Senior Citizens Fixed Deposits: ಹಿರಿಯ ನಾಗರಿಕರಿಗೆ ವಿವಿಧ ಬ್ಯಾಂಕ್​ಗಳಲ್ಲಿ ಸಿಗುವ ವಿಶೇಷ ಎಫ್​ಡಿ ದರ ಹೀಗಿದೆ

| Updated By: Srinivas Mata

Updated on: Aug 12, 2021 | 3:10 PM

ಹಿರಿಯ ನಾಗರಿಕರಿಗಾಗಿ ಎಫ್​ಡಿಗಳ ಮೇಲೆ ವಿವಿಧ ಬ್ಯಾಂಕ್​ಗಳು ವಿಶೇಷ ಬಡ್ಡಿ ದರವನ್ನು ಒದಗಿಸುತ್ತಿವೆ. ಆ ಬಗ್ಗೆ ವಿವರಗಳು ಇಲ್ಲಿವೆ.

Senior Citizens Fixed Deposits: ಹಿರಿಯ ನಾಗರಿಕರಿಗೆ ವಿವಿಧ ಬ್ಯಾಂಕ್​ಗಳಲ್ಲಿ ಸಿಗುವ ವಿಶೇಷ ಎಫ್​ಡಿ ದರ ಹೀಗಿದೆ
ಸಾಂದರ್ಭಿಕ ಚಿತ್ರ
Follow us on

ಹಿರಿಯ ನಾಗರಿಕರಿಗಾಗಿ ಇರುವ ವಿಶೇಷ ಫಿಕ್ಸೆಡ್ ಡೆಪಾಸಿಟ್ (ಎಫ್​ಡಿ) ಯೋಜನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ), ಎಚ್​ಡಿಎಫ್​ಸಿ ಬ್ಯಾಂಕ್​ ಹಾಗೂ ಬ್ಯಾಂಕ್ ಆಫ್ ಬರೋಡಾದಿಂದ ಸೆಪ್ಟೆಂಬರ್ 30, 2021ರ ತನಕ ವಿಸ್ತರಣೆ ಮಾಡಲಾಗಿದೆ. ಐಸಿಐಸಿಐ ಬ್ಯಾಂಕ್​ ಮಾತ್ರ ಹಿರಿಯ ನಾಗರಿಕರಿಗಾಗಿ ಇರುವ Golden Years FDಯನ್ನು ಅಕ್ಟೋಬರ್ 7, 2021ರ ತನಕ ವಿಸ್ತರಿಸಿದೆ. ಬಡ್ಡಿ ದರಗಳು ದಿನೇ ದಿನೇ ಇಳಿಕೆ ಆಗುತ್ತಿರುವ ಈಗಿನ ದಿನಮಾನದಲ್ಲಿ ಈ ಬ್ಯಾಂಕ್​ಗಳು ಐದು ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ಅವಧಿಗೆ ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್​ಡಿ ಯೋಜನೆಯನ್ನು ಕಳೆದ ವರ್ಷ ಆರಂಭಿಸಿದವು.

1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರ ವಿಶೇಷ ಎಫ್​ಡಿ ದರ
ಎಸ್​ಬಿಐನಿಂದ ಇರುವ ವಿಶೇಷ ಎಫ್​ಡಿ ಸ್ಕೀಮ್ ಹೆಸರು We Care. ಈ ಸ್ಕೀಮ್ ಅಡಿಯಲ್ಲಿ 30 ಬೇಸಿಸ್ ಪಾಯಿಂಟ್​ ಅನ್ನು 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಎಫ್​ಡಿಗೆ ಹಿರಿಯ ನಾಗರಿಕರಿಗೆ ನೀಡಲಾಗುತ್ತದೆ. ಸದ್ಯಕ್ಕೆ ಸಾಮಾನ್ಯ ನಾಗರಿಕರಿಗೆ 5 ವರ್ಷದ ಅವಧಿಯ ಎಫ್​ಡಿಗೆ ಶೇ 5.4ರಷ್ಟು ಬಡ್ಡಿ ದರ ಇದೆ. ಹಿರಿಯ ನಾಗರಿಕರು ವಿಶೇಷ ಎಫ್​ಡಿ ಯೋಜನೆಯಲ್ಲಿ ಹಣ ಇಟ್ಟರೆ ಅದಕ್ಕೆ ಶೇ 6.20ರಷ್ಟು ಬಡ್ಡಿ ದರ ಸಿಗುತ್ತದೆ.

2. ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕ್​ನಿಂದ ಇರುವ ವಿಶೇಷ ಎಫ್​ಡಿ ಸ್ಕೀಮ್ ಹೆಸರು ICICI Bank Golden Years FD Scheme. ಈ ಸ್ಕೀಮ್ ಅಡಿಯಲ್ಲಿ 80 ಬೇಸಿಸ್ ಪಾಯಿಂಟ್​ ಹೆಚ್ಚು ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ವಿಶೇಷ ಎಫ್​ಡಿ ಯೋಜನೆಯಲ್ಲಿ ವರ್ಷಕ್ಕೆ ಶೇ 6.30ರಷ್ಟು ಬಡ್ಡಿ ದರ ದೊರೆಯುತ್ತದೆ.

3. ಎಚ್​ಡಿಎಫ್​ಸಿ ಬ್ಯಾಂಕ್
ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಇರುವ ವಿಶೇಷ ಎಫ್​ಡಿ ಸ್ಕೀಮ್ ಹೆಸರು HDFC Senior Citizen Care. ಈ ಸ್ಕೀಮ್ ಅಡಿಯಲ್ಲಿ 75 ಬೇಸಿಸ್ ಪಾಯಿಂಟ್​ ಹೆಚ್ಚು ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ವಿಶೇಷ ಎಫ್​ಡಿ ಯೋಜನೆಯಲ್ಲಿ ವರ್ಷಕ್ಕೆ ಶೇ 6.25ರಷ್ಟು ಬಡ್ಡಿ ದರ ದೊರೆಯುತ್ತದೆ.

4. ಬ್ಯಾಂಕ್ ಆಫ್ ಬರೋಡಾ
ಬ್ಯಾಂಕ್ ಆಫ್ ಬರೋಡಾದಿಂದ ಈ ಸ್ಕೀಮ್ ಅಡಿಯಲ್ಲಿ 100 ಬೇಸಿಸ್ ಪಾಯಿಂಟ್​ ಹೆಚ್ಚು ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ವಿಶೇಷ ಎಫ್​ಡಿ ಯೋಜನೆಯಲ್ಲಿ ವರ್ಷಕ್ಕೆ ಶೇ 6.25ರಷ್ಟು ಬಡ್ಡಿ ದರ ಬರುತ್ತದೆ.

ಇದನ್ನೂ ಓದಿ: Fixed Deposit Benefits: 3ರಿಂದ 5 ವರ್ಷದ ಅವಧಿಯ ಎಫ್​ಡಿ ಮೇಲೆ ಉತ್ತಮ ಬಡ್ಡಿ ನೀಡುವ ಟಾಪ್ 10 ಬ್ಯಾಂಕ್​ಗಳಿವು

ಇದನ್ನೂ ಓದಿ: Personal Finance: ಹಣದ ಎಮರ್ಜೆನ್ಸಿ ಇದ್ದಲ್ಲಿ ಎಫ್​ಡಿ ಮೇಲೆ ಸಾಲ ತೆಗೆದುಕೊಳ್ಳೋದಾ ಅಥವಾ ಎಫ್​ಡಿ ಮುರಿಸೋದಾ?

(Special Interest Rate On Fixed Deposits By Various Banks To Senior Citizens Here Is The Details)