AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭರ್ಜರಿಯಾಗಿ ಬಡ್ಡಿದರ ಹೆಚ್ಚಿಸಿದ ಸೂರ್ಯೋದಯ್ ಬ್ಯಾಂಕ್; ಎಫ್​​ಡಿಗೆ ಶೇ. 9.10ರವರೆಗೂ ಬಡ್ಡಿ

Suryoday Small Finance Bank FD Rates: ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕು ಇದೀಗ ತನ್ನಲ್ಲಿನ ಠೇವಣಿಗಳಿಗೆ ಬಡ್ಡಿದರ ಪರಿಷ್ಕರಿಸಿದ್ದು 85 ಮೂಲಾಂಕಗಳಷ್ಟು ದರ ಏರಿಕೆ ಮಾಡಿದೆ. ಹಿರಿಯ ನಾಗರಿಕರಿಗೆ ಶೇ. 9.1ರವರೆಗೂ ಬಡ್ಡಿ ಆಫರ್ ಮಾಡಿದೆ.

ಭರ್ಜರಿಯಾಗಿ ಬಡ್ಡಿದರ ಹೆಚ್ಚಿಸಿದ ಸೂರ್ಯೋದಯ್ ಬ್ಯಾಂಕ್; ಎಫ್​​ಡಿಗೆ ಶೇ. 9.10ರವರೆಗೂ ಬಡ್ಡಿ
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 07, 2023 | 5:14 PM

Share

ಭಾರತದಲ್ಲಿ ಅತಿಹೆಚ್ಚು ಬಡ್ಡಿ ಕೊಡುವ ಬ್ಯಾಂಕಿಂಗ್ ಹಣಕಾಸು ಸಂಸ್ಥೆಗಳಲ್ಲಿ ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Suryoday Small Finance Bank) ಒಂದು. ಇದೀಗ ತನ್ನ ಬಡ್ಡಿದರಗಳನ್ನು ಪರಿಷ್ಕರಿಸಿರುವ ಸೂರ್ಯೋದಯ್ ಬ್ಯಾಂಕು, 85 ಮೂಲಾಂಕಗಳಷ್ಟು ದರ ಹೆಚ್ಚಿಸಿದೆ. ಅದರಂತೆ ಬ್ಯಾಂಕ್​ನಲ್ಲಿ ಇಡುವ ನಿಶ್ಚಿತ ಠೇವಣಿಗಳಿಗೆ ಶೇ. 8.60ರವರೆಗೂ ಬಡ್ಡಿ ಸಿಗಲಿದೆ. ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ, ಅಂದರೆ ಶೇ. 9.1ರವರೆಗೂ ಬಡ್ಡಿ ಸಿಗುತ್ತದೆ. ಸೋಮವಾರದಿಂದಲೇ ಸುರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಪರಿಷ್ಕೃತ ಬಡ್ಡಿದರ ಜಾರಿಗೆ ಬರಲಿದೆ. ಇದರ ಸೇವಿಂಗ್ಸ್ ಅಕೌಂಟ್​ಗೆ ಸಿಗುವ ಬಡ್ಡಿದರವೇ ಶೇ. 7ರಷ್ಟಿದೆ.

ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ 2 ಕೋಟಿ ರೂ ಒಳಗಿನ ನಿಶ್ಚಿತ ಠೇವಣಿಗಳಿಗೆ ಕೊಡಲಾಗುವ ಬಡ್ಡಿದರಗಳು

  • 7ದಿನದಿಂದ 14 ದಿನಗಳವರೆಗೆ: ಶೇ. 4 ಬಡ್ಡಿ
  • 15ದಿನಗಳಿಂದ 45 ದಿನ: ಶೇ. 4.25
  • 46ದಿನದಿಂದ 90 ದಿನ: ಶೇ. 4.50
  • 91 ದಿನದಿಂದ 6 ತಿಂಗಳು: ಶೇ. 5
  • 6 ತಿಂಗಳಿಂದ 9 ತಿಂಗಳು: ಶೇ. 5.50
  • 9 ತಿಂಗಳಿಂದ 1 ವರ್ಷ: ಶೇ. 6
  • 1 ವರ್ಷ: ಶೇ. 6.85
  • 1 ವರ್ಷದಿಂದ 15 ತಿಂಗಳು: ಶೇ. 8.25
  • 15 ತಿಂಗಳಿಂದ 2 ವರ್ಷ: ಶೇ. 8.50
  • 2 ವರ್ಷದಿಂದ 3 ವರ್ಷ: ಶೇ. 8.60
  • 3 ವರ್ಷದಿಂದ 5 ವರ್ಷ: ಶೇ. 6.75
  • 5 ವರ್ಷ: ಶೇ. 8.25
  • 5 ವರ್ಷದಿಂದ 10 ವರ್ಷ: ಶೇ. 7.25

ಇದನ್ನೂ ಓದಿ: ಫೋನ್ ಪೇ, ಗೂಗಲ್ ಪೇಯನ್ನು ಬೈಪಾಸ್ ಮಾಡುವ ಹೊಸ ಯುಪಿಐ ಪ್ಲಗಿನ್; ಆನ್​ಲೈನ್ ವರ್ತಕರಿಗೊಂದು ಹೊಸ ಸೌಲಭ್ಯ

ಈ ಮೇಲಿನ ದರಗಳು ಬ್ಯಾಂಕ್​ನ ಸಾಮಾನ್ಯ ಗ್ರಾಹಕರಿಗೆ ಅನ್ವಯ ಆಗುತ್ತವೆ. ಹಿರಿಯ ನಾಗರಿಕರಿಗೆ ಅರ್ಧ ಪ್ರತಿಶತದಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. 15 ತಿಂಗಳಿಂದ 3 ವರ್ಷದ ವಿವಿಧ ಅವಧಿಗೆ ಶೇ. 8.5ಕ್ಕಿಂತಲೂ ಹೆಚ್ಚು ಬಡ್ಡಿ ಸಿಗುತ್ತದೆ.

ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ಆರ್​ಡಿ ದರಗಳೂ ಆಕರ್ಷಕವಾಗಿವೆ. 30ರಿಂದ 36 ತಿಂಗಳವರೆಗಿನ ಆರ್​ಡಿ ಹಣಕ್ಕೆ ವಾರ್ಷಿಕ ಶೇ. 8.60ರಷ್ಟು ಬಡ್ಡಿ ಸಿಗುತ್ತದೆ. ಹಾಗೆಯೇ, 18 ತಿಂಗಳಿದ 24 ತಿಂಗಳವರೆಗಿನ ಆರ್​ಡಿಗೆ ಶೇ. 8.50ರಷ್ಟು ಬಡ್ಡಿ ಕೊಡಲಾಗುತ್ತದೆ. ಇಲ್ಲಿಯೂ ಹಿರಿಯ ನಾಗರಿಕರಿಗೆ 50 ಬೇಸಿಸ್ ಪಾಯಿಂಟ್​ಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.

ಮಹಾರಾಷ್ಟ್ರ ಮೂಲದ ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಕರ್ನಾಟಕವೂ ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಬೆಂಗಳೂರು ಹಾಗೂ ಕರ್ನಾಟಕದ ಹಲವೆಡೆ ಇದರ ಕಚೇರಿಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ