Brij Singh: ‘ಸಾಕಪ್ಪಾ ಸಾಕು ಭಾರತದ ಸಾವಾಸ, ಅಮೆರಿಕಕ್ಕೆ ವಾಪಸ್ ಹೋಗ್ತೀನಿ’- ಬೆಂಗಳೂರಲ್ಲಿ ಕಂಪನಿ ನೊಂದಾಯಿಸಲು ಹೆಣಗಾಡಿದ ಬ್ರಿಜ್ ಸಿಂಗ್
Company Registration Problem: ಸ್ಟಾರ್ಟಪ್ ನಗರಿ ಬೆಂಗಳೂರಿನಲ್ಲಿ ತಮ್ಮೊಂದು ಕಂಪನಿಯನ್ನು ನೊಂದಾಯಿಸಲು ಬ್ರಿಜ್ ಸಿಂಗ್ 2 ತಿಂಗಳಿಂದ ವಿಫಲಪ್ರಯತ್ನ ಮಾಡಿದ್ದಾರಂತೆ. ಈ ಬಗ್ಗೆ ಟ್ವೀಟ್ ಮೂಲಕ ಹತಾಶೆ ತೋಡಿಕೊಂಡ ಅವರು, ಅಮೆರಿಕಕ್ಕೆ ವಾಪಸ್ ಹೋಗುವ ಸಮಯ ಬರುತ್ತಿದೆ ಎಂದಿದ್ದಾರೆ.
ಬೆಂಗಳೂರು, ಜುಲೈ 28: ಭಾರತ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ನ ಪಟ್ಟಿಯಲ್ಲಿ (Ease of doing business) ಸ್ವಲ್ಪಸ್ವಲ್ಪವೇ ಮೇಲೇರುತ್ತಿದೆ. ಸ್ಟಾರ್ಟಪ್ಗಳ ಉತ್ತೇಜನಕ್ಕಾಗಿ ಸರ್ಕಾರ ಬಹಳಷ್ಟು ಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ, ವಾಸ್ತವದಲ್ಲಿ ಚಿತ್ರಣ ಹೇಗಿದೆ? ಅಮೆರಿಕದಿಂದ ಬಂದು ಬೆಂಗಳೂರಿನಲ್ಲಿ ಕಂಪನಿ ಸ್ಥಾಪಿಸಲು ಯತ್ನಿಸುತ್ತಿರುವ ಎನ್ಆರ್ಐವೊಬ್ಬರು ಭಾರತದಲ್ಲಿನ ಅನುಭವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ನೋ ಮೌಂಟೇನ್ (snowmountain.ai) ಎಂಬ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಸ್ಥೆಯ ಸಂಸ್ಥಾಪಕ ಬ್ರಿಜ್ ಸಿಂಗ್ (Brij Singh) ಅವರು ತಮ್ಮ ಕಂಪನಿಯೊಂದನ್ನು ಭಾರತದಲ್ಲಿ ನೊಂದಾಯಿಸುವ ಪ್ರಯತ್ನದಲ್ಲಿ ಎದುರಾದ ಅನುಭವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
‘ಭಾರತ ಮತ್ತು ಬೆಂಗಳೂರೆಂದರೆ ನನಗೆ ಇಷ್ಟವೇ. ಆದರೆ, ಅಲ್ಲಿ ಒಂದು ತಿಂಗಳಲ್ಲಿ ಕಲಿತದ್ದಕ್ಕಿಂತಲೂ ಹೆಚ್ಚಿನದನ್ನು ಕಳೆದ 3 ದಿನದಲ್ಲಿ ಬೇ ಏರಿಯಾದಲ್ಲಿ ಕಲಿತಿದ್ದೇನೆ. ಭಾರತದಲ್ಲಿ ಒಂದು ಕಂಪನಿಯನ್ನು ನೊಂದಾಯಿಸಲು ಎರಡು ತಿಂಗಳು ಪ್ರಯತ್ನಿಸಿದ್ದೇನೆ. ಈಗಲೂ ಅದು ಸಾಧ್ಯವಾಗಿಲ್ಲ. ಸಂಭಾವ್ಯ ಗ್ರಾಹಕರು, ಹೂಡಿಕೆದಾರರು ಹಾಗೂ ಇತರ ಸ್ಥಾಪಕರು ನೀಡುವ ಪರಿಹಾರ ಸಲಹೆಗಳು ಬೇರೆ ಮಟ್ಟದಲ್ಲಿ ಇವೆ…’ ಎಂದು ಬ್ರಿಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಬೇ ಏರಿಯಾ ಎಂಬುದು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಒಂದು ಪ್ರದೇಶ. ಬ್ರಿಜ್ ಸಿಂಗ್ ಜುಲೈ 27ರಂದು ಮಾಡಿದ ಈ ಟ್ವೀಟ್ನಲ್ಲಿ, ‘ನಾನು ಅಮೆರಿಕಕ್ಕೆ ವಾಪಸ್ ಹೋಗುವ ಸಮಯ ಬರುತ್ತಿದೆ ಅನಿಸುತ್ತದೆ. ಈ ವಿಚಾರವನ್ನು ಬಹಳ ಭಾರದ ಹೃದಯದಿಂದ ಹೇಳುತ್ತಿದ್ದೇನೆ’ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Star Notes: ಸ್ಟಾರ್ ಚಿಹ್ನೆ ಇರುವ ನೋಟುಗಳು ಅಮಾನ್ಯವಾ? ನೋಟುಗಳಿಗೆ ಸ್ಟಾರ್ ಯಾಕಿರುತ್ತದೆ? ಇಲ್ಲಿದೆ ಆರ್ಬಿಐ ಸ್ಪಷ್ಟನೆ
Love Bangalore / India, but I have learnt more in last 3 days in Bay Area than I could in a month back home.
Spent 2 months just to try to register a co in India & it’s still not done.
Problem – solution feedback loop from potential customers, Investors & even fellow…
— Brij Singh (@brijbhasin) July 27, 2023
ಬ್ರಿಜ್ ಸಿಂಗ್ ಅವರ ಈ ಟ್ವೀಟ್ಗೆ ಸಾಕಷ್ಟು ಸ್ಪಂದನೆಯೂ ಸಿಕ್ಕಿದೆ. ಕುಲದೀಪ್ ಎಂಬುವವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಭಾರತದಲ್ಲಿ ಎಲ್ಲವೂ ಕಠಿಣವೇ. ಆದರೂ ಜನರು ನಿರ್ಮಾಣ ಕಾರ್ಯದಲ್ಲಿದ್ದಾರೆ. ಯಶಸ್ವಿಯೂ ಆಗಿದ್ದಾರೆ ಎಂದಿದ್ದಾರೆ.
ಇದಕ್ಕೆ ಸ್ಪಂದಿಸಿದ ಬ್ರಿಜ್ ಸಿಂಗ್, ತಾನು ಯಾವುದನ್ನೂ ಬಿಡುವುದಿಲ್ಲ. ಕೇವಲ ವಿಚಾರ ಹಂಚಿಕೊಂಡೆ ಅಷ್ಟೇ. ವಿಶ್ವಕ್ಕಾಗಿ ಭಾರತದಲ್ಲಿ ನಿರ್ಮಾಣ ಮಾಡುವುದರಿಂದ ಬಹಳಷ್ಟು ಅನುಕೂಲತೆಗಳಿವೆ ಎಂದು ಸಮಜಾಯಿಷಿ ನೀಡಿದ್ದಾರೆ.
ಇದನ್ನೂ ಓದಿ: SBI Safety Tips: ಆನ್ಲೈನ್ನಲ್ಲಿ ಸುರಕ್ಷಿತವಾಗಿ ಬ್ಯಾಂಕಿಂಗ್ ನಡೆಸಲು ಎಸ್ಬಿಐ ನೀಡಿದೆ ಕೆಲ ಟಿಪ್ಸ್
ಸಿಎ ಸಮಸ್ಯೆ ಇರಬಹುದು
ಇನ್ನೂ ಕೆಲವರು ಬ್ರಿಜ್ ಅವರ ನೊಂದಣಿ ವೈಫಲ್ಯದ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ಬ್ರಿಜ್ ಸಿಂಗ್ ಅವರು ತಮ್ಮ ಕಂಪನಿಯನ್ನು ನೊಂದಾಯಿಸಲು ಎರಡು ತಿಂಗಳಾದರೂ ಆಗಿಲ್ಲ ಎಂದರೆ ಅದಕ್ಕೆ ಚಾರ್ಟರ್ಡ್ ಅಕೌಂಟೆಂಟ್ನ ವೈಫಲ್ಯ ಇರುತ್ತೆ. ಒಬ್ಬ ಒಳ್ಳೆಯ ಸಿಎಸ್ ಇದ್ದರೆ 20 ದಿನದಲ್ಲಿ ಕಂಪನಿ ರಿಜಿಸ್ಟ್ರೇಶನ್ ಆಗುತ್ತದೆ ಎಂದು ಒಬ್ಬರು ಕಾಮೆಂಟಿಸಿದ್ದಾರೆ.
ಮಯಂಕ್ ಎಂಬ ವ್ಯಕ್ತಿ, ತಾನು 7 ದಿನದಲ್ಲಿ ಪ್ರೈವೇಟ್ ಲಿ ಕಂಪನಿ ನೊಂದಾಯಿಸಿ ಸರ್ಟಿಫಿಕೇಟ್ ಕೂಡ ಪಡೆದಿದ್ದೇನೆ ಎಂದಿದ್ದಾರೆ. ಸಿಎ ಇಲ್ಲದೇ ತಾವೇ ಸ್ವಂತವಾಗಿ ಬೇಗನೇ ಕಂಪನಿ ರಿಜಿಸ್ಟ್ರೇಶನ್ ಮಾಡಬಹುದು. ಬ್ರಿಜ್ ಸಿಂಗ್ ಅವರು ಸರಿಯಾದ ಸಿಎ ಅನ್ನು ಆಯ್ಕೆ ಮಾಡಿಕೊಂಡಿಲ್ಲವಾಗಿರಬಹುದು ಎಂದು ಮಗದೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:51 pm, Fri, 28 July 23