Gold Silver Price on 23rd April: ತಗ್ಗಿದ ಚಿನ್ನ, ಬೆಳ್ಳಿ ಬೆಲೆ ಏರಿಕೆ ಬಿಸಿ; ಇಲ್ಲಿದೆ ವಿವರ

Bullion Market 2024 April 23rd: ಚಿನ್ನದ ಬೆಲೆಯ ನಿರಂತರ ಏರಿಕೆಗೆ ಬ್ರೇಕ್ ಬಿದ್ದಿದೆ. ಚಿನ್ನ, ಬೆಳ್ಳಿ ಎರಡರ ಬೆಲೆಯೂ ಕಡಿಮೆ ಆಗಿದೆ. ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,550 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,690 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 85.50 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 67,550 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,600 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 23rd April: ತಗ್ಗಿದ ಚಿನ್ನ, ಬೆಳ್ಳಿ ಬೆಲೆ ಏರಿಕೆ ಬಿಸಿ; ಇಲ್ಲಿದೆ ವಿವರ
ಚಿನ್ನ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Apr 23, 2024 | 5:00 AM

ಬೆಂಗಳೂರು, ಏಪ್ರಿಲ್ 23: ಚಿನ್ನ ಮತ್ತು ಬೆಳ್ಳಿ ಬೆಲೆ (Gold and silver Rates) ಬಹಳ ದಿನಗಳ ಬಳಿಕ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ ಒಂದು ರೂನಷ್ಟು ಇಳಿಕೆ ಆಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 50 ರೂನಷ್ಟು ತಗ್ಗಿದೆ. ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಹೆಚ್ಚುತ್ತಿರುವ ಚಿನ್ನದ ಬೆಲೆ ತಾತ್ಕಾಲಿಕ ವಿರಾಮ ಪಡೆದುಕೊಂಡಂತಿದೆ. ಜನವರಿ 1ರಿಂದೀಚೆ ಚಿನ್ನದ ಬೆಲೆಯಲ್ಲಿ ಶೇ. 15ರಷ್ಟು ಹೆಚ್ಚಳವಾಗಿದೆ. ಏಪ್ರಿಲ್ ತಿಂಗಳ ಮೊದಲ ಮೂರು ವಾರದಲ್ಲೇ ಶೇ. 7.60ರಷ್ಟು ಚಿನ್ನದ ಬೆಲೆ ಹೆಚ್ಚಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,550 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,690 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,550 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 67,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,600 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 23ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,550 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,690 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 855 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,550 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,690 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 860 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 67,550 ರೂ
  • ಚೆನ್ನೈ: 68,450 ರೂ
  • ಮುಂಬೈ: 67,550 ರೂ
  • ದೆಹಲಿ: 67,700 ರೂ
  • ಕೋಲ್ಕತಾ: 67,550 ರೂ
  • ಕೇರಳ: 67,550 ರೂ
  • ಅಹ್ಮದಾಬಾದ್: 67,600 ರೂ
  • ಜೈಪುರ್: 67,700 ರೂ
  • ಲಕ್ನೋ: 67,700 ರೂ
  • ಭುವನೇಶ್ವರ್: 67,550 ರೂ

ಇದನ್ನೂ ಓದಿ: ಚಿನ್ನ, ನೀನೆಷ್ಟು ಚೆನ್ನ..! ಷೇರು ಮಾರುಕಟ್ಟೆಗಿಂತಲೂ ಭರ್ಜರಿ ರಿಟರ್ನ್ ಕೊಡುತ್ತಿದೆ ಸ್ವರ್ಣ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,620 ರಿಂಗಿಟ್ (63,099 ರುಪಾಯಿ)
  • ದುಬೈ: 2,655 ಡಿರಾಮ್ (60,261 ರುಪಾಯಿ)
  • ಅಮೆರಿಕ: 730 ಡಾಲರ್ (60,852 ರುಪಾಯಿ)
  • ಸಿಂಗಾಪುರ: 1,014 ಸಿಂಗಾಪುರ್ ಡಾಲರ್ (62,067 ರುಪಾಯಿ)
  • ಕತಾರ್: 2,700 ಕತಾರಿ ರಿಯಾಲ್ (61,705 ರೂ)
  • ಸೌದಿ ಅರೇಬಿಯಾ: 2,700 ಸೌದಿ ರಿಯಾಲ್ (59,999 ರುಪಾಯಿ)
  • ಓಮನ್: 286.50 ಒಮಾನಿ ರಿಯಾಲ್ (62,025 ರುಪಾಯಿ)
  • ಕುವೇತ್: 225 ಕುವೇತಿ ದಿನಾರ್ (60,851 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,600 ರೂ
  • ಚೆನ್ನೈ: 8,900 ರೂ
  • ಮುಂಬೈ: 8,550 ರೂ
  • ದೆಹಲಿ: 8,550 ರೂ
  • ಕೋಲ್ಕತಾ: 8,550 ರೂ
  • ಕೇರಳ: 8,900 ರೂ
  • ಅಹ್ಮದಾಬಾದ್: 8,550 ರೂ
  • ಜೈಪುರ್: 8,550 ರೂ
  • ಲಕ್ನೋ: 8,550 ರೂ
  • ಭುವನೇಶ್ವರ್: 8,900 ರೂ

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ