AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಮಾನ್ಯ ಹೂಡಿಕೆದಾರರು ಈ ಬಾರಿಯ ಬಜೆಟ್​ನಲ್ಲಿ ಗಮನಿಸಬೇಕಾದ ಸಂಗತಿಗಳಿವು

Union Budget expectations: 2026ರ ಫೆಬ್ರುವರಿ 1ರಂದು ಮಂಡನೆಯಾಗುವ ಬಜೆಟ್​ನಲ್ಲಿ ಸಾಮಾನ್ಯ ಹೂಡಿಕೆದಾರರು ಗಮನಿಸಬೇಕಾದ ಹಲವು ಸಂಗತಿಗಳಿವೆ. ಈ ಬಜೆಟ್​ನಲ್ಲಿ ಎಲ್​ಟಿಸಿಜಿ ಅಥವಾ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ನು ಸರಳೀಕರಿಸುವ ಸಾಧ್ಯತೆ ಇದೆ. ಫಿಸ್ಕಲ್ ಡೆಫಿಸಿಟ್ ಮತ್ತು ಸಾಲದ ಪರಿಮಾಣವನ್ನು ಕಡಿಮೆ ಮಾಡಲು ಸರ್ಕಾರ ಗುರಿ ಇಡುತ್ತಾ ನೋಡಬೇಕು.

ಸಾಮಾನ್ಯ ಹೂಡಿಕೆದಾರರು ಈ ಬಾರಿಯ ಬಜೆಟ್​ನಲ್ಲಿ ಗಮನಿಸಬೇಕಾದ ಸಂಗತಿಗಳಿವು
ಹೂಡಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 23, 2026 | 6:05 PM

Share

ನವದೆಹಲಿ, ಜನವರಿ 23: ಟ್ಯಾರಿಫ್, ಯುದ್ಧ, ದರ್ಪ, ಭಯ, ಅನಿಶ್ಚಿತತೆ ಇತ್ಯಾದಿ ಬಿಕ್ಕಟ್ಟಿನ ಸ್ಥಿತಿಯಲ್ಲಿ ಜಗತ್ತು ಇರುವ ಹೊತ್ತಲ್ಲೇ ಭಾರತ ಸರ್ಕಾರ ಮುಂಬರುವ ವರ್ಷಕ್ಕೆ ಬಜೆಟ್ (Union Budget) ರೂಪಿಸಿದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆ ಆಗುತ್ತದೆ. ಆರ್ಥಿಕತೆ ಬೆಳವಣಿಗೆಗೆ ಪೂರಕವಾಗುವ ಅಂಶಗಳನ್ನು ಬಜೆಟ್​ನಿಂದ ನಿರೀಕ್ಷಿಸಲಾಗುತ್ತಿದೆ. ಸಾಮಾನ್ಯ ರೀಟೇಲ್ ಹೂಡಿಕೆದಾರರು ಈ ಬಜೆಟ್​ನಲ್ಲಿ ಏನು ನಿರೀಕ್ಷಿಸಬಹುದು, ಅಥವಾ ಗಮನಿಸಬಹುದು? ಇಲ್ಲಿದೆ ಒಂದಷ್ಟು ವಿವರ.

ಕ್ಯಾಪಿಟಲ್ ಗೇನ್ ಟ್ಯಾಕ್ಸ್​ನಲ್ಲಿ ಬದಲಾವಣೆ

ಸರ್ಕಾರ ಕಳೆದ ಒಂದು ವರ್ಷದಲ್ಲಿ ಜಿಎಸ್​ಟಿ ಮತ್ತು ಆದಾಯ ತೆರಿಗೆಯನ್ನು ಕಡಿಮೆಗೊಳಿಸಿದೆ ಮತ್ತು ಸರಳೀಕೃತಗೊಳಿಸಿದೆ. ಆದರೆ, ಷೇರು ಮಾರುಕಟ್ಟೆಯ ರೀಟೇಲ್ ಹೂಡಿಕೆದಾರರಿಗೆ ಟ್ಯಾಕ್ಸ್ ಹೊರೆ ಹೆಚ್ಚು ಇದೆ. ಎರಡು ವರ್ಷದ ಹಿಂದಿನ ಬಜೆಟ್​ನಲ್ಲಿ ಸರ್ಕಾರ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ನು ಶೇ. 12.5ಕ್ಕೆ ಏರಿಸಿತ್ತು. ಅದರ ಜೊತೆಗೆ, ವಿನಾಯಿತಿ ಮಿತಿಯನ್ನು 1 ಲಕ್ಷ ರೂನಿಂದ 1.25 ಲಕ್ಷ ರೂಗೂ ಏರಿಸಿತ್ತು. ಈಗ ಎಲ್​ಟಿಸಿಜಿ ಟ್ಯಾಕ್ಸ್ ಅನ್ನು ಕಡಿಮೆಗೊಳಿಸಲಿ ಮತ್ತು ಎಕ್ಸೆಂಪ್ಷನ್ ಲಿಮಿಟ್ ಏರಲಿ ಎಂದು ರೀಟೇಲ್ ಹೂಡಿಕೆದಾರರು ಬಯಸುತ್ತಿದ್ದಾರೆ. ಎಲ್​ಟಿಸಿಜಿಯನ್ನು ಕಡಿಮೆ ಮಾಡಿದರೆ ದೀರ್ಘಾವಧಿ ಹೂಡಿಕೆಗೆ ಉತ್ತೇಜನ ಸಿಕ್ಕಬಹುದು.

ಇದನ್ನೂ ಓದಿ: ಪಿಎಂ ಕಿಸಾನ್ ಹಣ ಎರಡು ಪಟ್ಟು ಹೆಚ್ಚಾಗುತ್ತಾ? ರೈತರ ನಿರೀಕ್ಷೆ ಈ ಬಜೆಟ್​ನಲ್ಲಿ ಈಡೇರುತ್ತಾ?

ಷೇರು ಖರೀದಿಸಿ 12 ತಿಂಗಳ ನಂತರ ಮಾರಿದರೆ ಅದಕ್ಕೆ ಎಲ್​ಟಿಸಿಜಿ ಅನ್ವಯ ಆಗುತ್ತದೆ. 12 ತಿಂಗಳ ಒಳಗೆ ಮಾರಿದರೆ, ಅದಕ್ಕೆ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ವಯ ಆಗುತ್ತದೆ. ಸದ್ಯ ಎಸ್​ಟಿಸಿಜಿ ಷೇರುಗಳಿಗೆ ಶೇ. 20ರಷ್ಟಿದೆ. ಷೇರುಗಳು, ಈಕ್ವಿಟಿ ಫಂಡ್​ಗಳಿಗೆ ಶೇ. 20 ಎಲ್​ಟಿಸಿಜಿ ಇದೆ. ಬೇರೆ ಆಸ್ತಿಗಳ ಮಾರಾಟದಿಂದ ಬಂದ ಲಾಭವಾದರೆ ಅದು ವ್ಯಕ್ತಿಯ ಆದಾಯ ತೆರಿಗೆ ಸ್ಲಾಬ್ ದರಗಳು ಅನ್ವಯ ಆಗುತ್ತದೆ.

ಸರ್ಕಾರದಿಂದ ಬಂಡವಾಳ ವೆಚ್ಚ ಹೆಚ್ಚಲಿ ಎನ್ನುವ ನಿರೀಕ್ಷೆ

ಕಳೆದ ಕೆಲ ವರ್ಷಗಳಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಮುಖ್ಯ ಶಕ್ತಿಯಾಗಿರುವುದು ಸರ್ಕಾರದ ಬಂಡವಾಳ ವೆಚ್ಚ. ಇನ್​ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್​ಗಳಿಗೆ ಸರ್ಕಾರದಿಂದ ಸಾಕಷ್ಟು ಬಂಡವಾಳ ವೆಚ್ಚ ಬೇಕಾಗುತ್ತದೆ. ಹಾಗೆಯೇ, ಡಿಫೆನ್ಸ್, ವಿದ್ಯುತ್, ಉತ್ಪಾದನೆ ಇತ್ಯಾದಿ ಕ್ಷೇತ್ರಗಳಲ್ಲೂ ಸರ್ಕಾರದಿಂದ ಹಣ ಹರಿದುಹೋಗಬೇಕಾಗುತ್ತದೆ. ಆರ್ಥಿಕ ಪ್ರಗತಿಗೆ ಕಾರಣವಾಗುವ ಸೆಕ್ಟರ್​ಗಳಿಗೆ ಬಜೆಟ್​ನಲ್ಲಿ ಎಷ್ಟು ಮಹತ್ವ ಕೊಡಲಾಗುತ್ತದೆ ಎಂಬುದನ್ನು ಗಮನಿಸಬೇಕಾಗುತ್ತದೆ.

ಇದನ್ನೂ ಓದಿ: ಬಜೆಟ್ 2026: ಆಸ್ಪತ್ರೆಗಳು ಹೆಚ್ಚಬೇಕು, ಸ್ಥಳೀಯ ಉತ್ಪಾದನೆ ಹೆಚ್ಚಬೇಕು- ಹೆಲ್ತ್​ಕೇರ್ ಉದ್ಯಮದ ಬಜೆಟ್ ನಿರೀಕ್ಷೆಗಳು…

ವಿತ್ತೀಯ ಕೊರತೆ ತಗ್ಗಿಸುವುದು ಸೇರಿದಂತೆ ಹಣಕಾಸು ಶಿಸ್ತು

ಸರ್ಕಾರವು ವಿತ್ತೀಯ ಕೊರತೆ ಅಥವಾ ಫಿಸ್ಕಲ್ ಡೆಫಿಸಿಟ್ ಅನ್ನು ತಗ್ಗಿಸುವತ್ತ ಗಮನ ಕೊಡುತ್ತಿದೆ. ಸಾಲವನ್ನೂ ಕೂಡ ಕಡಿಮೆಗೊಳಿಸಲು ಪ್ರಯತ್ನಿಸುತ್ತಿದೆ. ಮುಂದಿನ ಐದಾರು ವರ್ಷದಲ್ಲಿ ಸಾಲವು ದೇಶದ ಜಿಡಿಪಿಯ ಶೇ. 50ಕ್ಕಿಂತ ಕಡಿಮೆ ಇರಲಾಗುವಂತೆ ಸರ್ಕಾರ ಗುರಿ ಇಟ್ಟಿದೆ. ಈ ರೀತಿ ಸರ್ಕಾರವು ಆರ್ಥಿಕ ಶಿಸ್ತು ಕಾಯ್ದುಕೊಂಡಾಗ ವಿದೇಶೀ ಹೂಡಿಕೆದಾರರು ದೇಶದ ಮಾರುಕಟ್ಟೆಗೆ ಬರುವುದು ಹೆಚ್ಚಾಗುತ್ತದೆ. ಹೂಡಿಕೆಗಳು ಹೆಚ್ಚಾದಾಗ ಮಾರುಕಟ್ಟೆ ಬೆಳೆಯುತ್ತದೆ, ಹೆಚ್ಚು ರಿಟರ್ನ್ಸ್ ಕೊಡುತ್ತದೆ. ಹೀಗಾಗಿ, ಬಜೆಟ್​ನಲ್ಲಿ ಫಿಸ್ಕಲ್ ಡೆಫಿಸಿಟ್​ಗೆ ಸರ್ಕಾರ ಎಷ್ಟು ಗುರಿ ಇಟ್ಟಿದೆ ಎಂದು ಗಮನಿಸಬೇಕಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಭೈರತಿ ಸುರೇಶ್ ನೀವು 7 ತಿಂಗಳಿಗೆ ಹುಟ್ಟಿದವರಂತೆ ಆಡ್ಬೇಡಿ
ಭೈರತಿ ಸುರೇಶ್ ನೀವು 7 ತಿಂಗಳಿಗೆ ಹುಟ್ಟಿದವರಂತೆ ಆಡ್ಬೇಡಿ