Twitter- Elon Musk Negotiation: ಕಂಪೆನಿ ಮಾರಾಟಕ್ಕೆ ಸಂಬಂಧಿಸಿದಂತೆ ಎಲಾನ್ ಮಸ್ಕ್ ಜತೆ ಮಾತುಕತೆ ಆರಂಭಿಸಿದ ಟ್ವಿಟ್ಟರ್

| Updated By: Srinivas Mata

Updated on: Apr 25, 2022 | 12:38 PM

ಮೂಲಗಳು ತಿಳಿಸಿರುವ ಪ್ರಕಾರ, ಷೇರು ಮಾರಾಟಕ್ಕೆ ಸಂಬಂಧಿಸಿದಂತೆ ಎಲಾನ್ ಮಸ್ಕ್ ಅವರ ಜತೆಗೆ ಟ್ವಿಟ್ಟರ್ ಭಾನುವಾರದಿಂದ ಮಾತುಕತೆ ಆರಂಭಿಸಿದೆ.

Twitter- Elon Musk Negotiation: ಕಂಪೆನಿ ಮಾರಾಟಕ್ಕೆ ಸಂಬಂಧಿಸಿದಂತೆ ಎಲಾನ್ ಮಸ್ಕ್ ಜತೆ ಮಾತುಕತೆ ಆರಂಭಿಸಿದ ಟ್ವಿಟ್ಟರ್
ಎಲಾನ್ ಮಸ್ಕ್ (ಸಂಗ್ರಹ ಚಿತ್ರ)
Follow us on

ಟ್ವಿಟ್ಟರ್ ಇಂಕ್ ಭಾನುವಾರದಂದು (ಏಪ್ರಿಲ್ 24, 2022) ಎಲಾನ್ ಮಸ್ಕ್ (Elon Musk) ಅವರೊಂದಿಗೆ ಒಪ್ಪಂದದ ಮಾತುಕತೆಗಳನ್ನು ಪ್ರಾರಂಭಿಸಿದ್ದು, ಮಸ್ಕ್ ಅವರು ತಮ್ಮ 43 ಬಿಲಿಯನ್ ಯುಎಸ್​ಡಿ ಸ್ವಾಧೀನ ಆಫರ್‌ ನೀಡುವುದರೊಂದಿಗೆ ಸಾಮಾಜಿಕ ಮಾಧ್ಯಮ ಕಂಪೆನಿ ಟ್ವಿಟ್ಟರ್​ನ ಅನೇಕ ಷೇರುದಾರರು ಆಕರ್ಷಿತರಾಗಿದ್ದಾರೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಜನರು ಹೇಳಿದ್ದಾರೆ. ಭಾನುವಾರ ಆರಂಭದಲ್ಲೇ ಮಸ್ಕ್ ಜತೆಗೆ ಮಾತುಕತೆ ನಡೆಸುವ ತೀರ್ಮಾನಕ್ಕೆ ಬಂದಿದೆ ಎಂದ ಮಾತ್ರಕ್ಕೆ​ ಕಂಪೆನಿಯು ಪ್ರತಿ ಷೇರಿಗೆ 54.20 ಯುಎಸ್​ಡಿ ಬಿಡ್ ಅನ್ನು ಸ್ವೀಕರಿಸುತ್ತದೆ ಎಂದು ಅರ್ಥವಲ್ಲ ಎಂಬುದಾಗಿ ಮೂಲಗಳು ತಿಳಿಸಿವೆ. ಆದರೆ ಟ್ವಿಟ್ಟರ್ ಈಗ ಕಂಪೆನಿಯನ್ನು ಮಸ್ಕ್‌ಗೆ ಮಾರಾಟ ಮಾಡಲು ಆಕರ್ಷಕ ನಿಬಂಧನೆಗಳು ಇವೆಯೇ ಎಂಬುದಾಗಿ ಅನ್ವೇಷಿಸುತ್ತಿರುವುದಾಗಿ ಇದು ಸೂಚಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಟೆಸ್ಲಾ ಇಂಕ್‌ನ ಸಿಇಒ ಮಸ್ಕ್ ಅವರು ಕಳೆದ ಕೆಲವು ದಿನಗಳಲ್ಲಿ ಟ್ವಿಟ್ಟರ್ ಷೇರುದಾರರನ್ನು ಭೇಟಿಯಾಗುತ್ತಿದ್ದು, ಅವರ ಬಿಡ್‌ಗೆ ಬೆಂಬಲವನ್ನು ಕೋರಿದ್ದಾರೆ. ಟ್ವಿಟ್ಟರ್ ಬೆಳೆಯಲು ಮತ್ತು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿಜವಾದ ಪ್ಲಾಟ್​ಫಾರ್ಮ್ ಆಗಲು ಖಾಸಗಿಯಾಗಿ ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಮಸ್ಕ್ ಗುರುವಾರ ತನ್ನ ಬಿಡ್‌ಗಾಗಿ ವಿವರವಾದ ಹಣಕಾಸು ಯೋಜನೆಯನ್ನು ವಿವರಿಸಿದ ಮೇಲೆ ಮತ್ತು ಒಪ್ಪಂದದ ಅವಕಾಶವನ್ನು ಕಳೆದುಕೊಳ್ಳದಂತೆ ತಿಳಿಸಿದ ನಂತರ ಟ್ವಿಟ್ಟರ್​ನ ಅನೇಕ ಷೇರುದಾರರು ಕಂಪೆನಿಯನ್ನು ಸಂಪರ್ಕಿಸಿದ್ದಾರೆ ಎಂದು ರಾಯಿಟರ್ಸ್ ಭಾನುವಾರದಂದು ವರದಿ ಮಾಡಿದೆ. ಟ್ವಿಟ್ಟರ್‌ಗಾಗಿ ತನ್ನ ಬಿಡ್ “ಅತ್ಯುತ್ತಮ ಮತ್ತು ಅಂತಿಮ” ಎಂದು ಮಸ್ಕ್ ಅವರ ಆಹ್ವಾನವು ಒಪ್ಪಂದದ ಮಾತುಕತೆಗಳಲ್ಲಿ ಅಡಚಣೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಅದೇನೇ ಇದ್ದರೂ ಒಪ್ಪಂದವನ್ನು ಪೂರ್ಣಗೊಳಿಸುವ ಸಾಮರ್ಥ್ಯದ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಉತ್ತಮ ಅವಕಾಶ ಪಡೆಯಲು ಟ್ವಿಟ್ಟರ್ ಮಂಡಳಿಯು ಮಸ್ಕ್ ಅವರೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಪಾಯಿಸನ್ ಪಿಲ್ ತಂತ್ರ
ಮೂಲಗಳ ಪ್ರಕಾರ, ಟ್ವಿಟ್ಟರ್ ತನ್ನ ಬಿಡ್ ಅನ್ನು ಹೆಚ್ಚಿಸಲು ಮಸ್ಕ್ ಮೇಲೆ ಒತ್ತಡ ಹೇರುವುದಕ್ಕೆ ಮಾರಾಟವನ್ನು ಯಾವ ದರಕ್ಕೆ ಕೇಳಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಒಪ್ಪಂದದ ಚರ್ಚೆಗಳು ಗೋಪ್ಯವಾಗಿ ಇರುವುದರಿಂದ ವಿಷಯದ ಬಗ್ಗೆ ತಿಳಿದಿರುವ ಜನರು ತಮ್ಮ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಯುಎಸ್ ಸೆಕ್ಯೂರಿಟೀಸ್ ಅಂಡ್ ಎಕ್ಸ್​ಚೇಂಜ್ ಕಮಿಷನ್ (ಎಸ್ಇಸಿ) ಸೇರಿದಂತೆ ಇತರ ನಿಯಂತ್ರಕರಿಂದ ಮಸ್ಕ್​ ವಿರುದ್ಧ ಇರುವ ಯಾವುದೇ ಸಕ್ರಿಯ ತನಿಖೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಟ್ವಿಟ್ಟರ್ ಬಯಸುತ್ತಿದ್ದು, ಅದು ಒಪ್ಪಂದವನ್ನು ಪೂರ್ಣಗೊಳಿಸಲು ತಡೆ ಒಡ್ಡುತ್ತದೆ ಎಂದು ಮೂಲಗಳು ತಿಳಿಸಿವೆ. ಸೆಕ್ಯೂರಿಟೀಸ್ ವಕೀಲರು ಹೇಳುವ ಪ್ರಕಾರ, ನಾಲ್ಕು ವರ್ಷಗಳ ಹಿಂದೆ ತಾನು ಟೆಸ್ಲಾವನ್ನು ಖಾಸಗಿಯಾಗಿ ತೆಗೆದುಕೊಳ್ಳಲು ಹಣವನ್ನು ಪಡೆದುಕೊಂಡಿದ್ದೇನೆ ಎಂದು ಸೂಚಿಸುವ ಮೂಲಕ ಹೂಡಿಕೆದಾರರನ್ನು ದಾರಿ ತಪ್ಪಿಸಿದ ಆರೋಪವನ್ನು ಇತ್ಯರ್ಥಪಡಿಸಿದ ಮಸ್ಕ್, ಈ ವರ್ಷದ ಆರಂಭದಲ್ಲಿ ಟ್ವಿಟ್ಟರ್‌ನಲ್ಲಿ ಪಾಲನ್ನು ಸಂಗ್ರಹಿಸಿದ್ದರಿಂದ SEC ಬಹಿರಂಗಪಡಿಸುವಿಕೆ ನಿಯಮಗಳನ್ನು ಉಲ್ಲಂಘಿಸಿರಬಹುದು.

ಟ್ವಿಟ್ಟರ್ ತಾನು ನಿರ್ವಹಿಸುವ ಯಾವುದೇ ಪ್ರಮುಖ ಮಾರುಕಟ್ಟೆಗಳಲ್ಲಿ ನಿಯಂತ್ರಕರು ಮಸ್ಕ್ ಕಂಪೆನಿಯನ್ನು ಹೊಂದಲು ಆಕ್ಷೇಪಿಸುತ್ತಾರೆಯೇ ಎಂದು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿದ್ದು, ಮಸ್ಕ್‌ಗೆ ಮಾರಾಟವು ಅಪಾಯಕಾರಿ ಎಂದು ಟ್ವಿಟ್ಟರ್ ಸಾಬೀತು ಮಾಡಿದರೆ ಮೂಲಗಳ ಪ್ರಕಾರ ಇದು ಗಮನಾರ್ಹವಾದ ಬ್ರೇಕ್-ಅಪ್ ಶುಲ್ಕವನ್ನು ಕೇಳಬಹುದು. ಮಸ್ಕ್ ತನ್ನ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಳ್ಳದೆ ಕಂಪೆನಿಯಲ್ಲಿನ ತನ್ನ ಶೇ 9ಕ್ಕಿಂತ ಹೆಚ್ಚಿನ ಪಾಲನ್ನು ಶೇ 15ಕ್ಕಿಂತ ಹೆಚ್ಚಿಸದಂತೆ ತಡೆಯಲು ತನ್ನ ಪ್ರಸ್ತಾಪವನ್ನು ಮಾಡಿದ ನಂತರ ಸಾಮಾಜಿಕ ಮಾಧ್ಯಮ ಕಂಪೆನಿಯು ಪಾಯಿಸನ್ ಪಿಲ್ (ಅಸ್ತಿತ್ವದಲ್ಲಿ ಇರುವ ಷೇರುದಾರರೇ ಹೆಚ್ಚಿನ ಷೇರನ್ನು ಖರೀದಿಸುವುದಕ್ಕೆ ಮಾಡುವ ತಂತ್ರ) ಅಳವಡಿಸಿಕೊಂಡಿತು. ಪ್ರತಿಕ್ರಿಯೆಯಾಗಿ, ಮಸ್ಕ್ ತನ್ನ ಬಿಡ್‌ಗೆ ಟ್ವಿಟ್ಟರ್ ಷೇರುದಾರರ ಬೆಂಬಲವನ್ನು ನೋಂದಾಯಿಸಲು ಬಳಸಬಹುದಾದ ಟೆಂಡರ್ ಪ್ರಸ್ತಾಪವನ್ನು ಪ್ರಾರಂಭಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಟ್ವಿಟ್ಟರ್ ಮತ್ತು ಮಸ್ಕ್‌ನ ಪ್ರತಿನಿಧಿಗಳು ಪ್ರತಿಕ್ರಿಯಿಸಿಲ್ಲ
ಟ್ವಿಟ್ಟರ್‌ ಮಂಡಳಿಯು ಆತಂಕ ಏನೆಂದರೆ, ಅದು ಒಂದು ವೇಳೆ ಮಸ್ಕ್‌ರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸದಿದ್ದಲ್ಲಿ ಅನೇಕ ಷೇರುದಾರರು ಟೆಂಡರ್ ಪ್ರಸ್ತಾಪದಲ್ಲಿ ಅವರನ್ನು ಬೆಂಬಲಿಸಬಹುದು ಎಂದು ಮೂಲಗಳು ತಿಳಿಸಿವೆ. ಪಾಯಿಸನ್​ ಪಿಲ್ ತಂತ್ರವು ಟ್ವಿಟ್ಟರ್ ಷೇರುದಾರರು ತಮ್ಮ ಷೇರುಗಳನ್ನು ಟೆಂಡರ್ ಮಾಡುವುದನ್ನು ತಡೆಯುತ್ತದೆ, ಆದರೆ ಕಂಪೆನಿಯು ತನ್ನ ಅನೇಕ ಹೂಡಿಕೆದಾರರ ಇಚ್ಛೆಗೆ ವಿರುದ್ಧವಾಗಿ ನಡೆಯುತ್ತಿದ್ದರೆ ಅದರ ಮಾತುಕತೆಯ ಬಲ ಗಣನೀಯವಾಗಿ ದುರ್ಬಲಗೊಳ್ಳುತ್ತದೆ ಎಂದು ಚಿಂತಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಟ್ವಿಟ್ಟರ್ ಮತ್ತು ಮಸ್ಕ್‌ನ ಪ್ರತಿನಿಧಿಗಳು ಕಾಮೆಂಟ್‌ಗಾಗಿ ಮಾಡಿದ ವಿನಂತಿಗಳಿಗೆ ತಕ್ಷಣವೇ ಪ್ರತಿಕ್ರಿಯಿಸಿಲ್ಲ.

ಸ್ವಾಧೀನದ ಪ್ರಸ್ತಾಪವನ್ನು ಚರ್ಚಿಸಲು ಮಸ್ಕ್ ಮತ್ತು ಟ್ವಿಟ್ಟರ್ ಪರ ಪ್ರತಿನಿಧಿಗಳು ಭೇಟಿ ಆಗಲಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಭಾನುವಾರ ವರದಿ ಮಾಡಿದೆ. ಟ್ವಿಟ್ಟರ್ ಷೇರುದಾರರಲ್ಲಿನ ಒಪ್ಪಂದದ ಬೆಲೆ ನಿರೀಕ್ಷೆಗಳು ಹೆಚ್ಚಾಗಿ ಅವರ ಹೂಡಿಕೆಯ ಕಾರ್ಯತಂತ್ರದ ಆಧಾರದ ಮೇಲೆ ಭಿನ್ನವಾಗಿರುತ್ತವೆ ಎಂದು ಮೂಲಗಳು ತಿಳಿಸಿವೆ. ಸಕ್ರಿಯ ದೀರ್ಘಾವಧಿ ಷೇರುದಾರರು ಸೂಚ್ಯಂಕ ನಿಧಿಗಳೊಂದಿಗೆ ಟ್ವಿಟ್ಟರ್ ಷೇರುಗಳ ದೊಡ್ಡ ಭಾಗವನ್ನು ಹೊಂದಿದ್ದು, ಹೆಚ್ಚಿನ ಬೆಲೆ ನಿರೀಕ್ಷೆಗಳನ್ನು ಹೊಂದಿದ್ದಾರೆ. ಕೆಲವರು ಪ್ರತಿ ಷೇರಿಗೆ ಯುಎಸ್​ಡಿ 60 ಎಂದು ಮೂಲಗಳು ತಿಳಿಸಿವೆ. ಅವರು ನವೆಂಬರ್‌ನಲ್ಲಿ ಟ್ವಿಟ್ಟರ್‌ನ ಮುಖ್ಯ ಕಾರ್ಯನಿರ್ವಾಹಕರಾದ ಪರಾಗ್ ಅಗರವಾಲ್‌ಗೆ ಕಂಪೆನಿಯ ಷೇರುಗಳ ಮೌಲ್ಯವನ್ನು ಹೆಚ್ಚಿಸಲು ಹೆಚ್ಚಿನ ಸಮಯವನ್ನು ನೀಡಲು ಒಲವು ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟ್ವಿಟ್ಟರ್ ಯಾವುದೇ ಸಮಯದಲ್ಲಿ ಹೆಚ್ಚಿನ ಮೌಲ್ಯ ನೀಡಬಹುದು
“ಎಲಾನ್ ಮಸ್ಕ್ ಅವರ ಪ್ರಸ್ತಾವಿತ ಕೊಡುಗೆ (ಪ್ರತಿ ಷೇರಿಗೆ ಯುಎಸ್​ಡಿ 54.20) ಟ್ವಿಟ್ಟರ್‌ನ ಬೆಳವಣಿಗೆಯ ನಿರೀಕ್ಷೆಗಳಿಗೆ ಹತ್ತಿರದಲ್ಲಿದೆ ಎಂದು ನಾನು ನಂಬುವುದಿಲ್ಲ,” ಎಂಬುದಾಗಿ ಟ್ವಿಟ್ಟರ್ ಷೇರುದಾರ- ಸೌದಿ ಅರೇಬಿಯಾದ ರಾಜ ಅಲ್ವಲೀದ್ ಬಿನ್ ತಲಾಲ್, ಏಪ್ರಿಲ್ 14ರಂದು ಟ್ವೀಟ್ ಮಾಡಿದ್ದಾರೆ. ಹೆಡ್ಜ್ ಫಂಡ್‌ಗಳಂತಹ ಟ್ವಿಟ್ಟರ್​ನ ಅಲ್ಪಾವಧಿ ಹೂಡಿಕೆದಾರರು ಮಸ್ಕ್‌ನ ಪ್ರಸ್ತಾಪವನ್ನು ಸ್ವೀಕರಿಸಲು ಬಯಸುತ್ತಾರೆ ಅಥವಾ ಸಣ್ಣ ಹೆಚ್ಚಳವನ್ನು ಮಾತ್ರ ಕೇಳುತ್ತಾರೆ ಎಂದು ಮೂಲಗಳು ತಿಳಿಸಿವೆ. ಹಣದುಬ್ಬರ ಮತ್ತು ಆರ್ಥಿಕ ಮಂದಗತಿಯ ಮೇಲಿನ ಕಳವಳಗಳ ಮಧ್ಯೆ ತಂತ್ರಜ್ಞಾನದ ಷೇರುಗಳ ಮೌಲ್ಯದಲ್ಲಿ ಇತ್ತೀಚಿನ ಕುಸಿತವು ಟ್ವಿಟ್ಟರ್ ಯಾವುದೇ ಸಮಯದಲ್ಲಿ ಶೀಘ್ರ ಹೆಚ್ಚಿನ ಮೌಲ್ಯವನ್ನು ನೀಡಲು ಸಾಧ್ಯವಾಗುವಂತೆ ಮಾಡುತ್ತದೆ ಎಂದು ಕೆಲವರು ಚಿಂತಿಸುತ್ತಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

“ಒಂದು ಷೇರಿಗೆ ಯುಎಸ್​ಡಿ 54.20 ತೆಗೆದುಕೊಳ್ಳಿ ಮತ್ತು ಅದನ್ನು ಮುಗಿಸಿಕೊಡಿ ಎಂದು ನಾನು ಹೇಳುತ್ತೇನೆ” ಎಂಬುದಾಗಿ 2020 ರ ಆರಂಭದಿಂದಲೂ ಹೂಡಿಕೆದಾರರಾಗಿ ಇರುವ ಟ್ವಿಟ್ಟರ್‌ನಲ್ಲಿ 1.13 ಮಿಲಿಯನ್ ಷೇರುಗಳು ಅಥವಾ ಕಂಪೆನಿಯ ಶೇ 0.15ರಷ್ಟು ಪಾಲನ್ನು ಹೊಂದಿರುವ ಹೆಡ್ಜ್ ಫಂಡ್, ಕೆರಿಸ್‌ಡೇಲ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್‌ನ ಪೋರ್ಟ್‌ಫೋಲಿಯೋ ಮ್ಯಾನೇಜರ್ ಸಾಹ್ಮ್ ಅದ್ರಾಂಗಿ. ಟ್ವಿಟ್ಟರ್ ಮಂಡಳಿಗೆ ಒಂದು ಸಕಾರಾತ್ಮಕ ಚಿಹ್ನೆ ಅಂದರೆ, ಮಸ್ಕ್ ಅವರ 83 ಮಿಲಿಯನ್ ಟ್ವಿಟ್ಟರ್ ಅನುಯಾಯಿಗಳು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಟ್ವಿಟ್ಟರ್ ಇಂಕ್ ಕಂಪೆನಿಯಲ್ಲಿ ಹೊಸ ಷೇರುದಾರರನ್ನಾಗಿ ಪರಿವರ್ತಿಸಲು ಆಸಕ್ತಿ ತೋರುತ್ತಿಲ್ಲ, ಅವರು ತಮ್ಮ ಬಿಡ್ ಅನ್ನು ಬೆಂಬಲಿಸಬಹುದು ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ 4ರಂದು ಮಸ್ಕ್ ತನ್ನ ಪಾಲನ್ನು ಅನಾವರಣಗೊಳಿಸುವ ಮೊದಲು ಟ್ವಿಟ್ಟರ್‌ನ ರೀಟೇಲ್ ಹೂಡಿಕೆದಾರರ ಮೂಲವು ಸುಮಾರು ಶೇ 20ರಿಂದ ಸುಮಾರು ಶೇ 22ಕ್ಕೆ ಏರಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Elon Musk: 19 ಲಕ್ಷ ಕೋಟಿ ರೂ. ಆಸ್ತಿಯ ವಿಶ್ವದ ನಂಬರ್ 1 ಶ್ರೀಮಂತನಿಗೆ ಈಗ ಟ್ವಿಟ್ಟರ್ ಖರೀದಿಗೆ 3.28 ಲಕ್ಷ ಕೋಟಿ ರೂ. ಹೊಂದಿಸುವ ಚಿಂತೆ