾಲವನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಒಳಗೊಂಡಂತೆ ರೂ. 18,000 ಕೋಟಿ ಬಿಡ್ ಮಾಡಿತು.
ಇದನ್ನೂ ಓದಿ: ವಿಮೆ ಸಮಸ್ಯೆ: ದೆಹಲಿ-ಮಾಸ್ಕೋ ನಡುವಣ ವಿಮಾನ ರದ್ದು ಮಾಡಿದ ಏರ್ ಇಂಡಿಯಾ