Sony Pictures- Zee entertainment merger: ಸೋನಿ ಪಿಕ್ಚರ್ಸ್ ಜತೆಗಿನ ವಿಲೀನಕ್ಕೆ ಝೀ ಎಂಟರ್​ಟೇನ್​ಮೆಂಟ್ ಅನುಮೋದನೆ

ಸೋನಿ ಪಿಕ್ಚರ್ಸ್ ನೆಟ್​ವರ್ಕ್ ಇಂಡಿಯಾ ಜತೆಗಿನ ವಿಲೀನಕ್ಕೆ ಝೀ ಎಂಟರ್​ಟೇನ್​ಮೆಂಟ್ ಅನುಮೋದನೆಯನ್ನು ನೀಡಿದ್ದು, ಆ ಬಗ್ಗೆ ವಿವರ ಇಲ್ಲಿದೆ.

Sony Pictures- Zee entertainment merger: ಸೋನಿ ಪಿಕ್ಚರ್ಸ್ ಜತೆಗಿನ ವಿಲೀನಕ್ಕೆ ಝೀ ಎಂಟರ್​ಟೇನ್​ಮೆಂಟ್ ಅನುಮೋದನೆ
ಸಾಂದರ್ಭಿಕ ಚಿತ್ರ
Edited By:

Updated on: Dec 22, 2021 | 11:24 AM

ಜಪಾನಿನ ಸಮೂಹ ಸಂಸ್ಥೆಯಾದ ಸೋನಿ ಕಂಪೆನಿಯ ಭಾರತ ಘಟಕವು ಸ್ಥಳೀಯ ಪ್ರತಿಸ್ಪರ್ಧಿ ಝೀ ಎಂಟರ್‌ಟೇನ್‌ಮೆಂಟ್‌ನೊಂದಿಗೆ ಟೀವಿ ಚಾನೆಲ್​ಗಳು, ಚಲನಚಿತ್ರ ಆಸ್ತಿಗಳು ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ವಿಲೀನಗೊಳಿಸಲು ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ಕಂಪೆನಿಗಳು ಬುಧವಾರ ತಿಳಿಸಿವೆ. ಒಪ್ಪಂದದ ಭಾಗವಾಗಿ ಸಂಯೋಜಿತ ಘಟಕದಲ್ಲಿ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ (SPNI) ಒಡೆತನದ ಸುಮಾರು ಶೇ 51ರಷ್ಟು ಪಾಲಿದೆ. ಅದರಲ್ಲಿ ಸ್ಟ್ರೀಮಿಂಗ್ ಪ್ಲಾಟ್​ಫಾರ್ಮ್ ZEE5 ಮತ್ತು SonyLIV, ಜತೆಗೆ ಜನಪ್ರಿಯ ಚಾನೆಲ್‌ಗಳಾದ ಸೋನಿ MAX ಮತ್ತು ಝೀ ಟಿವಿಯನ್ನು ಹೊಂದಿರುತ್ತದೆ. ಭಾರತದಲ್ಲಿ ಈಗಲೂ ಡೈರೆಕ್ಟ್ ಟು ಹೋಮ್ ಮನರಂಜನೆ ಭಾರೀ ಪ್ರಮಾಣದಲ್ಲಿದೆ. ಕಳೆದ ಕೆಲವು ವರ್ಷಗಳಲ್ಲಿ ನೆಟ್​ಫ್ಲಿಕ್ಸ್ ಇಂಕ್​, ಅಮೆಜಾನ್.ಕಾಮ್​ ಇಂಕ್​ನ ಪ್ರೈಮ್ ವಿಡಿಯೋ ಮತ್ತು ವಾಲ್ಟ್ ಡಿಸ್ನಿ ಕಂಪೆನಿಯ ಹಾಟ್​​ಸ್ಟಾರ್ ಸೇರಿದಂತೆ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಸ್ಪರ್ಧೆಯು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.

ಡಿಸೆಂಬರ್ 21ಕ್ಕೆ ಮುಕ್ತಾಯಗೊಂಡ ವಿಲೀನದ 90 ದಿನಗಳ ಅವಧಿಯ ನಂತರ, ವಿಲೀನಗೊಂಡ ಘಟಕದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಝೀನ ಪುನೀತ್ ಗೋಯೆಂಕಾ ಅವರ ನೇಮಕಾತಿಯನ್ನು ಕಂಪೆನಿಗಳು ಅನುಮೋದಿಸಿವೆ. ಸೆಪ್ಟೆಂಬರ್‌ನಲ್ಲಿ ವಿಲೀನವನ್ನು ಮೊದಲ ಬಾರಿಗೆ ಘೋಷಿಸಿದಾಗ ಝೀ ಕಂಪೆನಿಯ ಷೇರುಗಳು ಶೇ 35ರಷ್ಟು ಏರಿಕೆ ಕಂಡು, ಮಾರುಕಟ್ಟೆ ಬಂಡವಾಳ ಮೌಲ್ಯ ಸುಮಾರು 4.5 ಶತಕೋಟಿ ಡಾಲರ್ ಮುಟ್ಟಿತು.

SPNI ಪ್ರಸ್ತುತ ಷೇರುದಾರರು ಮತ್ತು ಝೀ ಪ್ರವರ್ತಕರ ಪೂರೈಕೆಯೂ ಸೇರಿದಂತೆ ಒಪ್ಪಂದದ ಮುಕ್ತಾಯದಲ್ಲಿ SPNI 1.5 ಶತಕೋಟಿ ಅಮೆರಿಕನ್ ಡಾಲರ್ ನಗದು ಬಾಕಿಯನ್ನು ಹೊಂದಿರುತ್ತದೆ ಎಂದು ಕಂಪೆನಿಗಳು ತಿಳಿಸಿವೆ. ಕಾರ್ಪೊರೇಟ್ ಆಡಳಿತದ ಆತಂಕಗಳ ಮಧ್ಯೆ ಮಂಡಳಿಯಿಂದ ಸಿಇಒ ಪುನೀತ್ ಗೋಯೆಂಕಾ ಅವರನ್ನು ತೆಗೆದುಹಾಕುವುದು ಸೇರಿದಂತೆ ಆಡಳಿತ ಮಂಡಳಿ ಪುನರ್​ಚನೆಗೆ ಸೆಪ್ಟೆಂಬರ್‌ನಲ್ಲಿ ಕರೆ ನೀಡಿದ ಪ್ರಮುಖ ಷೇರುದಾರರಿಂದ ಝೀ ಎದುರಿಸುತ್ತಿರುವ ಒತ್ತಡವನ್ನು ಈ ಒಪ್ಪಂದವು ಸರಾಗಗೊಳಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ZEEL- Sony Pictures Merger: ಭಾರತದ ಮನರಂಜನಾ ಲೋಕದಲ್ಲಿ ಮಹಾವಿಲೀನ, ಒಂದಾಗುತ್ತಿವೆ ಝೀ ಹಾಗೂ ಸೋನಿ