AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Closing Bell: ಸತತ ಮೂರನೇ ದಿನ ಷೇರುಪೇಟೆ ಕುಸಿತ; ಸೆನ್ಸೆಕ್ಸ್ 336 ಪಾಯಿಂಟ್ಸ್, ನಿಫ್ಟಿ 88 ಪಾಯಿಂಟ್ಸ್ ಇಳಿಕೆ

ಷೇರು ಮಾರುಕಟ್ಟೆ ಸೂಚ್ಯಂಕಗಳು ಸತತ ಮೂರನೇ ಸೆಷನ್ ಆದ ಅಕ್ಟೋಬರ್ 21ನೇ ತಾರೀಕಿನ ಗುರುವಾರ ಕೂಡ ಇಳಿಕೆ ಆಗಿದೆ. ನಿಫ್ಟಿಯಲ್ಲಿನ ಏರಿಕೆ ಹಾಗೂ ಇಳಿಕೆ ಕಂಡ ಪ್ರಮುಖ ಷೇರುಗಳ ವಿವರ ಇಲ್ಲಿದೆ.

Closing Bell: ಸತತ ಮೂರನೇ ದಿನ ಷೇರುಪೇಟೆ ಕುಸಿತ; ಸೆನ್ಸೆಕ್ಸ್ 336 ಪಾಯಿಂಟ್ಸ್, ನಿಫ್ಟಿ 88 ಪಾಯಿಂಟ್ಸ್ ಇಳಿಕೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Oct 21, 2021 | 4:44 PM

Share

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಅಕ್ಟೋಬರ್ 21ನೇ ತಾರೀಕಿನ ಗುರುವಾರದಂದು ಸತತ ಮೂರನೇ ಸೆಷನ್ ಕುಸಿತ ಕಂಡಿದೆ. ಮಾಹಿತಿ ತಂತ್ರಜ್ಞಾನ ಮತ್ತು ಲೋಹದ ಷೇರುಗಳು ಮಾರುಕಟ್ಟೆ ಇಳಿಕೆಗೆ ಕಾರಣವಾಗಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 336.46 ಪಾಯಿಂಟ್ಸ್ ಅಥವಾ ಶೇ 0.55ರಷ್ಟು ಕುಸಿತ ಕಂಡು, 60,923.50 ಪಾಯಿಂಟ್ಸ್​ನೊಂದಿಗೆ ವ್ಯವಹಾರವನ್ನು ಮುಗಿಸಿದೆ. ಇನ್ನು ನಿಫ್ಟಿ 88.50 ಪಾಯಿಂಟ್ಸ್ ಅಥವಾ ಶೇ 0.48ರಷ್ಟು ಇಳಿಕೆಯಾಗಿ 18,178.10 ಪಾಯಿಂಟ್ಸ್​ನೊಂದಿಗೆ ವಹಿವಾಟು ಚುಕ್ತಾಗೊಳಿಸಿದೆ. ವಲಯಗಳಲ್ಲಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳು, ವಾಹನ, ತೈಲ ಮತ್ತು ಅನಿಲ ಹಾಗೂ ವಿದ್ಯುತ್ ಸೂಚ್ಯಂಕಗಳು ಏರಿಕೆಯಲ್ಲೇ ಮುಕ್ತಾಯಗೊಂಡಿದೆ. ಇನ್ನು ಲೋಹ, ಮಾಹಿತಿ ತಂತ್ರಜ್ಞಾನ, ಎನರ್ಜಿ ಹಾಗೂ ಎಫ್​ಎಂಸಿಜಿ ಸೂಚ್ಯಂಕಗಳು ಇಳಿಕೆ ಕಂಡಿವೆ.

ಬಿಎಸ್​ಇ ಮಿಡ್​ಕ್ಯಾಪ್​ ಮತ್ತು ಸ್ಮಾಲ್​ಕ್ಯಾಪ್​ ಸೂಚ್ಯಂಕಗಳು ನೆಗೆಟಿವ್ ಆಗಿಯೇ ದಿನ ಮುಗಿಸಿವೆ. ಇಂದಿ ವಹಿವಾಟಿನಲ್ಲಿ 1580 ಕಂಪೆನಿಯ ಷೇರುಗಳು ಏರಿಕೆ ದಾಖಲಿಸಿದರೆ, 1627 ಕಂಪೆನಿಯ ಷೇರುಗಳು ಇಳಿಕೆ ಕಂಡವು. ಇನ್ನು 130 ಕಂಪೆನಿಯ ಷೇರುಗಳ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನಿಫ್ಟಿಯಲ್ಲಿ ಏರಿಕೆ ಹಾಗೂ ಇಳಿಕೆ ಕಂಡ ಪ್ರಮುಖ ಕಂಪೆನಿಗಳ ವಿವರ ಇಲ್ಲಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಕೊಟಕ್ ಮಹೀಂದ್ರಾ ಶೇ 6.37 ಟಾಟಾ ಮೋಟಾರ್ಸ್ ಶೇ 4.33 ಗ್ರಾಸಿಮ್ ಶೇ 3.15 ಬಿಪಿಸಿಎಲ್ ಶೇ 2.26 ಎಚ್​ಡಿಎಫ್​ಸಿ ಶೇ 1.75

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಏಷ್ಯನ್ ಪೇಂಟ್ಸ್ ಶೇ -5.29 ಹಿಂಡಾಲ್ಕೋ ಶೇ -3.74 ರಿಲಯನ್ಸ್ ಶೇ -2.88 ಇನ್ಫೋಸಿಸ್ ಶೇ -2.70 ಡಾ.ರೆಡ್ಡೀಸ್ ಲ್ಯಾಬ್ಸ್ ಶೇ -2.15

ಇದನ್ನೂ ಓದಿ: Do’s And Don’ts In Share Market: ಷೇರು ಮಾರ್ಕೆಟ್​ನಲ್ಲಿ ಮಾಡುವ ಹಾಗೂ ಮಾಡಬಾರದು ಕೆಲಸಗಳಿವು

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ