ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಈ ಸೀಸನ್​ನಲ್ಲಿ 8,126 ಕೋಟಿ ರೂ ಪಾವತಿ

Sugar industry news: ಈ ವರ್ಷದ ಸಕ್ಕರೆ ಋತುವಿನಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ 8,126 ಕೋಟಿ ರೂ ಪಾತಿಯಾಗಿದೆ. 3,015 ಕೋಟಿ ರೂ ಬಾಕಿ ಉಳಿದಿದೆ. ಈ ಪೈಕಿ ಕರ್ನಾಟಕದ ರೈತರಿಗೆ 1,405 ಕೋಟಿ ರೂ ಬಾಕಿ ಇದೆ ಎನ್ನುವ ಮಾಹಿತಿ ಬಂದಿದೆ. ಕಳೆದ ವರ್ಷದಲ್ಲಿ ಕಬ್ಬುಬೆಳೆಗಾರರಿಗೆ ಶೇ. 99ರಷ್ಟು ಹಣ ಪಾವತಿಯಾಗಿತ್ತು.

ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಈ ಸೀಸನ್​ನಲ್ಲಿ 8,126 ಕೋಟಿ ರೂ ಪಾವತಿ
ಕಬ್ಬುಬೆಳೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 19, 2024 | 5:06 PM

ನವದೆಹಲಿ, ಡಿಸೆಂಬರ್ 19: ಪ್ರಸಕ್ತ ವರ್ಷದ ಸಕ್ಕರೆ ಋತುವಿನ ಮೊದಲ 70 ದಿನದಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರರಿಗೆ ಪಾವತಿಸಿದ ಹಣದ ಮೊತ್ತ 8,126 ಕೋಟಿ ರೂ ಎಂದು ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ. ರೈತರಿಗೆ ಪಾವತಿಸಬೇಕಾಗಿರುವ ಬಾಕಿ ಹಣ 3,015 ರೂ ಆಗಿದೆ. ಇದರಲ್ಲಿ ಕರ್ನಾಟಕದ ರೈತರಿಗೇ 1,405 ಕೋಟಿ ರೂ ಬರಬೇಕಿದೆ. ಉತ್ತರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳದ್ದು ನಂತರ ಸ್ಥಾನ.

ಭಾರತದಲ್ಲಿ ಸಕ್ಕರೆ ಋತು ಅಕ್ಟೋಬರ್​ನಿಂದ ಸೆಪ್ಟೆಂಬರ್​ವರೆಗೆ ಇದೆ. ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನೀಡಬೇಕಾದ ಹಣ 11,141 ಕೋಟಿ ರೂನಷ್ಟು ಇತ್ತು. ಇದರಲ್ಲಿ 3,015 ಕೋಟಿ ರೂ ಬಾಕಿ ಉಳಿದಿದೆ. ಕಳೆದ ವರ್ಷದಲ್ಲಿ ಬಾಕಿ ಇದ್ದ 1,11,674 ಕೋಟಿ ರೂನಲ್ಲಿ 1,275 ಕೋಟಿ ರೂ ಮಾತ್ರವೇ ಬಾಕಿ ಉಳಿದಿತ್ತು (ಡಿ. 13ರವರೆಗೆ). ಶೇ. 99ರಷ್ಟು ಬಾಕಿ ಹಣವನ್ನು ತೀರಿಸಲಾಗಿದೆ ಎನ್ನುವ ಮಾಹಿತಿ ಇದೆ.

ಹೆಚ್ಚು ಸಕ್ಕರೆ ರಫ್ತಿಗೆ ಅವಕಾಶ….

ಭಾರತದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಿದ್ದು, ಸರಬರಾಜು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಸಕ್ಕರೆ ಬೆಲೆ ಕಡಿಮೆಗೊಳ್ಳುತ್ತಿದೆ. ಇದರಿಂದಾಗಿ ಸಕ್ಕರೆ ಕಂಪನಿಗಳಿಗೆ ರಫ್ತು ಮಾಡುವ ಅವಕಾಶ ನೀಡಬೇಕು ಎಂಬುದು ಆ ಉದ್ಯಮದವರ ಒತ್ತಾಯವಾಗಿದೆ. ಭಾರತೀಯ ಸಕ್ಕರೆ ಕಾರ್ಖಾನೆ ಸಂಸ್ಥೆಯ ಮಹಾನಿರ್ದೇಶಕ ದೀಪಕ್ ಬಲ್ಲಾನಿ ಅವರ ಪ್ರಕಾರ ಭಾರತದಿಂದ 20 ಲಕ್ಷಕ್ಕಿಂತ ಹೆಚ್ಚು ಮೆಟ್ರಿಕ್ ಟನ್​ಗಳಷ್ಟು ಸಕ್ಕರೆ ರಫ್ತು ಮಾಡಲು ಸಾಧ್ಯವಂತೆ.

ಇದನ್ನೂ ಓದಿ: ಭಾರತ್ ಮಾಲಾ ಯೋಜನೆಯಡಿ ಅ. 31ರವರೆಗೆ 18,714 ಕಿಮೀ ಹೆದ್ದಾರಿಗಳ ನಿರ್ಮಾಣ: ಸರ್ಕಾರದಿಂದ ಮಾಹಿತಿ

ಬ್ರೆಜಿಲ್ ನಂತರ ಭಾರತದಲ್ಲೇ ಅತಿಹೆಚ್ಚು ಸಕ್ಕರೆ ಉತ್ಪಾದನೆ ಆಗುವುದು. 2022-23ರ ಸೀಸನ್​ನಲ್ಲಿ ಸಕ್ಕರೆ ರಫ್ತನ್ನು ನಿಲ್ಲಿಸಲಾಗಿತ್ತು. ಬರ ಪರಿಸ್ಥಿತಿಯಿಂದಾಗಿ ಕಬ್ಬು ಇಳುವರಿ ಕಡಿಮೆಗೊಂಡು ಸಕ್ಕರೆ ಅಭಾವ ಬಂದಿದ್ದರಿಂದ ಸರ್ಕಾರ ಈ ಕ್ರಮ ತೆಗೆದುಕೊಂಡಿತ್ತು. ಏಳು ವರ್ಷದಲ್ಲಿ ಮೊದಲ ಬಾರಿಗೆ ರಫ್ತನ್ನು ನಿಲ್ಲಿಸಲಾಗಿತ್ತು. 2023-24ರ ಸೀಸನ್​ನಲ್ಲೂ ಸರ್ಕಾರ ಈ ರಫ್ತು ನಿಷೇಧ ಕ್ರಮವನ್ನು ಮುಂದುವರಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್
ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್
ಸಚಿವೆ ವಿರುದ್ಧ ಕೆಟ್ಟ ಪದವನ್ನು ನಾನು ಬಳಸಿಲ್ಲ, ದಾಖಲೆ ನೋಡಿ: ಸಿಟಿ ರವಿ
ಸಚಿವೆ ವಿರುದ್ಧ ಕೆಟ್ಟ ಪದವನ್ನು ನಾನು ಬಳಸಿಲ್ಲ, ದಾಖಲೆ ನೋಡಿ: ಸಿಟಿ ರವಿ
ಬಿಜೆಪಿ ಮುಖಂಡ ಯಾರ ಒತ್ತಾಸೆ ಮೇರೆಗೆ ಸಂಪರ್ಕಿಸಿದರೋ ಗೊತ್ತಿಲ್ಲ: ಕೃಷ್ಣ
ಬಿಜೆಪಿ ಮುಖಂಡ ಯಾರ ಒತ್ತಾಸೆ ಮೇರೆಗೆ ಸಂಪರ್ಕಿಸಿದರೋ ಗೊತ್ತಿಲ್ಲ: ಕೃಷ್ಣ
ಮಲ್ಲಿಕಾರ್ಜುನ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ: ಬಸವರಾಜು
ಮಲ್ಲಿಕಾರ್ಜುನ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ: ಬಸವರಾಜು
ನಿವೃತ್ತಿ ಬೆನ್ನಲ್ಲೇ ಟೀಮ್ ಇಂಡಿಯಾ ತೊರೆದ ಅಶ್ವಿನ್​ಗೆ ಅದ್ಧೂರಿ ಸ್ವಾಗತ
ನಿವೃತ್ತಿ ಬೆನ್ನಲ್ಲೇ ಟೀಮ್ ಇಂಡಿಯಾ ತೊರೆದ ಅಶ್ವಿನ್​ಗೆ ಅದ್ಧೂರಿ ಸ್ವಾಗತ
ಸಿದ್ದರಾಮಯ್ಯ ಸಹ ಬಂಗಾರಪ್ಪ ಹಾಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ: ಮಧು
ಸಿದ್ದರಾಮಯ್ಯ ಸಹ ಬಂಗಾರಪ್ಪ ಹಾಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ: ಮಧು
ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ ಹೃದಯಾಘಾತದ ಅಪಾಯ ಹೆಚ್ಚು: ಡಾಕ್ಟರ್
ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ ಹೃದಯಾಘಾತದ ಅಪಾಯ ಹೆಚ್ಚು: ಡಾಕ್ಟರ್
ಬಿಜೆಪಿ ಸಂಸದ ಪ್ರತಾಪ್​ಗೆ ಗಾಯ, ರಾಹುಲ್​ ಗಾಂಧಿಯೇ ತಳ್ಳಿದ್ದು ಎಂದ ಸಾರಂಗಿ
ಬಿಜೆಪಿ ಸಂಸದ ಪ್ರತಾಪ್​ಗೆ ಗಾಯ, ರಾಹುಲ್​ ಗಾಂಧಿಯೇ ತಳ್ಳಿದ್ದು ಎಂದ ಸಾರಂಗಿ