ಟೆಲಿಕಾಂ ಪಿಎಲ್​ಐ ಸ್ಕೀಮ್ ಕೂಡ ಭರ್ಜರಿ ಯಶಸ್ಸು; 65,320 ಕೋಟಿ ರೂ ಮೊತ್ತದ ಬಸಿನೆಸ್; 12,384 ಕೋಟಿ ರೂ ರಫ್ತು

Telecom PLI scheme: ಟೆಲಿಕಾಂ ಮತ್ತು ನೆಟ್ವರ್ಕಿಂಗ್ ಉತ್ಪನ್ನಗಳ ತಯಾರಿಕೆಗೆ ಸರ್ಕಾರ ಪಿಎಲ್​ಐ ಸ್ಕೀಮ್ ಅನ್ನು ಜಾರಿಗೆ ತಂದಿದೆ. 28 ಎಂಎಸ್​ಎಂಇ ಸೇರಿದಂತೆ 42 ಕಂಪನಿಗಳು ಇದರಲ್ಲಿ ಜೋಡಿತವಾಗಿದ್ದು ಒಟ್ಟಾರೆ ಸೇಲ್ಸ್ 65,000 ಕೋಟಿ ರೂಗಿಂತ ಹೆಚ್ಚಿದೆ. 12,000 ಕೋಟಿ ರೂಗಿಂತ ಹೆಚ್ಚು ಮೊತ್ತದ ರಫ್ತನ್ನು ಮಾಡಲಾಗಿದೆ.

ಟೆಲಿಕಾಂ ಪಿಎಲ್​ಐ ಸ್ಕೀಮ್ ಕೂಡ ಭರ್ಜರಿ ಯಶಸ್ಸು; 65,320 ಕೋಟಿ ರೂ ಮೊತ್ತದ ಬಸಿನೆಸ್; 12,384 ಕೋಟಿ ರೂ ರಫ್ತು
ಟೆಲಿಕಾಂ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 29, 2024 | 2:25 PM

ನವದೆಹಲಿ, ನವೆಂಬರ್ 29: ವಿವಿಧ ವಲಯಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರ ಪಿಎಲ್​ಐ ಸ್ಕೀಮ್ ಅನ್ನು ಜಾರಿಗೆ ತಂದಿದೆ. ಇದರಲ್ಲಿ ಎಲೆಕ್ಟ್ರಾನಿಕ್ಸ್​ನಿಂದ ಹಿಡಿದು ಟೆಲಿಕಾಂವರೆಗೆ ಹಲವು ವಲಯಗಳಿಗೆ ಪಿಎಲ್​ಐ ಸ್ಕೀಮ್ ತರಲಾಗಿದೆ. ಸರ್ಕಾರ ಮೊನ್ನೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಈ ಸ್ಕೀಮ್ ಜಾರಿಯಲ್ಲಿರುವ ಬಹುತೇಕ ಎಲ್ಲಾ ವಲಯಗಳೂ ಪುಷ್ಟಿ ಪಡೆದಿವೆ. ಟೆಲಿಕಾಂ ಮತ್ತು ನೆಟ್ವರ್ಕಿಂಗ್ ಉತ್ಪನ್ನಗಳಿಗೆ 2021ರಲ್ಲಿ ಜಾರಿ ಮಾಡಲಾದ 12,195 ಕೋಟಿ ರೂ ಮೊತ್ತದ ಪಿಎಲ್​ಐ ಸ್ಕೀಮ್​ನಲ್ಲಿ 42 ಕಂಪನಿಗಳು ಜೋಡಿತವಾಗಿವೆ. ಇವುಗಳು ಮಾಡಿರುವ ಒಟ್ಟಾರೆ ಹೂಡಿಕೆ 3,925 ಕೋಟಿ ರೂ ಆಗಿದೆ. ಈ ಸಂಸ್ಥೆಗಳು ಮಾಡಿರುವ ಬಿಸಿನೆಸ್ 65,320 ಕೋಟಿ ರೂ. ಇದರಲ್ಲಿ ರಫ್ತು ಪ್ರಮಾಣ 12,384 ಕೋಟಿ ರೂ ಎಂದು ಕೇಂದ್ರ ಸಂವಹನ ಖಾತೆ ರಾಜ್ಯ ಸಚಿವ ಡಾ. ಚಂದ್ರಶೇಖರ್ ಪೆಮ್ಮಸಾನಿ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಟೆಲಿಕಾಂ ಮತ್ತು ನೆಟ್ವರ್ಕಿಂಗ್ ಕ್ಷೇತ್ರದ 22 ಉತ್ಪನ್ನಗಳ ತಯಾರಿಕೆಗೆ ಈ ಪಿಎಲ್​ಐ ಸ್ಕೀಮ್ ಇದೆ. ಇದರಲ್ಲಿ ಸ್ಕೀಮ್​ನಿಂದ ಸಿಗುವ ಭತ್ಯೆ ಶೇ. 4ರಿಂದ 7ರಷ್ಟಿದೆ. ಒಟ್ಟು 42 ಕಂಪನಿಗಳು ಈ ಸ್ಕೀಮ್​ಗೆ ಆಯ್ಕೆಯಾಗಿವೆ. ಇದರಲ್ಲಿ 28 ಎಂಎಸ್​ಎಂಇಗಳೇ ಇವೆ. ಎಂಎಸ್​ಎಂಇಗಳಿಗೆ ಮೊದಲ ಮೂರು ವರ್ಷ ಹೆಚ್ಚುವರಿ ಶೇ. 1ರಷ್ಟು ಇನ್ಸೆಂಟಿವ್ ಕೊಡಲಾಗಿದೆ. ಹಾಗೆಯೇ, ಭಾರತದಲ್ಲಿ ಡಿಸೈನ್ ಮಾಡಲಾದ ಉತ್ಪನ್ನಗಳಿಗೂ ಶೇ. 1ರಷ್ಟು ಹೆಚ್ಚುವರಿ ಇನ್ಸೆಂಟಿವ್ ನೀಡಲಾಗಿದೆ.

ಟೆಲಿಕಾಂ ಕ್ಷೇತ್ರದ ಮ್ಯಾನುಫ್ಯಾಕ್ಚರಿಂಗ್ ಅನ್ನು ಬಲಪಡಿಸಲು ಪಿಎಲ್​ಐ ಮಾತ್ರವಲ್ಲ, ಇನ್ನೂ ಕೆಲ ಯೋಜನೆಗಳನ್ನು ಸರ್ಕಾರ ಮಾಡಿದೆ. ಟೆಲಿಕಾಂ ಟೆಕ್ನಾಲಜಿ ಡೆವಲಪ್ಮೆಂಟ್ ಫಂಡ್ (ಟಿಟಿಡಿಎಫ್) ಸ್ಕೀಮ್ ಅನ್ನು 2022ರಲ್ಲಿ ಜಾರಿಗೆ ತರಲಾಗಿದೆ. ಗ್ರಾಮೀಣ ಭಾಗದಲ್ಲಿ ಟೆಲಿಕಾಂ ಸರ್ವಿಸ್ ಹೆಚ್ಚಿಸಲು ಅಗತ್ಯವಾದ ತಂತ್ರಜ್ಞಾನ, ಉತ್ಪನ್ನ, ಸರ್ವಿಸ್​ನ ಅಭಿವೃದ್ಧಿ ಮತ್ತು ಸಂಶೋಧನೆ ನಡೆಸುವುದು ಈ ಯೋಜನೆಯ ಉದ್ದೇಶವಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಯುವಜನರ ನಿರುದ್ಯೋಗ ದರ ಜಾಗತಿಕ ಸರಾಸರಿಗಿಂತಲೂ ಕಡಿಮೆ: ಸರ್ಕಾರದಿಂದ ಮಾಹಿತಿ

2021ರಲ್ಲಿ ಡಿಜಿಟಲ್ ಕಮ್ಯೂನಿಕೇಶನ್ಸ್ ಇನ್ನೋವೇಶನ್ ಸ್ಕ್ವಯರ್ ಎನ್ನುವ ಮತ್ತೊಂದು ಸ್ಕೀಮ್ ಅನ್ನು ತರಲಾಗಿದೆ. ಎಂಜಿನಿಯರಿಂಗ್ ಜ್ಞಾನ ಮತ್ತು ಹೊಸ ಐಡಿಯಾಗಳನ್ನು ಹೇಗೆ ಕಾರ್ಯರೂಪಕ್ಕೆ ಬರಬಹುದು ಮತ್ತು ಸೂಕ್ತ ತಂತ್ರಜ್ಞಾನ ಅಭಿವೃದ್ಧಿ ಹೇಗೆ ಮಾಡಬಹುದು ಎಂಬುದರತ್ತ ಈ ಯೋಜನೆ ಗಮನ ಹರಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ