Lightyear 0 Electric Car: ಈ ಕಾರು ಒಮ್ಮೆ ಚಾರ್ಜ್ ಮಾಡಿದರೆ 7 ತಿಂಗಳಿಗೆ ಸಾಕು, ಗಂಟೆಗೆ 100 ಕಿ.ಮೀ. ವೇಗ
ಈ ಎಲೆಕ್ಟ್ರಿಕ್ ವಾಹನವನ್ನು ಒಮ್ಮೆ ಚಾರ್ಜ್ ಮಾಡಿದರೆ 7 ತಿಂಗಳು ಮತ್ತೆ ರೀಚಾರ್ಜ್ ಮಾಡುವ ಅಗತ್ಯ ಇಲ್ಲ ಎಂದು ಕಾರು ತಯಾರಿಕೆ ಕಂಪೆನಿಯೊಂದು ಹೇಳಿದೆ. ಯಾವುದು ಆ ಕಾರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಲೈಟ್ ಇಯರ್ 0 (Lightyear 0) ಎಲೆಕ್ಟ್ರಿಕ್ ಕಾರು ರಚನೆ, ತಂತ್ರಜ್ಞಾನ ಇವುಗಳ ಕಾರಣಕ್ಕೆ ವಿಶ್ವಾದ್ಯಂತ ಗಮನ ಸೆಳೆದಿರುವುದು ಸುದ್ದಿ ಆಗುತ್ತಿದೆ. ವಾಹನ ತಯಾರಕರು ಹೇಳುವಂತೆ, ಬಿಸಿಲು ಯಥೇಚ್ಛವಾಗಿರುವ ದೇಶಗಳಲ್ಲಿ ಏಳು ತಿಂಗಳ ತನಕ ಬ್ಯಾಟರಿ ಚಾರ್ಜ್ ಮಾಡುವ ಅಗತ್ಯವೇ ಇಲ್ಲ. ಇನ್ನೂ ಅಚ್ಚರಿ ಸಂಗತಿ ಏನೆಂದರೆ, ನೆದರ್ಲೆಂಡ್ಸ್ನಲ್ಲೇ ಎರಡು ತಿಂಗಳ ತನಕ ಸಂಚರಿಸುತ್ತದೆ ಎನ್ನಲಾಗಿದೆ. ಇದನ್ನು ಒಂದು ದಿನದ ಸರಾಸರಿ ಲೆಕ್ಕ 35 ಕಿ.ಮೀ. ಅಂದಾಜು ಮಾಡಲಾಗಿದೆ. ಜತೆಗೆ ಮಾಲೀಕರು ತಮ್ಮ ವಾಹನವನ್ನು ಹೊರಭಾಗದಲ್ಲೇ ನಿಲುಗಡೆ ಮಾಡಬೇಕು. ಈ ಮೂಲಕವಾಗಿ ಎಲೆಕ್ಟ್ರಿಕ್ ವಾಹನದಲ್ಲಿ (Electric Vehicle) ಇರುವ ಸೋಲಾರ್ ಪ್ಯಾನೆಲ್ಗಳು ಸೂರ್ಯನ ಬೆಳಕಿನಿಂದ ಇಂಧನವು ಚಾರ್ಜ್ ಆಗುತ್ತದೆ. ಲೈಟ್ ಇಯರ್ 0 ಕ್ಲೇಮ್ ಮಾಡಿಕೊಳ್ಳುವಂತೆ, ಒಂದು ವರ್ಷಕ್ಕೆ 11000 ಕಿಲೋಮೀಟರ್ ತನಕ ಸೋಲಾರ್ ಯೀಲ್ಡ್ ಬರುತ್ತದೆ. ಇದಕ್ಕೆ ಕಾರಣ ಏನು ಅಂತ ನೋಡಿದರೆ, 54 ಚದರಡಿಯ ಪೇಟೆಂಟೆಡ್ ಎರಡು ಬದಿ ಕರ್ವ್ ಸೋಲಾರ್ ಅರೇಸ್. ಈ ಮೂಲಕ ಸೂರ್ಯನಿಂದ ಯಾವಾಗ ಬೇಕಾದರೂ ಶಕ್ತಿ ಪಡೆಯಬಹುದು. ಕಂಪೆನಿ ತಿಳಿಸಿರುವ ಮತ್ತೊಂದು ಮೂಲದ ಪ್ರಕಾರ, ಸೋಲಾರ್ ಮೂಲದ ಶಕ್ತಿಯಿಂದ ಲೈಟ್ ಇಯರ್ 0 70 ಕಿಲೋಮೀಟರ್ ತನಕ ಚಲಿಸುತ್ತದೆ.
ಕಂಪೆನಿಯು ಮತ್ತೊಂದು ಸಂಗತಿ ಸಹ ಹೊರಗಿಟ್ಟಿದೆ. ಅದನ್ನೇ ನಂಬುವುದಾದರೆ ಈ ಲೈಟ್ ಇಯರ್ 0 ಕಾರು ಒಂದು ಸಲ ಪೂರ್ತಿಯಾಗಿ ಬ್ಯಾಟರಿ ಚಾರ್ಜ್ ಆದ ಮೇಲೆ 625 ಕಿಲೋಮೀಟರ್ ಸಂಚರಿಸಬಹುದು. ಹೆದ್ದಾರಿ ವೇಗ ಗಂಟೆಗೆ 110 ಕಿಲೋಮೀಟರ್ ಮುಟ್ಟಬಹುದು. ಇನ್ನು ಲಿಥಿಯಂ-ಐಯಾನ್ ಬ್ಯಾಟರಿ ಇರುವಾಗ ಒಂದು ಸಲ ಪೂರ್ತಿಯಾಗಿ ಚಾರ್ಜ್ ಮಾಡಿದರೆ ಲೈಟ್ ಇಯರ್ 0 ಕಾರು 560 ಕಿಲೋಮೀಟರ್ ಸಂಚರಿಸುತ್ತದೆ.
ಈ ಕಾರಿನ ಏರೋ ಡೈನಮಿಕ್ ರಚನೆ ಇಂಥದ್ದೊಂದು ರೇಂಜ್ನ ನೀಡಿದೆ ಎಂದು ಕಾರು ಉತ್ಪಾದಕ ಸಂಸ್ಥೆ ಹೇಳಿದೆ. ಸದ್ಯಕ್ಕೆ ವಿಶ್ವದಲ್ಲೇ ಅತ್ಯಂತದಕ್ಷ ಎಲೆಕ್ಟ್ರಿಕ್ ಕಾರು ಎಂಬ ಕೀರ್ತಿ ಈ ಲೈಟ್ ಇಯರ್ 0 ಕಾರಿನದು. ಕೇವಲ 10.5 kWh ಎನರ್ಜಿಯೊಂದಿಗೆ ಹೆದ್ದಾರಿಯಲ್ಲಿ ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ಡಚ್ ಎಲೆಕ್ಟ್ರಿಕ್ ವೆಹಕಲ್ ಸ್ಟಾರ್ಟ್ ಅಪ್ ಕಂಪೆನಿಯಾದ ಇದು ಭವಿಷ್ಯದಲ್ಲಿ ಈ ಸೆಗ್ಮೆಂಟ್ ಅನ್ನು ಇನ್ನಷ್ಟು ವಿಸ್ತರಿಸಲು ಯೋಜಿಸಿದೆ. ಈ ಕಾರಿನ ಡೆಲವರಿ 2022ರ ನವೆಂಬರ್ನಿಂದ ಆರಂಭವಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Electric Car: ಮನೆಯಲ್ಲೇ ಎಲೆಕ್ಟ್ರಿಕ್ ವಾಹನ ಸಿದ್ಧಪಡಿಸಿದ ಕೇರಳದ ವ್ಯಕ್ತಿ; ಕೇವಲ 5 ರೂ.ಗೆ 60 ಕಿ.ಮೀ. ಓಡುತ್ತೆ ಈ ಕಾರು!
Published On - 5:08 pm, Mon, 13 June 22