ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಿಗೆ ಆಧಾರ್, ಪ್ಯಾನ್ ಲಿಂಕ್ ಮಾಡುವುದಕ್ಕೆ ಸೆಪ್ಟೆಂಬರ್ 30 ಡೆಡ್​ಲೈನ್

Deadline To Submit Aadhaar For Savings Schemes: ಸುಕನ್ಯ ಸಮೃದ್ಧಿ ಯೋಜನೆ, ಪಿಪಿಎಫ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಮತ್ತು ಪ್ಯಾನ್ ನಂಬರ್ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ. ಆಧಾರ್ ಸಲ್ಲಿಸದೇ ಈಗಾಗಲೇ ಯೋಜನೆ ಪಡೆದಿರುವವರು ಆಧಾರ್ ಸಲ್ಲಿಸಲು ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ಇದೆ. ಆ ಗಡುವು ಬಳಿಕ ಇನ್ನೂ ಯಾರಾದರೂ ಆಧಾರ್ ಸಲ್ಲಿಸಿಲ್ಲವಾದರೆ ಯೋಜನೆಯ ಹಣ ಫ್ರೀಜ್ ಆಗುತ್ತದೆ.

ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಿಗೆ ಆಧಾರ್, ಪ್ಯಾನ್ ಲಿಂಕ್ ಮಾಡುವುದಕ್ಕೆ ಸೆಪ್ಟೆಂಬರ್ 30 ಡೆಡ್​ಲೈನ್
ಆಧಾರ್

Updated on: Sep 20, 2023 | 4:41 PM

ನವದೆಹಲಿ, ಸೆಪ್ಟೆಂಬರ್ 20: ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF), ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (NSC), ಹಿರಿಯ ನಾಗರಿಕರ ಸೇವಿಂಗ್ಸ್ ಸ್ಕೀಮ್ (NCSS) ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳನ್ನು ಹೊಂದಿರುವವರ ಗಮನಕ್ಕೆ ಈ ಸುದ್ದಿ. ನೀವು ಯಾವುದಾದರೂ ಉಳಿತಾಯ ಯೋಜನೆಗಳನ್ನು ಮಾಡಿಸಿದ್ದರೆ, ಆದಷ್ಟೂ ಬೇಗ ಅವಕ್ಕೆ ನಿಮ್ಮ ಆಧಾರ್ ಮತ್ತು ಪ್ಯಾನ್ ನಂಬರ್ ಲಿಂಕ್ ಮಾಡಿ. ಸೆಪ್ಟೆಂಬರ್ 30ರವರೆಗೂ ಗಡುವು ಇದ್ದು ಕೇವಲ 9 ದಿನ ಮಾತ್ರ ಬಾಕಿ ಇದೆ.

ಕೇಂದ್ರ ಹಣಕಾಸು ಸಚಿವಾಲಯ 2023ರ ಮಾರ್ಚ್ 31ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ ಪಿಪಿಎಫ್, ಎನ್​ಎಸ್​ಸಿ ಮತ್ತಿತರ ಸ್ಮಾಲ್ ಸೇವಿಂಗ್ ಸ್ಕೀಮ್​ಗಳಿಗೆ ಆಧಾರ್ ಮತ್ತು ಪ್ಯಾನ್ ಅನ್ನು ಸಲ್ಲಿಸುವುದು ಕಡ್ಡಾಯ. ಹೊಸದಾಗಿ ಸ್ಕೀಮ್ ಪಡೆಯುವವರು ಮಾತ್ರವಲ್ಲ, ಈಗಾಗಲೇ ಆ ಯೋಜನೆಗಳನ್ನು ಮಾಡಿಸಿದ್ದವರೂ ಕೂಡ ಆಧಾರ್ ಮತ್ತು ಪ್ಯಾನ್ ಅನ್ನು ಸಲ್ಲಿಸಬೇಕಾಗುತ್ತದೆ. ಸೆಪ್ಟೆಂಬರ್ 30ರೊಳಗೆ ನೀವು ಸ್ಕೀಮ್ ಪಡೆದಿರುವ ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖಾ ಕಚೇರಿಗೆ ಹೋಗಿ ಆಧಾರ್ ನಂಬರ್ ಅನ್ನು ನೀಡಬೇಕಾಗುತ್ತದೆ.

ಇದನ್ನೂ ಓದಿ: World’s Best Hotel: ಇಟಲಿಯ ಪಸ್ಸಾಲಾಕ್ವ ವಿಶ್ವದ ಅತ್ಯುತ್ತಮ ಹೋಟೆಲ್; ಟಾಪ್ 50 ಪಟ್ಟಿಯಲ್ಲಿ ಭಾರತದ ಏಕೈಕ ಹೋಟೆಲ್

ಆಧಾರ್ ಸಲ್ಲಿಸದಿದ್ದರೆ ಏನಾಗುತ್ತದೆ?

ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಮತ್ತು ಪ್ಯಾನ್ ನಂಬರ್ ಅನ್ನು ನೀಡದೇ ಇದ್ದರೆ ಹೂಡಿಕೆ ಸ್ಥಗಿತಗೊಳ್ಳುತ್ತದೆ. ಅಂದರೆ ಈ ಸ್ಕೀಮ್​ಗಳಲ್ಲಿ ತೊಡಗಿಸಿರುವ ನಿಮ್ಮ ಹಣ ಫ್ರೀಜ್ ಆಗುತ್ತದೆ. ಅದನ್ನು ನೀವು ವಿತ್​ಡ್ರಾ ಮಾಡಲು ಆಗುವುದಿಲ್ಲ. ಬಡ್ಡಿ ಹಣವೂ ಜಮೆ ಆಗುವುದಿಲ್ಲ. ನೀವು ಯೋಜನೆಯಲ್ಲಿ ಹಣ ಠೇವಣಿ ಇಡುವುದಕ್ಕೂ ನಿರ್ಬಂಧ ಇರುತ್ತದೆ.

ಸಣ್ಣ ಉಳಿತಾಯ ಯೋಜನೆಗಳು ಸಾಕಷ್ಟು ಜನಪ್ರಿಯವಾಗುತ್ತಿವೆ. ಈ ಹಿಂದೆ ಸ್ಕೀಮ್​ಗಳನ್ನು ಪಡೆಯಲು ಆಧಾರ್ ಕಡ್ಡಾಯ ಇರಲಿಲ್ಲ. ಬಹಳಷ್ಟು ಮಂದಿ ಆಧಾರ್ ಸಲ್ಲಿಸದೆಯೇ ಯೋಜನೆ ಆರಂಭಿಸಿರುವುದುಂಟು. ಇದೀಗ ಆಧಾರ್ ಮತ್ತು ಪ್ಯಾನ್ ಸಲ್ಲಿಸುವುದು ಕಡ್ಡಾಯಪಡಿಸಲಾಗಿದೆ.

ಇದನ್ನೂ ಓದಿ: ಪಿಎಂ ಕಿಸಾನ್ ರಿನ್ ಪೋರ್ಟಲ್​ಗೆ ಚಾಲನೆ; ಏನಿದು ರೈತರ ಹೊಸ ಪ್ಲಾಟ್​ಫಾರ್ಮ್?

ನಿಮ್ಮ ಆಧಾರ್​ಗೆ ಪ್ಯಾನ್ ನಂಬರ್ ಲಿಂಕ್ ಮಾಡಿದ್ದರೆ, ಕೇವಲ ಆಧಾರ್ ನಂಬರ್ ಮಾತ್ರವೇ ಕೊಟ್ಟರೂ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us