AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೊಮಾಟೊ ಪ್ಲಾಟ್​ಫಾರ್ಮ್ ಶುಲ್ಕ ಶೇ. 25ರಷ್ಟು ಹೆಚ್ಚಳ; ಒಂದು ಆರ್ಡರ್​ಗೆ ಈಗ ಹೆಚ್ಚುವರಿ 5 ರೂ

Zomato platform fees hiked to Rs 5: ಜೊಮಾಟೊ ತನ್ನ ಪ್ಲಾಟ್​ಫಾರ್ಮ್ ಫೀ ಅನ್ನು 4 ರೂನಿಂದ 5 ರೂಗೆ ಹೆಚ್ಚಿಸಿದೆ. 2023ರ ಆಗಸ್ಟ್ ತಿಂಗಳಲ್ಲಿ ಜೊಮಾಟೊ ಮೊದಲ ಬಾರಿಗೆ 2 ರೂ ಪ್ಲಾಟ್​ಫಾರ್ಮ್ ಶುಲ್ಕ ವಿಧಿಸಿತ್ತು. ಬಳಿಕ ಮೂರು ಬಾರಿ ತಲಾ ಒಂದೊಂದು ರೂಗಳಷ್ಟು ಫೀ ಹೆಚ್ಚಿಸಿದೆ. ಪ್ಲಾಟ್​ಫಾರ್ಮ್ ಫೀ ಎಂಬುದು ಪ್ರತೀ ಆರ್ಡರ್​ಗೆ ವಿಧಿಸಲಾಗುವ ಕನ್ವೀನಿಯನ್ಸ್ ಫೀ. ವರ್ಷಕ್ಕೆ 85ರಿಂದ 90 ಕೋಟಿ ಆರ್ಡರ್​ಗಳನ್ನು ಪಡೆಯುವ ಜೊಮಾಟೊಗೆ ಈಗ ಒಂದು ರೂ ಪ್ಲಾಟ್​ಫಾರ್ಮ್ ಫೀ ಹೆಚ್ಚಳದಿಂದಾಗಿ ವರ್ಷಕ್ಕೆ 85-90ರೂಗಳಷ್ಟು ಹೆಚ್ಚುವರಿ ಆದಾಯ ಸಿಗುವ ನಿರೀಕ್ಷೆ ಇದೆ.

ಜೊಮಾಟೊ ಪ್ಲಾಟ್​ಫಾರ್ಮ್ ಶುಲ್ಕ ಶೇ. 25ರಷ್ಟು ಹೆಚ್ಚಳ; ಒಂದು ಆರ್ಡರ್​ಗೆ ಈಗ ಹೆಚ್ಚುವರಿ 5 ರೂ
ಜೊಮಾಟೊ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 22, 2024 | 2:13 PM

Share

ನವದೆಹಲಿ, ಏಪ್ರಿಲ್ 22: ಆನ್ಲೈನ್ ಫೂಡ್ ಡೆಲಿವರಿ ಸಂಸ್ಥೆ ಜೊಮಾಟೊ ತನ್ನ ಪ್ಲಾಟ್​ಫಾರ್ಮ್ ಶುಲ್ಕವನ್ನು (Zomato platform fee) ಶೇ. 25ರಷ್ಟು ಹೆಚ್ಚಿಸಿದೆ. ಇದರೊಂದಿಗೆ 4 ರೂ ಇದ್ದ ಪ್ಲಾಟ್​ಫಾರ್ಮ್ ಫೀ ಈಗ ಐದು ರುಪಾಯಿಗೆ ಏರಿದೆ. ಕಳೆದ ಒಂದು ವರ್ಷದಿಂದ ಜೊಮಾಟೋ ಸತತವಾಗಿ ಪ್ಲಾಟ್​ಫಾರ್ಮ್ ಫೀ ಹೆಚ್ಚಿಸುತ್ತಾ ಬಂದಿದೆ. 2023ರ ಆಗಸ್ಟ್ ತಿಂಗಳಲ್ಲಿ ಮೊದಲ ಬಾರಿ ಎರಡು ರೂ ಪ್ಲಾಟ್​ಫಾರ್ಮ್ ಫೀ ಜಾರಿ ತಂದಿತ್ತು. ನಷ್ಟ ದೂರಗೊಳಿಸಿ ಸಂಸ್ಥೆಯನ್ನು ಲಾಭದ ಹಳಿಗೆ ತರಲು ಈ ಕ್ರಮ ಕೈಗೊಳ್ಳಲಾಗಿತ್ತು. ಕೆಲ ತಿಂಗಳ ಬಳಿಕ ಶುಲ್ಕ 3 ರುಪಾಯಿಗೆ ಹೆಚ್ಚಾಗಿತ್ತು. ನಂತರ ಹೊಸ ವರ್ಷದಿಂದ (ಜ.1) ನಾಲ್ಕು ರೂ ಶುಲ್ಕ ವಿಧಿಸತೊಡಗಿತ್ತು. ಪ್ಲಾಟ್​ಫಾರ್ಮ್ ಶುಲ್ಕ ಎಂಬುದು ಪ್ರತೀ ಆರ್ಡರ್​ಗೆ ವಿಧಿಸಲಾಗುವ ನಿರ್ದಿಷ್ಟ ಶುಲ್ಕವಾಗಿರುತ್ತದೆ. ಎಷ್ಟೇ ಮೊತ್ತದ ಆರ್ಡರ್ ಇದ್ದರೂ ಈ ಜೊಮಾಟೊ 5 ರೂ ಪ್ಲಾಟ್​ಫಾರ್ಮ್ ಫೀ ವಿಧಿಸುತ್ತದೆ.

ಜೊಮಾಟೊ ಒಂದು ವರ್ಷದಲ್ಲಿ 85-90 ಕೋಟಿ ಆರ್ಡರ್​ಗಳನ್ನು ಪಡೆಯುತ್ತದೆ. ಈಗ ಒಂದು ರೂ ಪ್ಲಾಟ್​ಫಾರ್ಮ್ ಫೀ ಹೆಚ್ಚಿಸಿದ್ದರಿಂದ ವರ್ಷಕ್ಕೆ 85ರಿಂದ 90 ಕೋಟಿ ರೂ ಹೆಚ್ಚುವರಿ ಆದಾಯ ಜೊಮಾಟೊಗೆ ಸಿಕ್ಕಂತಾಗುತ್ತದೆ. ಸದ್ಯ ಈ ಶುಲ್ಕ ಹೆಚ್ಚಳ ಆಯ್ದ ನಗರಗಳಲ್ಲಿ ಜಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲಾ ನಗರಗಳಲ್ಲೂ ಅನ್ವಯ ಆಗಬಹುದು.

ಇದನ್ನೂ ಓದಿ: ದಾಖಲೆ ಪ್ರಮಾಣದಲ್ಲಿ ನೇರ ತೆರಿಗೆ ಸಂಗ್ರಹ; 2023-24ರಲ್ಲಿ 19.58 ಲಕ್ಷ ಕೋಟಿ ರೂ ಕಲೆಕ್ಷನ್

ಜನವರಿಯಲ್ಲಿ ಜೊಮಾಟೊ ಪ್ಲಾಟ್​ಫಾರ್ಮ್ ಫೀ ಅನ್ನು 3 ರುಪಾಯಿಗೆ ಹೆಚ್ಚಿಸಿದಾಗ ಅದರ ಷೇರುಬೆಲೆ ಹೆಚ್ಚತೊಡಗಿತು. ಇವತ್ತೂ ಕೂಡ ಷೇರುಬೆಲೆ ಶೇ. 2ರಿಂದ 3ರಷ್ಟು ಹೆಚ್ಚಿದೆ. ಸೋಮವಾರ ಬೆಳಗ್ಗೆ 10:30ರಲ್ಲಿ ಜೊಮಾಟೊ ಷೇರುಬೆಲೆ 193-194 ರೂ ಇತ್ತು.

ಜೊಮಾಟೊದ ಪ್ರತಿಸ್ಪರ್ಧಿ ಸ್ವಿಗ್ಗಿ ಕೂಡ 5 ರೂ ಪ್ಲಾಟ್​ಫಾರ್ಮ್ ಫೀ ವಿಧಿಸುತ್ತಿದೆ. ಸ್ವಿಗ್ಗಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 10 ರೂಗೆ ಶುಲ್ಕ ಹೆಚ್ಚಿಸುವ ಪ್ರಸ್ತಾಪದಲ್ಲಿದೆ. ಜೊಮಾಟೊ ಡಿಸೆಂಬರ್ ಅಂತ್ಯದಲ್ಲಿ ಪ್ಲಾಟ್​ಫಾರ್ಮ್ ಫೀ ಅನ್ನು 9 ರೂಗೆ ತಾತ್ಕಾಲಿಕವಾಗಿ ಹೆಚ್ಚಿಸುವ ಪ್ರಯೋಗ ಮಾಡಿತ್ತು.

ಇದನ್ನೂ ಓದಿ: ಉಚಿತ ಸ್ಕೀಮ್​ಗಳ ಮೇಲೆ ಶ್ವೇತಪತ್ರ; ಸರ್ಕಾರ ಜವಾಬ್ದಾರಿ ತೆಗೆದುಕೊಂಡು ಸಹಮತ ಮೂಡಿಸಲಿ: ಮಾಜಿ ಆರ್​ಬಿಐ ಗವರ್ನರ್ ಸುಬ್ಬಾರಾವ್

ಜೊಮಾಟೊಗೆ ಜಿಎಸ್​ಟಿ ನೋಟೀಸ್

ಜೊಮಾಟೊ ಸಂಸ್ಥೆ ಇತ್ತೀಚೆಗೆ 11.81 ಕೋಟಿ ರೂ ಜಿಎಸ್​ಟಿ ತೆರಿಗೆ ಬಾಕಿ ಮತ್ತು ದಂಡದ ಮೊತ್ತ ಕೇಳಿ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ಪಡೆದಿದೆ. 2017ರ ಜುಲೈನಿಂದ 221ರ ಮಾರ್ಚ್​ವರೆಗಿನ ಅವಧಿಗೆ ಈ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ನೀಡಲಾಗಿದೆ. 11.81 ಕೋಟಿ ರೂ ತೆರಿಗೆ ಬಾಕಿಯಲ್ಲಿ 5.9 ಕೋಟಿ ರೂಗಳ ಜಿಎಸ್​ಟಿ ಮತ್ತು 5.9 ಕೋಟಿ ರೂಗಳ ದಂಡದ ಹಣ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:43 am, Mon, 22 April 24

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ