ಪಾಕಿಸ್ತಾನದಲ್ಲಿ ಆಲ್ಟೋ ಕಾರಿನ ಬೆಲೆಗೆ ಭಾರತದಲ್ಲಿ ದೊಡ್ಡ ಕಾರು ಲಭ್ಯ; ಎರಡು ದೇಶಗಳಲ್ಲಿ ಈ ಕಾರಿನಲ್ಲಿ ವ್ಯತ್ಯಾಸಗಳೇನು?

Comparison of Suzuki Alto cars in India and Pakistan: ಜಪಾನ್ ಮೂಲದ ಸುಜುಕಿ ಕಾರ್ಪೊರೇಶನ್ ಸಂಸ್ಥೆ ತಯಾರಿಸುವ ಆಲ್ಟೋ ಕಾರು ಭಾರತ ಮತ್ತು ಪಾಕಿಸ್ತಾನದಲ್ಲಿ ಲಭ್ಯ ಇದೆ. ಆದರೆ, ಈ ಕಾರಿನ ಬೆಲೆ ಎರಡೂ ದೇಶಗಳಲ್ಲಿ ವ್ಯತ್ಯಾಸ ಇದೆ. ಗುಣಮಟ್ಟ, ಸುರಕ್ಷತಾ ಆಯ್ಕೆಯಲ್ಲೂ ವ್ಯತ್ಯಾಸ ಇದೆ. ಪಾಕಿಸ್ತಾನದಲ್ಲಿ ಆಲ್ಟೋ ಕಾರಿಗೆ ಇರುವ ಬೆಲೆಗೆ ಭಾರತದಲ್ಲಿ ಸುಜುಕಿ ಸ್ವಿಫ್ಟ್ ಕಾರು ಸಿಗಬಹುದು.

ಪಾಕಿಸ್ತಾನದಲ್ಲಿ ಆಲ್ಟೋ ಕಾರಿನ ಬೆಲೆಗೆ ಭಾರತದಲ್ಲಿ ದೊಡ್ಡ ಕಾರು ಲಭ್ಯ; ಎರಡು ದೇಶಗಳಲ್ಲಿ ಈ ಕಾರಿನಲ್ಲಿ ವ್ಯತ್ಯಾಸಗಳೇನು?
ಸುಜುಕಿ ಆಲ್ಟೋ

Updated on: Apr 30, 2025 | 1:40 PM

ಭಾರತೀಯ ವಾಹನ ಮಾರುಕಟ್ಟೆಯಲ್ಲಿ (Automobile market) ಗ್ರಾಹಕರ ಬಜೆಟ್ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಎಲ್ಲಾ ಶ್ರೇಣಿಯಲ್ಲೂ ಹಲವು ಕಾರುಗಳ ಆಯ್ಕೆ ಇದೆ. ಭಾರತದಲ್ಲಿ ಅತ್ಯಂತ ಬಜೆಟ್ ಸ್ನೇಹಿ ಕಾರು (budget friendly car) ಎಂದರೆ ಮೊದಲು ಬರುವ ಹೆಸರು ಮಾರುತಿ ಸುಜುಕಿ ಆಲ್ಟೋ. ಪಾಕಿಸ್ತಾನದಲ್ಲೂ ಸುಜುಕಿ ಆಲ್ಟೋ (Suzuki Alto) ಕಾರು ಜನಪ್ರಿಯವಾಗಿದೆ. ಆದರೆ, ಇವೆರಡು ದೇಶಗಳಲ್ಲಿರುವ ಒಂದೇ ಮಾಡಲ್ ಕಾರಿನ ಬೆಲೆ ಮತ್ತು ಗುಣಮಟ್ಟದಲ್ಲಿ ವ್ಯತ್ಯಾಸ ಇದೆ. ಪಾಕಿಸ್ತಾನೀಯರು ಆಲ್ಟೋ ಕಾರಿಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಈ ಬಗ್ಗೆ ಈ ಲೇಖನದಲ್ಲಿ ಒಂದಷ್ಟು ಮಾಹಿತಿ ಇದೆ.

ಭಾರತದಲ್ಲಿ ಆಲ್ಟೊ ಕೆ10 ಬೆಲೆ ಎಷ್ಟು?

ಮಾರುತಿ ಸುಜುಕಿ ಆಲ್ಟೊ ಕೆ10 ಹ್ಯಾಚ್​​ಬ್ಯಾಕ್ ಕಾರು. ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುವ ಕಾರುಗಳ ಪೈಕಿ ಇದೂ ಇದೆ. ಮೂಲ ಆಲ್ಟೋ ಕಾರಿನ ಸುಧಾರಿತ ರೂಪ ಇದು. ಈ ಕಾರಿನ ಬೇಸ್ ವೇರಿಯೆಂಟ್ ಬೆಲೆ 4 ಲಕ್ಷ 23 ಸಾವಿರ ರೂ. (ಎಕ್ಸ್ ಶೋ ರೂಂ) ಇದೆ. ಇದರ ಟಾಪ್ ರೇಂಜ್ ಕಾರಿನ ಬೆಲೆ 6 ಲಕ್ಷ 20 ಸಾವಿರ 500 ರೂ. (ಎಕ್ಸ್ ಶೋ ರೂಂ) ಆಗುತ್ತದೆ. ಅಂದರೆ, ಈ ಮಾಡಲ್ ಕಾರಿನ ಬೆಲೆ ಭಾರತದಲ್ಲಿ 4.23 ಲಕ್ಷ ರೂನಿಂದ ಆರಂಭವಾಗಿ 6.20 ಲಕ್ಷ ರೂವರೆಗೆ ಇದೆ.

ಇದನ್ನೂ ಓದಿ: ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ 5 ವರ್ಷದಲ್ಲಿ 8 ಲಕ್ಷ ಕೋಟಿ ರೂ ಹೂಡಿಕೆ: ಪ್ರಹ್ಲಾದ್ ಜೋಷಿ

ಇದನ್ನೂ ಓದಿ
ಟರ್ಕಿಯಿಂದ ಪಾಕ್​ಗೆ ಬೆಂಬಲ; ಇಸ್ಲಾಮಾಬಾದ್​ನಲ್ಲಿ ಟರ್ಕಿಶ್ ಯುದ್ಧ ವಿಮಾನ
ಭಾರತದಲ್ಲಿ ಶೊಯೆಬ್ ಅಖ್ತರ್ ಯೂಟ್ಯೂಬ್ ಚಾನೆಲ್ ಬ್ಯಾನ್
ಭಾರತ-ಪಾಕಿಸ್ತಾನದ ಮಿಲಿಟರಿ ಬಲ ಹೇಗಿದೆ?
ಪಹಲ್​​ಗಾಂ ಘಟನೆಯಿಂದ ಪಾಕ್ ಆರ್ಥಿಕತೆಗೆ ಎಷ್ಟು ಹಾನಿ?

ಪಾಕಿಸ್ತಾನದಲ್ಲಿ ಸುಜುಕಿ ಆಲ್ಟೋ ಬೆಲೆ ಎಷ್ಟು?

ಸುಜುಕಿ ಪಾಕಿಸ್ತಾನದ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ಕಾರಿನ ಆರಂಭಿಕ ಬೆಲೆ PKR 27,07,000 (ಭಾರತೀಯ ರುಪಾಯಿಯಲ್ಲಿ ಸುಮಾರು 8.20 ಲಕ್ಷ ರೂ). ಅದೇ ಸಮಯದಲ್ಲಿ, ಈ ಮಾಡಲ್​​ನಲ ಹೈಯರ್ ಎಂಡ್ ಕಾರಿನ ಬೆಲೆ PKR 31,40,000 ಇದೆ. ಭಾರತೀಯ ಕರೆನ್ಸಿಯಲ್ಲಿ 9.51 ಲಕ್ಷ ರೂ. ಅಂದರೆ, ಪಾಕಿಸ್ತಾನದಲ್ಲಿ ಈ ಕಾರಿನ ಬೆಲೆ 8.20 ಲಕ್ಷ ರೂನಿಂದ ಆರಂಭವಾಗಿ 9.51 ಲಕ್ಷ ರೂವರೆಗೆ ಇದೆ. ಭಾರತದ ಆಲ್ಟೋ ಕೆ10ಗೆ ಹೋಲಿಸಿದರೆ ಪಾಕಿಸ್ತಾನದಲ್ಲಿ ಇದರ ಬೆಲೆ ಮೂರ್ನಾಲ್ಕು ಲಕ್ಷ ರೂ ಹೆಚ್ಚೇ ಆಗುತ್ತದೆ. ಆ ಹಣಕ್ಕೆ ಭಾರತದಲ್ಲಿ ಸುಜುಕಿ ಸ್ವಿಫ್ಟ್ ಕಾರು ಖರೀದಿಸಲು ಸಾಧ್ಯ.

ಸುಜುಕಿ ಆಲ್ಟೋದ ಸೇಫ್ಟಿ ಫೀಚರ್​​ಗಳು

ಭಾರತ ಮತ್ತು ಪಾಕಿಸ್ತಾನದಲ್ಲಿ ಮಾರಾಟವಾಗುವ ಆಲ್ಟೊ ಕಾರುಗಳಲ್ಲಿನ ಸೇಫ್ಟಿ ಫೀಚರ್​​ಗಳಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಸುರಕ್ಷತೆಗಾಗಿ, ಪಾಕಿಸ್ತಾನಿ ಆಲ್ಟೊ ಕಾರಿನಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಬ್ರೇಕಿಂಗ್ ಡಿಸ್ಟ್ರಿಬ್ಯೂಶನ್ (ಇಬಿಡಿ) ಇರುವ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಮಕ್ಕಳ ಆಸನಗಳಿಗೆ ISOFIX ಸಪೋರ್ಟ್ ಇರುತ್ತದೆ.

ಇತ್ತ, ಭಾರತದ ಮಾರುತಿ ಸುಜುಕಿ ಆಲ್ಟೋದಲ್ಲಿ ಇನ್ನೂ ಉತ್ತಮ ಸೇಫ್ಟಿ ಫೀಚರ್ಸ್ ಇವೆ. ಸುರಕ್ಷತೆಗಾಗಿ 2 ಅಲ್ಲ, 6 ಏರ್‌ಬ್ಯಾಗ್‌ಗಳಿವೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, EBD ಯೊಂದಿಗೆ ABS ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಇತ್ಯಾದಿ ಫೀಚರ್ಸ್ ಇವೆ.

ಇದನ್ನೂ ಓದಿ: ಐಪಿಎಲ್​​​ಗೆ ಟ್ಯಾಕ್ಸ್ ಹಾಕಿದ್ರೆ 10 ಹೊಸ ಐಐಟಿ: ಹೀಗೊಂದು ಸಲಹೆ ನೀಡಿದ ಬೆಂಗಳೂರಿನ ಪ್ರೊಫೆಸರ್

ಭಾರತ ಪಾಕಿಸ್ತಾನದ ಆಲ್ಟೋ ಇತಿಹಾಸ…

ಜಪಾನ್ ಮೂಲದ ಸುಜುಕಿ ಕಂಪನಿಯ ಜನಪ್ರಿಯ ಬ್​ರ್ಯಾಂಡ್ ಕಾರುಗಳಲ್ಲಿ ಆಲ್ಟೋ ಒಂದು. 1979ರಲ್ಲಿ ಆಲ್ಟೋ ಕಾರು ಮೊದಲು ಬಂದಿತು. 1984ರಲ್ಲಿ ಪಾಕಿಸ್ತಾನದಲ್ಲಿ ಸುಜುಕಿ ಆಲ್ಟೋ ಕಾರು ಮೊದಲ ಪರಿಚಯವಾಯಿತು. ಆಗ ಕಾರಿನ ಹೆಸರು ಆಲ್ಟೋ ಎಂದಿರಲಿಲ್ಲ, ಎಫ್​​ಎಕ್ಸ್ ಹೆಸರಿತ್ತು.

ಭಾರತದಲ್ಲಿ 1983ರಲ್ಲಿ ಮಾರುತಿ 800 ಹೆಸರಿನಲ್ಲಿ ಆಲ್ಟೋ ಕಾರು ಪರಿಚಯವಾಯಿತು. ಭಾರತ ಸರ್ಕಾರ ಮತ್ತು ಸುಜುಕಿ ಕಾರ್ಪೊರೇಶನ್ ಜಂಟಿಯಾಗಿ ಸ್ಥಾಪಿಸಿದ ಮಾರುತಿ ಉದ್ಯೋಗ್ ಲಿ ಸಂಸ್ಥೆಯು ಮಾರುತಿ 800 ಮತ್ತು ಮಾರುತಿ 1000 ಕಾರುಗಳನ್ನು ತಯಾರಿಸುತ್ತಿತ್ತು. ಮಾರುತಿ 800 ಬಹಳ ಜನಪ್ರಿಯವಾಯಿತು. 2000ದ ಬಳಿಕ ಮಾರುತಿ 800 ಕಾರಿಗೆ ಆಲ್ಟೋ ಹೆಸರಾಯಿತು. ನಂತರ ಆಲ್ಟೋ ಕೆ10 ಕಾರು ಬಂದಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:04 pm, Wed, 30 April 25