ಪಿಎಫ್ ಹಣವನ್ನು ಸರ್ಕಾರ ಏನು ಮಾಡುತ್ತದೆ, ಎಲ್ಲಿ ಹೂಡಿಕೆ ಮಾಡುತ್ತದೆ? ಇಲ್ಲಿದೆ ಮಾಹಿತಿ

ಉದ್ಯೋಗಿಗಳ ಸಂಬಳದಿಂದ ಮುರಿದುಕೊಳ್ಳಲಾಗುವ ಶೇ. 12ರಷ್ಟು ಹಣವು ಅವರ ಪಿಎಫ್ ಅಕೌಂಟ್​ಗಳಿಗೆ ಹೋಗುತ್ತದೆ. ಕಂಪನಿಯ ಕೊಡುಗೆ ಹಾಗು ಇಪಿಎಫ್​ಒದ ಬಡ್ಡಿ ಈ ಹಣವೂ ಅಕೌಂಟ್​ಗೆ ಜಮೆಯಾಗುತ್ತದೆ. ಈ ರೀತಿ ಪ್ರಸಕ್ತ ಇಪಿಎಫ್​ಒ 31 ಲಕ್ಷ ಕೋಟಿ ರೂಗೂ ಅಧಿಕ ಕಾರ್ಪಸ್ ಹೊಂದಿದೆ. ಈ ಹಣವನ್ನು ಇಪಿಎಫ್​ಒ ಏನು ಮಾಡುತ್ತದೆ, ಎಲ್ಲಿ ಹೂಡಿಕೆ ಮಾಡುತ್ತದೆ? ಇಲ್ಲಿದೆ ಮಾಹಿತಿ.

ಪಿಎಫ್ ಹಣವನ್ನು ಸರ್ಕಾರ ಏನು ಮಾಡುತ್ತದೆ, ಎಲ್ಲಿ ಹೂಡಿಕೆ ಮಾಡುತ್ತದೆ? ಇಲ್ಲಿದೆ ಮಾಹಿತಿ
ಇಪಿಎಫ್​ಒ
Image Credit source: Getty Images

Updated on: Sep 21, 2026 | 8:16 PM

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್​ಒ (EPFO) ಸುಪರ್ದಿಯಲ್ಲಿ ನಿರ್ವಹಣೆ ಆಗುತ್ತಿರುವ ಉದ್ಯೋಗಿಗಳ ಒಟ್ಟು ಸೇವಿಂಗ್ಸ್ ಹಣ ಎಷ್ಟು ಗೊತ್ತಾ? ಬರೋಬ್ಬರಿ 30 ಲಕ್ಷ ಕೋಟಿ ರೂಗೂ ಅಧಿಕ. ಉದ್ಯೋಗಿಗಳ ಇಪಿಎಫ್ ಅಕೌಂಟ್​ಗಳಲ್ಲಿರುವ ಒಟ್ಟು ಹಣ ಇದು. ಇಪಿಎಫ್​ಒ ಈ ಹಣವನ್ನು ಎಲ್ಲಿ ಹೂಡಿಕೆ ಮಾಡುತ್ತದೆ? ಯಾವ ನಿಯಮಗಳ ಪ್ರಕಾರ ಅದು ಹೂಡಿಕೆ ಮಾಡುತ್ತದೆ ಎಂಬ ಪ್ರಶ್ನೆ ಯಾರಿಗಾದರೂ ಬರಬಹುದು. ಕೇಂದ್ರ ಹಣಕಾಸು ಸಚಿವಾಲಯದ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಇಪಿಎಫ್​ಒ ಸಂಸ್ಥೆಯು ಪಿಎಫ್ (PF) ಹಣವನ್ನು ಸುರಕ್ಷಿತ ಸಾಲಪತ್ರಗಳು (Debt Instruments) ಮತ್ತು ಷೇರು ಮಾರುಕಟ್ಟೆಯಲ್ಲಿ (Equities) ಹೂಡಿಕೆ ಮಾಡುತ್ತದೆ.

ಇಪಿಎಫ್ ಹಣ ಇಲ್ಲಿ ಹೂಡಿಕೆಯಾಗುತ್ತದೆ

  • ಸರ್ಕಾರಿ ಸೆಕ್ಯೂರಿಟಿಗಳು (Government Securities): ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಾಂಡ್‌ಗಳು ಹಾಗೂ ಟ್ರೆಷರಿ ಬಿಲ್ಲುಗಳು ಇತ್ಯಾದಿಯಲ್ಲಿ 45% – 65% ಹೂಡಿಕೆ ಮಾಡಬಹುದು.
  • ಸಾಲಪತ್ರಗಳು (Debt Instruments & Corporate Bonds): ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಸರ್ಕಾರಿ ಸಂಸ್ಥೆಗಳು (Infrastructure Bond), ಬಾಸೆಲ್-III ಬಾಂಡ್‌ಗಳು ಮತ್ತು ಖಾಸಗಿ ಕಂಪನಿಗಳ ಸಾಲಪತ್ರಗಳು ಇತ್ಯಾದಿಗಳಲ್ಲಿ 20% – 45% ಹೂಡಿಕೆ. |
  • ಷೇರು ಮಾರುಕಟ್ಟೆ / ಈಕ್ವಿಟಿ (Equities via ETFs): ಈಕ್ವಿಟಿಗಳಲ್ಲಿ 5% – 15% ಹೂಡಿಕೆ ಇರುತ್ತದೆ.
  • ಅಲ್ಪಾವಧಿ ಸಾಲಪತ್ರಗಳು (Short-term Debt): ಬ್ಯಾಂಕ್ ಡೆಪಾಸಿಟ್‌ಗಳು, ಕಮರ್ಷಿಯಲ್ ಪೇಪರ್‌ಗಳು ಮತ್ತು ಸಣ್ಣ ಅವಧಿಯ ಮನಿ ಮಾರ್ಕೆಟ್ ಫಂಡ್‌ಗಳಲ್ಲಿ 0% – 5% ಹೂಡಿಕೆ ಮಾಡುತ್ತದೆ.

ಇದನ್ನೂ ಓದಿ: ಪಿಎಂ ಕಿಸಾನ್ ಸ್ಕೀಮ್: 24ನೇ ಕಂತಿನ ಹಣ ಯಾವಾಗ ಬಿಡುಗಡೆ? ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ನೋಡಿ

ನೇರ ಷೇರು ಖರೀದಿ ಇಲ್ಲ: EPFO ಯಾವುದೇ ಕಂಪನಿಯ ಷೇರುಗಳನ್ನು ನೇರವಾಗಿ ಮಾರುಕಟ್ಟೆಯಲ್ಲಿ ಖರೀದಿಸುವುದಿಲ್ಲ, ಬದಲಾಗಿ ಭದ್ರತೆಗಾಗಿ ಇಂಡೆಕ್ಸ್ ಆಧಾರಿತ ETF ಗಳ ಮೂಲಕ ಮಾತ್ರ ಹೂಡಿಕೆ ಮಾಡುತ್ತದೆ.

ಸುರಕ್ಷತೆಗೆ ಆದ್ಯತೆ: ಹೂಡಿಕೆ ಮಾಡಲಾಗುವ ಒಟ್ಟು ಹಣದಲ್ಲಿ ಸುಮಾರು ಶೇ. 85 ರಷ್ಟು ಭಾಗವನ್ನು ಅತ್ಯಂತ ಸುರಕ್ಷಿತವಾದ ಸರ್ಕಾರಿ ಬಾಂಡ್‌ಗಳು ಮತ್ತು ಡೆಟ್ ಸೆಕ್ಯುರಿಟಿಗಳಲ್ಲೇ ಮೀಸಲಿಡಲಾಗುತ್ತದೆ. ಹೀಗಾಗಿ, ಇಪಿಎಫ್ ಅಕೌಂಟ್​ಗಳಿಗೆ ಸಿಗುವ ವಾರ್ಷಿಕ ಬಡ್ಡಿ ತೀರಾ ಹೆಚ್ಚು ಇರುವುದಿಲ್ಲ, ಕಡಿಮೆಯೂ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us