Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆ ಉಳಿತಾಯ ಮೇ ಕೊನೆ ಹೊತ್ತಿಗೆ 1.05 ಲಕ್ಷ ಕೋಟಿ ರೂ.

ಸಣ್ಣ ಉಳಿತಾಯದ ಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ 2021ರ ಮೇ ತಿಂಗಳ ಕೊನೆ ಹೊತ್ತಿಗೆ ಉಳಿತಾಯದ ಮೊತ್ತ 1.05 ಲಕ್ಷ ಕೋಟಿ ರೂಪಾಯಿ ಆಗಿದೆ.

Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆ ಉಳಿತಾಯ ಮೇ ಕೊನೆ ಹೊತ್ತಿಗೆ 1.05 ಲಕ್ಷ ಕೋಟಿ ರೂ.
ಸುಕನ್ಯಾ ಸಮೃದ್ಧಿ ಯೋಜನೆ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Srinivas Mata

Updated on: Jul 02, 2021 | 10:00 PM

ರಾಷ್ಟ್ರೀಯ ಉಳಿತಾಯ ಸಂಸ್ಥೆಯ ಡೇಟಾ ಪ್ರಕಾರ, 2021ರ ಮೇ ತಿಂಗಳ ಕೊನೆ ಹೊತ್ತಿಗೆ ಸುಕನ್ಯಾ ಸಮೃದ್ಧಿ ಯೋಜನೆ (SSY) ಅಡಿಯಲ್ಲಿ 1.05 ಲಕ್ಷ ಕೋಟಿ ರೂಪಾಯಿಗಳನ್ನು ಜನರು ಉಳಿತಾಯ ಮಾಡಿದ್ದಾರೆ. ಸುಕನ್ಯಾ ಸಮೃದ್ಧಿ ಯೋಜನೆ ಎಂಬುದು ಬಹು ಜನಪ್ರಿಯ ಸಣ್ಣ ಉಳಿತಾಯ ಯೋಜನೆ. ಹೆಣ್ಣುಮಕ್ಕಳಿಗಾಗಿ ಇರುವಂಥದ್ದು. ಕಳೆದ ವರ್ಷದ ಮೇ ಕೊನೆ ಹೊತ್ತಿಗೆ 75,522 ಕೋಟಿ ರೂಪಾಯಿ ಇತ್ತು. ಕಳೆದ ಒಂದು ವರ್ಷದಲ್ಲಿ ಉಳಿತಾಯದ ಮೊತ್ತ ಶೇ 40ರಷ್ಟು ಹೆಚ್ಚಾಗಿದೆ. ಸುಕನ್ಯಾ ಸಮರದ್ಧಿ ಯೋಜನೆಗೆ ಹೆಚ್ಚಿನ ಬಡ್ಡಿ ದರ ನೀಡುವುದರಿಂದ ಇದರ ಬಗ್ಗೆ ಆಕರ್ಷಣೆ ಹೆಚ್ಚು. ಸಣ್ಣ ಉಳಿತಾಯ ಯೋಜನೆಗಳ ಪೈಕಿಯೇ ಅತಿ ಹೆಚ್ಚಿನ ಬಡ್ಡಿ ದರ, ಅಂದರೆ ವಾರ್ಷಿಕ ಶೇ 7.6ರಷ್ಟನ್ನು ಇದಕ್ಕೆ ನೀಡಲಾಗುತ್ತದೆ. 2015ರ ಜನವರಿಯಲ್ಲಿ ಈ ಯೋಜನೆ ಆರಂಭಿಸಲಾಯಿತು. ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನದ ಭಾಗವಾಗಿಯೇ ಈ ಯೋಜನೆ ಶುರುವಾಯಿತು. ತಮ್ಮ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವುದಕ್ಕೆ ಮತ್ತು ಉತ್ತಮ ರೀತಿಯಲ್ಲಿ ಬೆಳೆಸುವುದಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಯೋಜನೆ ತರಲಾಯಿತು.

ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಪೋಷಕರು ಅಥವಾ ಪಾಲಕರು ಹೆಣ್ಣುಮಕ್ಕಳ ಹೆಸರಲ್ಲಿ, ಅದರಲ್ಲೂ 0 ಮತ್ತು 10 ವರ್ಷ ಮಧ್ಯದ ಹೆಣ್ಣುಮಕ್ಕಳ ಹೆಸರಲ್ಲಿ ಖಾತೆಯನ್ನು ತೆರೆಯಬಹುದು. ಅಲ್ಲಿಂದ 15 ವರ್ಷಗಳ ಕಾಲ ತಿಂಗಳು ಅಥವಾ ವಾರ್ಷಿಕ ಆಧಾರದಲ್ಲಿ ಹಣವನ್ನು ಠೇವಣಿ ಮಾಡಬಹುದು. 15 ವರ್ಷದ ನಂತರ ಹೂಡಿಕೆ ಸಾಧ್ಯವಿಲ್ಲ. ಆದರೆ ಆ ಖಾತೆಯು ಮುಂದಿನ 7 ವರ್ಷಗಳ ಕಾಲ ಬಡ್ಡಿಯನ್ನು ಗಳಿಸುತ್ತದೆ ಮತ್ತು 21 ವರ್ಷದ ನಂತರ ಪಕ್ವ (ಮೆಚ್ಯೂರ್) ಆಗುತ್ತದೆ. ಆ ಹೆಣ್ಣುಮಗುವಿಗೆ 18 ವರ್ಷ ಪೂರ್ಣಗೊಂಡ ನಂತರವಷ್ಟೇ, ಕೆಲವು ನಿಬಂಧನೆಗಳೊಂದಿಗೆ ವಿಥ್​ಡ್ರಾ ಮಾಡುವುದಕ್ಕೆ ಸಾಧ್ಯ.

ಸುಕನ್ಯಾ ಸಮೃದ್ಧಿ ಖಾತೆ (ತಿದ್ದುಪಡಿ) ನಿಯಮ, 2018ರ ಪ್ರಕಾರ, ಎಸ್ಎಸ್​ವೈ ಖಾತೆಗೆ ಜಮೆ ಮಾಡಬಹುದಾದ ಕನಿಷ್ಠ ಮೊತ್ತವನ್ನು ರೂ. 1000ದಿಂದ ರೂ. 250ಕ್ಕೆ ಇಳಿಸಲಾಗಿದೆ. ಒಂದು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಎಸ್ಎಸ್​ವೈನಲ್ಲಿ ಮಾಡುವ ಠೇವಣಿಗೆ ಆದಾಯ ತೆರಿಗೆ ಕಾಯ್ದೆ 80C ಅಡಿಯಲ್ಲಿ 1.5 ಲಕ್ಷದ ತನಕ ಕಡಿತಕ್ಕೆ ಅವಕಾಶ ಇದೆ. ಈ ಖಾತೆ ಮೇಲೆ ಗಳಿಸುವ ಬಡ್ಡಿ ಹಾಗೂ ಮೆಚ್ಯೂರಿಟಿ ಆದ ನಂತರ ಬರುವ ಮೊತ್ತ ಎರಡೂ ತೆರಿಗೆಯಿಂದ ಮುಕ್ತವಾಗಿದೆ. ಮಗಳ ಉನ್ನತ ಶಿಕ್ಷಣ, ಮದುವೆ ಉದ್ದೇಶಗಳಿಗೆ ಹಣ ಉಳಿತಾಯ ಮಾಡುವುದಕ್ಕೆ ಬಯಸುವ ಗ್ರಾಹಕರಿಗೆ ಈ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ಸೂಕ್ತ ಆಗುತ್ತದೆ.

(Sukanya Samriddhi Yojana stood at Rs 1.05 lakh crore as on 2021 May)

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ