AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತಮ ಆರ್ಥಿಕ ಪ್ರಗತಿಗೆ ಬಡ್ಡಿದರ ಕಡಿತ ಅಗತ್ಯ ಹೌದು, ಆದರೆ ಯಾವಾಗ ಎಂಬುದು ಎಂಪಿಸಿ ಸದಸ್ಯರಲ್ಲಿ ಗೊಂದಲ

Repo Rate dilemma: ಭಾರತದಲ್ಲಿ 2023ರ ಫೆಬ್ರುವರಿಯಿಂದ ಭಾರತದಲ್ಲಿ ಬಡ್ಡಿದರ ಶೇ. 6.5ರಷ್ಟಿದೆ. ಆರ್​ಬಿಐ ಎಂಪಿಸಿ ಕಳೆದ ಏಳು ಬಾರಿಯಿಂದಲೂ ನಡೆಸಿದ ಸಭೆಯಲ್ಲಿ ರೆಪೋ ದರ ಯಥಾಸ್ಥಿತಿ ಮುಂದುವರಿಸಲಾಗಿದೆ. ಆರ್ಥಿಕತೆಗೆ ಇನ್ನಷ್ಟು ವೇಗದ ಸ್ಪರ್ಶ ಸಿಗಬೇಕಾದರೆ ಬಡ್ಡಿದರ ಕಡಿಮೆ ಮಾಡುವ ಅವಶ್ಯಕತೆ ಇದೆ ಎಂದು ಎಂಪಿಸಿಯ ಎಲ್ಲಾ ಆರು ಸದಸ್ಯರೂ ಅಭಿಪ್ರಾಯಪಡುತ್ತಾರೆ. ಆದರೆ, ಯಾವಾಗ ಬಡ್ಡಿಕಡಿತ ಆಗಬೇಕು ಎಂಬುದು ಗೊಂದಲವಾಗಿದೆ. 2025ರ ಜನವರಿಯಲ್ಲಿ ಬಡ್ಡಿದರ ಕಡಿಮೆ ಮಾಡುವ ಸಾಧ್ಯತೆ ಇದೆ.

ಉತ್ತಮ ಆರ್ಥಿಕ ಪ್ರಗತಿಗೆ ಬಡ್ಡಿದರ ಕಡಿತ ಅಗತ್ಯ ಹೌದು, ಆದರೆ ಯಾವಾಗ ಎಂಬುದು ಎಂಪಿಸಿ ಸದಸ್ಯರಲ್ಲಿ ಗೊಂದಲ
ಆರ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 22, 2024 | 1:57 PM

Share

ನವದೆಹಲಿ, ಏಪ್ರಿಲ್ 22: ಒಂದು ದೇಶದ ಸೆಂಟ್ರಲ್ ಬ್ಯಾಂಕು ಹೊಂದಿರುವ ಅತ್ಯಂತ ಪ್ರಮುಖ ಅಸ್ತ್ರಗಳಲ್ಲಿ ರೆಪೋ ದರ (Repo Rate) ಒಂದು. ಹಣದುಬ್ಬರ ಹೆಚ್ಚಾದರೆ ಅದಕ್ಕೆ ಕಡಿವಾಣ ಹಾಕಲು ಸಾಮಾನ್ಯವಾಗಿ ರೆಪೋ ದರ ಅಥವಾ ಬಡ್ಡಿದರವನ್ನು ಹೆಚ್ಚಳ ಮಾಡಲಾಗುತ್ತದೆ. ಬಡ್ಡಿದರ ಹೆಚ್ಚಾದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತದೆಯಾದರೂ ಆರ್ಥಿಕತೆಯ ವೇಗ ಕುಂಠಿತಗೊಳ್ಳಬಹುದು. ಭಾರತದ ಸೆಂಟ್ರಲ್ ಬ್ಯಾಂಕ್ ಎನಿಸಿದ ಆರ್​ಬಿಐ (RBI) ಈಗ ಇಂಥದ್ದೊಂದು ಗೊಂದಲದ ಸ್ಥಿತಿಯಲ್ಲಿದೆ. ಭಾರತ ಮಾತ್ರವಲ್ಲ ಅಮೆರಿಕ ಸೇರಿದಂತೆ ಹಲವು ದೊಡ್ಡ ಆರ್ಥಿಕತೆಯ ದೇಶಗಳ ಸೆಂಟ್ರಲ್ ಬ್ಯಾಂಕುಗಳದ್ದೂ ಇದೇ ಗೊಂದಲ. ಭಾರತದಲ್ಲಿ ಆರ್ಥಿಕತೆ (economy) ಸದ್ಯಕ್ಕೆ ಉತ್ತಮವಾಗಿದೆ. ಆದರೆ, ಇನ್ನೂ ವೇಗವಾಗಿ ಬೆಳೆಯುವ ಸಾಮರ್ಥ್ಯ ಇದೆ. ಬಡ್ಡಿದರ ಕಡಿತದಿಂದ ಇದು ಸಾಧ್ಯ. ರೆಪೋ ದರ ಕಡಿಮೆ ಮಾಡಬೇಕಾದರೆ ಹಣದುಬ್ಬರ ಕಡಿಮೆ ಆಗಬೇಕು. ಹೀಗಾಗಿ, ಆರ್​ಬಿಐ ಸದ್ಯಕ್ಕೆ ಬಡ್ಡಿದರ ಕಡಿತಗೊಳಿಸುವ ವಿಚಾರದಲ್ಲಿ ಕೈ ಕಟ್ಟಿಹಾಕಿದಂತಿದೆ.

ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಆರ್ಥಿಕ ಮತ್ತ ಹಣಕಾಸು ಪರಿಸ್ಥಿತಿಯನ್ನು ಅವಲೋಕಿಸುತ್ತದೆ. ಹಣದುಬ್ಬರ, ಜಿಡಿಪಿ ಬೆಳವಣಿಗೆ ಹೇಗಿದೆ ಎಂಬುದನ್ನು ಅರಿತು ಅದಕ್ಕೆ ತಕ್ಕಂತೆ ರೆಪೋ ದರ ಇತ್ಯಾದಿ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಈ ಎಂಪಿಸಿ ಸಮಿತಿಯಲ್ಲಿರುವ ಎಲ್ಲಾ ಆರು ಸದಸ್ಯರೂ ಬಡ್ಡಿದರ ಕಡಿತದ ಬಗ್ಗೆ ಒಲವು ಹೊಂದಿರುವುದು ತಿಳಿದುಬಂದಿದೆ. ಆದರೆ, ಯಾವಾಗ ದರ ಕಡಿತ ಮಾಡಬೇಕು ಎಂಬ ಬಗ್ಗೆ ಗೊಂದಲಗಳಿವೆ.

ಇದನ್ನೂ ಓದಿ: ಜೊಮಾಟೊ ಪ್ಲಾಟ್​ಫಾರ್ಮ್ ಶುಲ್ಕ ಶೇ. 25ರಷ್ಟು ಹೆಚ್ಚಳ; ಒಂದು ಆರ್ಡರ್​ಗೆ ಈಗ ಹೆಚ್ಚುವರಿ 5 ರೂ

‘ನಾವೀಗ ಪುನಶ್ಚೇತನದ ಹಂತದಲ್ಲಿದ್ದೇವೆ. ಯುವಜನರಿಗೆ ಉದ್ಯೋಗ ಸೃಷ್ಟಿಸಲು, ಹೂಡಿಕೆ ಚಕ್ರ ರೂಪುಗೊಳ್ಳಲು ಆರ್ಥಿಕತೆ ವೃದ್ಧಿ ಹೆಚ್ಚಾಗಬೇಕು. ಹಣದುಬ್ಬರವು ನಮ್ಮ ತಾಳಿಕೆ ಮಿತಿಯ ಗುರಿಯೊಳಗೆಯೇ ಇದೆ. ಇನ್ನೂ ಹೆಚ್ಚಿನ ವೇಗದಲ್ಲಿ ನಾವು ಬೆಳವಣಿಗೆ ಹೊಂದಲು ಸಾಧ್ಯವಿದೆ,’ ಎಂದು ಎಂಪಿಸಿ ಸಮಿತಿಯ ಆರು ಸದಸ್ಯರಲ್ಲಿ ಒಬ್ಬರಾದ ಆಶಿಮಾ ಗೋಯಲ್ ಹೇಳಿದ್ದಾರೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಎಂಪಿಸಿಯಲ್ಲಿ ಆರು ಸದಸ್ಯರಲ್ಲಿ ಮೂವರು ಬಾಹ್ಯ ಸದಸ್ಯರಿದ್ದಾರೆ. ಈ ಮೂವರಲ್ಲಿ ಅಶಿಮಾ ಗೋಯಲ್ ಒಬ್ಬರು.

ಆದರೆ, ಸದ್ಯದ ಮಟ್ಟಿಗೆ ರೆಪೋ ದರದ ಯಥಾಸ್ಥಿತಿ ಮುಂದುವರಿಸುವ ಅಭಿಪ್ರಾಯ ಗೋಯಲ್ ಅವರದ್ದು. 2023-24ಕ್ಕೆ ಜಿಡಿಪಿ ಶೇ. 7.6ರಷ್ಟು ಬೆಳೆಯಬಹುದು ಎಂಬ ಅಂದಾಜಿದೆ. ಹಣದುಬ್ಬರ ಹೇಗೆ ಸಾಗಬಹುದು ಎಂಬುದು ಸ್ಪಷ್ಟವಿಲ್ಲ. ಈ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿರತೆ ಸಾಧಿಸುವುದು ಉತ್ತಮ. ಅದಕ್ಕಾಗಿ ಬಡ್ಡಿದರದ ಯಥಾಸ್ಥಿತಿ ಇರಬೇಕಾಗುತ್ತದೆ ಎಂದು ಆಶಿಮಾ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನಾನು ನಂದಿನಿ, ಅಮೆರಿಕಾಗೆ ಬಂದಿವ್ನಿ… ಟಿ20 ವಿಶ್ವಕಪ್​ನಲ್ಲಿ ಐರ್ಲೆಂಡ್, ಸ್ಕಾಟ್ಲೆಂಡ್ ತಂಡಗಳಿಗೆ ಕೆಎಂಎಫ್ ಸ್ಪಾನ್ಸರ್

ಭಾರತದಲ್ಲಿ ಸದ್ಯ ರೆಪೋ ದರ ಅಥವಾ ಬಡ್ಡಿದರ ಶೇ. 6.5ರಷ್ಟಿದೆ. ಕಳೆದ ಏಳು ಸಭೆಗಳಿಂದಲೂ ಯಥಾಸ್ಥಿತಿ ಕಾಯ್ದುಕೊಳ್ಳಲಾಗುತ್ತಿದೆ. ಹಣದುಬ್ಬರ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ 2022ರ ಮೇನಿಂದ ಶುರುವಾಗಿ 2023ರ ಫೆಬ್ರುವರಿಯವರೆಗೆ 250 ಮೂಲಾಂಶಗಳಷ್ಟು ಬಡ್ಡಿದರ ಹೆಚ್ಚಿಸಲಾಗಿತ್ತು. ಶೇ. 4ರಷ್ಟಿದ್ದ ಬಡ್ಡಿದರ ಶೇ. 6.5ಕ್ಕೆ ಏರಿದೆ. ಮೇ ತಿಂಗಳಲ್ಲಿ ಎಂಪಿಸಿ ಸಭೆ ನಡೆಯಲಿದ್ದು, ಆಗಲೂ ಕೂಡ ಬಡ್ಡಿದರ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ
ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ