AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Toll Rates Hike: ಏಪ್ರಿಲ್ 1ರಿಂದ ಹೆದ್ದಾರಿ ಟೋಲ್, ಮಾಸಿಕ ಪಾಸ್ ದರಗಳ ಏರಿಕೆ; ಇಲ್ಲಿದೆ ಡೀಟೇಲ್ಸ್

Highways Toll Rates Set To Rise From April: ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್​ಪ್ರೆಸ್​ವೇಗಳಲ್ಲಿನ ಟೋಲ್​ಗಳಲ್ಲಿ ಬೆಲೆ ಏರಿಕೆ ಮಾಡಲು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎನ್​ಎಚ್​ಎಐ ಯೋಜಿಸಿದೆ. ಭಾನುವಾರ ಬಂದ ವರದಿಗಳ ಪ್ರಕಾರ ಟೋಲ್ ದರ ಶೇ. 5ರಿಂದ 10ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

Toll Rates Hike: ಏಪ್ರಿಲ್ 1ರಿಂದ ಹೆದ್ದಾರಿ ಟೋಲ್, ಮಾಸಿಕ ಪಾಸ್ ದರಗಳ ಏರಿಕೆ; ಇಲ್ಲಿದೆ ಡೀಟೇಲ್ಸ್
ಟೋಲ್ ಪ್ಲಾಜಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 05, 2023 | 5:56 PM

Share

ನವದೆಹಲಿ: ಈಗಾಗಲೇ ಹೆದ್ದಾರಿಗಳಲ್ಲಿ ಬಹಳಷ್ಟು ಕಡೆ ಟೋಲ್ ಕಟ್ಟಿ ಹೈರಾಣಾಗಿರುವ ವಾಹನಸವಾರರಿಗೆ ಮತ್ತು ಜನಸಾಮಾನ್ಯರಿಗೆ ಮುಂದಿನ ದಿನಗಳು ಇನ್ನಷ್ಟು ದುಬಾರಿಯಾಗಲಿವೆ. ರಾಷ್ಟ್ರಾದ್ಯಂತ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್​ಪ್ರೆಸ್​ವೇಗಳಲ್ಲಿನ ಟೋಲ್​ಗಳಲ್ಲಿ ಬೆಲೆ ಏರಿಕೆ (Toll Rate Hike) ಮಾಡಲು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎನ್​ಎಚ್​ಎಐ ಯೋಜಿಸಿದೆ. ಭಾನುವಾರ ಬಂದ ವರದಿಗಳ ಪ್ರಕಾರ ಟೋಲ್ ದರ ಶೇ. 5ರಿಂದ 10ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಮಾಸಿಕ ಟೋಲ್ ಪಾಸ್​ನ ದರವನ್ನೂ ಶೇ. 10ರಷ್ಟು ಏರಿಕೆ ಮಾಡಬಹುದು ಎನ್ನಲಾಗುತ್ತಿದೆ. ಇನ್ನು ರಾಜ್ಯ ಹೆದ್ದಾರಿಗಳಲ್ಲಿರುವ ಟೋಲ್ ದರಗಳ ಏರಿಕೆ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.

ಟೋಲ್ ದರಗಳನ್ನು ಪ್ರತೀ ವರ್ಷ ಪರಿಷ್ಕರಿಸಲಾಗುತ್ತದೆ. ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯದ ಅನುಮೋದನೆ ಬಳಿಕ ಮುಂದಿನ ಹಣಕಾಸು ವರ್ಷಕ್ಕೆ ಹೊಸ ಟೋಲ್ ದರಗಳು ಜಾರಿಗೆ ಬರಲಿವೆ. ಮೂಲಗಳ ಪ್ರಕಾರ ಕಾರು ಮತ್ತು ಹಗುರ ವಾಹನಗಳಿಗೆ ಟೋಲ್ ದರ ಶೇ. 5ರಷ್ಟು ಹೆಚ್ಚಾಗಬಹುದು. ಭಾರೀ ವಾಹನಗಳು ಪಾವತಿಸಬೇಕಾದ ಟೋಲ್ ದರ ಶೇ. 10ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಿರುವ ದರದ ಪ್ರಕಾರ ಎಕ್ಸ್​ಪ್ರೆಸ್​ವೇಗಳಲ್ಲಿ ಪ್ರತೀ ಕಿಲೋಮೀಟರ್​ಗೆ 2.19 ರೂನಂತೆ ಟೋಲ್ ದರ ನಿಗದಿ ಮಾಡಲಾಗಿದೆ.

2022-23ರ ವರ್ಷದಲ್ಲಿ ಟೋಲ್ ದರಗಳನ್ನು ಶೇ. 10ರಿಂದ 15ರಷ್ಟು ಹೆಚ್ಚಿಸಲಾಗಿತ್ತು. ಈ ವರ್ಷ ರಾ.ಹೆ. ಟೋಲ್​ಗಳಲ್ಲಿ 33,881.22 ಕೋಟಿ ರೂ ಸಂಗ್ರಹವಾಗಿದೆ. ಹಿಂದಿನ ವರ್ಷಕ್ಕೆ ಇದು ಶೇ. 21ರಷ್ಟು ಹೆಚ್ಚಾಗಿದೆ. 2018ರಿಂದೀಚೆ ಹತ್ತಿರಹತ್ತಿರ ಒಂದೂವರೆ ಲಕ್ಷ ಕೋಟಿ ರೂನಷ್ಟು ಟೋಲ್ ಸಂಗ್ರಹವಾಗಿದೆ.

ಇದನ್ನೂ ಓದಿEPF Rate: ಈ ವರ್ಷಕ್ಕೆ ಇಪಿಎಫ್ ಹಣಕ್ಕೆ ಶೇ. 8 ಬಡ್ಡಿ? ಪಿಎಫ್ ಬಡ್ಡಿ ದರ ನಿರ್ಧಾರ ಆಗೋದು ಹೇಗೆ?

ಫಾಸ್​ಟ್ಯಾಗ್ ವ್ಯವಸ್ಥೆ ಬಂದ ಮೇಲೆ ಟೋಲ್ ಸಂಗ್ರಹ ಗಮನಾರ್ಹವಾಗಿ ಹೆಚ್ಚಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಫಾಸ್​ಟ್ಯಾಗ್ ಮೂಲಕ ದಿನಕ್ಕೆ ಸರಾಸರಿ 140 ಕೋಟಿ ರೂನಷ್ಟು ಟೋಲ್ ಸಂಗ್ರಹವಾಗುತ್ತಿದೆ.

ಮಾಸಿಕ ಟೋಲ್ ಪಾಸ್

ಟೋಲ್ ಪ್ಲಾಜಾದಿಂದ 20 ಕಿಮೀ ಸುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿರುವ ನಾನ್ಕಮರ್ಷಿಯಲ್ ವಾಹನ ಸವಾರರಿಗೆ ಮಾಸಿಕ ಪಾಸ್ ನೀಡಲಾಗುತ್ತದೆ. ಇದು ಸದ್ಯ ತಿಂಗಳಿಗೆ 315 ರೂ ಇದೆ. ಈ ದರವನ್ನು ಶೇ. 10ರಷ್ಟು ಹೆಚ್ಚು ಮಾಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:56 pm, Sun, 5 March 23