
ನವದೆಹಲಿ, ಜನವರಿ 28: ಈ ಬಾರಿಯ ಬಜೆಟ್ನಲ್ಲಿ (Union Budget) ಮ್ಯಾನುಫ್ಯಾಕ್ಚರಿಂಗ್ ಎಕನಾಮಿ ಸುದೃಢಗೊಳಿಸಲು ಪ್ರಯತ್ನಿಸುವ ನಿರೀಕ್ಷೆ ಇದೆ. ಉದ್ಯೋಗ ಸೃಷ್ಟಿ ಹೆಚ್ಚು ಆಗುವಂತೆ ಕ್ರಮಗಳನ್ನು ಕೈಗೊಳ್ಳಬಹುದು. ಕಾರ್ಮಿಕರ ಕೆಲಸ ಬೇಕಿರುವ ಉದ್ಯಮಗಳಿಗೆ ಉತ್ತೇಜನ ನೀಡಲು ಬಜೆಟ್ನಲ್ಲಿ ಒತ್ತು ನೀಡುವ ನಿರೀಕ್ಷೆ ಇದೆ. ಜವಳಿ, ಲೆದರ್, ಆಭರಣ, ಕರಕುಶಲ ಸೆಕ್ಟರ್ಗಳಿಗೆ ನೆರವು ಸಿಗಬಹುದು. ಈ ವಲಯದ ಮಧ್ಯಮ ಗಾತ್ರದ ಉದ್ದಿಮೆಗಳ ಪ್ರಬಲ ಸಮೂಹವನ್ನು ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ. ಆ ನಿಟ್ಟಿನಲ್ಲಿ ಬಜೆಟ್ನಲ್ಲಿ ಕ್ರಮ ಕೈಗೊಳ್ಳಬಹುದು. ಎಂಎಸ್ಎಂಇಗಳಿಗೆ ಇನ್ನಷ್ಟು ಹೊಸ ಸ್ಕೀಮ್ಗಳ ಘೋಷಣೆ ಆಗಬಹುದು.
ಭಾರತಕ್ಕೆ ಈ ಮೊದಲು ಜನಸಂಖ್ಯೆಯೇ ಆರ್ಥಿಕ ಉನ್ನತಿಗೆ ಅಡ್ಡಗಾಲಾಗಿತ್ತು. ಆರ್ಥಿಕತೆ ವೇಗವಾಗಿ ಬೆಳವಣಿಗೆ ಹೊಂದದೇ ಇರುವುದು, ಮತ್ತು ಉದ್ಯೋಗ ಸೃಷ್ಟಿ ಹೆಚ್ಚು ಆಗದೇ ಇದ್ದದ್ದು ಮಾನವ ಸಂಪನ್ಮೂಲದ ಸರಿಯಾದ ಬಳಕೆಗೆ ಅವಕಾಶ ಇರಲಿಲ್ಲ. ಈಗ ಆರ್ಥಿಕತೆ ಬೃಹತ್ತಾಗಿ ಬೆಳೆಯುತ್ತಿದೆ. ಅತಿವೇಗದ ಆರ್ಥಿಕತೆಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಬೆಳವಣಿಗೆಗೆ ಅವಕಾಶ ಹೆಚ್ಚೆಚ್ಚು ಬೇಕಿದೆ. ಈ ನಿಟ್ಟಿನಲ್ಲಿ ನೀತಿಗಳು ರೂಪಿತವಾಗಬೇಕಾಗಿದೆ.
ಇದನ್ನೂ ಓದಿ: ಹೊಸ ಟ್ಯಾಕ್ಸ್ ರೆಜಿಮ್ನಲ್ಲಿ ಇನ್ನಷ್ಟು ಡಿಡಕ್ಷನ್ ಕೊಟ್ಟು, ಹಳೆಯ ಟ್ಯಾಕ್ಸ್ ಸಿಸ್ಟಂ ನಿಲ್ಲಿಸಲಾಗುತ್ತಾ?
ಮಾನವ ಸಂಪನ್ಮೂಲ ಹೆಚ್ಚಿದ್ದು, ಅದರ ಸದ್ಬಳಕೆಗೆ ಬೇಕಾದಷ್ಟು ಅವಕಾಶಗಳಿಲ್ಲವಾದರೆ ಜನರ ಆದಾಯ ನಿಂತ ನೀರಾಗಿರುತ್ತದೆ. ಆರ್ಥಿಕತೆಯೂ ನಿಂತ ನೀರಾಗುತ್ತದೆ. ಹೀಗಾಗಿ, ಉದ್ಯೋಗ ಸೃಷ್ಟಿ ಹೆಚ್ಚಿರುವಂತಹ ಸೆಕ್ಟರ್ಗಳು ಪ್ರಬಲವಾಗುವುದು ಅತ್ಯಗತ್ಯ. ಬಜೆಟ್ನಲ್ಲಿ ಈ ಕ್ರಮ ತೆಗೆದುಕೊಳ್ಳಲು ಮುಂದಾಗಬಹುದು.
ಕಳೆದ ವರ್ಷದ ಬಜೆಟ್ನಲ್ಲಿ ಕಾರ್ಮಿಕ ಸಮೃದ್ಧ ಕ್ಷೇತ್ರಗಳಿಗೆ ಹೆಚ್ಚಿನ ಹಣ ಒದಗಿಸಲಾಗಿತ್ತು. ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲಾಗಿದೆ. ಈ ಬಾರಿಯೂ ಬಜೆಟ್ ಗಮನ ಇದೇ ನಿಟ್ಟಿನಲ್ಲಿ ಇರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಹಲ್ವಾ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ; ಬಜೆಟ್ಗೆ ಮುಂಚೆ ನಡೆಯುವ ಇದರ ವಿಶೇಷತೆ ಏನು?
ಎಂಎಸ್ಎಂಇಗಳಿಗೆ ಇನ್ನಷ್ಟು ಒತ್ತು ಕೊಡುವುದು ಉತ್ತಮ ಮಾರ್ಗ ಎನ್ನುವುದು ತಜ್ಞರ ಅನಿಸಿಕೆ. ಈ ಸಣ್ಣ ಉದ್ದಿಮೆಗಳಿಗೆ ಉತ್ತಮ ಮೂಲಸೌಕರ್ಯ, ಸುಲಭ ಸಾಲ ಲಭ್ಯತೆ ಬಹಳ ಮುಖ್ಯ. ಜಾಗತಿಕ ಸರಬರಾಜು ಸರಪಳಿಯಲ್ಲಿ ಹೆಚ್ಚೆಚ್ಚು ಗುರುತಿಸಿಕೊಳ್ಳಬೇಕಾದರೆ ಸದೃಢವಾದ ಎಂಎಸ್ಎಂಇಗಳ ಅವಶ್ಯಕತೆ ಇದೆ. ಇವುಗಳಿಂದ ಉದ್ಯೋಗ ಸೃಷ್ಟಿಯೂ ಅಧಿಕ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ