ಭಾರತದಲ್ಲಿ ಸಹಕಾರಿ ಮತ್ತು ಫ್ರೀಲ್ಯಾನ್ಸ್ ಕ್ಷೇತ್ರಗಳಲ್ಲಿ 20 ಕೋಟಿ ಉದ್ಯೋಗಗಳ ಸೃಷ್ಟಿ ನಿರೀಕ್ಷೆ

Huge job creation in cooperative sector and gig economy: ವಿಶ್ವದ ಶೇ. 30ರಷ್ಟು ಸಹಕಾರಿ ಸಂಸ್ಥೆಗಳನ್ನು ಹೊಂದಿರುವ ಭಾರತದಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಸೃಷ್ಟಿಗಳಾಗುವ ನಿರೀಕ್ಷೆ ಇದೆ. ಪ್ರೈಮಸ್ ಪಾರ್ಟ್ನರ್ಸ್ ಸಂಸ್ಥೆ ಪ್ರಕಾರ 2030ರೊಳಗೆ ಸಹಕಾರಿ ವಲಯದಲ್ಲಿ 5.5 ನೇರ ಉದ್ಯೋಗ, 5.6 ಕೋಟಿ ಪರೋಕ್ಷ ಉದ್ಯೋಗ ಸೃಷ್ಟಿಯಾಗಬಹುದು. ಇನ್ನು, ಗಿಗ್ ಎಕನಾಮಿಯಿಂದಲೂ 9 ಕೋಟಿಯಷ್ಟು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಭಾರತದಲ್ಲಿ ಸಹಕಾರಿ ಮತ್ತು ಫ್ರೀಲ್ಯಾನ್ಸ್ ಕ್ಷೇತ್ರಗಳಲ್ಲಿ 20 ಕೋಟಿ ಉದ್ಯೋಗಗಳ ಸೃಷ್ಟಿ ನಿರೀಕ್ಷೆ
ಉದ್ಯೋಗ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 29, 2024 | 4:09 PM

ನವದೆಹಲಿ, ನವೆಂಬರ್ 29: ವಿಶ್ವದಲ್ಲೇ ಅತಿಹೆಚ್ಚು ಸಹಕಾರಿ ಸಂಸ್ಥೆಗಳು ಭಾರತದಲ್ಲಿ ಇವೆ. ವಿಶ್ವಾದ್ಯಂತ 30 ಲಕ್ಷ ಸಹಕಾರಿ ಸೊಸೈಟಿಗಳಿದ್ದು, ಇದರಲ್ಲಿ ಶೇ. 30ರಷ್ಟು ಸಂಸ್ಥೆಗಳು ಭಾರತದಲ್ಲಿ ಇವೆ ಎನ್ನಲಾಗಿದೆ. ಪ್ರೈಮಸ್ ಪಾರ್ಟ್ನರ್ಸ್ ಪ್ರಕಾರ ಸಹಕಾರಿ ಸಂಸ್ಥೆಗಳು ಭಾರತದ ಆರ್ಥಿಕತೆಯ ಒಂದು ಭಾಗ ಮಾತ್ರವಲ್ಲ, ಪ್ರಗತಿ ಮತ್ತು ಸಂಪತ್​ವೃದ್ಧಿಗೆ ಪ್ರಬಲ ಯಂತ್ರಗಳಾಗಿವೆ ಎಂದಿದೆ. 2030ರೊಳಗೆ 5 ಟ್ರಿಲಿಯನ್ ಡಾಲರ್ ಆಗುವ ಭಾರತದ ಗುರಿ ಸಾಧನೆಗೆ ಸಹಕಾರಿ ವಲಯದ ಪಾತ್ರ ಬಹಳ ದೊಡ್ಡದಿದೆ ಎಂದು ಮ್ಯಾನೇಜ್ಮೆಂಟ್ ಕನ್ಸಲ್ಟನ್ಸಿ ಸಂಸ್ಥೆಯಾದ ಪ್ರೈಮಸ್ ಪಾರ್ಟ್ನರ್ಸ್ ಅಭಿಪ್ರಾಯಪಟ್ಟಿದೆ.

ಭಾರತದಲ್ಲಿ ಬಹಳ ಪ್ರಬಲವಾಗಿರುವ ಸಹಕಾರಿ ವಲಯವು 2030ರೊಳಗೆ 5.5 ಕೋಟಿ ನೇರ ಉದ್ಯೋಗಗಳನ್ನು ಸೃಷ್ಟಿ ಮಾಡುವ ಶಕ್ತಿ ಹೊಂದಿದೆ. ಹಾಗೆಯೇ, 5.6 ಕೋಟಿ ಸ್ವಂತ ಉದ್ಯೋಗದ ಅವಕಾಶವನ್ನೂ ಈ ವಲಯ ಒದಗಿಸಲಿದೆ ಎಂದು ಪ್ರೈಮಸ್ ಪಾರ್ಟ್ನರ್ಸ್ ಹೇಳಿದೆ.

ಇದನ್ನೂ ಓದಿ: ಭಾರತದಲ್ಲಿ ಯುವಜನರ ನಿರುದ್ಯೋಗ ದರ ಜಾಗತಿಕ ಸರಾಸರಿಗಿಂತಲೂ ಕಡಿಮೆ: ಸರ್ಕಾರದಿಂದ ಮಾಹಿತಿ

2007-08ರಲ್ಲಿ ಕೋ ಆಪರೇಟಿವ್ ಸೆಕ್ಟರ್​ನಲ್ಲಿ 12 ಲಕ್ಷ ಉದ್ಯೋಗಗಳಿದ್ದವು. 2016-17ರಲ್ಲಿ ಅದು 58 ಲಕ್ಷಕ್ಕೆ ಏರಿದೆ. ಒಟ್ಟಾರೆ ಆರ್ಥಿಕತೆಯಲ್ಲಿ ಈ ವಲಯದ ಉದ್ಯೋಗ ಪ್ರಮಾಣ ಶೇ. 13.3ರಷ್ಟಿದೆ. 2030ರಲ್ಲಿ 11 ಕೋಟಿಗೂ ಅಧಿಕ ನೇರ ಉದ್ಯೋಗ ಮತ್ತು ಸ್ವಂತ ಉದ್ಯೋಗಗಳನ್ನು ಈ ಸಹಕಾರಿ ಸಂಸ್ಥೆಗಳು ಸೃಷ್ಟಿಸಬಲ್ಲುವು ಎಂದೆನ್ನಲಾಗಿದೆ.

ಸ್ವತಂತ್ರ ಕರ್ಮಿಗಳಿಗೆ ಹೆಚ್ಚು ಅವಕಾಶ…

ದೇಶದ ಅನೌಪಚಾರಿಕ ಆರ್ಥಿಕತೆಯ ಮಾರುಕಟ್ಟೆ 455 ಬಿಲಿಯನ್ ಡಾಲರ್ ಗಾತ್ರಕ್ಕೆ ಬೆಳೆಯುವ ನಿರೀಕ್ಷೆ ಇದೆ. 2030ರೊಳಗೆ ಇದು ಜಿಡಿಪಿಗೆ ಶೇ. 1.25ರಷ್ಟು ಕೊಡುಗೆ ನೀಡಬಲ್ಲುದು. ಈ ಕ್ಷೇತ್ರವು 9 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬಲ್ಲುದು ಎಂದು ಫೋರಂ ಫಾರ್ ಪ್ರೋಗ್ರೆಸಿವ್ ಗಿಗ್ ವರ್ಕರ್ಸ್ ಸಂಸ್ಥೆ ಬಿಡುಗಡೆ ಮಾಡಿದ ಶ್ವೇತಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಕಳೆದ 6 ವರ್ಷದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಗಣನೀಯ ಏರಿಕೆ: ಸಚಿವೆ ಶೋಭಾ ಕರಂದ್ಲಾಜೆ

ನಿನ್ನೆ ನಡೆದ ವೆಬಿನಾರ್​ವೊಂದರಲ್ಲಿ ಗಿಗ್ ಎಕನಾಮಿಯಿಂದ ಆಗುತ್ತಿರುವ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇಕಾಮರ್ಸ್, ಸಾರಿಗೆ, ಡೆಲಿವರಿ ಸರ್ವಿಸ್ ಮೊದಲಾದ ವಲಯಗಳಲ್ಲಿ ಈ ಫ್ರೀಲ್ಯಾನ್ಸ್ ಕೆಲಸಗಳು ಹೆಚ್ಚು ಇವೆ. ಕಾರ್ಮಿಕರಿಗೆ ಪರ್ಯಾಯ ಆದಾಯ ಮೂಲವಾಗಿವೆ ಇವು. ಮಹಿಳೆಯರಿಗೂ ಬಿಡುವಿನ ಸಮಯದಲ್ಲಿ ಆದಾಯ ಗಳಿಸಲು ಇದು ಅವಕಾಶ ನೀಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ