ಹೂಡಿಕೆದಾರರಿಗೆ ಲಾಭ ತಂದು ಮಲ್ಟಿಬ್ಯಾಗರ್ ಎನಿಸಿರುವ ಐದು ಪ್ರಮುಖ ಷೇರುಗಳಿವು
5 Multibagger stocks in Nifty50 index: ಲಾರ್ಜ್ ಕ್ಯಾಪ್ ಎನಿಸಿರುವ ಐದು ಪ್ರಮುಖ ಕಂಪನಿಗಳ ಷೇರುಗಳು ಕಳೆದ ಒಂದು ವರ್ಷದಲ್ಲಿ ಭರ್ಜರಿ ಏರಿಕೆ ಕಂಡಿವೆ. ಟಾಟಾ ಮೋಟಾರ್ಸ್, ಬಜಾಜ್ ಆಟೊ, ಅದಾನಿ ಪೋರ್ಟ್ಸ್, ಕೋಲ್ ಇಂಡಿಯಾ ಮತ್ತು ಎನ್ಟಿಪಿಸಿ ಷೇರುಗಳು ಬೆಲೆ ಒಂದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಿದೆ. ನಿಫ್ಟಿ50 ಸೂಚ್ಯಂಕದಲ್ಲಿ ಈ ಐದು ಷೇರುಗಳಿವೆ. ಇದೇ ಇಂಡೆಕ್ಸ್ನಲ್ಲಿರುವ ಇತರ 45 ಷೇರುಗಳಿಗಿಂತ ಈ ಐದು ಷೇರುಗಳು ಹೂಡಿಕೆದಾರರಿಗೆ ಹೆಚ್ಚು ಲಾಭ ತಂದಿವೆ.
ನವದೆಹಲಿ, ಏಪ್ರಿಲ್ 14: ಷೇರು ಮಾರುಕಟ್ಟೆಯಲ್ಲಿ ಲಾರ್ಜ್ ಕ್ಯಾಪ್ ಷೇರುಗಳಲ್ಲಿನ ಹೂಡಿಕೆಯನ್ನು ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಹೆಚ್ಚು ರಿಸ್ಕ್ ಹಾಗೂ ಹೆಚ್ಚು ಲಾಭದ ಸಾಧ್ಯತೆ ಇರುವುದು ಮಿಡ್ಕ್ಯಾಪ್ ಅಥವಾ ಸ್ಮಾಲ್ಕ್ಯಾಪ್ ಷೇರುಗಳಲ್ಲಿ ಎಂದು ಹೇಳಲಾಗುತ್ತದೆ. ಲಾರ್ಜ್ ಕ್ಯಾಪ್ ಷೇರುಗಳೂ ಕೂಡ ಹೆಚ್ಚು ಲಾಭ ತರುವ ಮಲ್ಟಿಬ್ಯಾಗರ್ (Multi Bagger stocks) ಎನಿಸಿರುವುದೂ ಉಂಟು. ಇಲ್ಲಿ ಲಾರ್ಜ್ ಕ್ಯಾಪ್ ಎಂದರೆ 10 ಬಿಲಿಯನ್ ಡಾಲರ್ಗೂ ಹೆಚ್ಚು ಮಾರುಕಟ್ಟೆ ಬಂಡವಾಳ (Market Cap) ಇರುವ ಕಂಪನಿ. ಇಂಥ ಸುಮಾರು ನೂರು ಷೇರುಗಳು ಭಾರತೀಯ ಷೇರು ಮಾರುಕಟ್ಟೆಯಲ್ಲಿವೆ. ಬಿಎಸ್ಇ ಸೆನ್ಸೆಕ್ಸ್30 ಮತ್ತು ಎನ್ಎಸ್ಇ ನಿಫ್ಟಿ50 ಸೂಚ್ಯಂಕ ಲಾರ್ಜ್ ಕ್ಯಾಷ್ ಷೇರುಗಳಿಗೆ ಪ್ರಧಾನ ಸೂಚ್ಯಂಕಗಳಾಗಿವೆ.
ನಿಫ್ಟಿ50 ಸೂಚ್ಯಂಕದಲ್ಲಿ ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಇರುವ ಅಗ್ರ 50 ಕಂಪನಿಗಳ ಷೇರುಗಳು ಲಿಸ್ಟ್ ಆಗಿವೆ. ಈ ಪೈಕಿ ಕಳೆದ ಒಂದು ವರ್ಷದಲ್ಲಿ ಐದು ಷೇರುಗಳು ಹೂಡಿಕೆದಾರರಿಗೆ ಭರ್ಜರಿ ಲಾಭ ತಂದಿರುವ ಮಲ್ಟಿಬ್ಯಾಗರ್ ಎನಿಸಿವೆ.
ಇದನ್ನೂ ಓದಿ: ಜನರು ಹೆಲ್ತ್ ಇನ್ಷೂರೆನ್ಸ್ ತಿರಸ್ಕರಿಸಲು ಏನು ಕಾರಣ? ಪಾಲಿಸಿ ಮಾಡಿಸಲು ಏನು ಕಾರಣ? ಇಲ್ಲಿದೆ ಇಂಟರೆಸ್ಟಿಂಗ್ ಸೈಕಾಲಜಿ
ಒಂದು ವರ್ಷದಲ್ಲಿ ಮಲ್ಟಿಬ್ಯಾಗರ್ ಎನಿಸಿರುವ ಐದು ನಿಫ್ಟಿ50 ಷೇರುಗಳು
- ಟಾಟಾ ಮೋಟಾರ್ಸ್: ಶೇ. 119 ಹೆಚ್ಚಳ
- ಬಜಾಜ್ ಆಟೊ: ಶೇ. 115 ಹೆಚ್ಚಳ
- ಅದಾನಿ ಪೋರ್ಟ್ಸ್: ಶೇ. 106 ಹೆಚ್ಚಳ
- ಕೋಲ್ ಇಂಡಿಯಾ: ಶೇ. 105 ಹೆಚ್ಚಳ
- ಎನ್ಟಿಪಿಸಿ: ಶೇ. 105 ಹೆಚ್ಚಳ
ಇದರಲ್ಲಿ ವಾಹನ ಸಂಸ್ಥೆಗಳಾದ ಟಾಟಾ ಮೋಟಾರ್ಸ್ ಮತ್ತು ಬಜಾಜ್ ಆಟೊ ಷೇರುಗಳ ಬೆಲೆ ಅತಿಹೆಚ್ಚು ಬೆಳೆದಿವೆ. ನಿಫ್ಟಿ50 ಸೂಚ್ಯಂಕದಲ್ಲಿರುವ ಇತರ 45 ಕಂಪನಿಗಳಿಗಿಂತ ಈ ಐದು ಕಂಪನಿಗಳ ಷೇರುಬೆಲೆ ಗಣನೀಯವಾಗಿ ಹೆಚ್ಚಾಗಿದೆ.
ಇದನ್ನೂ ಓದಿ: ಭಾರ್ತಿ ಹೆಕ್ಸಾಕಾಮ್ ಭರ್ಜರಿ ಬೆಲೆಗೆ ಷೇರು ಮಾರುಕಟ್ಟೆಗೆ ಸೇರ್ಪಡೆ; ಐಪಿಒ ಬೆಲೆ 570 ರೂ, ಲಿಸ್ಟಿಂಗ್ ಬೆಲೆ 755 ರೂ
ಟಾಟಾ ಮೋಟಾರ್ಸ್ ಸಂಸ್ಥೆಯ ಷೇರುಬೆಲೆ ಒಂದು ವರ್ಷದ ಹಿಂದೆ 458 ರೂ ಇತ್ತು. ಶುಕ್ರವಾರದ ವಾರಾಂತ್ಯದಲ್ಲಿ ಅದರ ಬೆಲೆ 1,019 ರೂ ತಲುಪಿದೆ. ಕಳೆದ ಐದು ವರ್ಷದಲ್ಲಿ ಅದರ ಷೇರುಬೆಲೆ ಶೇ. 371ರಷ್ಟು ಹೆಚ್ಚಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ