WPI Inflation: ಸಗಟು ಬೆಲೆ ಹಣದುಬ್ಬರ ಮೈನಸ್ 3.48 ಪ್ರತಿಶತಕ್ಕೆ ಕುಸಿತ; ಆರ್ಥಿಕತೆಗೆ ಅನುಕೂಲವೋ, ಅಪಾಯವೋ?

Wholesale Price Inflation In Deep Negative: ಡಬ್ಲ್ಯುಪಿಐ ಆಧಾರಿತ ಹಣದುಬ್ಬರ 2023 ಮೇ ತಿಂಗಳಲ್ಲಿ ಮೈನಸ್ 3.45 ಪ್ರತಿಶತಕ್ಕೆ ಕುಸಿದುಹೋಗಿದೆ. ಹೋಲ್​ಸೇಲ್ ದರಗಳ ಬೆಲೆ ವ್ಯತ್ಯಾಸದ ದರವಾಗಿರುವ ಡಬ್ಲ್ಯುಪಿಐ ಹಣದುಬ್ಬರ ಏಪ್ರಿಲ್ ತಿಂಗಳಲ್ಲಿ ಮೈನಸ್ 0.92 ಪ್ರತಿಶತದಷ್ಟಿತ್ತು.

WPI Inflation: ಸಗಟು ಬೆಲೆ ಹಣದುಬ್ಬರ ಮೈನಸ್ 3.48 ಪ್ರತಿಶತಕ್ಕೆ ಕುಸಿತ; ಆರ್ಥಿಕತೆಗೆ ಅನುಕೂಲವೋ, ಅಪಾಯವೋ?
ಹಣದುಬ್ಬರ
Follow us
|

Updated on: Jun 14, 2023 | 1:08 PM

ನವದೆಹಲಿ: ಮೇ ತಿಂಗಳಲ್ಲಿ ಸಿಪಿಐ ಆಧಾರಿತ ರೀಟೇಲ್ ಹಣದುಬ್ಬರ ಶೇ. 4.25ಕ್ಕೆ ಇಳಿದಿರುವ ಸುದ್ದಿ ಬಂದ ಬೆನ್ನಲ್ಲೇ ಈಗ ಡಬ್ಲ್ಯುಪಿಐ ಆಧಾರಿತ ಹಣದುಬ್ಬರ (WPI Based Inflation) 2023 ಮೇ ತಿಂಗಳಲ್ಲಿ ಮೈನಸ್ 3.45 ಪ್ರತಿಶತಕ್ಕೆ ಕುಸಿದುಹೋಗಿದೆ. ಡಬ್ಲ್ಯೂಪಿಐ ಎಂದರೆ ಸಗಟು ಬೆಲೆ ಸೂಚ್ಯಂಕ. ಹೋಲ್​ಸೇಲ್ ದರಗಳ ಬೆಲೆ ವ್ಯತ್ಯಾಸದ ದರವಾಗಿರುವ ಡಬ್ಲ್ಯುಪಿಐ ಹಣದುಬ್ಬರ ಏಪ್ರಿಲ್ ತಿಂಗಳಲ್ಲಿ ಮೈನಸ್ 0.92 ಪ್ರತಿಶತದಷ್ಟಿತ್ತು. ಈಗ ಇನ್ನಷ್ಟು ಇಳಿಮುಖವಾಗಿದೆ. ಇದು ಕಳೆದ 3 ವರ್ಷದಲ್ಲೇ ಅತ್ಯಂತ ಕಡಿಮೆ ಸಗಟು ಬೆಲೆ ಹಣದುಬ್ಬರ ದರವಾಗಿದೆ. ಮೇ ತಿಂಗಳ ಸಗಡು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರದ ಮಾಹಿತಿಯನ್ನು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ಜೂನ್ 14ರಂದು ಪ್ರಕಟಿಸಿದೆ.

ಹೋಲ್​ಸೇಲ್ ಪ್ರೈಸ್ ಇಂಡೆಕ್ಸ್ ಆಧಾರಿತವಾದ ಈ ಹಣದುಬ್ಬರ ಕಡಿಮೆ ಆಗಿರುವುದು ಮುಂಬರುವ ದಿನಗಳಲ್ಲಿ ರೀಟೇಲ್ ಹಣದುಬ್ಬರ ಮತ್ತಷ್ಟು ಇಳಿಕೆಯಾಗಬಹುದು ಎಂದು ನಿರೀಕ್ಷಿಸಬಹುದು. ಮೇ ತಿಂಗಳಲ್ಲಿ ಶೇ. 4.25ರಷ್ಟಿರುವ ಸಿಪಿಐ ಆಧಾರಿತ ರೀಟೇಲ್ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 4ರ ಆಸುಪಾಸಿಗೆ ಬಂದರೂ ಅಚ್ಚರಿ ಇಲ್ಲ.

ಇದನ್ನೂ ಓದಿIndian Economy: 2014 ಮತ್ತು 2023- ಜಿಡಿಪಿ ಆಗ ಎಷ್ಟಿತ್ತು, ಈಗ ಎಷ್ಟಿದೆ?: ಇಲ್ಲಿದೆ ಹೋಲಿಕೆ

ಹೋಲ್​ಸೇಲ್ ಬೆಲೆಗಳ ಹಣದುಬ್ಬರ 2023ರ ಮೇ ತಿಂಗಳಲ್ಲಿ ಭರ್ಜರಿಯಾಗಿ ಇಳಿಕೆಯಾಗಲು ವಿವಿಧ ಸರಕುಗಳ ಬೆಲೆ ಇಳಿಕೆ ಕಾರಣವಾಗಿದೆ. ಖನಿಜತೈಲ, ಮೂಲ ಲೋಹಗಳು, ಆಹಾರ ಉತ್ಪನ್ನಗಳು, ಜವಳಿ, ಆಹಾರೇತರ ವಸ್ತುಗಳು, ಕಚ್ಛಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ರಾಸಾಯನಿಕ ಉತ್ಪನ್ನಗಳ ಬೆಲೆ ಇಳಿಕೆಯು ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ಇಳಿಕೆಗೆ ಎಡೆ ಮಾಡಿಕೊಟ್ಟಿವೆ. ಏಪ್ರಿಲ್ ತಿಂಗಳ ಸಗಟು ದರ ಹಣದುಬ್ಬರ ಇಳಿಕೆಗೂ ಇವೇ ವಸ್ತುಗಳ ಬೆಲೆ ಇಳಿಕೆ ಕಾರಣವಾಗಿದ್ದವು.

ಸಗಟು ಬೆಲೆ ಹಣದುಬ್ಬರ ಇಳಿಕೆಯು ರೀಟೇಲ್ ಬೆಲೆ ಏರಿಕೆಗೆ ಕಡಿವಾಣ ಬೀಳಲು ಸಹಾಯಕವಾಗುತ್ತದೆ. ಹೀಗಾಗಿ, ಜೂನ್ ತಿಂಗಳ ರೀಟೇಲ್ ಹಣದುಬ್ಬರ ಶೇ. 4ಕ್ಕಿಂತಲೂ ಕಡಿಮೆಗೆ ಇಳಿದರೆ ಅಚ್ಚರಿ ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು