Personal finance: ಋಣಭಾರ ಪತ್ರವಿಲ್ಲದೆ ನಿಮಗೇಕೆ ಗೃಹ ಸಾಲ ದೊರೆಯುವುದಿಲ್ಲ?

| Updated By: Srinivas Mata

Updated on: Jan 28, 2022 | 11:47 PM

ಋಣಭಾರ ಪತ್ರವನ್ನು ಬ್ಯಾಂಕ್​ಗೆ ನೀಡದೆ ಗೃಹ ಸಾಲ ದೊರೆಯುವುದಿಲ್ಲ ಏಕೆ ಎಂಬುದು ಗೊತ್ತೆ? ಅದಕ್ಕೆ ಕಾರಣ ಇದೆ. ಈ ಲೇಖನದಲ್ಲಿ ಮಾಹಿತಿಯನ್ನು ವಿವರಿಸಲಾಗಿದೆ.

Personal finance: ಋಣಭಾರ ಪತ್ರವಿಲ್ಲದೆ ನಿಮಗೇಕೆ ಗೃಹ ಸಾಲ ದೊರೆಯುವುದಿಲ್ಲ?
ಸಾಂದರ್ಭಿಕ ಚಿತ್ರ
Follow us on

ಆಗ್ರಾದಲ್ಲಿ ಮನೆ ನಿರ್ಮಿಸುವ ಉದ್ದೇಶದಿಂದ ಮೋಹಿತ್ ಸೈಟ್​ವೊಂದನ್ನು ಖರೀದಿಸಿದರು. ಈ ಸೈಟು ಅಧಿಕೃತ ಪ್ರದೇಶದಲ್ಲಿ ಇರುವುದರಿಂದ ಯಾವುದೇ ವಂಚನೆ ಇರುವ ಸಾಧ್ಯತೆ ಇರಲಿಲ್ಲ. ಆದರೆ ಗೃಹ ಸಾಲ ಪಡೆಯಲು ಅವರಿಗೆ ಸಾಕಷ್ಟು ಅಡಚಣೆ ಎದುರಾಯಿತು. ಬ್ಯಾಂಕ್‌ಗಳು ಸರ್ಚ್ ಸರ್ಟಿಫಿಕೇಟ್ ಕೇಳಿದವು. ಆದರೆ ಮಾರಾಟಗಾರ ಅದನ್ನು ನೀಡಲಿಲ್ಲ. ಮೋಹಿತ್ ಗೊಂದಲಕ್ಕೆ ಒಳಗಾದರು. ಸೈಟು ತಮ್ಮ ಹೆಸರಿನಲ್ಲಿ ನೋಂದಣಿ ಆಗಿದ್ದರೂ ಅದು ಪ್ರಯೋಜನವಾಗಲಿಲ್ಲ. ಈಗ ಮೋಹಿತ್‌ಗೆ ಸಾಲ ದೊರೆಯುವಲ್ಲಿ ಹಿನ್ನಡೆಗೆ ಕಾರಣವಾದ ಈ ಸರ್ಚ್ ರಿಪೋರ್ಟ್ (Housing Loan Documents) ಅಂದರೆ ಏನು ಎಂದು ತಿಳಿಯೋಣ. ಸರ್ಚ್ ರಿಪೋರ್ಟ್ ಎಂಬುದು ಒಂದು ಪ್ರಮಾಣ ಪತ್ರ. ಆಸ್ತಿಗೆ ಸಂಬಂಧಿಸಿದಂತೆ ಇದೊಂದು ಬಹು ಮುಖ್ಯವಾದ ದಾಖಲೆ. ಇದರ ಮೂಲಕ ಆಸ್ತಿಯ ಒಡೆತನದ ಇತಿಹಾಸವನ್ನು ಕಂಡುಹಿಡಿಯಬಹುದು. ಆಸ್ತಿಯನ್ನು ಕೊಲ್ಯಾಟರಲ್ ಅಂದರೆ ಮೇಲಾಧಾರವಾಗಿ ಮಾಡಿಲ್ಲ ಎಂದು ಈ ಪತ್ರ ಖಾತ್ರಿಪಡಿಸುವುದರಿಂದ, ಇದರಲ್ಲಿ ಎಲ್ಲ ಮಾಹಿತಿ ದೊರೆಯದಿದ್ದರೆ ಅದು ಅಪೂರ್ಣವಾಗುತ್ತದೆ.

ಇದು ಏಕೆ ಮುಖ್ಯ?
ಬ್ಯಾಂಕಿಂಗ್ ವ್ಯವಹಾರದಲ್ಲಿ ಸರ್ಚ್ ರಿಪೋರ್ಟ್ ಆಸ್ತಿಯ ಒಡೆತನದ ದಾಖಲೆ ಎಂದು ಮಾನ್ಯ ಮಾಡಲಾಗುತ್ತದೆ. ಈ ಪತ್ರ ಲಭ್ಯವಿಲ್ಲದ ಹೊರತು, ಬ್ಯಾಂಕ್​ಗಳು ಗೃಹ ಸಾಲ ನೀಡುವುದಿಲ್ಲ. ಅಲ್ಲದೆ, ನೀವು ಗೃಹ ಸಾಲ ಇಲ್ಲದೆ ಮನೆ ನಿರ್ಮಿಸಲು ಪ್ರಯತ್ನಿಸಿದರೂ ಈ ಪತ್ರವಿಲ್ಲದೆ ಮನೆಯ ಪ್ಲಾನ್ ಅಂಗೀಕೃತ ಆಗುವುದಿಲ್ಲ. ಇನ್ನಿತರ ಸಮಸ್ಯೆಗಳನ್ನೂ ನೀವು ಎದುರಿಸಬಹುದು. ಈ ಪ್ರಾಪರ್ಟಿ ಚೈನ್ ನಿಮ್ಮ ಬಳಿ ಇದ್ದರೆ ಆಸ್ತಿಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ನೀವು ಸುಗಮವಾಗಿ ಮಾಡಬಹುದು. ಹಳೆಯ ಅಥವಾ ಕುಟುಂಬಕ್ಕೆ ಸೇರಿದ ಆಸ್ತಿಯಾದರೆ ಹಿಂದಿನ 12 ವರ್ಷಗಳ ದಾಖಲೆ ಸಾಕು.

ಆಸ್ತಿ ವ್ಯವಹಾರಗಳಲ್ಲಿ ಪರಿಣತರಾದ ಸತೀಶ್ ಉಪಾಧ್ಯಾಯ ಹೇಳುವಂತೆ, ಋಣಭಾರ ಪತ್ರದಿಂದ ಆಸ್ತಿಯನ್ನು ಎಷ್ಟು ಬಾರಿ, ಖರೀದಿಸಿ ಮಾರಾಟ ಮಾಡಲಾಗಿದೆ. ಹಾಗೂ ಪ್ರತಿ ಬಾರಿಯೂ ಖರೀದಿದಾರರು ಮತ್ತು ಮಾರಾಟಗಾರರು ಯಾರು ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ ಎನ್ನುತ್ತಾರೆ. ಇದು ಲಭ್ಯವಿಲ್ಲದೆ, ಆಸ್ತಿ ಖರೀದಿ ಮಾಡಿದವರು ವಂಚನೆ ಎದುರಿಸುವ ಸಾಧ್ಯತೆಯೂ ಇರುತ್ತದೆ. ನಿಮ್ಮ ಜೀವಮಾನದ ಗಳಿಕೆ ಉಳಿಸಿಕೊಳ್ಳಲು ಈ ಪತ್ರ ಮುಖ್ಯ. ಆಸ್ತಿಯನ್ನು ಯಾವುದೇ ಕಾರಣಕ್ಕೂ ಅಡವಿಟ್ಟಿಲ್ಲ ಅಥವಾ ಆಧಾರವಾಗಿಟ್ಟಿಲ್ಲ ಎಂದು ಖಾತ್ರಿಪಡಿಸಿಕೊಳ್ಳಲು ಈ ಪತ್ರ ನೀಡುವಂತೆ ಬ್ಯಾಂಕ್​ಗಳು ಕೇಳುತ್ತವೆ. ರೈತ, ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆದರೆ ಆತನ ಜಮೀನನ್ನು ಒತ್ತೆಯಾಗಿ ಇರಿಸಿಕೊಂಡು ಸಾಲ ವಿತರಿಸಲಾಗುತ್ತದೆ. ಸರ್ಚ್ ರಿಪೋರ್ಟ್ ಈ ಎಲ್ಲ ವ್ಯವಹಾರಗಳನ್ನು ದಾಖಲಿಸುತ್ತದೆ.

ಇದು ಹೇಗೆ ದೊರೆಯುತ್ತದೆ?
ಈ ಪತ್ರವು ಆಸ್ತಿ ವಿಚಾರದಲ್ಲಿ ಬಹುಮುಖ್ಯವಾದರೆ, ಇದು ದೊರೆಯುವುದಾದರೂ ಹೇಗೆ? ಇದು ನಿಮ್ಮ ತಾಲೂಕಿನಲ್ಲಿ ದೊರೆಯುತ್ತದೆ. ಇದನ್ನು ಬೇಗ ಪಡೆಯಲು ವಕೀಲರ ನೆರವು ಪಡೆಯಬಹುದು. ವಕೀಲರಿಲ್ಲದೆಯೂ ನೀವು ಇದನ್ನು ಪಡೆಯಲು ಸಾಧ್ಯ. ನೋಂದಣಿ ಅಥವಾ ರಿಜಿಸ್ಟ್ರಾರ್ ಕಚೇರಿಯಲ್ಲಿ ನಿಗದಿತ ಫಾರಂ ಭರ್ತಿ ಮಾಡಿ ಸಲ್ಲಿಸುವ ಮೂಲಕ ಇದನ್ನು ಪಡೆಯಬಹುದು. ಇದಕ್ಕಾಗಿ ನೀವು ಶುಲ್ಕ ಪಾವತಿಸಬೇಕಿರುತ್ತದೆ. ಶುಲ್ಕದ ಪ್ರಮಾಣ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಕೆಲವೊಂದು ರಾಜ್ಯದಲ್ಲಿ ಇದನ್ನು ಆನ್‌ಲೈನ್‌ನಲ್ಲಿ ಕೂಡ ನೀವು ಪಡೆಯಬಹುದು.

ಆನ್‌ಲೈನ್ ಪ್ರಕ್ರಿಯೆ
ಈ ಸರ್ಚ್ ರಿಪೋರ್ಟ್ ಅಥವಾ ಋಣಭಾರ ಪತ್ರವನ್ನು ನಿಮ್ಮ ರಾಜ್ಯ ಆನ್‌ಲೈನ್‌ನಲ್ಲಿ ನೀಡುತ್ತಿದ್ದರೆ ರಿಜಿಸ್ಟ್ರಾರ್ ಕಚೇರಿಯ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಯಲ್ಲಿ ನಿಮ್ಮ ತಾಲೂಕು, ಜಿಲ್ಲೆ ಮತ್ತು ಆಸ್ತಿಗೆ ಸಂಬಂಧಿಸಿದ ವಿವರಗಳನ್ನು ನೀಡಬೇಕು. ಸಾಮಾನ್ಯವಾಗಿ ಒಂದು ವಾರದೊಳಗೆ ನಿಮಗೆ ಈ ವರದಿ ಕೈ ಸೇರುತ್ತದೆ. ಇದನ್ನು ಪಡೆಯಲು ನೀವು ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಬೇಕು. ಒಂದು ವಾರದೊಳಗೆ ಈ ವರದಿ ದೊರೆಯದಿದ್ದಲ್ಲಿ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿ, ಮಾಹಿತಿ ಪಡೆಯಬಹುದು.

ನಮ್ಮ ಸಲಹೆ ಏನು?
ಒಂದು ಮನೆ ಖರೀದಿಸಲು ಜೀವಮಾನದ ಗಳಿಕೆ ಅಗತ್ಯ. ಖರೀದಿಸಲು ಉದ್ದೇಶಿಸಿರುವ ಆಸ್ತಿ ಎಲ್ಲ ರೀತಿಯ ವ್ಯಾಜ್ಯಗಳಿಂದ ಮುಕ್ತವಾಗಿದೆ ಎಂದು ಖಾತ್ರಿಪಡಿಸಿಕೊಳ್ಳಿ. ಎಲ್ಲಿಯೂ ಈ ಆಸ್ತಿಯನ್ನು ಅಡವಿಟ್ಟಿಲ್ಲ ಎಂದೂ ದೃಢಪಡಿಸಿಕೊಳ್ಳಿ. ಆ ನಂತರ ವ್ಯವಹರಿಸಲು ತೀರ್ಮಾನಿಸಿ.

ಇದನ್ನೂ ಓದಿ: Housing Loan: ಕಡಿಮೆ ಬಡ್ಡಿ ದರಕ್ಕೆ ಗೃಹ ಸಾಲ ನೀಡುವ ಪ್ರಮುಖ 10 ಬ್ಯಾಂಕ್​ಗಳಿವು