ವಿರಾಟ್ ಕೊಹ್ಲಿ ಬೆಂಬಲಿತ ಗೋ ಡಿಜಿಟ್ ಐಪಿಒ ಆಫರ್ ಇವತ್ತು ಆರಂಭ; ಅನುಷ್ಕಾ, ಕೊಹ್ಲಿ ಷೇರುಪಾಲು ಇತ್ಯಾದಿ ವಿವರ

Go Digit General Insurance IPO: ಮೋಟಾರು ವಾಹನಗಳಿಗೆ ವಿಮೆ ಸೇವೆ ಒದಗಿಸುವ ಗೋ ಡಿಜಿಟ್ ಜನರಲ್ ಇನ್ಷೂರೆನ್ಸ್ ಕಂಪನಿ ಐಪಿಒಗೆ ತೆರೆದುಕೊಂಡಿದೆ. ಇವತ್ತು ಮೇ 15ಕ್ಕೆ ಆರಂಭವಾಗಿ ಮೇ 17ರವರೆಗೂ ಷೇರುಗಳನ್ನು ಖರೀದಿಸಲು ಅವಕಾಶ ಇದೆ. ಐಪಿಒದಲ್ಲಿ ಹೂಡಿಕೆದಾರರು ಕನಿಷ್ಠ 55 ಷೇರುಗಳನ್ನು ಖರೀದಿಸಬಹುದು. ಪ್ರತೀ ಷೇರಿನ ಬೆಲೆ 258ರಿಂದ 272 ರೂವರೆಗೆ ಇದೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಬೆಂಬಲಿತ ಗೋ ಡಿಜಿಟ್ ಐಪಿಒ ಆಫರ್ ಇವತ್ತು ಆರಂಭ; ಅನುಷ್ಕಾ, ಕೊಹ್ಲಿ ಷೇರುಪಾಲು ಇತ್ಯಾದಿ ವಿವರ
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 15, 2024 | 12:52 PM

ಮುಂಬೈ, ಮೇ 15: ವಿರಾಟ್ ಕೊಹ್ಲಿ ಹೂಡಿಕೆ ಮಾಡಿರುವ ಗೋ ಡಿಜಿಟ್ ಜನರಲ್ ಇನ್ಷೂರೆನ್ಸ್ ಕಂಪನಿ (Go digit general insurance) ಷೇರು ಮಾರುಕಟ್ಟೆಗೆ ಅಡಿ ಇಡಲು ಸಜ್ಜಾಗಿದ್ದು , ಇವತ್ತು ಅದರ ಐಪಿಒ (Go Digit IPO) ಆರಂಭವಾಗಿದೆ. 2,616.65 ಕೋಟಿ ರೂ ಮೊತ್ತದ ಈ ಐಪಿಒನಲ್ಲಿ ಒಟ್ಟು 9.62 ಕೋಟಿ ಷೇರುಗಳು ಬಿಕರಿಯಾಗುತ್ತಿವೆ. ಮೇ 15, ಇವತ್ತು ಐಪಿಒ ಆರಂಭವಾಗಿ ಮೇ 17ಕ್ಕೆ ಮುಗಿಯುತ್ತದೆ. ಒಟ್ಟು 9.62 ಕೋಟಿ ಷೇರುಗಳ ಪೈಕಿ 4.14 ಕೋಟಿ ಷೇರುಗಳು ಹೊಸದಾಗಿ ವಿತರಿಸಲಾಗುತ್ತಿದೆ. ಇವುಗಳ ಮೊತ್ತ 1,125 ಕೋಟಿ ರೂ ಆಗಿದೆ. ಈಗಾಗಲೇ ಷೇರುಪಾಲು ಹೊಂದಿರುವವರು 5.48 ಕೋಟಿ ಷೇರುಗಳನ್ನು ಆಫ್​ಲೋಡ್ ಮಾಡುತ್ತಿದ್ದಾರೆ. ಈ ಗೋ ಡಿಜಿಟ್ ಜನರಲ್ ಇನ್ಷೂರೆನ್ಸ್ ಕಂಪನಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಹೂಡಿಕೆ ಮಾಡಿದ್ದಾರೆ. ಇಬ್ಬರಿಗೂ ಒಂದಷ್ಟು ಷೇರುಪಾಲು ಇದೆ.

ಗೋ ಡಿಜಿಟ್ ಜನರಲ್ ಇನ್ಷೂರೆನ್ಸ್ ಐಪಿಒ ವಿವರ

  • ಐಪಿಒ ದಿನ: ಮೇ 15ರಿಂದ 17ರವರೆಗೆ
  • ಮಾರಾಟಕ್ಕಿರುವ ಷೇರುಗಳು: 9.62 ಕೋಟಿ
  • ಒಟ್ಟು ಬಂಡವಾಳ ನಿರೀಕ್ಷೆ: 2,614 ಕೋಟಿ ರೂ
  • ಐಪಿಒ ಷೇರುಬೆಲೆ: 258ರಿಂದ 272 ರೂ
  • ಖರೀದಿಸಬೇಕಾದ ಕನಿಷ್ಠ ಷೇರು ಪ್ರಮಾಣ: 55 ಈಕ್ವಿಟಿ ಷೇರು; ಕನಿಷ್ಠ ಹೂಡಿಕೆ 14,190 ರೂನಿಂದ 14,990 ರೂವರೆಗೆ ಇದೆ.

ಇದನ್ನೂ ಓದಿ: ಸಾರ್ವಜನಿಕರ ಷೇರುಪಾಲು ಶೇ. 10ಕ್ಕೆ ಹೆಚ್ಚಿಸಲು ಎಲ್​ಐಸಿಗೆ ಸಿಕ್ಕಿತು ಮೂರು ವರ್ಷ ಹೆಚ್ಚುವರಿ ಕಾಲಾವಕಾಶ

ಗೋ ಡಿಜಿಟ್ ಜನರಲ್ ಇನ್ಷೂರೆನ್ಸ್ ಕಂಪನಿಯ ಹಣಕಾಸು ಸ್ಥಿತಿ

2016ರಲ್ಲಿ ಗೋ ಡಿಜಿಟ್ ಜನರಲ್ ಇನ್ಷೂರೆನ್ಸ್ ಕಂಪನಿ ಆರಂಭವಾಗಿದೆ. ಇದು ಮೋಟಾರು ವಾಹನಗಳಿಗೆ ವಿಮೆ ಮಾರುವ ಕಂಪನಿ. ಕಳೆದ ಒಂದು ವರ್ಷದಿಂದ ಕಂಪನಿಯ ಹಣಕಾಸು ಸಾಧನೆ ಸಾಕಷ್ಟು ಉತ್ತಮಗೊಂಡಿದೆ. 2022ರ ಏಪ್ರಿಲ್​ನಿಂದ ಡಿಸೆಂಬರ್​ವರೆಗಿನ ಅವಧಿಯಲ್ಲಿ ಅದರ ಕಾರ್ಯಾಚರಣೆ ನಷ್ಟ 570 ಕೋಟಿ ರೂ ಇತ್ತು. 2023ರಲ್ಲಿ ಇದೇ ಅವಧಿಯಲ್ಲಿ ಅದರ ಆಪರೇಟಿಂಗ್ ಲಾಸ್ 101.2 ಕೋಟಿ ರೂಗೆ ಇಳಿದಿದೆ.

ಇನ್ನು, ಕಂಪನಿ ಅದೇ ಅವಧಿಯಲ್ಲಿ ಪಡೆದಿರುವ ನಿವ್ವಳ ಲಾಭ ಬರೋಬ್ಬರಿ 1,290 ಕೋಟಿ ರೂ ಇದೆ. ಹಿಂದಿನ ವರ್ಷದಲ್ಲಿ ಸಿಕ್ಕ ಲಾಭ 100.21 ಕೋಟಿ ರೂ ಮಾತ್ರ. ಒಂದು ವರ್ಷದ ಅಂತರದಲ್ಲಿ ಗೋ ಡಿಜಿಟ್ ಉತ್ತಮ ಲಾಭ ಮಾಡಿದೆ.

ಇದನ್ನೂ ಓದಿ: ಷೇರುಪೇಟೆ ಕುಸಿಯುತ್ತಿದೆಯಾ? ಜೂನ್ 4ರೊಳಗೆ ಖರೀದಿಸಿಬಿಡಿ: ಅಮಿತ್ ಶಾ ಸಲಹೆ ಕೇಳಿ

ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಹೂಡಿಕೆ ಎಷ್ಟು?

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಗೋ ಡಿಜಿಟ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಪ್ರತೀ ಷೇರಿಗೆ 75 ರೂ ಬೆಲೆಯಂತೆ 2,66,667 ಷೇರುಗಳನ್ನು ಖರೀದಿಸಿದ್ದರು. ಅನುಷ್ಕಾ ಶರ್ಮಾ 66,667 ಷೇರುಗಳನ್ನು ಹೊಂದಿದ್ದಾರೆ. ಇಬ್ಬರೂ ಸೇರಿ 3,33,334 ಷೇರುಗಳನ್ನು ಹೊಂದಿದ್ದಾರೆ.

ಈ ಐಪಿಒ ಬೆಲೆಯಲ್ಲೇ ಷೇರು ಲಿಸ್ಟ್ ಆಗಿದ್ದಾದಲ್ಲಿ ಇಬ್ಬರ ಷೇರುಸಂಪತ್ತು ಒಂಬತ್ತು ಕೋಟಿ ರೂವರೆಗೂ ಹೆಚ್ಚಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್