ಶೇ. 70ರಷ್ಟು ಕುಸಿದಿರುವ ವೈಭವ್ ಗ್ಲೋಬಲ್ ಷೇರು ಮತ್ತೊಮ್ಮೆ ಮಲ್ಟಿಬ್ಯಾಗರ್ ಎನಿಸುತ್ತಾ? ವಿಜಯ್ ಕೇಡಿಯಾರಿಂದ ನೂರಾರು ಕೋಟಿ ರೂ ಹೂಡಿಕೆ

Vaibhav Global share price: ಕೇವಲ ಒಂದು ವರ್ಷದ ಅಂತರದಲ್ಲಿ ಐದಾರು ಪಟ್ಟು ಹೆಚ್ಚು ಬೆಲೆ ಪಡೆದಿದ್ದ ವೈಭವ್ ಗ್ಲೋಬಲ್ ಷೇರು ಈಗ ಶೇ. 70ರಷ್ಟು ಕುಸಿತ ಕಂಡಿದೆ. ಇದು ವಿಜಯ್ ಕೇಡಿಯಾ ಅವರಂಥ ದೊಡ್ಡ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. 20 ವರ್ಷದಲ್ಲಿ 28 ಪಟ್ಟು ಬೆಳೆದಿರುವ ಈ ಸ್ಟಾಕು ಮತ್ತೊಮ್ಮೆ ಮಲ್ಟಿಬ್ಯಾಗರ್ ಎನಿಸಬಹುದು.

ಶೇ. 70ರಷ್ಟು ಕುಸಿದಿರುವ ವೈಭವ್ ಗ್ಲೋಬಲ್ ಷೇರು ಮತ್ತೊಮ್ಮೆ ಮಲ್ಟಿಬ್ಯಾಗರ್ ಎನಿಸುತ್ತಾ? ವಿಜಯ್ ಕೇಡಿಯಾರಿಂದ ನೂರಾರು ಕೋಟಿ ರೂ ಹೂಡಿಕೆ
ಷೇರು ಮಾರುಕಟ್ಟೆ
Follow us
|

Updated on: Aug 13, 2024 | 3:52 PM

ಮುಂಬೈ, ಆಗಸ್ಟ್ 13: ಕ್ಷಿಪ್ರ ವೇಗದಲ್ಲಿ ಹೂಡಿಕೆದಾರರಿಗೆ ಲಾಭ ತಂದುಕೊಡುವ ಷೇರುಗಳನ್ನು ಮಲ್ಟಿಬ್ಯಾಗರ್ ಎಂದು ಕರೆಯಲಾಗುತ್ತದೆ. ಇಂಥ ಸ್ಟಾಕುಗಳನ್ನು ಗುರುತಿಸುವುದು ಅಷ್ಟು ಸುಲಭವಲ್ಲ. ಬೆಳವಣಿಗೆಯ ಆರಂಭಿಕ ಹಂತದಲ್ಲೇ ಇಂಥ ಷೇರುಗಳು ಪತ್ತೆಯಾಗುವುದು ಅದೃಷ್ಟ. ಭಾರತದಲ್ಲಿ ಮಲ್ಟಿಬ್ಯಾಗರ್ ಎನಿಸಿರುವ ಬಹಳಷ್ಟು ಸ್ಟಾಕುಗಳಿವೆ. ವೈಭವ್ ಗ್ಲೋಬಲ್ ಸಂಸ್ಥೆ ಇಂಥ ಷೇರುಗಳಲ್ಲಿ ಒಂದು. ಒಂದು ಕಾಲದಲ್ಲಿ ಅದ್ವಿತೀಯ ವೇಗದಲ್ಲಿ ಏರಿಕೆ ಕಂಡಿದ್ದ ವೈಭವ್ ಗ್ಲೋಬಲ್ ಷೇರಿನ ಬೆಲೆ ಈಗ ಶೇ. 70ರಷ್ಟು ಕಡಿಮೆ ಆಗಿದೆ. ಭಾರತದ ಅಗ್ರಮಾನ್ಯ ಹೂಡಿಕೆದಾರರೆನಿಸಿದ ವಿಜಯ್ ಕೇಡಿಯಾ ಅವರು ವೈಭವ್ ಗ್ಲೋಬಲ್​ನ ಸಾಕಷ್ಟು ಷೇರುಗಳನ್ನು ಖರೀದಿಸಿದ್ದಾರೆ. ಇದರೊಂದಿಗೆ ರೀಟೇಲ್ ಹೂಡಿಕೆದಾರರ ಕಣ್ಣು ಈ ಒಡವೆ ಉದ್ದಿಮೆಯ ಷೇರಿನ ಮೇಲೆ ನೆಡುವಂತೆ ಮಾಡಿದೆ.

ಭಾರತದಲ್ಲಿ ಒಡವೆ ಮಾರುಕಟ್ಟೆ ಸದಾ ಬಲವಾಗಿರುವ ಉದ್ಯಮ. ಒಡವೆಗಳಿಗಿರುವ ಬೇಡಿಕೆ ಸಾಮಾನ್ಯವಾಗಿ ಕಡಿಮೆ ಆಗುವುದಿಲ್ಲ. ವೈಭವ್ ಗ್ಲೋಬಲ್ ನಾನಾ ರೀತಿಯ ಫ್ಯಾಷನ್ ಜ್ಯುವೆಲರಿ ಉತ್ಪನ್ನಗಳನ್ನು ತಯಾರಿಸಿ ಮಾರುತ್ತದೆ. ಹೋಮ್ ಡೆಕೋರೇಶನ್, ವಾಚ್ ಇತ್ಯಾದಿ ಉತ್ಪನ್ನಗಳನ್ನು ಮಾರುತ್ತದೆ. ಕಳೆದ ಎರಡು ಮೂರು ವರ್ಷಗಳಿಂದ ಅದರ ಆದಾಯವೂ ಹೆಚ್ಚುತ್ತಿದೆ.

ಇದನ್ನೂ ಓದಿ: ಜಪಾನ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ ಮೇಡ್ ಇನ್ ಇಂಡಿಯಾ ಮಾರುತಿ ಕಾರು

ವೈಭವ್ ಗ್ಲೋಬಲ್​ನಲ್ಲಿ ವಿಜಯ್ ಕೇಡಿಯಾ 100 ಕೋಟಿ ರೂ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ಮಾರ್ಕೆಟ್ ಮಾಸ್ಟರ್ ಎಂದು ಹೆಸರಾದ ಕೇಡಿಯಾ ಷೇರು ಬಿಸಿನೆಸ್​ನಲ್ಲಿ ಬಹಳ ಯಶಸ್ವಿಯಾದ ಹೂಡಿಕೆದಾರ.

ಒಂದು ಸಾವಿರ ರೂವರೆಗೆ ಹೋಗಿದ್ದ ವೈಭವ್ ಷೇರುಬೆಲೆ

ವೈಭವ್ ಗ್ಲೋಬಲ್ ಷೇರುಬೆಲೆ 2021ರಲ್ಲಿ 1,050 ರೂ ಇತ್ತು. ಇವತ್ತು ಅದು 295 ರೂಗೆ ಇಳಿದಿದೆ. ಗರಿಷ್ಠ ಮಟ್ಟದಿಂದ ಶೇ. 70ರಷ್ಟು ಕುಸಿತ ಕಂಡಿದೆ. ಆದರೆ, ಒಟ್ಟಾರೆಯಾಗಿ 20 ವರ್ಷದಲ್ಲಿ 28 ಪಟ್ಟು ಹೆಚ್ಚು ಲಾಭ ತಂದುಕೊಟ್ಟಿದೆ. 2020ರ ಮಾರ್ಚ್​ನಲ್ಲಿ ಇದರ ಷೇರುಬೆಲೆ ಕೇವಲ 144 ರೂ ಇತ್ತು. ಒಂದು ವರ್ಷದ ಅಂತರದಲ್ಲಿ ಬೆಲೆ ಐದಾರು ಪಟ್ಟು ಬೆಳೆದ ಒಂದು ಸಾವಿರ ರೂ ದಾಟಿ ಹೋಗಿತ್ತು. ಆ ಸಂದರ್ಭದಲ್ಲಿ ಹೂಡಿಕೆ ಮಾಡಿದ್ದವರು ಐದಾರು ಲಕ್ಷ ರೂ ಲಾಭ ಮಾಡಿಕೊಳ್ಳಬಹುದಿತ್ತು.

ಇದನ್ನೂ ಓದಿ: ಅದಾನಿ ಗ್ರೂಪ್​ನ ಸಾಲ ಎಷ್ಟಿದೆ, ಯಾವ್ಯಾವ ಬ್ಯಾಂಕುಗಳು ಎಷ್ಟು ಸಾಲ ಕೊಟ್ಟಿವೆ? ಇಲ್ಲಿದೆ ವಿವರ

ವೈಭವ್ ಗ್ಲೋಬಲ್​ನ ಮತ್ತೊಂದು ವೈಶಿಷ್ಟ್ಯತೆ ಎಂದರೆ, ಇದು ಷೇರುದಾರರಿಗೆ ಭರ್ಜರಿ ಡಿವಿಡೆಂಡ್ ನೀಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ