Tax Saving FD: ಹಿರಿಯ ನಾಗರಿಕರಿಗಾಗಿ ಒಳ್ಳೆ ಬಡ್ಡಿ ದರ ನೀಡುವ ತೆರಿಗೆ ಉಳಿತಾಯ ಎಫ್ಡಿ; ಇಲ್ಲಿವೆ ಟಾಪ್ ಬ್ಯಾಂಕ್ಗಳು
ಹಿರಿಯ ನಾಗರಿಕರಿಗೆ ತೆರಿಗೆ ಉಳಿತಾಯಕ್ಕೆ ಎಫ್ಡಿ ವಿವರ ಇಲ್ಲಿದೆ. ಇದರ ಜತೆಗೆ ಅತ್ಯುತ್ತಮ ಬಡ್ಡಿ ದರವೂ ದೊರೆಯುತ್ತದೆ. ಅತ್ಯುತ್ತಮ ಬಡ್ಡಿ ದರ ನೀಡುವ ಟಾಪ್ ಬ್ಯಾಂಕ್ಗಳ ವಿವರ ಇಲ್ಲಿದೆ.
ಜಾಸ್ತಿ ರಿಸ್ಕ್ ಬೇಡ ಅಂದುಕೊಳ್ಳುವವರಿಗೆ ಬ್ಯಾಂಕ್ಗಳು ಅಥವಾ ಫೋಸ್ಟ್ ಆಫೀಸ್ನಲ್ಲಿ ಫಿಕ್ಸೆಡ್ ಡೆಪಾಸಿಟ್ (Fixed Deposit) ಮಾಡುವುದು ಅತ್ಯುತ್ತಮ ಹೂಡಿಕೆ ಆಯ್ಕೆ ಎನಿಸಿಕೊಳ್ಳುತ್ತದೆ. ಆದರೆ ಈಚೆಗೆ ಹೊಸ ತಲೆಮಾರಿನ ಹೂಡಿಕೆದಾರರು ಸ್ಟಾಕ್ಗಳು, ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವುದಕ್ಕೆ ಆದ್ಯತೆ ನೀಡುತ್ತಾರೆ. ಆದರೆ ನಿಶ್ಚಿತ ಆದಾಯ ಎದುರು ನೋಡುವ, ಹಿರಿಯ ನಾಗರಿಕರು ಈಗಲೂ ಎಫ್.ಡಿ.ಗೆ ಪ್ರಾಶಸ್ತ್ಯ ನೀಡುತ್ತಾರೆ. ಯಾವುದೇ ಅಪಾಯ ಇಲ್ಲ ಹಾಗೂ ಆರಂಭದಲ್ಲಿ ಎಷ್ಟು ಖಾತ್ರಿ ನೀಡಲಾಗುತ್ತದೋ ಅಷ್ಟನ್ನು ಬಡ್ಡಿ ನೀಡಲಾಗುತ್ತದೆ ಮತ್ತು ಯಾವುದೇ ಹಣಕಾಸಿನ ಅಪಾಯ ಸಹ ಇಲ್ಲ.
ಏನಿದು ತೆರಿಗೆ ಉಳಿತಾಯದ ಎಫ್ಡಿ
ಇದು ಬಹಳ ಜನಪ್ರಿಯವಾದ ಉಳಿತಾಯ ಆಯ್ಕೆ. ಯಾವುದೇ ಅಪಾಯ ಇಲ್ಲದ ಕಡೆ ಹೂಡಿಕೆ ಮಾಡಬೇಕು ಹಾಗೂ ತೆರಿಗೆ ಕಡಿತದ ಅನುಕೂಲವೂ ಬೇಕು ಅಂದುಕೊಳ್ಳುವವರಿಗೆ ಟ್ಯಾಕ್ಸ್ ಸೇವಿಂಗ್ ಎಫ್ಡಿ ಎಂಬುದು ಅತ್ಯುತ್ತಮ ಆಯ್ಕೆ. ಎಲ್ಲ ಬ್ಯಾಂಕ್ಗಳು ಈ ಎಫ್ಡಿಯನ್ನು ಒದಗಿಸುತ್ತವೆ. ನಿಶ್ಚಿತ ಬಡ್ಡಿ ದರದ ಆದಾಯವನ್ನೂ ನೀಡುತ್ತದೆ. ಜತೆಗೆ ಆದಾಯ ತೆರಿಗೆ ಉಳಿತಾಯವೂ ಲಭ್ಯ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷ ರೂಪಾಯಿ ತನಕ ತೆರಿಗೆ ವಿನಾಯಿತಿ ಸಿಗುತ್ತದೆ. ಟ್ಯಾಕ್ಸ್ ಸೇವಿಂಗ್ ಎಫ್ಡಿ ಹಿರಿಯ ನಾಗರಿಕರ ಪಾಲಿಗೆ ಅತ್ಯುತ್ತಮ ಆಯ್ಕೆ. ಈ ಕಡಿತವನ್ನು ತಡೆಯಬೇಕು ಅಂತಾದಲ್ಲಿ ಫಾರ್ಮ್ 15G ಹಾಗೂ ಹಿರಿಯ ನಾಗರಿಕರು ಫಾರ್ಮ್ 15H ಸಲ್ಲಿಸಬೇಕು. ಇದನ್ನು ಹೊರತುಪಡಿಸಿ, ಸೆಕ್ಷನ್ 80TTB ಅಡಿಯಲ್ಲಿ ಬಡ್ಡಿ ಗಳಿಕೆ ಮೇಲೆ 50 ಸಾವಿರ ರೂಪಾಯಿ ತನಕ ವಿನಾಯಿತಿ ದೊರೆಯುತ್ತದೆ.
ಈ ಎಫ್ಡಿಗಳಿಗೆ ಕನಿಷ್ಠ ಐದು ವರ್ಷದ ಲಾಕ್-ಇನ್ ಅವಧಿ ಹಾಗೂ ಬಡ್ಡಿ ಗಳಿಕೆಗೆ ತೆರಿಗೆ ಪಾವತಿದಾರರ ಬ್ರ್ಯಾಕೆಟ್ ಆಧಾರದಲ್ಲಿ ತೆರಿಗೆ ಬೀಳುತ್ತದೆ. ಒಂದು ವೇಳೆ ಹೂಡಿಕೆ ಜಂಟಿಯಾಗಿ ಮಾಡಿದ್ದಲ್ಲಿ ಎಫ್ಡಿ ರಸೀದಿಯಲ್ಲಿ ಇರುವ ಮೊದಲ ವ್ಯಕ್ತಿಗೆ ತೆರಿಗೆ ಅನುಕೂಲ ಒದಗುತ್ತದೆ. ಟ್ಯಾಕ್ಸ್ ಸೇವಿಂಗ್ ಎಫ್ಡಿಗಳಲ್ಲಿ ಅವಧಿಪೂರ್ವವಾಗಿ ಹಣ ತೆಗೆದುಕೊಳ್ಳುವುದಕ್ಕೆ ಅವಕಾಶ ಇಲ್ಲ. ಎಫ್ಡಿ ಅವಧಿ 5ರಿಂದ 10 ವರ್ಷಗಳ ಅವಧಿಗೆ ಇರುತ್ತದೆ.
2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಟಾಕ್ಸ್ ಸೇವಿಂಗ್ ಎಫ್ಡಿಗೆ ಉತ್ತಮ ಬಡ್ಡಿ ದರ ನೀಡುವ ಟಾಪ್ 10 ಬ್ಯಾಂಕ್ಗಳು (ಜೂನ್ 6, 2022ರಂತೆ)
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 7.25
ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 7.25
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 7.10
ಡಿಸಿಬಿ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 7.10
ಯೆಸ್ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 7
ಇಂಡಸ್ ಇಂಡ್ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 7
ಆರ್ಬಿಎಲ್ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 6.80
ಐಡಿಎಫ್ಸಿ ಫಸ್ಟ್ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 6.75
ಆಕ್ಸಿಸ್ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 6.50
ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಬಡ್ಡಿ ದರ ವಾರ್ಷಿಕ ಶೇ 6.50
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: FD Interest Rates: ಎಚ್ಡಿಎಫ್ಸಿ ಬ್ಯಾಂಕ್ Vs ಎಸ್ಬಿಐ Vs ಆಕ್ಸಿಸ್ ಬ್ಯಾಂಕ್ ಎಲ್ಲಿ, ಎಷ್ಟಿದೆ ಎಫ್ಡಿ ಮೇಲೆ ಬಡ್ಡಿ ದರ