ಭಾರತದಲ್ಲಿ ಶೊಯೆಬ್ ಅಖ್ತರ್ ಯೂಟ್ಯೂಬ್ ಚಾನೆಲ್ ಬ್ಯಾನ್
Pahalgam Attack: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನಲ್ಲಿರುವ ಪಹಲ್ಗಾಮ್‌ನಲ್ಲಿ ಪಾಕ್ ಬೆಂಬಲಿತ ಉಗ್ರರು ದಾಳಿ ನಡೆಸಿ 26 ಮಂದಿ ಭಾರತೀಯ ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಈ ದುಷ್ಕೃತ್ಯ ವಿರುದ್ಧ ಸಮರ ಸಾರಿರುವ ಭಾರತವು ಇದೀಗ ಪಾಕಿಸ್ತಾನ್ ಯೂಟ್ಯೂಬರ್ಸ್ಗೆ ಡಿಜಿಟಲ್ ಬ್ಯಾನ್ ಹೇರಿದೆ.

ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಶೊಯೆಬ್ ಅಖ್ತರ್ (Shoaib Akhtar) ಅವರ ಯೂಟ್ಯೂಬ್ ಚಾನೆಲ್ ಅನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ (Terror Attack) ಹಿನ್ನಲೆ ಭಾರತ ಸರ್ಕಾರವು ಡಿಜಿಟಲ್ ವಾರ್ಗೆ ಮುಂದಾಗಿದ್ದು, ಅದರ ಮೊದಲ ಹೆಜ್ಜೆಯಾಗಿ ಇದೀಗ ಶೊಯೆಬ್ ಅಖ್ತರ್ ಸೇರಿದಂತೆ ಹಲವಾರು ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ದೇಶದಲ್ಲಿ ನಿಷೇಧಿಸಿದೆ. ಪಾಕ್ ತಂಡದ ಮಾಜಿ ವೇಗಿ @ShoaibAkhtar100mph ಹೆಸರಿನಲ್ಲಿರುವ ಯೂಟ್ಯೂಬ್ ಚಾನೆಲ್ ಹೊಂದಿದ್ದರು.
3.81 ಮಿಲಿಯನ್ ಸಬ್ಸ್ಕ್ರೈಬರ್ಸ್ ಹೊಂದಿದ್ದ ಈ ಚಾನೆಲ್ನಲ್ಲಿ ಅಖ್ತರ್ ಕ್ರಿಕೆಟ್ ಪಂದ್ಯಗಳ ವಿಶ್ಲೇಷಣೆ ಮಾಡುತ್ತಿದ್ದರು. ಆದರೀಗ ಪಾಕಿಸ್ತಾನ್ ವಿರುದ್ಧ ಡಿಜಿಟಲ್ ದಿಗ್ಬಂಧನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರವು ಡಾನ್ ನ್ಯೂಸ್, ಎಆರ್‌ವೈ ನ್ಯೂಸ್, ಸಮಾ ಟಿವಿ ಮತ್ತು ಜಿಯೋ ನ್ಯೂಸ್ ಸೇರಿದಂತೆ ಹಲವು ಪ್ರಮುಖ ಸುದ್ದಿ ವಾಹಿನಿಗಳ ಆನ್‌ಲೈನ್ ಸ್ಟ್ರೀಮಿಂಗ್ ಅನ್ನು ಭಾರತದಲ್ಲಿ ನಿಷೇಧಿಸಿದೆ. ಇದರ ಜೊತೆ ಶೊಯೆಬ್ ಅಖ್ತರ್ ಅವರ ಯೂಟ್ಯೂಬ್ ಚಾನೆಲ್ ಅನ್ನು ಸಹ ಬ್ಯಾನ್ ಮಾಡಲಾಗಿದೆ.
ಈ ನಿಷೇಧದ ಹೊರತಾಗಿಯೂ ಶೊಯೆಬ್ ಅಖ್ತರ್ ಅವರು ಈ ಹಿಂದೆ ಅಪ್ಲೋಡ್ ಮಾಡಲಾದ ವಿಡಿಯೋಗಳು ಯೂಟ್ಯೂಬ್ನಲ್ಲಿ ಕಾಣ ಸಿಗುತ್ತದೆ. ಆದರೆ ಹೊಸ ವಿಡಿಯೋಗಳು ಹಾಗೂ ಚಾನೆಲ್ ಹೆಸರು ಇನ್ಮುಂದೆ ಭಾರತದಲ್ಲಿ ಕಾಣಿಸಿಕೊಳ್ಳುವುದಿಲ್ಲ.
ನಿಷೇಧಕ್ಕೆ ಕಾರಣವೇನು?
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳು ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದರು. ಅದರಲ್ಲೂ ಪ್ರಮುಖ ಯೂಟ್ಯೂಬರ್ಸ್ ಹಾಗೂ ಟಿವಿ ಚಾನೆಲ್ಗಳು ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ್ದವು. ಹಾಗೆಯೇ ಕೆಲವರು ಮೃತರು ಹಾಗೂ ಭಾರತೀಯ ಸೈನಿಕರನ್ನು ಅಪಹಾಸ್ಯ ಮಾಡಿ ಸುದ್ದಿಗಳನ್ನು ಪ್ರಸಾರ ಮಾಡಿದ್ದರು.
ಇದನ್ನೂ ಓದಿ: IPL 2025: ಐಪಿಎಲ್ನಲ್ಲಿ ಹೊಸ ಇತಿಹಾಸ ರಚಿಸಿದ ಮುಂಬೈ ಇಂಡಿಯನ್ಸ್
ಇದನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವಾಲಯವು ಗೂಗಲ್ಗೆ ಪತ್ರ ಬರೆದು, ಪಾಕಿಸ್ತಾನದ ಪ್ರಮುಖ ಯೂಟ್ಯೂಬ್ ಚಾನೆಲ್‌ಗಳನ್ನು ಭಾರತದಲ್ಲಿ ಬ್ಯಾನ್ ಮಾಡುವಂತೆ ಕೋರಿತ್ತು. ಅದರಂತೆ ಇದೀಗ 35 ಕ್ಕೂ ಹೆಚ್ಚಿನ ಪ್ರಮುಖ ಯುಟ್ಯೂಬ್ ಚಾನೆಲ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಹೀಗೆ ನಿಷೇಧಕ್ಕೊಳಗಾಗಿರುವ ಪಾಕ್ನ ಯೂಟ್ಯೂಬ್ ಚಾನೆಲ್ಗಳ ಪಟ್ಟಿ ಈ ಕೆಳಗಿನಂತಿದೆ…
- ಶೊಯೆಬ್ ಅಖ್ತರ್ (@ShoaibAkhtar100mph)
- ಸವೇರಾ ಪಾಷಾ (@ಸವೇರಾಪಾಷಾ1)
- CBA – ಅರ್ಸಲನ್ ನಾಸೀರ್ (@arsalancba)
- ರಿಜ್ವಾನ್ ಹೈದರ್ (@RizwanHaider1)
- ವಾಸಯ್ ಹಬೀಬ್ (@ವಾಸಯ್ ಹಬೀಬ್)
- ತನ್ವೀರ್ ಹೇಳುತ್ತಾರೆ (@TanveerSays)
- ಆಪ್ ಕಾ ಮೊಹ್ಸಿನ್ ಅಲಿ (@AapkaMohsinAli)
- ಬಾಸಿತ್ ಅಲಿ (@BasitAliShow)
- ಮುಹಮ್ಮದ್ ಫುರ್ಕಾನ್ ಭಟ್ಟಿ (@Furqan.Bhatti)
- ಬಿಬಿಎನ್ ಸ್ಪೋರ್ಟ್ಸ್ (@BBNSPORT)
- ಸನಾ ಅಮ್ಜದ್ (@SanaAmjad)
- ಅರ್ಜೂ ಕಾಝ್ಮಿ (@ArzuKazmi)
- ಕಾಟ್ ಬಿಹೈಂಡ್ (@CaughtBehindShow)
- DRM ಸ್ಪೋರ್ಟ್ಸ್ ಸೆಂಟ್ರಲ್ (@SportsCentralOfficial)
- ಎ ಸ್ಪೋರ್ಟ್ಸ್ (@ASportspk)
- ಹಸ್ನಾ ಮನಾ ಹೈ (@GeoHasnaManaHa)
- ಹೌ ಡಸ್ ಇಟ್ ವರ್ಕ್ಸ್ ಪಾಡ್‌ಕ್ಯಾಸ್ಟ್ (@hdiwpodcast)
- ARY ನ್ಯೂಸ್ (@ArynewsTvofficial)
- ಡಾನ್ ನ್ಯೂಸ್ (@dawnnewspakistan)
- BOL ಸುದ್ದಿ (@BOLNewsofficial)
- ಸಮಾ ಟಿವಿ (@Samaatv)
- ಸಮಾ ಸ್ಪೋರ್ಟ್ಸ್ (@SamaaSports)
- ಜಿಯೋ ನ್ಯೂಸ್ (@geonews)
- ಜಿಯೋ ಸೂಪರ್ (@ಜಿಯೋಸೂಪರ್)
- ಸೈಯದ್ ಮುಜಮ್ಮಿಲ್ (@syedmuzammilofficial7067)
- ಮುಜಮ್ಮಿಲ್ ಸ್ಪೀಕ್ಸ್ (@muzammilspeaks)
- ಪಾಕಿಸ್ತಾನ್ ರೆಫರೆನ್ಸ್ (@ThePakistanExperience)
- ರಾಫ್ತಾರ್ ಸ್ಪೋರ್ಟ್ಸ್ (@raftarsports)
- ಉಝೈರ್ ಕ್ರಿಕೆಟ್ (@UzairCricket786)
- ರಫ್ತಾರ್ (@raftartv)
- ರಫ್ತಾರ್ ನೌ (@ರಫ್ತಾರ್ ನೌ)
- ಜಿಎನ್ಎನ್ (@gnnhdofficial)
- ಉಮರ್ ಚೀಮಾ ಎಕ್ಸ್‌ಕ್ಲೂಸಿವ್ (@UmarCheemaExclusive)
- ಅಸ್ಮಾ ಶಿರಾಜಿ (@AsmaShiraziofficial)
- ಮುನೀಬ್ ಫಾರೂಕ್ (@muneebfarooqofficial)
- ಸುನೋ ನ್ಯೂಸ್ ಎಚ್‌ಡಿ (@SUNONewsHD)
- ರಾಝಿ ನಾಮಾ (@razinaama)




