AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನಸಿ ಅಂಗಡಿಗಳಿಗೆ ಮುಳುವಾಗುತ್ತಿವೆಯಾ ಕ್ವಿಕ್ ಕಾಮರ್ಸ್ ಕಂಪನಿಗಳು? ರಾಜಕೀಯ ಅಪಾಯ ಗುರುತಿಸಿದ ಉದ್ಯಮಿ ಉದಯ್ ಕೋಟಕ್

Uday Kotak on Quick Commerce: ಕ್ಷಿಪ್ರವಾಗಿ ಸರಕುಗಳನ್ನು ಗ್ರಾಹಕರಿಗೆ ತಲುಪಿಸುವ ಕ್ವಿಕ್ ಕಾಮರ್ಸ್ ಕಂಪನಿಗಳ ಬೆಳವಣಿಗೆಯು ಸ್ಥಳೀಯ ರೀಟೇಲ್ ಅಂಗಡಿಗಳಿಗೆ ಮುಳುವಾಗಬಹುದು ಎಂದಿದ್ದಾರೆ ಉದಯ್ ಕೋಟಕ್. ಈ ಬೆಳವಣೆಗೆಯು ರಾಜಕೀಯ ವಾಸನೆ ಪಡೆಬಹುದು ಎಂದೂ ಬ್ಯಾಂಕಿಂಗ್ ಉದ್ಯಮಿ ಎಚ್ಚರಿಸಿದ್ದಾರೆ. ಬ್ಲಿಂಕಿಟ್, ಜೆಪ್ಟೋ, ಸ್ವಿಗ್ಗಿ ಇನ್ಸ್​ಟಾಮಾರ್ಟ್, ಫ್ಲಿಪ್​ಕಾರ್ಟ್ ಕ್ವಿಕ್ ಮೊದಲಾದ ಕ್ವಿಕ್ ಕಾಮರ್ಸ್ ಕಂಪನಿಗಳು ಭಾರತದಲ್ಲಿ ಯಶಸ್ವಿಯಾಗಿವೆ.

ದಿನಸಿ ಅಂಗಡಿಗಳಿಗೆ ಮುಳುವಾಗುತ್ತಿವೆಯಾ ಕ್ವಿಕ್ ಕಾಮರ್ಸ್ ಕಂಪನಿಗಳು? ರಾಜಕೀಯ ಅಪಾಯ ಗುರುತಿಸಿದ ಉದ್ಯಮಿ ಉದಯ್ ಕೋಟಕ್
ಬ್ಲಿಂಕಿಟ್, ಜೆಪ್ಟೋ ಡೆಲಿವರಿ ಬಾಯ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 18, 2024 | 5:29 PM

Share

ನವದೆಹಲಿ, ನವೆಂಬರ್ 18: ಕೆಲವೇ ನಿಮಿಷಗಳಲ್ಲಿ ಮನೆಬಾಗಿಲಿಗೆ ದಿನಸಿ ವಸ್ತುಗಳನ್ನು ತಂದು ಇಡುವ ಕ್ವಿಕ್ ಕಾಮರ್ಸ್ ಕಂಪನಿಗಳ ಬಿಸಿನೆಸ್​ನಿಂದಾಗಿ ದಿನಸಿ ಅಂಗಡಿಗಳು ಹೆಚ್ಚು ಅಪ್ರಸ್ತುತಗೊಳ್ಳುವ ಸಾಧ್ಯತೆ ಕಾಣುತ್ತಿದೆ. ಬ್ಯಾಂಕಿಂಗ್ ಉದ್ಯಮಿಯಾದ ಉದಯ್ ಕೋಟಕ್ ಅವರು ಈ ಟ್ರೆಂಡ್ ಅನ್ನು ಗುರುತಿಸಿದ್ದಾರೆ. ಸಾಂಪ್ರದಾಯಿಕ ರೀಟೇಲ್ ಸ್ಟೋರ್​ಗಳಿಗೆ ಕ್ವಿಕ್ ಕಾಮರ್ಸ್ ದಾಳಿಯಿಂದ ಅಪಾಯವಾಗುತ್ತಿದೆ ಎಂದು ಉದಯ್ ಕೋಟಕ್ ಆತಂಕ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಈ ವಿಚಾರವು ರಾಜಕೀಯ ಪಡಸಾಲೆಗಳನ್ನು ತಲುಪಿ ಅಲ್ಲಿ ಗಂಭೀರ ಸ್ವರೂಪ ಪಡೆಯಬಹುದು ಎಂದು ಎಚ್ಚರಿಸಿದ್ದಾರೆ.

ಬ್ಲಿಂಕಿಟ್, ಜೆಪ್ಟೋ, ಸ್ವಿಗ್ಗಿ ಇನ್ಸ್​ಟಾಮಾರ್ಟ್ ಮೊದಲಾದ ಕ್ವಿಕ್ ಕಾಮರ್ಸ್ ಕಂಪನಿಗಳು ದಿನೇ ದಿನೇ ಜನಪ್ರಿಯವಾಗುತ್ತಿದ್ದು, ಬಿಸಿನೆಸ್ ಕೂಡ ಹೆಚ್ಚಾಗುತ್ತಿದೆ. ಕೋಟಕ್ ಮಹೀಂದ್ರ ಬ್ಯಾಂಕ್​ನ ಸಂಸ್ಥಾಪಕರೂ ಆದ ಉದಯ್ ಕೋಟಕ್ ಅವರು ಭಾರತದ ಕ್ವಿಕ್ ಕಾಮರ್ಸ್ ಬಿಸಿನೆಸ್ ಮಾಡಲ್ ಅನ್ನು ಪ್ರಶಂಸೆ ಕೂಡ ಮಾಡಿದ್ದಾರೆ. ಜೊತೆಗೆ, ಸ್ಥಳೀಯ ರೀಟೇಲ್ ಅಂಗಡಿಗಳಿಗೆ ಅದು ಮುಳುವಾಗುವ ಅಪಾಯದ ಸಾಧ್ಯತೆಯನ್ನೂ ತೋರಿಸಿದ್ದಾರೆ.

ಇದನ್ನೂ ಓದಿ: ಉಂಡೂ ಹೋದ ಕೊಂಡೂ ಹೋದ ಅಲ್ಲ ಪಿಎಲ್​ಐ ಸ್ಕೀಮ್; 19 ಪಟ್ಟು ಹೆಚ್ಚು ಆದಾಯ ತಂದುಕೊಟ್ಟಿದೆ ಸ್ಮಾರ್ಟ್​ಫೋನ್ ಉದ್ಯಮ

ಕ್ವಿಕ್ ಸರ್ವಿಸ್ ರೀಟೇಲ್ ಮಾಡಲ್​ನಲ್ಲಿ ಭಾರತ ಸಾಧಿಸಿರುವ ಯಶಸ್ಸನ್ನು ಬೇರೆ ದೇಶಗಳಲ್ಲಿ ಕಾಣಲು ಸಾಧ್ಯವಾಗಿಲ್ಲ ಎನ್ನುವುದು ಉದಯ್ ಕೋಟಕ್ ಅವರ ಅನಿಸಿಕೆ.

ಇದೇ ವೇಳೆ, ಭಾರತದಲ್ಲಿ ಆ್ಯಪಲ್, ಮೆಟಾ, ಯುನಿಲಿವರ್ ಇತ್ಯಾದಿ ಜಾಗತಿಕ ಬ್ರ್ಯಾಂಡ್​ಗಳನ್ನು ನಿರ್ಮಿಸಬೇಕು ಎಂದು ಭಾರತೀಯ ಕಂಪನಿಗಳಿಗೆ ಉದಯ್ ಕೋಟಕ್ ಕರೆ ನೀಡಿದ್ದಾರೆ.

ಭಾರತದಲ್ಲಿ ಕ್ವಿಕ್ ಕಾಮರ್ಸ್ ಮಾರುಕಟ್ಟೆ 2024ರಲ್ಲಿ 6.1 ಬಿಲಿಯನ್ ಡಾಲರ್ ಇದೆ. 2030ರೊಳಗೆ ಅದು 40 ಬಿಲಿಯನ್ ಡಾಲರ್ ಉದ್ಯಮವಾಗಲಿದೆ ಎಂದು ಡಾಟಮ್ ಇಂಟೆಲಿಜೆನ್ಸ್ ಸಂಸ್ಥೆಯ ವರದಿಯಲ್ಲಿ ಅಂದಾಜಿಸಲಾಗಿದೆ.

ಇದನ್ನೂ ಓದಿ: ಜಿ20 ಗುಂಪಲ್ಲಿ ಭಾರತವೇ ಸೂಪರ್​ಸ್ಟಾರ್; 2024ರ ಜಿಡಿಪಿ ಬೆಳವಣಿಗೆಯಲ್ಲಿ ಭಾರತ ನಂ. 1

ಬ್ಲಿಂಕಿಟ್, ಜೆಪ್ಟೋ, ಸ್ವಿಗ್ಗಿ ಇನ್ಸ್​ಟಾಮಾರ್ಟ್, ಫ್ಲಿಪ್​ಕಾರ್ಟ್ ಕ್ವಿಕ್ ಮೊದಲಾದ ಕ್ವಿಕ್ ಕಾಮರ್ಸ್ ಕಂಪನಿಗಳಿವೆ. ಗ್ರಾಹಕರು ಯಾವುದೇ ದಿನಸಿ ವಸ್ತುಗಳನ್ನು ಆನ್​ಲೈನ್​ನಲ್ಲಿ ಬುಕ್ ಮಾಡಿದರೆ ಕೇವಲ 10ರಿಂದ 30 ನಿಮಿಷದೊಳಗೆ ಗ್ರಾಹಕರ ವಿಳಾಸಕ್ಕೆ ತಂದು ಡೆಲಿವರಿ ಕೊಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ