Mobile recharge hike: ಏರ್​ಟೆಲ್, ವೊಡಾಫೋನ್ ಐಡಿಯಾ ಪ್ರೀಪೇಯ್ಡ್ ದರಗಳ ಏರಿಕೆಗೆ ಸಿದ್ಧರಾಗಿ!

| Updated By: Srinivas Mata

Updated on: Jul 30, 2021 | 7:32 PM

ಆಗಸ್ಟ್​ ತಿಂಗಳಿನಿಂದ ಅನ್ವಯ ಆಗುವಂತೆ ಮೊಬೈಲ್ ಪ್ರೀಪೇಯ್ಡ್ ರೀಚಾರ್ಜ್ ಹೆಚ್ಚಾಗಲಿವೆ. ಹೇಗೆ, ಏನು, ಎತ್ತ ಎಂಬಿತ್ಯಾದಿ ವಿವರಗಳು ಈ ಲೇಖನದಲ್ಲಿ ಇವೆ.

Mobile recharge hike: ಏರ್​ಟೆಲ್, ವೊಡಾಫೋನ್ ಐಡಿಯಾ ಪ್ರೀಪೇಯ್ಡ್ ದರಗಳ ಏರಿಕೆಗೆ ಸಿದ್ಧರಾಗಿ!
ಸಾಂದರ್ಭಿಕ ಚಿತ್ರ
Follow us on

ನಿಮ್ಮ ಮೊಬೈಲ್ ಫೋನ್ ರೀಚಾರ್ಜ್​ಗಳ ಮೇಲೆ ಹೆಚ್ಚಿನ ದರವನ್ನು ಪಾವತಿಸಲು ಮುಂದಾಗಿ. ಏಕೆಂದರೆ ಮುಂದಿನ ತಿಂಗಳಿಂದ ಎರಡು ಪ್ರಮುಖ ಟೆಲಿಕಾಂ ಆಪರೇಟರ್​ಗಳಾದ ಏರ್​ಟೆಲ್​ ಮತ್ತು ವೊಡಾಫೋನ್ ಐಡಿಯಾದಿಂದ ರೀಚಾರ್ಜ್​ ಪ್ಲಾನ್​ ದರಗಳ ಏರಿಕೆಗೆ ಎಲ್ಲ ಸಿದ್ಧತೆ ನಡೆದಿದೆ. ಏರ್​ಟೆಲ್​ನಿಂದ ಈಗಾಗಲೇ ಆರಂಭಿಕ ಹಂತದ ಪ್ಲಾನ್​ ಆದ 49 ರೂಪಾಯಿಯದ್ದನ್ನು ಕೊನೆಗೊಳಿಸಲಾಗಿದೆ. ಈಗ ಪ್ಲಾನ್ ದರ ಶೇ 60ರಷ್ಟು ಹೆಚ್ಚಾಗಿ, 79 ರೂಪಾಯಿ ಮುಟ್ಟಿದೆ. ಕಾರ್ಪೊರೇಟ್ ಗ್ರಾಹಕರು ಈ ಬೆಲೆ ಏರಿಕೆ ಬಿಸಿ ತಟ್ಟಿದೆ. ಕನಿಷ್ಠ ಪ್ರಮಾಣ ಕಾರ್ಪೊರೇಟ್ ಪ್ಲಾನ್​ನಲ್ಲಿ ಶೇ 30ರಷ್ಟು ಏರಿಕೆ ಮಾಡಲಾಗಿದೆ. ಇನ್ನು ತಜ್ಞರ ಅಭಿಪ್ರಾಯದಂತೆ, ವೊಡಾಫೋನ್ ಐಡಿಯಾ ಸಹ ಬೇಸಿಕ್ ಪ್ರೀಪೇಯ್ಡ್ ಪ್ಲಾನ್ ಹೆಚ್ಚಿಸಲು ಯೋಜನೆ ಹಾಕಿಕೊಂಡಿದೆ.

ನಗದು ಬಿಕ್ಕಟ್ಟಿನಲ್ಲಿ ಇರುವ ಟೆಲಿಕಾಂ ಕಂಪೆನಿ ವೊಡಾಫೋನ್ ಐಡಿಯಾದಿಂದ ಬೇಸ್​ ಪ್ರೀಪೇಯ್ಡ್ ದರವನ್ನು ಏರಿಕೆ ಮಾಡುವುದಕ್ಕೆ ಯೋಜನೆ ಮಾಡಿದೆ. ಕೆಲವು ವೃತ್ತಗಳಲ್ಲಿ ವೊಡಾಫೋನ್ ಐಡಿಯಾ ಬೇಸ್ ಹಂತದ ರೀಚಾರ್ಜ್​ ದರದಲ್ಲಿ ಬದಲಾವಣೆ ಮಾಡಿದೆ. ಮಹಾರಾಷ್ಟ್ರ ಹಾಗೂ ಗುಜರಾತ್​ನಲ್ಲಿ Viನಿಂದ 49 ರೂಪಾಯಿಯ ಪ್ಲಾನ್​ ಅನ್ನು 14 ದಿನಕ್ಕೆ ಇಳಿಸಲಾಗಿದೆ. ಈ ಹಿಂದೆ ಅದು 28 ದಿನ ಇತ್ತು. Vi ಗ್ರಾಹಕರು ಈಗ 28 ದಿನದ ಪ್ಲಾನ್​ಗೆ ಈ ಮೇಲ್ಕಂಡ ಪ್ರದೇಶಗಳಲ್ಲಿ 79 ರೂಪಾಯಿ ಪಾವತಿಸಬೇಕು. ಸದ್ಯದಲ್ಲಿ ಪ್ರೀಪೇಯ್ಡ್ ಪ್ಲಾನ್​ಗಳ ದರವನ್ನು ದೇಶದಾದ್ಯಂತ ಬದಲಾಯಿಸಲಾಗುತ್ತದೆ. ಏರ್​ಟೆಲ್​ನಿಂದ ಬದಲಾವಣೆ ಮಾಡಿದ ಮೇಲೆ, ಎಂಟರ್​ಪ್ರೈಸ್ ಗ್ರಾಹಕರ ಬಿಜಿನೆಸ್ ಪ್ಲಸ್ ಪೋಸ್ಟ್​ಪೇಯ್ಡ್​ ಪ್ಲಾನ್​ಗಳ ಮೇಲೆ ಡೇಟಾ ಅನುಕೂಲಗಳು ಕಡಿಮೆ ಮಾಡಲಾಗಿದೆ.

ನಗದು ಹರಿವನ್ನು ಹೆಚ್ಚು ಮಾಡಿಕೊಳ್ಳಲು ಟೆಲಿಕಾಂ ಕಂಪೆನಿಗಳು ನಾನಾ ದಾರಿಗಳನ್ನು ಎದುರು ನೋಡುತ್ತಿದೆ. ಮುಂಬರುವ ಅಡ್ಜಸ್ಟಡ್ ಗ್ರಾಸ್ ರೆವೆನ್ಯೂ (ಎಜಿಆರ್) ಬಾಕಿಯನ್ನು ಪಾವತಿಸಬೇಕಿದೆ. ವೊಡಾಫೋನ್ ಐಡಿಯಾ ಹಾಗೂ ಏರ್​ಟೆಲ್ ಎಜಿಆರ್​ನ ಗ್ರಾಸ್ ಆದಾಯ ಬಾಕಿ ಕ್ರಮವಾಗಿ 9000 ಕೋಟಿ ರೂಪಾಯಿ ಹಾಗೂ 4,100 ಕೋಟಿ ರೂಪಾಯಿ ಮೊತ್ತವನ್ನು ಮಾರ್ಚ್​ 22ನೇ ತಾರೀಕಿನೊಳಗೆ ಪಾವತಿಸಬೇಕು. ಈ ದರ ಹೆಚ್ಚಳದಿಂದ ಟೆಲಿಕಾಂ ಕಂಪೆನಿಗಳ ಆ್ಯವರೇಜ್ ರೆವೆನ್ಯೂ ಪರ್ ಯೂಸರ್ (ARPU) ಚೇತರಿಸಿಕೊಳ್ಳುವುದಕ್ಕೆ ಈ ಹೆಚ್ಚಳದಿಂದ ಅನುಕೂಲ ಆಗುತ್ತದೆ.

ಇದನ್ನೂ ಓದಿ: Vodafone Idea: ಅನಿಯಮಿತ ಕರೆ ಮತ್ತು 100 GB ಡೇಟಾ: ಅತ್ಯುತ್ತಮ ರಿಚಾರ್ಜ್​ ಪ್ಲ್ಯಾನ್ ಪರಿಚಯಿಸಿದ VI

ಇದನ್ನೂ ಓದಿ: Jio-Airtel-Vi ನಡುವೆ ಭರ್ಜರಿ ಪೈಪೋಟಿ: 28 ದಿನಗಳ ವ್ಯಾಲಿಡಿಟಿ ಪ್ಲಾನ್​ನಲ್ಲಿ ಬಂಪರ್ ಬೆನಿಫಿಟ್

(Your Mobile Prepaid Charge Become Costly From August Know Why And How)