ಜಿಮೇಲ್ ಅಕೌಂಟ್​ನ ಪಾಸ್​ವರ್ಡ್ ರೀಸೆಟ್ ಮಾಡೋದು ಹೇಗೆಂದು ಗೂಗಲ್ ಸಿಇಒ ಸುಂದರ್​ ಪಿಚೈಗೆ ಟ್ವೀಟ್

ಜಿಮೇಲ್ ಪಾಸ್​ವರ್ಡ್ ರೀಸೆಟ್ ಮಾಡೋದು ಹೇಗೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಅವರನ್ನೇ ಪ್ರಶ್ನಿಸಿ ಟ್ವಿಟರ್ ಬಳಕೆದಾರರು ಮಾಡಿರುವ ಟ್ವೀಟ್ ಈಗ ಬಹಳ ಸುದ್ದಿಯಲ್ಲಿದೆ.

  • TV9 Web Team
  • Published On - 12:23 PM, 30 Apr 2021
ಜಿಮೇಲ್ ಅಕೌಂಟ್​ನ ಪಾಸ್​ವರ್ಡ್ ರೀಸೆಟ್ ಮಾಡೋದು ಹೇಗೆಂದು ಗೂಗಲ್ ಸಿಇಒ ಸುಂದರ್​ ಪಿಚೈಗೆ ಟ್ವೀಟ್
ಸುಂದರ್ ಪಿಚೈ (ಸಂಗ್ರಹ ಚಿತ್ರ)

ಜಿಮೇಲ್ ಅಕೌಂಟ್​ನ ಪಾಸ್​ವರ್ಡ್ ಮರೆತುಬಿಡೋದು ಅಥವಾ ಕಳೆದುಕೊಳ್ಳೋದು ಬಹಳ ಮುಜುಗರ ತರುವಂಥದ್ದು. ಆದರೆ ಈಗ ಏನೆಂದರೆ, ಯೂಟ್ಯೂಬ್ ಅನ್ನೋ ಮಹಾನ್ ಮಾರ್ಗದರ್ಶಕ ಕಣ್ಣೆದುರು ಇರುವಾಗ ಎಲ್ಲಕ್ಕೂ ಪರಿಹಾರ ಛಕಾಛಕ್ ಸಿಗುತ್ತದೆ. ಈಗ ಹೇಳಿದ ಸಣ್ಣ- ಪುಟ್ಟ ಸಮಸ್ಯೆಗಳೆಲ್ಲ ಸಮಸ್ಯೆಗಳೇ ಅಲ್ಲವೇನೋ ಎಂಬಷ್ಟು ಸಲೀಸಾಗಿ ನಿವಾರಣೆ ಆಗುತ್ತದೆ. ಒಂದು ವೇಳೆ, ಯೂಟ್ಯೂಬ್​ನಲ್ಲೂ ಪರಿಹಾರ ಸಿಗದಿದ್ದರೆ ಕಸ್ಟಮರ್ ಸರ್ವೀಸ್​ ಬಳಿ ಕೇಳ್ತೀವಲ್ಲವಾ? ಜಿಮೇಲ್ ಅಕೌಂಟ್​ನಲ್ಲಿ ಸಮಸ್ಯೆ ಆಯಿತು ಅಂತ ನೀವು ಎಂದಾದರೂ ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಟ್ವೀಟ್ ಮಾಡುವ ಬಗ್ಗೆ ಆಲೋಚನೆ ಮಾಡಿದ್ದೀರಾ? ಇದ್ಯಾಕೋ ಅತಿಯಾಯಿತು ಅಂತನಿಸ್ತಿದೆಯಾ? ಹಾಗಿದ್ದರೆ ಟ್ವಿಟರ್ ಬಳಕೆದಾರ @Madhan67966174 ಟ್ಚೀಟ್ ನೋಡಲೇಬೇಕು.

ಈ ಟ್ವಿಟರ್ ಬಳಕೆದಾರ ಈಚೆಗೆ ಮೈಕ್ರೋ-ಬ್ಲಾಗಿಂಗ್ ಸೈಟ್ ಮೂಲಕ ಸುಂದರ್ ಪಿಚೈ ಅವರನ್ನು ಮನವಿ ಮಾಡಿದ್ದಾರೆ. ನನ್ನ ಪಾಸ್​ವರ್ಡ್ ರೀಸೆಟ್ ಮಾಡುವುದಕ್ಕೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. “ಹಲೋ ಸರ್. ಹೇಗಿದ್ದೀರಿ? ಜಿಮೇಲ್ ಐಡಿ ಪಾಸ್​ವರ್ಡ್ ಬಗ್ಗೆ ನನಗೆ ಒಂದು ಸಹಾಯ ಆಗಬೇಕಿದೆ. ಪಾಸ್​ವರ್ಡ್ ರೀಸೆಟ್ ಮಾಡುವುದು ಹೇಗೆ ಅಂತ ಮರೆತುಬಿಟ್ಟಿದ್ದೀನಿ. ದಯವಿಟ್ಟು ನನಗೆ ಸಹಾಯ ಮಾಡಿ,” ಎಂದಿದ್ದಾರೆ.

ಅಂದಹಾಗೆ, ಈಚೆಗೆ ಸುಂದರ್ ಪಿಚೈ ಅವರು ಭಾರತದಲ್ಲಿನ ಕೋವಿಡ್-19 ಸನ್ನಿವೇಶಕ್ಕೆ ನೆರವಿನ ಹಸ್ತ ಚಾಚಲು ಮುಂದಾಗಿದ್ದಾರೆ. ಅವರು ಟ್ವೀಟ್ ಮಾಡಿ, ಗೂಗಲ್​ನಿಂದ ಗಿವ್ ಇಂಡಿಯಾ ಮತ್ತು ಯುನಿಸೆಫ್​ಗೆ ವೈದ್ಯಕೀಯ ಪೂರೈಕೆಗೆ, ತೀರಾ ಅಪಾಯದಲ್ಲಿ ಇರುವ ಸಮುದಾಯಕ್ಕೆ ಸಹಾಯ ಮಾಡುವ ಸಂಸ್ಥೆಗಳಿಗೆ ಮತ್ತು ಮುಖ್ಯ ಮಾಹಿತಿಯನ್ನು ಪ್ರಚಾರ ಮಾಡುವುದಕ್ಕೆ ಅನುದಾನ ಒದಗಿಸುವುದಕ್ಕೆ 135 ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದಾರೆ. ಆ ಸಂಬಂಧವಾಗಿ ಅವರು ಟ್ವೀಟ್ ಮಾಡಿದ್ದು, ಆ ಟ್ವೀಟ್​ನಲ್ಲಿ ಮದನ್ ತಮ್ಮ ಜಿಮೇಲ್ ಪಾಸ್​ವರ್ಡ್ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಇದನ್ನು ನೋಡಿದರೆ ಸುಂದರ್ ಪಿಚೈ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಬಗ್ಗೆ ಕುತೂಹಲ ಇದ್ದೇ ಇದೆ.

ಇದನ್ನೂ ಓದಿ: ಭಾರತದಲ್ಲಿ ಡಿಜಿಟಲ್​ ಕ್ರಾಂತಿ: ಗೂಗಲ್‌ನಿಂದ 75,000 ಕೋಟಿ ರೂ. ಹೂಡಿಕೆ

(Twitter user Madhan asked Google CEO Sundar Pichai help to reset Gmail password)