Tax Exemption: ತೆರಿಗೆ ವಿನಾಯಿತಿ ಮಿತಿ 7 ಲಕ್ಷ ರೂ.ಗೆ ವಿಸ್ತರಣೆಯಿಂದ ಎಷ್ಟು ಮಂದಿಗೆ ಪ್ರಯೋಜನ? ಇಲ್ಲಿದೆ ಮಾಹಿತಿ

ಆದಾಗ್ಯೂ 7 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ಎಷ್ಟು ಮಂದಿ ಇದ್ದಾರೆ ಎಂಬ ಸಂಖ್ಯೆಗಳನ್ನು ಸರ್ಕಾರ ಬಹಿರಂಗಪಡಿಸಿಲ್ಲ. 7 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಅಂದಾಜು ಸುಮಾರು 4 ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Tax Exemption: ತೆರಿಗೆ ವಿನಾಯಿತಿ ಮಿತಿ 7 ಲಕ್ಷ ರೂ.ಗೆ ವಿಸ್ತರಣೆಯಿಂದ ಎಷ್ಟು ಮಂದಿಗೆ ಪ್ರಯೋಜನ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Feb 14, 2023 | 12:22 PM

ಹೊಸ ತೆರಿಗೆ ಪದ್ಧತಿಯಡಿ (New Tax Regime) 7 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ (Tax Exemption) ಪಡೆಯಲು ಅವಕಾಶ ನೀಡಲಾಗಿದ್ದು, ಹಳೆ ತೆರಿಗೆ ಪದ್ಧತಿಯಡಿಯಲ್ಲಿಯೂ 3 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಪಾವತಿಸಬೇಕಾಗುವುದಿಲ್ಲ. ಹೊಸ ತೆರಿಗೆ ಪದ್ಧತಿಯಲ್ಲಿ 50,000 ರೂ. ಸ್ಟಾಂಡರ್ಡ್ ಡಿಡಕ್ಷನ್ (Standard Deduction) ಘೋಷಿಸಲಾಗಿದ್ದು, ವೇತನದಾರ ವರ್ಗಕ್ಕೆ ಮತ್ತು ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. 7.5 ಲಕ್ಷ ರೂ.ವರೆಗೆ ಆದಾಯ ಗಳಿಸುತ್ತಿರುವವರಿಗೆ 2024-25ನೇ ಸಾಲಿನಿಂದ ತೆರಿಗೆ ಪಾವತಿಸಬೇಕಾಗುವುದಿಲ್ಲ. ಆದರೆ, ಎಷ್ಟು ಮಂದಿಗೆ ಈ ತೆರಿಗೆ ವಿನಾಯಿತಿಯ ಪ್ರಯೋಜನ ದೊರೆಯಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.

ಸರ್ಕಾರವು ಲೋಕಸಭೆಗೆ ನೀಡಿರುವ ಮಾಹಿತಿಯ ಪ್ರಕಾರ, 4.1 ಕೋಟಿ ತೆರಿಗೆದಾರರು 2021-22ರಲ್ಲಿ ತಮ್ಮ ಆದಾಯ 5 ಲಕ್ಷ ರೂ.ವರೆಗೆ ಇದೆ ಎಂದು ಘೋಷಿಸಿಕೊಂಡಿದ್ದಾರೆ. 1.4 ಕೋಟಿ ತೆರಿಗೆದಾರರು ತಮ್ಮ ಆದಾಯ 5ರಿಂದ 10 ಲಕ್ಷ ರೂ.ವರೆಗೆ ಇದೆ ಎಂದು ಘೋಷಿಸಿದ್ದಾರೆ. 2021-22ರಲ್ಲಿ ಒಟ್ಟಾರೆಯಾಗಿ 6.3 ಕೋಟಿ ಮಂದಿ ಐಟಿಆರ್ ಫೈಲ್ ಮಾಡಿದ್ದಾರೆ.

ಆದಾಗ್ಯೂ 7 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ಎಷ್ಟು ಮಂದಿ ಇದ್ದಾರೆ ಎಂಬ ಸಂಖ್ಯೆಗಳನ್ನು ಸರ್ಕಾರ ಬಹಿರಂಗಪಡಿಸಿಲ್ಲ. 7 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಅಂದಾಜು ಸುಮಾರು 4 ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. 7 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವವರು 2024-25ರಲ್ಲಿ ತೆರಿಗೆ ಪಾವತಿಸಬೇಕಿರುವುದಿಲ್ಲ.

ಇದನ್ನೂ ಓದಿ: Income Tax Slabs: ಆದಾಯ ತೆರಿಗೆ ಸ್ಲ್ಯಾಬ್​ ಬದಲಾವಣೆ; ಗೊಂದಲವಿದೆಯಾ? ಇಲ್ಲಿದೆ ಹಳೆದು, ಹೊಸದರ ನಡುವಣ ಪೂರ್ಣ ವ್ಯತ್ಯಾಸ

2022ರ ಡಿಸೆಂಬರ್ 31ರ ವರೆಗೆ ಐಟಿ ರಿಟರ್ನ್ಸ್​​ ಫೈಲ್ ಮಾಡಿದವರ ವಿವರವನ್ನು ಸರ್ಕಾರ ಇನ್ನಷ್ಟೇ ಬಹಿರಂಗಪಡಿಸಬೇಕಿದೆ.

ಆದಾಯ ತೆರಿಗೆ ಇಲಾಖೆ ವೆಬ್​ಸೈಟ್​​ನಿಂದ ದೊರೆತ ಇತ್ತೀಚಿನ ಮಾಹಿತಿ ಪ್ರಕಾರ, 2022-23ನೇ ಸಾಲಿನಲ್ಲಿ 7,54,79,837 ಐಟಿ ರಿಟರ್ನ್ಸ್​​ ಫೈಲ್ ಮಾಡಲಾಗಿದೆ. ಈ ಪೈಕಿ 7.19 ಕೋಟಿ ಐಟಿಆರ್​​ ಅನ್ನು ದೃಢೀಕರಿಸಲಾಗಿದ್ದು, ಉಳಿದವುಗಳ ದೃಢೀಕರಣ ಪ್ರಕ್ರಿಯೆ ನಡೆಯುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ