ಅಮೆರಿಕದ ವೇವ್​​ಟೆಕ್ ಹೀಲಿಯಂ ಕಂಪನಿಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಪಾಲು ಖರೀದಿ; ಮುಂದಾಲೋಚನೆಯ ಕ್ರಮ ಎಂದ ತಜ್ಞರು

Mukesh Ambani enters helium space: ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಗ್ರೂಪ್ ಅಮೆರಿಕದ ವೇವ್​ಟೆಕ್ ಹೀಲಿಯಂ ಕಂಪನಿಯ ಶೇ. 21ರಷ್ಟು ಷೇರುಗಳನ್ನು 100 ಕೋಟಿ ರೂಗೆ ಖರೀದಿಸಿದೆ. 12 ಮಿಲಿಯನ್ ಡಾಲರ್ ಮೊತ್ತದ ಈ ವ್ಯವಹಾರ ನಡೆದಿರುವ ಮಾಹಿತಿಯನ್ನು ರಿಲಾಯನ್ಸ್ ಇಂಡಸ್ಟ್ರೀಸ್ ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ತಿಳಿಸಿದೆ. ವೇವ್​ಟೆಕ್ ಹೀಲಿಯಂ ಸಂಸ್ಥೆಯು ಹೀಲಿಯಂ ಅನಿಲವನ್ನು ಹೊರತೆಗೆಯುವ ಯೋಜನೆಗಳನ್ನು ನಡೆಸುತ್ತದೆ.

ಅಮೆರಿಕದ ವೇವ್​​ಟೆಕ್ ಹೀಲಿಯಂ ಕಂಪನಿಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಪಾಲು ಖರೀದಿ; ಮುಂದಾಲೋಚನೆಯ ಕ್ರಮ ಎಂದ ತಜ್ಞರು
ಮುಕೇಶ್ ಅಂಬಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 29, 2024 | 5:31 PM

ನವದೆಹಲಿ, ನವೆಂಬರ್ 29: ಭಾರತದ ಅತಿದೊಡ್ಡ ಸಂಸ್ಥೆಯಾದ ರಿಲಾಯನ್ಸ್ ಗ್ರೂಪ್ ಇದೀಗ ಅಮೆರಿಕದ ವೇವ್​ಟೆಕ್ ಹೀಲಿಯಂ ಎನ್ನುವ ಸಂಸ್ಥೆಯ ಶೇ. 21ರಷ್ಟು ಪಾಲನ್ನು ಖರೀದಿಸಿದೆ. 12 ಮಿಲಿಯನ್ ಡಾಲರ್ (ಸುಮಾರು 101 ಕೋಟಿ ರೂ) ಮೊತ್ತಕ್ಕೆ ಈ ವ್ಯವಹಾರ ನಡೆದಿರುವುದು ತಿಳಿದುಬಂದಿದೆ. ರಿಲಾಯನ್ಸ್ ಇಂಡಸ್ಟ್ರೀಸ್​ನ ಅಂಗಸಂಸ್ಥೆಯಾದ ರಿಲಾಯನ್ಸ್ ಫೈನಾನ್ಸ್ ಅಂಡ್ ಇನ್ವೆಸ್ಟ್​​ಮೆಂಟ್ಸ್ ಯುಎಸ್​ಎ ನವೆಂಬರ್ 27ರಂದು ವೇವ್​ಟೆಕ್ ಹೀಲಿಯಂ ಕಂಪನಿಯೊಂದಿಗೆ ಷೇರು ಖರೀದಿ ಒಪ್ಪಂದ ಮಾಡಿಕೊಂಡಿದೆ. ಈ ವಿಚಾರವನ್ನು ರಿಲಾಯನ್ಸ್ ಇಂಡಸ್ಟ್ರೀಸ್ ತನ್ನ ಸ್ಟಾಕ್ ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ತಿಳಿಸಿದೆ.

‘ಇಂಗಾಲ ಮುಕ್ತ ಇಂಧನದ ಅನ್ವೇಷಣೆ ಮತ್ತು ಉತ್ಪಾದನಾ ಬಿಸಿನೆಸ್ ಅನ್ನು ವಿಸ್ತರಿಸುವ ಕಾರ್ಯತಂತ್ರದ ಭಾಗವಾಗಿ ಈ ಷೇರು ಪಾಲು ಖರೀದಿ ಮಾಡಲಾಗಿದೆ. ಈ ವಹಿವಾಟಿಗೆ ಸರ್ಕಾರದ ಅಥವಾ ನಿಯಂತ್ರಕರ ಅನುಮೋದನೆಯ ಅವಶ್ಯಕತೆ ಇರಲಿಲ್ಲ,’ ಎಂದೂ ತನ್ನ ಫೈಲಿಂಗ್​​ಲ್ಲಿ ಆರ್​ಐಎಲ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ನಿರಾಸೆ ಮೂಡಿಸಿದ ಜಿಡಿಪಿ ದರ; ಎರಡನೇ ಕ್ವಾರ್ಟರ್​ನಲ್ಲಿ ಶೇ. 5.4ರಷ್ಟು ಮಾತ್ರ ಬೆಳೆದ ಆರ್ಥಿಕತೆ

ಮೂರು ವರ್ಷಗಳ ಹಿಂದೆ ಆರಂಭವಾದ ವೇವ್​ಟೆಕ್ ಹೀಲಿಯಂ

ಅಮೆರಿಕದ ಡೆನ್ವರ್​ನಲ್ಲಿರುವ ವೇವ್​ಟೆಕ್ ಹೀಲಿಯಂ ಸಂಸ್ಥೆ 2021ರ ಜುಲೈ 2ರಂದು ಆರಂಭವಾಗಿದ್ದು ಎನ್ನುವ ಮಾಹಿತಿ ಇದೆ. ಇದು ಹೀಲಿಯಂ ನಿಕ್ಷೇಪಗಳಿರುವ ಸ್ಥಳಗಳನ್ನು ಖರೀದಿಸಿ, ಅದರಿಂದ ಹೀಲಿಯಂ ಅನಿಲವನ್ನು ತೆಗೆಯುವ ಕಾರ್ಯದಲ್ಲಿ ಪರಿಣಿತಿ ಹೊಂದಿದೆ. ಈ ವರ್ಷವೇ ಇದರ ಕಾರ್ಯಾಚರಣೆ ಆರಂಭವಾಗಿದೆ.

ಹೀಲಿಯಂ ಬಹಳ ಮುಖ್ಯ…

ಬಹಳ ಮುಖ್ಯವಾಗಿರುವ ಅನಿಲಗಳಲ್ಲಿ ಹೀಲಿಯಂ ಒಂದು. ವೈದ್ಯಕೀಯ ಕ್ಷೇತ್ರದಲ್ಲಿ ಇದು ಬಹಳ ಅಗತ್ಯ ಇದೆ. ವೈಜ್ಞಾನಿಕ ಸಂಶೋಧನೆ, ಏರೋಸ್ಪೇಸ್, ಫೈಬರ್ ಆಪ್ಟಿಕ್ಸ್, ಎಲೆಕ್ಟ್ರಾನಿಕ್ಸ್ ಮೊದಲಾದ ಕ್ಷೇತ್ರಗಳಲ್ಲಿ ಇದರ ಬಳಕೆ ಹೆಚ್ಚಿದೆ. ಸೆಮಿಕಂಡಕ್ಟರ್ ಕ್ಷೇತ್ರಕ್ಕೂ ಇದರ ಅವಶ್ಯಕತೆ ಇದೆ. ಎಐ ಮತ್ತು ಡಾಟಾ ಸೆಂಟರ್​ಗಳು ಹೆಚ್ಚುತ್ತಿರುವುದರಿಂದ ಹೀಲಿಯಂಗೆ ಮುಂದಿನ ದಿನಗಳಲ್ಲಿ ವಿಪರೀತ ಬೇಡಿಕೆ ಬರಬಹುದು.

ಇದನ್ನೂ ಓದಿ: ಮೋದಿ ನಾಯಕತ್ವದಲ್ಲಿ ಭಾರತದಲ್ಲಿ ಒಳ್ಳೆಯ ಕೆಲಸಗಳಾಗುತ್ತಿವೆ: ಜಾಗತಿಕ ಹೂಡಿಕೆದಾರ ಜಿಮ್ ರೋಜರ್ಸ್ ಅನಿಸಿಕೆ

ರಿಲಾಯನ್ಸ್ ಇಂಡಸ್ಟ್ರೀಸ್ ಭಾರತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇನ್​ಫ್ರಾಸ್ಟ್ರಕ್ಚರ್ ಅನ್ನು ಅಭಿವೃದ್ಧಿಪಡಿಸಲಿದೆ. ಇದಕ್ಕಾಗಿ ವಿಶ್ವದ ನಂಬರ್ ಒನ್ ಚಿಪ್ ಸಂಸ್ಥೆಯಾದ ನವಿಡಿಯಾ ಜೊತೆ ರಿಲಾಯನ್ಸ್ ಒಪ್ಪಂದ ಮಾಡಿಕೊಂಡಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ನಿರ್ಮಿಸಿರುವ ಹೊಸ ಡಾಟಾ ಸೆಂಟರ್​ನಲ್ಲಿ ನವಿಡಿಯಾದ ಬ್ಲ್ಯಾಕ್​ವೆಲ್ ಎಐ ಚಿಪ್​ಗಳನ್ನು ಬಳಸಲು ನಿರ್ಧರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ